ಕುಂದಾಪುರ: ಎಂಡೋ ಸಲ್ಫಾನ್ ಪೀಡಿತ ಅಂಗವಿಕಲರ ಪುನರ್ವಸತಿ ಕೇಂದ್ರ ಸ್ಥಾಪಿಸಲು ಒತ್ತಾಯಿಸಿ ಅಂಗವಿಕಲರಿಂದ ಬೃಹತ್ ಪ್ರತಿಭಟನೆ ನಡೆಸಿದರು. ಸೇನಾಪುರ ಗ್ರಾಮದ ಸರಕಾರಿ ಸ್ಥಳದಲ್ಲಿ 5 ಎಕರೆ ವಿಸ್ತೀರ್ಣದಲ್ಲಿ ಉಡುಪಿ ಜಿಲ್ಲಾ ಎಂಡೋಸಲ್ಪಾನ್ ಪೀಡಿತ ಅಂಗವಿಕಲರಿಗಾಗಿ ಪುನರ್ವಸತಿ ಕೇಂದ್ರ ಸ್ಥಾಪನೆ ಮಾಡಲು ಸ್ಥಳ ಕಾದಿರಿಸಲಾಗಿದೆ.
ಆದರೂ ಸಹ ಪುನರ್ವಸತಿ ಕೇಂದ್ರ ಸ್ಥಾಪನೆಯಾಗದಿರುವುದನ್ನು ಪ್ರತಿಭಟನಾಕಾರರು ಖಂಡಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಪುನರ್ವಸತಿ ಕೇಂದ್ರ ಹಾಗೂ ಸುಸಜ್ಜಿತ ಆಸ್ಪತ್ರೆ ಕಟ್ಟಡಕ್ಕೆ ಸುಮಾರು ಹನ್ನೊಂದು ಕೋಟಿ ಅನುದಾನ ಬಿಡುಗಡೆಗಾಗಿ ಕಳೆದ ಐದು ವರ್ಷಗಳ ಹಿಂದೆಯೇ ಸರಕಾರಕ್ಕೆ ಪ್ರಸ್ತಾವನೆ ಮಾಡಲಾಗಿದೆ. ಆದರೆ, ಈ ತನಕ ಪುನರ್ವಸತಿ ಕೇಂದ್ರಕ್ಕೆ ಅನುದಾನ ಬಿಡುಗಡೆ ಮಾಡಿರುವುದಿಲ್ಲ.
ಅಂಗವಿಕಲರ ಹಕ್ಕುಗಳ ರಾಷ್ಟ್ರೀಯ ವೇದಿಕೆ(ಎನ್ಪಿಆರ್ಡಿ))ಗೆ ಸಂಯೋಜಿಸಲ್ಪಟ್ಟ ಕರ್ನಾಟಕ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟ ಉಡುಪಿ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಅನುದಾನ ಬಿಡುಗಡೆಗೊಳಿಸಬೇಕೆಂದು ಕುಂದಾಪುರ ತಹಶೀಲ್ದಾರ್ ಕಚೇರಿಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಕರ್ನಾಟಕ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದ ಜಿಲ್ಲಾ ಗೌರವ ಅಧ್ಯಕ್ಷ ವೆಂಕಟೇಶ್ ಕೋಣಿ, ಅಧ್ಯಕ್ಷ ಮಂಜುನಾಥ ಹೆಬ್ಬಾರ್ ಪ್ರಧಾನ ಕಾರ್ಯದರ್ಶಿ ಕೆ.ಕೃಷ್ಣ ಪೂಜಾರಿ ಕೊಟೇಶ್ವರ, ಮುಖಂಡರಾದ ಬಾಬು.ಕೆ.ದೇವಾಡಿಗ ಉಪ್ಪುಂದ, ನಾಗರಾಜ ತಲ್ಲೂರು, ನಾಗಶ್ರೀ ಯಡ್ತರೆ, ಸಂತೋಷ ದೇವಾಡಿಗ ಜಾಲಾಡಿ, ವಿಲ್ಸನ್ ಪಿ.ಕೆ., ಗಣಪತಿ ಪೂಜಾರಿ ಅಮಾಸೈಬೈಲ್, ನಾರಾಯಣ ಶೇರುಗಾರ ಉಡುಪಿ, ಇಂದಿರಾ.ಎಸ್ ಹೆಗಡೆ, ಸದಾಶಿವ ಕಾರ್ಕಳ, ಕಾವೇರಿ ಪ್ರಸಾದ್ ಸಿದ್ಧಾಪುರ, ಮಂಜುಳ ಕಾರ್ಕಳ, ರಾಧಾಕೃಷ್ಣ.ಡಿ.ಬೈಂದೂರು, ಕೃಷ್ಣ ಬ್ರಹ್ಮಾವರ, ರಾಜಶೇಖರ ಹುಣ್ಸೆಮಕ್ಕಿ, ಆನಿತಾ.ಪಡುವರಿ, ಮೊದಲಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು
ವರದಿ: ವೆಂಕಟೇಶ್ ಕೋಣಿ