- ಕಾಲೇಜು ಅವ್ಯವಸ್ಥೆ ಮತ್ತು ಕಿರುಕುಳದ ವಿರುದ್ಧ ಮೆಸೇಜ್ ಕಳುಹಿಸಿ ವಿದ್ಯಾರ್ಥಿ ಆತ್ಮಹತ್ಯೆ
- * ಮಂಗಳೂರಿನ ಕರಾವಳಿ ಕಾಲೇಜ್ ನ ವಿದ್ಯಾರ್ಥಿ ಭರತ್ ಭಾಸ್ಕರ್(20) ಆತ್ಮಹತ್ಯೆ
- * ಮಂಗಳೂರಿನ ಕೊಟ್ಟಾರ ಬಳಿಯ ಪಿಜಿಯಲ್ಲಿ ನೇಣಿಗೆ ಶರಣು
- * ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ನಿವಾಸಿ ಭರತ್
ಮಂಗಳೂರು : ಮಂಗಳೂರು ನಗರದ ಕರಾವಳಿ ಕಾಲೇಜ್ ಆಫ್ ಹೋಟೆಲ್ ಮ್ಯಾನೇಜ್ಮೆಂಟ್‌ನ ವಿದ್ಯಾರ್ಥಿ ಭರತ್ (20) ಎಂಬಾತ ಅದೇ ಕಾಲೇಜಿನ ಉಪನ್ಯಾಸಕರ ಅವಹೇಳನಕ್ಕೆ ಬೇಸತ್ತು ಮಂಗಳವಾರ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಬೆಂಗಳೂರಿನ ಕುಮಾರಸ್ವಾಮಿ ಬಡಾವಣೆಯ ನಿವಾಸಿಯಾದ ಭರತ್ ಮಂಗಳೂರು ನಗರದ ಕರಾವಳಿ ಕಾಲೇಜ್ ಆಫ್ ಹೋಟೆಲ್ ಮ್ಯಾನೇಜ್ಮೆಂಟ್ ಕಾಲೇಜಿನಲ್ಲಿ ಓದುತ್ತಿದ್ದ. ತಾನು ವಾಸವಿದ್ದ ಪಿ.ಜಿ.ಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
ಆತ್ಮಹತ್ಯೆಗೆ ಮುನ್ನ ತಾಯಿಗೆ ಕರೆ ಮಾಡಿದ್ದಾರೆ. ಆ ವೇಳೆ ಕರೆ ಸ್ವೀಕರಿಸಲು ತಾಯಿಗೆ ಸಾಧ್ಯವಾಗಿರಲಿಲ್ಲ ಎಂದು ತಿಳಿದುಬಂದಿದೆ. ‘ಕಾಲೇಜಿನ ರಾಹುಲ್ ಎಂಬ ಪ್ರಾಧ್ಯಾಪಕ ತಾನು ಮಾಡಿದ ಪ್ರಾಜೆಕ್ಟ್ ವರ್ಕ್ ಸರಿ ಇಲ್ಲ ಎಂದು ಸಹಿ ಮಾಡದೆ ಮನಸ್ಸಿಗೆ ನೋವಾಗುವಂತೆ ನಡೆದುಕೊಂಡರು. ಪರೀಕ್ಷೆಗೆ ಕುಳಿತುಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ. ಆದುದರಿಂದ ಈ ಲೋಕವನ್ನು ತ್ಯಜಿಸುತ್ತಿದ್ದೇನೆ’ ಎಂದು ವಿದ್ಯಾರ್ಥಿ ಭರತ್ ತಾಯಿಗೆ ಸಂದೇಶ ಕಳುಹಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ .
ಇದನ್ನೂ ಓದಿ : ವಿಮಾನ ನಿಲ್ದಾಣಕ್ಕೆ ಬಾಂಬ್ ಇಟ್ಟ ಪ್ರಕರಣ : ಆರೋಪಿ ಆದಿತ್ಯ ರಾವ್‌ಗೆ 25 ವರ್ಷ ಜೈಲು ಶಿಕ್ಷೆ
ಮಗನ ಸಾವಿಗೆ ಕಾರಣರಾಗಿರುವವರ ವಿರುದ್ಧ ಸೂಕ್ತ ತನಿಖೆ ನಡೆಸಿ ನ್ಯಾಯ ದೊರಕಿಸಿ ಕೊಡಬೇಕು ಎಂದು ಉರ್ವ ಪೊಲೀಸ್ ಠಾಣೆಗೆ ಭರತ್ ಪೋಷಕರು ದೂರು ನೀಡಿದ್ದಾರೆ.
ಕಾಲೇಜು ಆಡಳಿತದ ವಿರುದ್ದ ಎಫ್ ಐಆರ್!: ಸದ್ಯ ಪೋಷಕರ ದೂರಿನ ಹಿನ್ನೆಲೆಯಲ್ಲಿ ಕಾಲೇಜು ಆಡಳಿತದ ವಿರುದ್ದ ಮಂಗಳೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕರಾವಳಿ ಕಾಲೇಜು ಚೇರ್ ಮೆನ್ ಗಣೇಶ್ ರಾವ್ ಮತ್ತು ಲೆಕ್ಚರರ್ ರಾಹುಲ್ ವಿರುದ್ದ ಉರ್ವಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಾಸ್ಟೆಲ್ ನಲ್ಲಿ ಊಟೋಪಾಚಾರ ಸರಿ ಇಲ್ಲದೇ ಮಗ ಪಿಜಿಯಲ್ಲಿ ವಾಸವಾಗಿದ್ದ. ಮನೆಗೆ ಬಂದಾಗಲೆಲ್ಲಾ ಕಾಲೇಜು ಸರಿ ಇಲ್ಲ ಎನ್ನುತ್ತಿದ್ದ. ಅಲ್ಲಿನ ಲೆಕ್ಚರರ್ ರಾಹುಲ್ ಮನಸ್ಸಿಗೆ ನೋವಾಗುವಂತೆ ಅವಮಾನ ಮಾಡುವುದು ಹಾಗೂ ಪೋಷಕರು ಕರೆ ಮಾಡಿದಾಗಲೂ ದರ್ಪದಿಂದ ಮಾತನಾಡುತ್ತಿದ್ದ. ಹೀಗೆ ಕಾಲೇಜು ಕಿರುಕುಳದಿಂದ ಬೇಸತ್ತು ಮಗ ಮೆಸೇಜ್ ಹಾಕಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈತನ ಸಾವಿಗೆ ಕಾರಣವಾದ ಪ್ರಾಧ್ಯಾಪಕ ರಾಹುಲ್ ಮತ್ತು ಸರಿಯಾದ ಶಿಕ್ಷಣ ನೀಡದೇ ಹಣವನ್ನು ಡೊನೇಶನ್ ರೂಪದಲ್ಲಿ ಪಡೆಯುವ ಕರಾವಳಿ ಕಾಲೇಜು ಚೇರ್‌ಮನ್ ಗಣೇಶ್ ರಾವ್ ವಿರುದ್ದ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳುವಂತೆ ಮೃತ ವಿದ್ಯಾರ್ಥಿ ಭರತ್ ತಂದೆ ಭಾಸ್ಕರ್ ಉರ್ವಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು.