ನವದೆಹಲಿ: ಯೋಗ ಗುರು ರಾಮ್ದೇವ್ ಬಾಬಾ ತಾಳ್ಮೆ ಕಳೆದುಕೊಂಡು ಪತ್ರಕರ್ತರೊಬ್ಬರಿಗೆ ಬೆದರಿಕೆ ಹಾಕುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಪತ್ರಕರ್ತರ ಮತ್ತೇ ಪ್ರಶ್ನೆ ಕೇಳಲು ಮುಂದಾದಾಗ ಪತ್ರಕರ್ತರತ್ತ ಬೊಟ್ಟು ಮಾಡಿದ ರಾಮ್ದೇವ್, ನಾನು ಕಾಮೆಂಟ್ ಮಾಡಿದ್ದೇನೆ, ನೀವು ಏನು ಮಾಡುತ್ತೀರಿ? ಸುಮ್ಮನಿರಿ, ನೀವು ಮತ್ತೆ ಕೇಳಿದರೆ, ಅದು ಒಳ್ಳೆಯದಲ್ಲ ಎಂದಿದ್ದಾರೆ.
2014ರಲ್ಲಿ ಸರ್ಕಾರ ಬದಲಾದರೆ ಪೆಟ್ರೋಲ್ ಬೆಲೆ 40 ರೂ.ಗೆ ಇಳಿಯುವ ಬಗ್ಗೆ ಈ ಹಿಂದೆ ಮಾಡಿದ್ದ ಟೀಕೆಗಳ ಬಗ್ಗೆ ಕೇಳಿದ ಪ್ರಶ್ನೆಗೆ ಯೋಗ ಗುರು ಬಾಬಾ ರಾಮ್ದೇವ್ ಕ್ಯಾಮೆರಾ ಮುಂದೆಯೇ ತಾಳ್ಮೆ ಕಳೆದುಕೊಂಡು ಪತ್ರಕರ್ತರ ಮೇಲೆ ವಾಗ್ದಾಳಿ ನಡೆಸಿದ್ದಾರೆ.
ಈ ಹಿಂದೆ ಬಾಬಾ ರಾಮ್ದೇವ್ ನೀಡಿದ್ದ ಹೇಳಿಕೆಗಳ ಬಗ್ಗೆ ಪರ್ತಕರ್ತರೊಬ್ಬರು ಪ್ರಶ್ನೆ ಕೇಳಿದ್ದರು, ಹರಿಯಾಣದ ಕರ್ನಾಲ್ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ, ಜನರು ಲೀಟರ್ಗೆ ₹ 40 ಗೆ ಪೆಟ್ರೋಲ್ ಮತ್ತು ₹ 300 ಸಿಲಿಂಡರ್ಗೆ ಅಡುಗೆ ಅನಿಲವನ್ನು ಖಚಿತಪಡಿಸುವ ಸರ್ಕಾರವನ್ನು ಪರಿಗಣಿಸಬೇಕಾ ಎಂದು ಪತ್ರಕರ್ತರೊಬ್ಬರು ಪತಂಜಲಿ ಬ್ರಾಂಡ್ ಅಂಬಾಸಿಡರ್ಗೆ ಮಾಧ್ಯಮಗಳಿಗೆ ನೀಡಿದ ಹೇಳಿಕೆಯ ಬಗ್ಗೆ ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ರಾಮ್ದೇವ್, ಹೌದು, ನಾನು ಹೇಳಿದ್ದೇನೆ, ನೀವು ಏನು ಮಾಡುತ್ತಿರಿ? ಇಂತಹ ಪ್ರಶ್ನೆಗಳನ್ನು ಕೇಳಬೇಡಿ. ನಿಮ್ಮ ಪ್ರಶ್ನೆಗಳಿಗೆ ಉತ್ತರಿಸಲು ನಾನು ನಿಮ್ಮ ಗುತ್ತಿಗೆದಾರ ಅಲ್ಲ ಎಂದು ಬೆದರಿಸಿದ್ದಾರೆ.
ಕಳೆದ 10 ದಿನದಲ್ಲಿ 9ನೇ ಬಾರಿ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಯಾಗಿದೆ. ಇಂದು (ಮಾರ್ಚ್ 31,2022) ಸಹ, ಪೆಟ್ರೋಲ್, ಡೀಸೆಲ್ ಪ್ರತಿ ಲೀಟರ್ಗೆ 80 ಪೈಸೆ ಏರಿಕೆಯಾಗಿದೆ. ಕಳೆದ ಹತ್ತು ದಿನಗಳಲ್ಲಿ ಪೆಟ್ರೋಲ್, ಡೀಸೆಲ್ ಲೀಟರ್ಗೆ 6.40 ರೂಪಾಯಿ ಏರಿಕೆ ಆಗಿದೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಈಗ ಪೆಟ್ರೋಲ್ ಬೆಲೆ ರೂ. 101.81 ಆಗಿದೆ. ಇನ್ನು ಡಿಸೇಲ್ ಬೆಲೆಯು ಲೀಟರ್ಗೆ 93.07ಗೆ ತಲುಪಿದೆ.
ಕರ್ನಾಟಕ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪೆಟ್ರೋಲ್ ದರ ಏರಿಕೆ ಕಂಡಿದ್ದು, 107.30 ರೂಪಾಯಿಗೆ ಹೆಚ್ಚಿದೆ. ನಿನ್ನೆ 106.46 ರೂಪಾಯಿ ಇದ್ದ ಪೆಟ್ರೋಲ್ ಬೆಲೆಯು ಇಂದು 0.84 ಪೈಸೆ ಹೆಚ್ಚಳವಾಗಿ 107.30 ರೂಪಾಯಿಗೆ ತಲುಪಿದೆ. ಇನ್ನು ಡೀಸೆಲ್ ಬೆಲೆಯು ಕೂಡಾ ಏರಿದೆ. 0.78 ಪೈಸೆ ಹೆಚ್ಚಳವಾಗಿ, ಡಿಸೇಲ್ ಬೆಲೆಯು 91.27ಗೆ ತಲುಪಿದೆ.