ದುಷ್ಟ ಹಿಂದುತ್ವ ಭಯೋತ್ಪಾದಕ ಸಂಚುಗಳು

ಸಂಪುಟ – 06, ಸಂಚಿಕೆ 09, ಫೇಬ್ರವರಿ, 26, 2012

8
ಸಮ್ಝೌತಾ ಎಕ್ಸ್ಪ್ರೆಸ್ ಭಯೋತ್ಪಾದಕ ಬಾಂಬ್ ಸೋಟದಲ್ಲಿ ಭಾಗಿಯಾಗಿದ್ದ ಎಂಬ ಅಪಾದನೆಯ ಮೇಲೆ ಇನ್ನೊಬ್ಬ ಆರೆಸ್ಸೆಸ್ ಕಾರ್ಯಕರ್ತ ಬಂಧಿತನಾಗಿದ್ದಾನೆ. ಆರೆಸ್ಸೆಸ್, ಮತ್ತೆ, ಹಿಂದೆ ಗೋಡ್ಸೆ ವಿಷಯದಲ್ಲಿ ಹೇಳಿದಂತೆ, ಇಂತಹ ಕೆಲವೇ ದಾರಿ ತಪ್ಪಿದವರ ಕೃತ್ಯಗಳಿಗೆ ಸಂಘಟನೆಯನ್ನು ಇಡಿಯಾಗಿ ದೂಷಿಸಬಾರದು ಎಂದು ಉಪದೇಶ ನಡಬಹುದು. ಆದರೆ ಇದು ಭಾರತದ ಆಧುನಕ ಜಾತ್ಯಾತೀತ ಪ್ರಜಾಸತ್ತಾತ್ಮಕ ಗಣರಾಜ್ಯವನ್ನು ಉನ್ಮತ್ತ ಧಾಮರ್ಿಕ ಅಸಹಿಷ್ಣುತೆಯ ಆರೆಸ್ಸೆಸ್ ನೋಟದ ಒಂದು ಹಿಂದೂ ರಾಷ್ಟ್ರವಾಗಿ ಪರಿವತರ್ಿಸುವ ಸೈದ್ಧಾಂತಿಕ ಬೇರುಗಳ ಪ್ರತಿಫಲನ ಎಂಬುದಂತೂ ಖಂಡಿತ. ಇದನ್ನು ಸೋಲಿಸಲೇಬೇಕು.

ಇನ್ನೊಂದು ಆರೆಸ್ಸೆಸ್ ಮತ್ತು ಅದರ ಪರಿವಾರದವರು ಬೀಸಿದ ಭಯೋತ್ಪಾದಕ ಜಾಲದ ಕೊಂಡಿ ಸಾಬೀತಾಗಿದೆ. ರಾಷ್ಟ್ರೀಯ ತನಖಾ ಏಜೆಂಸಿ(ಎನ್ಐಎ) ಕಮಲ್ ಚೌಹಾನ್ ಎಂಬಾತನನ್ನು ಬಂಧಿಸಿದೆ. ಆತ ಫೆಬ್ರುವರಿ 18, 2007ರ ಮಧ್ಯರಾತ್ರಿಯ ವೇಳೆಗೆ ದಿಲ್ಲಿ-ಲಾಹೋರ್ ರೈಲಿನ 68 ಮುಗ್ಧ ಪ್ರಯಾಣಿಕರ ಜೀವಬಲಿ ತೆಗೆದುಕೊಂಡ ಸಮ್ಝೌತಾ ಎಕ್ಸ್ಪ್ರೆಸ್ ಭಯೋತ್ಪಾದಕ ಬಾಂಬ್ ಸೋಟದಲ್ಲಿ ಭಾಗಿಯಾಗಿದ್ದ ಎಂಬ ಅಪಾದನೆಯ ಮೇಲೆ ಬಂಧಿತನಾಗಿದ್ದಾನೆ.

ಮಧ್ಯಪ್ರದೇಶದ ಈ ದೀರ್ಘಕಾಲದ ಆರೆಸ್ಸೆಸ್ ಕಾರ್ಯಕರ್ತನ ಬಂಧನ ಈ ಮೊಕದ್ದಮೆಯಲ್ಲಿ ಎರಡನೆಯದ್ದು. ಈ ಹಿಂದೆ ಜೂನ್ 2010ರಲ್ಲಿ ಲೋಕೇಶ ಶರ್ಮ ಎಂಬಾತನನ್ನು ಈ ಭಯೋತ್ಪಾದಕ ದಾಳಿಯನ್ನು ಯೋಜಿಸಿದ ಒಂದು ಸಭೆಯಲ್ಲಿ ಭಾಗವಹಿಸಿದ್ದ ಎಂಬ ಆಪಾದನೆಯ ಮೇಲೆ ಬಂಧಿಸಲಾಗಿತ್ತು. ಆತನೂ ಮಧ್ಯಪ್ರದೇಶದವನೇ. ಈಗ ತನಿಖಾ ಏಜೆಂಸಿಗಳು ಆತ ನಿಜವಾದ ಬಾಂಬು ದಾಳಿ ಯಲ್ಲಿ ಸ್ವತಃ ಭಾಗಿಯಾಗಿದ್ದ ಎಂದು ಹೊಸ ಆರೋಪಗಳನ್ನು ರೂಪಿಸುತ್ತಿವೆ ಎಂದು ಮಾಧ್ಯಮ ವರದಿಗಳು ಸೂಚಿಸುತ್ತಿವೆ.

ಸಮ್ಝೌತಾ ಎಕ್ಸ್ಪ್ರೆಸ್ ಬಾಂಬು ದಾಳಿಯಲ್ಲಿ ಆರೆಸ್ಸೆಸ್ ಮತ್ತು ಅದರ ಪರಿವಾರ ದವರ ಪಾತ್ರವನ್ನು ಸೂಚಿಸುವ ನಣರ್ಾಯಕ ಸಂಕೇತಗಳು ಈ ಸಂಘಟನೆಗಳಿಗೂ ಮಾಲೆಗಾಂವ್(ಸಪ್ಟಂಬರ್ 8, 2008), ಹೈದರಾಬಾದಿನ ಮಕ್ಕಾ ಮಸೀದಿ(ಮೇ 18, 2007) ಮತ್ತು ಅಜ್ಮೇರ್ ಶರೀಫ್ನ ದಗರ್ಾದಲ್ಲಿ (ಅಕ್ಟೋಬರ್ 11, 2007) ನಡೆಸಿದ ಭಯೋತ್ಪಾದಕ ದಾಳಿಗಳಿಗೂ ಸಂಬಂಧವಿದೆ ಎಂದು ತನಿಖೆಗಳಲ್ಲಿ ಸಾಬೀತಾದ ಮೇಲೆ ಸಿಕ್ಕವು. ಹಿಂದುತ್ವ ಭಯೋತ್ಪಾದನೆಯ ಈ ಜಾಲವನ್ನು ಸೃಷ್ಟಿಸುವಲ್ಲಿ ಆರೆಸ್ಸೆಸ್ ಸಂಪರ್ಕವನ್ನು ಇವು ಸಾಬೀತು ಮಾಡಿವೆ.

ಎನ್ಡಿಎ ತಂದ ಭ್ರಮನಿರಸನ?
ಇದಕ್ಕೆ ಬಹಳ ಮೊದಲೇ, ಅಕ್ಟೋಬರ್ 13, 2008ರ ರಾಷ್ಟ್ರೀಯ ಸಮಗ್ರತಾ ಮಂಡಳಿಯ ಒಂದು ಸಭೆಯಲ್ಲಿ ಸಿಪಿಐ(ಎಂ) ಈ ಸಂಗತಿಯತ್ತ ಕೇಂದ್ರ ಸರಕಾರದ ಗಮನವನ್ನು ಸೆಳೆದಿತ್ತು. ಕಳೆದ ಕೆಲವು ವರ್ಷಗಳಲ್ಲಿ ಪೋಲೀಸ್ ತನಖೆಗಳು ಭಜರಂಗ ದಳ ಅಥವ ಇತರ ಆರೆಸ್ಸೆಸ್ ಕಬಂಧ ಬಾಹುಗಳ ಶಾಮೀಲನ್ನು ಗಮನಸಿವೆ-2003ರಲ್ಲಿ ಮಹಾರಾಷ್ಟ್ರದ ಪಬರ್ಾನಿ, ಜಾಲ್ನಾ ಮತ್ತು ಜಲಗಾಂವ್ ಜಿಲ್ಲೆಗಳಲ್ಲಿ; 2005ರಲ್ಲಿ ಉತ್ತರ ಪ್ರದೇಶದ ಮಾವು ಜಿಲ್ಲೆಯಲ್ಲಿ; 2006ರಲ್ಲಿ ನಾಂದೇಡಿನಲ್ಲಿ; ಜನವರಿ 2008ರಲ್ಲಿ ತೆಂಕಾಶಿ, ತಿರುನಲ್ವೇಲಿಯಲ್ಲಿ; ಆಗಸ್ಟ್ 2008ರಲ್ಲಿ ಕಾನ್ಪುರದಲ್ಲಿ ಇತ್ಯಾದಿ, ಇತ್ಯಾದಿ. ಇಂತಹ ಎಲ್ಲ ಕೇಸುಗಳನ್ನು ಅಷ್ಟೇ ಪ್ರಮಾಣದ ತೀವ್ರತೆಯಿಂದ ನಿಷ್ಪಕ್ಷಪಾತದಿಂದ ತನಖೆ ಮಾಡಿದರೆ ಮಾತ್ರವೇ ನಮ್ಮ ದೇಶದ ಆಂತರಿಕ ಭದ್ರತೆಯನ್ನು ಬಲಪಡಿಸಲು ಸಾಧ್ಯ ಎಂದು ಸಿಪಿಐ(ಎಂ) ಹೇಳಿತ್ತು.

ಇದನ್ನು ಅನುಸರಿಸಿ ಮತ್ತು ನಂತರ ದೊರೆತ ಸಂಕೇತಗಳಿಂದ, ಕೇಂದ್ರ ಗೃಹ ಮಂತ್ರಾಲಯ ಜುಲೈ 2010ರ ವರದಿ ಪತ್ರ ಎನ್ಐಎ ಸಮ್ಝೌತಾ ಎಕ್ಸ್ಪ್ರೆಸ್ ಮೇಲಿನ ಭಯೋತ್ಪಾದಕ ದಾಳಿಯ ತನಿಖೆ ನಡೆಸುವುದಾಗಿ ಪ್ರಕಟಿಸಿತು. ಈ ತನಿಖೆಗಳೇ ಪ್ರಸಕ್ತ ಬಂಧನಗಳಿಗೆ ದಾರಿ ಮಾಡಿಕೊಟ್ಟಿರುವುದು. ಮಾಧ್ಯಮ ವರದಿಗಳ ಪ್ರಕಾರ, ಆರೆಸ್ಸೆಸ್ ಮುಖಂಡರ ಒಂದು ಪ್ರಧಾನ ಗುಂಪು ಸ್ಫೋಟಕಗಳ ತಯಾರಿಯಲ್ಲಿ ತೊಡಗಿತ್ತು ಮತ್ತು 2002ರಲ್ಲಿ ಆರಂಭವಾದ ಹಿಂದುತ್ವ ಭಯೋತ್ಪಾದಕ ದಾಳಿಗಳ ಒಂದು ಸರಣಿಯನ್ನು ಯೋಜಿಸಿತ್ತು ಎಂಬುದು ತನಿಖೆಗಳಿಂದ ಪ್ರಕಟವಾಗಿದೆ.

ಆಗ ಆಳ್ವಿಕೆ ನಡೆಸುತ್ತಿದ್ದ ವಾಜಪೇಯಿ ನೇತೃತ್ವದ ಕೇಂದ್ರ ಸರಕಾರ ಪ್ರಧಾನ ಹಿಂದುತ್ವ ಅಜೆಂಡಾವನ್ನು ದುರ್ಬಲಗೊಳಿಸಿತು (ಅಯೋಧ್ಯೆಯಲ್ಲಿ ದೇವಸ್ಥಾನ ನಿಮರ್ಾಣ ದಂತಹ ಪ್ರಶ್ನೆಗಳನ್ನು ಸರಕಾರದ ಉಳಿವಿಗಾಗಿ ತನ್ನ ಎನ್ಡಿಎ ಮಿತ್ರರನ್ನು ತುಷ್ಟೀಕರಿಸಲು ಹಿನ್ನೆಲೆಗೆ ಸರಿಸಿ) ಎಂದೂ, ಮತ್ತು 2002ರಲ್ಲಿ ಗುಜರಾತಿನಲ್ಲಿ ನಡೆದ ಕೋಮು ನರಹತ್ಯಾಕಾಂಡವನ್ನು ದೇಶವ್ಯಾಪಿಯಾಗಿ ಪುನರಾವತರ್ಿಸಲು ನಿರಾಕರಿಸಿದಂತೆ ಕಾಣಬಂದುದರಿಂದ ಆರೆಸ್ಸೆಸ್ನ ಕೆಲವು ವಿಭಾಗಗಳಲ್ಲಿ ಉಂಟಾದ ಭ್ರಮನರಸನ ಉಗ್ರ ಹಿಂದುತ್ವ ಭಯೋತ್ಪಾದನೆಯ ಉದಯಕ್ಕೆ ಕಾರಣ ಎಂದು ನಂಬಲಾಗಿದೆ.

ಭಯೋತ್ಪಾದನೆಯ ಇತಿಹಾಸ
ಆರೆಸ್ಸೆಸ್, ಖಂಡಿತವಾಗಿಯೂ, ಇಂತಹ ಭಯೋತ್ಪಾದಕ ಕೃತ್ಯಗಳು ಕೆಲವೇ ದಾರಿ ತಪ್ಪಿದವರ ಕ್ರಿಯೆಗಳ ಫಲಿತಾಂಶವಷ್ಟೇ ಎಂದು ಮತ್ತೊಮ್ಮೆ ಸಾರುತ್ತದೆ, ಅದಕ್ಕೆ ಸಂಘಟನೆಯನ್ನು ಇಡಿಯಾಗಿ ದೂಷಿಸಬಾರದು ಎಂದೂ ಆಗ್ರಹಿಸುತ್ತದೆ. ಇದರಲ್ಲೇನೂ ಮೌಲಿಕತೆ ಇಲ್ಲ. ಮಹಾತ್ಮ ಗಾಂಧಿಯವರ ಹತ್ಯೆಯ ನಂತರ ನಾಥೂರಾಂ ಗೋಡ್ಸೆಯ ಬಗ್ಗೆ ಹೇಳಿದ್ದೂ ಇದನ್ನೇ. ಆದರೆ ಅದೇ ಗೋಡ್ಸೆಯ ಸೋದರ, ತಮ್ಮ ಕುಟುಂಬದ ಎಲ್ಲ ಸೋದರರೂ ಆರೆಸ್ಸೆಸ್ನ ಸಕ್ರಿಯ ಕಾರ್ಯಕರ್ತರು ಎಂದು ಒಂದು ಮಾಧ್ಯಮ ಸಂದರ್ಶನದಲ್ಲಿ ಹೇಳಿರುವ ದಾಖಲೆಯಿದೆ.

ಆರೆಸ್ಸೆನ್ನ ಮತ್ತು ಅದರ ಕಾರ್ಯನರ್ವಹಣೆಯ ವಿಧಾನದ ಇತಿಹಾಸ ಈ ರೀತಿ ತಿರುಳು ಮತ್ತು ಅಂಚು ಎಂದು ಭಿನ್ನವಾಗಿ ಕಾಣುವ ಇಂತಹ ಸಿದ್ಧಾಂತಗಳೆಲ್ಲ ಬೊಗಳೆ ಎಂದು ತೋರಿಸುತ್ತದೆ. ಹಿಂದೂಗಳಿಗೆ ಮಿಲಿಟರಿ ತರಬೇತಿ ಮತ್ತು ಹಿಂಸಾಚಾರವನ್ನು ಒಂದು ರಾಜಕೀಯ ಅಸ್ತ್ರವಾಗಿ ಬಳಸುವಲ್ಲಿ ಆರೆಸ್ಸೆಸ್ ಒಂದು ದೀರ್ಘ ಇತಿಹಾಸವನ್ನೇ ಹೊಂದಿದೆ. ಎಲ್ಲ ರಾಜಕೀಯಗಳನ್ನು ಹಿಂದೂಕರಿಸಿ ಮತ್ತು ಹಿಂದೂವಾದವನ್ನು ಮಿಲಿಟರೀಕರಿಸಿ ಎಂಬ ಘೋಷಣೆ ನೀಡಿದವರು ಸಾವರ್ಕರ್ (ಈತ, ಸಾಮಾನ್ಯವಾಗಿ, ಹಿಂದೂಗಳು ಮತ್ತು ಇಸ್ಲಾಮಿಗಳು ಎರಡು ಪ್ರತ್ಯೇಕ ದೇಶಗಳು ಎಂಬ ಸಿದ್ಧಾಂತ ಮುಂದಿಟ್ಟವರೆನ್ನಲಾದ ಜಿನ್ನಾರಿಗಿಂತ ಎರಡು ವರ್ಷಗಳ ಮೊದಲೇ ಈ ಎರಡು ದೇಶಗಳ ಸಿದ್ಧಾಂತವನ್ನು ಪ್ರತಿಪಾದಿಸಿದ ನಿಜವಾದ ಮೂಲವ್ಯಕ್ತಿ ಕೂಡಾ). ಇದರಿಂದ ಸ್ಫೂತರ್ಿ ಪಡೆದ ಡಾ. ಬಿ.ಎಸ್.ಮೂಂಜೆ, ಆರೆಸ್ಸೆಸ್ ಸ್ಥಾಪಕ ಡಾ.ಹೆಡ್ಗೆವಾರ್ರವರ ಗುರು, ಫ್ಯಾಸಿಸ್ಟ್ ಸವರ್ಾಧಿಕಾರಿ ಮುಸ್ಸೊಲಿನಿಯನ್ನು ಭೇಟಿ ಮಾಡಲು ಇಟೆಲಿಗೆ ಪ್ರಯಾಣ ಬೆಳೆಸಿದರು. ಈ ಭೇಟಿ ಮಾಚರ್್ 19, 1931ರಂದು ನಡೆಯಿತು.

ಮಾಚರ್್ 20ರ ಅವರ ವೈಯಕ್ತಿಕ ದಿನಚರಿಯ ಟಿಪ್ಪಣಿಗಳು ಅವರು ಇಟಾಲಿಯನ್ ಫ್ಯಾಸಿಸಂ ತನ್ನ ಯುವಜನರಿಗೆ (ಗಲಭೆಕೋರರಿಗೆ ಎಂದು ಓದಿಕೊಳ್ಳಿ) ಮಿಲಿಟರಿ ತರಬೇತಿ ನೀಡುತ್ತಿದ್ದ ಪರಿಯತ್ತ ಯಾವ ರೀತಿಯಲ್ಲಿ ಆಕಷರ್ಿತರಾದರು, ಆ ಬಗ್ಗೆ ಎಂತಹ ಮೆಚ್ಚುಗೆ ವ್ಯಕ್ತಪಡಿಸಿದರು ಎಂಬುದನ್ನು ಬಹಿರಂಗ ಪಡಿಸಿದೆ. ಭಾರತಕ್ಕೆ ಹಿಂದಿರುಗಿದ ಮೇಲೆ ಡಾ.ಮೂಂಜೆ ನಾಸಿಕ್ನಲ್ಲಿ 1935ರಲ್ಲಿ ಸೆಂಟ್ರಲ್ ಹಿಂದೂ ಮಿಲಿಟರಿ ಎಜ್ಯುಕೇಶನ್ ಸೊಸೈಟಿ ಎಂಬುದನ್ನು ಸ್ಥಾಪಿಸಿದರು; ಇದು 1937ರಲ್ಲಿ ಸ್ಥಾಪನೆಗೊಂಡ ಭೊಂಸಾಲ ಮಿಲಿಟರಿ ಸ್ಕೂಲಿನ ಪೂರ್ವವತರ್ಿ ಸಂಸ್ಥೆ. ಇದೇ ಈಗ ಹಿಂದುತ್ವ ಭಯೋತ್ಪಾದನೆಗೆ ತರಬೇತಿ ನಡುತ್ತಿರುವ ಆಪಾದನೆಗೊಳಗಾಗಿರುವ ಸಂಸ್ಥೆ. 1939ರಲ್ಲಿ ಗೋಲ್ವಾಲ್ಕರ್, ಯೆಹೂದಿಗಳನ್ನು ನಾಝಿ ಫ್ಯಾಸಿಸಂನ ಅಡಿಯಲ್ಲಿ ಹಿಟ್ಲರ್ ಮೆಟ್ಟಿ ಹಾಕಿದ ರೀತಿಯನ್ನು ಪ್ರಶಂಸಿಸುತ್ತಾ ಇದು ಹಿಂದೂಸ್ತಾನದಲ್ಲಿರುವ ನಾವು ಕಲಿಯಬೇಕಾದ ಮತ್ತು ಪ್ರಯೋಜನ ಪಡೆಯಬೇಕಾದ ಒಂದು ಉತ್ತಮ ಪಾಠ ಎಂದು ಹೇಳುತ್ತಾರೆ! ಮುಂದೆ, ಬಾಬ್ರಿ ಮಸೀದಿಯನ್ನು ಧ್ವಂಸ ಮಾಡಿದ ನಂತರ, ಆರೆಸ್ಸೆಸ್ನ ವಿಷಾಂಗಗಳಾದ ವಿಹೆಚ್ಪಿ ಮತ್ತು ಭಜರಂಗ ದಳ, ಕರಸೇವಕರಿಗೆ ನೀಡಿದ ತರಬೇತಿಯ ಬಗ್ಗೆ ಸಾರ್ವಜನಿಕವಾಗಿಯೇ ಹೆಮ್ಮೆ ಪಟ್ಟುಕೊಂಡರು.

ಭಿನ್ನ ಮಾನದಂಡವೇಕೆ ?
ಆರೆಸ್ಸೆಸ್ ಸಾಮಾನ್ಯವಾಗಿ ಹಿಂದೂ ಭಯೋತ್ಪಾದನೆ ಎಂಬ ಪದವನ್ನು ಪ್ರಶ್ನಿಸುತ್ತದೆ. ನೀವು ಹೇಗೆ ತಾನೇ ಒಂದಿಡೀ ಸಮುದಾಯ ವನ್ನು ಭಯೋತ್ಪಾದನೆಯ ಪರಿಕಲ್ಪನೆಯೊಂದಿಗೆ ಜೋಡಿಸುತ್ತೀರಿ? ಎಂದು ಕೇಳುತ್ತದೆ. ಅದರ ಹಿಂದಿನ ಮುಖ್ಯಸ್ಥರಂತೂ ಇನ್ನೂ ಮುಂದೆ ಹೋಗಿ, ಇಂತಹ ಪದಗಳ ರಚನೆ ಸಂಘಕ್ಕೆ ಅಪಖ್ಯಾತಿ ತರುವ ಸಂಚು. ಇದು ಹಿಂದುತ್ವ ಶಕ್ತಿಗಳನ್ನು ಸೋಲಿಸುವ, ಅವುಗಳ ಹೆಸರು ಕೆಡಿಸುವ ಒಂದು ರಾಜಕೀಯ ಸಂಚು ಎಂದಿದ್ದರು. ಬಹಳ ಜಾಣತನದಿಂದ ಹಿಂದುತ್ವ ಮತ್ತು ಹಿಂದೂ ಎಂಬ ಎರಡು ಭಿನ್ನ ಪದಗಳನ್ನು ಒಂದೇ ಅರ್ಥದಲ್ಲಿ ಅವರು ಬಳಸುತ್ತಾರೆ. ನಾವು ಹೇಳುತ್ತಿರುವುದು ಹಿಂದೂ ಭಯೋತ್ಪಾದನೆ ಎಂದಲ್ಲ, ಹಿಂದುತ್ವ ಭಯೋತ್ಪಾದನೆಯೆಂದೇ. ಖಂಡಿತವಾಗಿಯೂ, ಯಾವುದೇ ಧಾಮರ್ಿಕ ಸಮುದಾಯವನ್ನು ಇಡಿಯಾಗಿ ಆ ಧಮರ್ಾವಲಂಬಿ ವ್ಯಕ್ತಿಗಳ ಭಯೋತ್ಪಾದಕ ಚಟುವಟಿಕೆಗಳಿಗೆ ಹೊಣೆಯಾಗಿಸಬಾರದು. ಆದರೆ ಈ ಮಾನದಂಡ ಎಲ್ಲ ಧರ್ಮಗಳಿಗೂ ಸಮಾನವಾಗಿ ಅನ್ವಯವಾಗಬೇಕು ತಾನೇ? ಆದರೆ ಆರೆಸ್ಸೆಸ್ ಪ್ರಕಾರ ಅನ್ವಯವಾಗುವುದಿಲ್ಲ. ಏಕೆಂದರೆ, ಆರೆಸ್ಸೆಸ್, ಸಾಮಾನ್ಯವಾಗಿ ಅಂಗೀಕರಿಸುವ ನಿರ್ಣಯ ಇಸ್ಲಾಮೀ ಭಯೋತ್ಪಾದನೆಯನ್ನು ಕಠಿಣ ರೀತಿಯಲ್ಲಿ ಮೆಟ್ಟಿ ಹಾಕಬೇಕು ಎಂದು ಕೇಳುತ್ತದೆ. ಇದು ಇಬ್ಬಂದಿತನದ ಅಭಿವ್ಯಕ್ತಿಯಷ್ಟೇ ಅಲ್ಲ. ಇದು ಭಾರತದ ಆಧುನಿಕ ಜಾತ್ಯಾತೀತ ಪ್ರಜಾಸತ್ತಾತ್ಮಕ ಗಣರಾಜ್ಯವನ್ನು ಉನ್ಮತ್ತ ಧಾಮರ್ಿಕ ಅಸಹಿಷ್ಣುತೆಯ ಆರೆಸ್ಸೆಸ್ ನೋಟದ ಒಂದು ಹಿಂದೂ ರಾಷ್ಟ್ರವಾಗಿ ಪರಿವತರ್ಿಸುವ ಸೈದ್ಧಾಂತಿಕ ಬೇರುಗಳ ಪ್ರತಿಫಲನ.

ಭಯೋತ್ಪಾದನೆಗೆ ಧರ್ಮವಿಲ್ಲ ಎಂಬುದನ್ನು ಈ ಅಂಕಣದಲ್ಲಿ ನಾವು ಹೇಳುತ್ತಾ ಬಂದಿದ್ದೇವೆ, ಈಗಲೂ ಹೇಳುತ್ತೇವೆ. ಭಯೋತ್ಪಾದನೆ ನೇರವಾಗಿ ದೇಶ-ವಿರೋಧಿ ಮತ್ತು, ಅದರಿಂದಾಗಿ ದೇಶ ಅದರ ಬಗ್ಗೆ ಎಳ್ಳಷ್ಟೂ ಸಹನೆ ತೋರಬಾರದು. ಅಲ್ಲದೆ, ಎಲ್ಲ ವಿಧಗಳ ಭಯೋತ್ಪಾದನೆಗಳು ಪರಸ್ಪರ ಪೋಷಿಸುತ್ತವೆ ಮತ್ತು ಬಲಪಡಿಸಿಕೊಳ್ಳುತ್ತವೆ, ನಮ್ಮ ದೇಶದ ಐಕ್ಯತೆ ಮತ್ತು ಸಮಗ್ರತೆಯನ್ನೇ ಧ್ವಂಸ ಮಾಡುತ್ತವೆ.ಆಧುನಿಕ ಭಾರತದ ಜಾತ್ಯಾತೀತ ಪ್ರಜಾಸತ್ತಾತ್ಮಕ ತಳಹದಿಯನ್ನು ರಕ್ಷಿಸಿಕೊಳ್ಳಲು ಮತ್ತು ಬಲಪಡಿಸಲು, ಆರೆಸ್ಸೆಸ್ನ ರಾಜಕೀಯ ಗುರಿಗಳನ್ನು ಈಡೇರಿಸಿಕೊಳ್ಳುವ ಇಂತಹ ದುಷ್ಟ ಭಯೋತ್ಪಾದಕ ವಿಧಾನಗಳನ್ನು ನಿಣರ್ಾಯಕವಾಗಿ ಸೋಲಿಸುವುದು ಅತ್ಯಗತ್ಯ.
0

Donate Janashakthi Media

Leave a Reply

Your email address will not be published. Required fields are marked *