ಯಶಸ್ವಿ ಉತ್ಸವ

ವಸಂತ

ಸಂಪುಟ – 06, ಸಂಚಿಕೆ 07, ಫೇಬ್ರವರಿ, 12, 2012

11

ಇತ್ತೀಚಿನ ವರ್ಷಗಳಲ್ಲಿ ರಾಜ್ಯವ್ಯಾಪಿ ಸಾಂಸ್ಕೃತಿಕ ಚಳುವಳಿ ಮತ್ತು ಶಕ್ತಿಯಾಗಿ ಪುನಃ ಹೊಮ್ಮುತ್ತಿದ್ದು, ಜನವರಿ 21 ರಿಂದ 25 ರ ವರೆಗೆ ನಡೆದ ಐದು ದಿನದ ಸಂಸ್ಕೃತಿ-ಸಾಮರಸ್ಯ ಸಮುದಾಯ ರಂಗಸಂಗಮ ಇತ್ತೀಚೆಗೆ ನಡೆದ ಅತ್ಯಂತ ಯಶಸ್ವಿ ರಾಜ್ಯ ಮಟ್ಟದ ಕಾರ್ಯಕ್ರಮಗಳಿಗೆ ಕಳಶವಿಟ್ಟಂತ್ತಿತ್ತು. ಜನಸಂಸ್ಕೃತಿ ಉತ್ಸವ, ಟಾಗೋರ್ ಉತ್ಸವ ಮುಂತಾದ ಇತ್ತೀಚಿನ ಕಾರ್ಯಕ್ರಮಗಳಿಗಿಂತ ಬಹಳ ಭಿನ್ನವಾಗಿತ್ತು. ಐದು ನಾಟಕಗಳು, ಒಂದು ಬೀದಿ ನಾಟಕ, ಎರಡು ವಿಚಾರ ಸಂಕಿರಣಗಳು, ಒಂದು ಕವಿಗೋಷ್ಟಿ, ತತ್ವಪದ ಗಾಯನ, ಮಹಾಕಾದಂಬರಿ ಒಂದರ ಪ್ರಕಟಣಾ-ಪೂರ್ವ ಕೂಪನ್ ಬಿಡುಗಡೆ – ಹೀಗೆ ವೈವಿಧ್ಯತೆ ಈ ಉತ್ಸವದ ಪ್ರಮುಖ ವಿಶೇಷತೆಯಾಗಿತ್ತು. ಆದರೆ ಎಲ್ಲಾ ವಿವಿಧ ಕಾರ್ಯಕ್ರಮಗಳಲ್ಲೂ ಸಂಸ್ಕೃತಿ-ಸಾಮರಸ್ಯಕ್ಕೆ ಮಿಡಿಯುವ ಸಾಮಾನ್ಯ ಧ್ವನ ಸಹ ಇತ್ತು. ಕನರ್ಾಟಕದ ಹೊರಗಿನ ಎರಡು ಪ್ರಗತಿಪರ ರಂಗ ಚಳುವಳಿ ಪ್ರತಿನಧಿಸುವ, ದೆಹಲಿಯ ಸಫ್ದರ್ ಹಶ್ಮಿ ಸ್ಥಾಪಿಸಿದ ಜನ ನಾಟ್ಯ ಮಂಚ್(ಜನಮ್) ತಂಡದ ಸುಧನ್ವ ದೇಶಪಾಂಡೆ ಮತ್ತು ಚೆನ್ನೈ ಕಲೈ ಕುಳುವಿನ ಪ್ರಳಯನ್ ಭಾಗವಹಿಸಿದ್ದು ಇನ್ನೊಂದು ವಿಶೇಷವಾಗಿತ್ತು. ಹೆಚ್ಚಿನ ದಿನಗಳಲ್ಲಿ ಹೆಚ್ಚಿನ ಕಾರ್ಯಕ್ರಮಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ರೆಕಾಡರ್್ ಎನ್ನಬಹುದಾದ ಅತ್ಯಂತ ಹೆಚ್ಚಿನ ಪ್ರಮಾಣದ ಜನರ ಭಾಗವಹಿಸುವಿಕೆ ಮತ್ತೊಂದು ವಿಶೇಷವಾಗಿತ್ತು.

ಬೆಂಗಳೂರಿನ ಹೊರಗಿರುವ ದೂರದ ಜಿಲ್ಲೆಗಳ ಘಟಕಗಳು ಆಯಾ ಪ್ರದೇಶದಲ್ಲಿ ಯಶಸ್ವಿಯಾಗಿ ಪ್ರದಶರ್ಿಸಿದ ಇತ್ತೀಚಿನ ನಾಟಕಗಳನ್ನು ಬೆಂಗಳೂರಿನಲ್ಲಿ ಪ್ರದಶರ್ಿಸುವ ಅವಕಾಶ ಮಾಡಿಕೊಟ್ಟಿತ್ತು. ನಾಟಕಗಳ ವಸ್ತುಗಳಲ್ಲಿ ವಿವಿಧತೆ ಕಂಡುಬಂದರೂ ಸಂಸ್ಕೃತಿ-ಸಾಮರಸ್ಯಗಳ ಥೀಮನ್ನು ಹಲವು ರೀತಿಗಳಲ್ಲಿ ಮಾರ್ದನಸಿದವು. 18 ನೇ ಶತಮಾನದಲ್ಲಿ ಸಂಸ್ಕೃತಿ-ಸಾಮರಸ್ಯಗಳ ಸಂದೇಶವನ್ನು ಜನರಲ್ಲಿ ಬಿತ್ತಿದ ಕಡಕೋಳ ಮಡಿವಾಳಪ್ಪನವರ ತತ್ವಪದಗಳ ಮೂಲಕ ಉತ್ಸವದ ಆರಂಭ ಆಯಿತು. ಖುಶವಂತ್ ಸಿಂಗ್ ಅವರ ಪ್ರಸಿದ್ಧ ಕಾದಂಬರಿ ಆಧಾರಿತ ಟ್ರೈನ್ ಟು ಪಾಕಿಸ್ತಾನ್ ಭಾರತ-ಪಾಕಿಸ್ತಾನದ ವಿಭಜನೆಯ ಸಂದರ್ಭದಲ್ಲಿ ಸಾಮರಸ್ಯದ ಪರಂಪರೆಯ ಮೇಲೆ ಬರೆ ಎಳೆದ ಭಯಾನಕ ಕಥಾನಕವನ್ನು, ರಾಯಚೂರು ಘಟಕ ತಾಯಣ್ಣ ಎರಗೆರಾ ನದರ್ೇಶನದಲ್ಲಿ ರಂಗದ ಮೇಲೆ ಪುನಃಸೃಷ್ಟಿಸುವ ಸಾಹಸದೊಂದಿಗೆ ಉತ್ಸವ ಜನವರಿ 21 ರಂದು ಭರ್ಜರಿ ಆರಂಭ ಕಂಡಿತು. ಅದಕ್ಕಿಂತ ಮೊದಲು ಉತ್ಸವದ ಘೋಷವಾಕ್ಯವಾದ ಸಂಸ್ಕೃತಿ-ಸಾಮರಸ್ಯಕ್ಕೆ ಬರಗೂರು ರಾಮಚಂದ್ರಪ್ಪ ತಮ್ಮ ಉದ್ಘಾಟನಾ ಭಾಷಣದಲ್ಲಿ ಕೊಟ್ಟ ಹರಹು ಉತ್ಸವದ ಅರ್ಥವಂತಿಕೆ ಹೆಚ್ಚಿಸಿತು. ಸಂಸ್ಕೃತಿ-ಸಾಮರಸ್ಯಗಳ ಅಭಿವ್ಯಕ್ತಿ ಮೇಲೆ ನಡೆಯುತ್ತಿರುವ ದಾಳಿಯ ಗಂಭೀರತೆಯ ಬಗ್ಗೆ ಸುಧನ್ವ ದೇಶಪಾಂಡೆ ಮಾತನಾಡಿ ಸಮುದಾಯದ ಸಾಂಸ್ಕೃತಿಕ ಕರ್ತವ್ಯದ ಕಡೆಗೆ ಗಮನ ಸೆಳೆದರು.

ಜನ ರಂಗಭೂಮಿ-ದಿಕ್ಕು ದೆಸೆ
ಭಾನುವಾರವಾದ ಎರಡನೇ ದಿನದಂದು ಬೆಳಿಗ್ಗೆ ಜನ ರಂಗಭೂಮಿ -ದಿಕ್ಕು ದೆಸೆ ರಾಷ್ಟ್ರೀಯ ವಿಚಾರ ಸಂಕಿರಣದೊಂದಿಗೆ ಉತ್ಸವ ಮುಂದುವರೆಯಿತು. ಸುಧನ್ವ ದೇಶಪಾಂಡೆ ಮತ್ತು ಪ್ರಳಯನ್ – ತಮ್ಮ ರಂಗ ಚಳುವಳಿಗಳು ಎದುರಿಸುತ್ತಿರುವ ತೀವ್ರ ಸಮಸ್ಯೆಗಳು, ಬದಲಾದ ಸಾಂಸ್ಕೃತಿಕ ಸನ್ನವೇಶ ಅಥರ್ೈಸುವ ಬಗೆ, ಅದನ್ನು ಎದುರಿಸಲು ತಮ್ಮ ತಂಡ ಕಂಡುಕೊಂಡ ಬಗೆ – ಇವುಗಳ ಬಗ್ಗೆ ಅಭಿಪ್ರಾಯ ಹಂಚಿಕೊಂಡರು. ಕೋಲಾರದ ಪ್ರಸಿದ್ಧ ಆದಿಮ ಕಟ್ಟಿ ಬೆಳೆಸಿದ ಕೋಟಗಾನಹಳ್ಳಿ ರಾಮಯ್ಯ ಕನರ್ಾಟಕದ ಸಾಂಸ್ಕೃತಿಕ ಚಳುವಳಿ ಎದುರಿಸುತ್ತಿರುವ ಸವಾಲು ಮತ್ತು ಏಳುಬೀಳುಗಳನ್ನು ಸಮುದಾಯದ ಉದಾಹರಣೆಯೊಂದಿಗೆ ವಿವರಿಸಿದರು. ಆ ನಂತರ ಹಲವು ಪ್ರಸಿದ್ಧ ರಂಗಕಮರ್ಿಗಳು ಚಚರ್ೆಯಲ್ಲಿ ಭಾಗವಹಿಸಿದರು. ಬೀದಿ ನಾಟಕ ಮತ್ತು ರಂಗ ನಾಟಕಗಳ ನಡುವೆ ಭಿನ್ನತೆ, ಬೀದಿ ನಾಟಕದ ಇಂದಿನ ಪ್ರಸ್ತುತತೆ, ಇಂದಿನ ಸಂದರ್ಭದಲ್ಲಿ ಜನ ರಂಗಭೂಮಿಯ ಹಾದಿ – ಇತ್ಯಾದಿ ಚಚರ್ೆಗೆ ಬಂದವು. ಅಧ್ಯಕ್ಷತೆ ವಹಿಸಿದ್ದ ಡಾ.ವಿಜಯಾ ಚಚರ್ೆಗೆ ಬಂದ ಈ ವಿಷಯಗಳ ಬಗ್ಗೆ ತಮ್ಮ ಅಭಿಪ್ರಾಯ ಮಂಡಿಸಿ, ಸಾಂಸ್ಕೃತಿಕ ಚಳುವಳಿಯಲ್ಲಿನ ಒಡಕು ಮತ್ತು ವೈಫಲ್ಯಗಳ ಬಗ್ಗೆ ಒತ್ತು ಕೊಡುವ ಬದಲು ನಮ್ಮ ಮುಂದಿರುವ ಸವಾಲುಗಳನ್ನು ಎದುರಿಸಲು ಬೇಕಾದ ಐಕ್ಯತೆ ಮತ್ತು ಕಾಯರ್ಾಚರಣೆಗಳ ಅಗತ್ಯದ ಬಗ್ಗೆ ಒತ್ತಿ ಹೇಳಿದರು. ವಿಚಾರ ಸಂಕಿರಣ ನಡೆದ ಕಲಾಕ್ಷೇತ್ರ ಲಾಂಜ್ ತುಂಬಿ ತುಳುಕಿ, ತಡವಾಗಿ ಬಂದ ಉತ್ಸಾಹಿಗಳಿಗೆ ಜಾಗ ಸಿಗದೆ ಹೋಯಿತು.

ಮಿಂಚಿದ ತತ್ವಪದ ಗಾಯನ ಮತ್ತು ಬುದ್ಧ ಪ್ರಬುದ್ಧ
ಮಾಚರ್್ನಲ್ಲಿ ಪ್ರಕಟವಾಗಲಿರುವ (ಹಿಂದೆ ಸಮುದಾಯದ ಅಧ್ಯಕ್ಷರಾಗಿದ್ದ) ಬೋಳುವಾರ ಮಹ್ಮದ್ ಕುಂಞ ಅವರ ಸಾವಿರಕ್ಕೂ ಹೆಚ್ಚು ಪುಟಗಳ ಮಹಾಕಾದಂಬರಿ ಸ್ವಾತಂತ್ರ್ಯದ ಓಟದ ಪ್ರಕಟಣಾ-ಪೂರ್ವ ಕೂಪನ್ ಬಿಡುಗಡೆ ಮಾಡುವ ವಿಶಿಷ್ಟ ಕಾರ್ಯಕ್ರಮ ಮುಂದಿನ ಕಾರ್ಯಕ್ರಮವಾಗಿತ್ತು. ಕೂಪನ್ ಬಿಡುಗಡೆ ಮಾಡಿ, 1947 ರಿಂದ 2006 ರ ವರೆಗೆ ದೂರದ ಪಾಕಿಸ್ತಾನದಿಂದ ದಕ್ಷಿಣದವರೆಗೆ ಕಾಲ-ದೇಶಗಳ ವಿಸ್ತಾರ ಹೊಂದಿರುವ ಈ ಬೃಹತ್ ಕಾದಂಬರಿಯ ಇಣುಕುನೋಟವನ್ನು ಪ್ರೊ.ಎಸ್.ಜಿ. ಸಿದ್ದರಾಮಯ್ಯ ನಡಿದರು. ಸಂಜೆ ಕುವೆಂಪುರವರ ಕಥೆ ಧನ್ವಂತರಿ ಚಿಕಿತ್ಸೆಯ ಬೀದಿ ನಾಟಕ ರೂಪವನ್ನು ಶಶಿಧರ ಬಾರಿಘಾಟ್ ನದರ್ೇಶನದಲ್ಲಿ ಬೆಂಗಳೂರು ಘಟಕ ಪ್ರದಶರ್ಿಸಿತು. ಹಲವು ದಶಕಗಳ ಹಿಂದೆ ರೈತನ ರಕ್ತ ಹೀರಿ ಬದುಕುವ ವ್ಯವಸ್ಥೆಯ ದರ್ಶನ ಮಾಡಿಸಿದ ಕುವೆಂಪು ಕಥೆಯನ್ನು ಇಂದಿನ ಸನ್ನವೇಶಕ್ಕೆ ಮತ್ತು ಬೀದಿನಾಟಕ ರೂಪಕ್ಕೆ ಅಳವಡಿಸಿಕೊಂಡದ್ದು ಪರಿಣಾಮಕಾರಿಯೂ ಅರ್ಥಪೂರ್ಣವೂ ಆಗಿತ್ತು.

ರಾಮಲಿಂಗಯ್ಯ ಗೌಡಗಾಂವ್ ಗವಾಯಿಗಳು ಮತ್ತು ತಂಡ ಪ್ರಸ್ತುತ ಪಡಿಸಿದ ತತ್ವಪದ ಗಾಯನ ಸುಮಾರು ಎರಡು ಗಂಟೆಗಳ ಕಾಲ ಪ್ರೇಕ್ಷಕರನ್ನು ಮಂತ್ರಮುಗ್ಧರಾಗಿಸಿತು. ಹೆಚ್ಚಾಗಿ ಅಪರಿಚಿತವಾದ 18 ನೇ ಶತಮಾನದ ಅವಧಿಯಲ್ಲಿ ಪುರೋಹಿತಶಾಹಿ ಮತ್ತು ಪ್ರಭುತ್ವಗಳ ವಿರುದ್ಧ ಪ್ರಬಲ ಪ್ರತಿಭಟನಾ ಕಾವ್ಯವಾದ ತತ್ವಪದಗಳ ಗಾಢ ಪರಿಚಯ ಬೆಂಗಳೂರಿಗರಿಗೆ ಆಯಿತು. ಅರಿವಿನ ಹರಿಕಾರ ಬುದ್ಧ ಮತ್ತು ಹಿಂಸೆಯ ಪ್ರತಿರೂಪವೇ ಎಂಬತ್ತಿದ್ದ ಅಂಗುಲಿಮಾಲ ನಡುವಿನ ಮುಖಾಮುಖಿ ಶ್ರೀಶೈಲ ಹುದ್ದಾರ ಅವರ ಬುದ್ಧ ಪ್ರಬುದ್ಧದ ವಸ್ತುವಾಗಿತ್ತು. ವಾಸು ಗಂಗೇರ ಅವರ ಸಮರ್ಥ ನದರ್ೇಶನ, ಬೆಳಕಿನ ವಿನ್ಯಾಸ, ವೇಷಭೂಷಣ, ಅಭಿನಯ, ಸಂಗೀತ, ಧ್ವನಿ ಎಲ್ಲವೂ ಅಚ್ಚುಕಟ್ಟಾಗಿ ಮೇಳವಿಸಿ ಬುದ್ಧ ಪ್ರಬುದ್ಧಜನರ ಅಪಾರ ಮೆಚ್ಚುಗೆ ಗಳಿಸಿತು. ಅಂಗುಲಿಮಾಲ ದುಡಿಯುವ ಜನರ ಪ್ರಬುದ್ಧ ಪ್ರತಿನಧಿಯಾಗಿ ಮಾರ್ಪಡುವ ಪ್ರಕ್ರಿಯೆ, ಬುದ್ಧನ ಚಿಂತನೆಗಳು ಗಾಂಧಿ ಮತ್ತು ಅಂಬೇಡ್ಕರ್ ಮೂಲಕ ಸಾರ್ವತ್ರಿಕ ಹಾಗೂ ಸಾರ್ವಕಾಲಿಕವಾಗಿರುವುದನ್ನು ನಾಟಕ ಸಶಕ್ತವಾಗಿ ಧ್ವನಸಿತು. ಹೀಗೆ ಎರಡನೇ ದಿನದ ಹಲವು ಕಾರ್ಯಕ್ರಮಗಳ ಮೂಲಕ ಉತ್ಸವಕ್ಕೆ ಪೂರ್ಣ ರಂಗೇರಿತು.

ರಾಷ್ಟ್ರೀಯ ಬಹುಭಾಷಾ ಕವಿಗೋಷ್ಟಿ
ಸೋಮವಾರ(ಜ.23)ದ ಕಾರ್ಯಕ್ರಮ ಸಾಮರಸ್ಯದ ಥೀಮ್ ಸುತ್ತ ಹೆಣೆದ ಕವನ ವಾಚನದೊಂದಿಗೆ ಆರಂಭವಾಯಿತು. ಈ ರಾಷ್ಟ್ರೀಯ ಬಹುಭಾಷಾ ಕವಿಗೋಷ್ಟಿಯಲ್ಲಿ ಪ್ರೊ. ಜಿ.ಎಸ್.ಸಿದ್ದರಾಮಯ್ಯ, ಮೂಡ್ನಾಕೂಡು ಚಿನ್ನಸ್ವಾಮಿ, ಎಚ್.ಎಲ್.ಪುಷ್ಪ, ಎಲ್.ಹನುಮಂತಯ್ಯ, ಕೆ. ಶರೀಫಾ ಮುಂತಾದ ಕವಿಗಳು ಕನ್ನಡ ಕವನಗಳನ್ನು ಓದಿದರು. ಟಿ.ವಿ.ಸುಬ್ಬರಾವ್ ಮತ್ತು ರಾಜೇಶ್ವರಿ ತೆಲುಗು, ಪ್ರಭಾಶಂಕರ್ ಪ್ರೇಮಿ ಮತ್ತು ಕವಿತಾ ಹಿಂದಿ ಮತ್ತು ಮಾಹಿಲ್ ಮನ್ಸೂರ್ ಉದರ್ು ಕವಿತೆಗಳನ್ನು ಓದಿದರು. ಹಲವು ಶತಮಾನ ಗಳಿಂದ ನಮ್ಮನ್ನು ಕಾಡುತ್ತಿರುವ ಜಾತಿ ಸಮಸ್ಯೆಯನ್ನು ಕರ್ಣನ ದೃಷ್ಟಾಂತದೊಂದಿಗೆ ವಿಶ್ಲೇಷಣೆಗೆ ಒಳಪಡಿಸುವ, ಕುಂದಾಪುರ ಘಟಕ ಪ್ರಸ್ತುತ ಪಡಿಸಿದ ರಾಜಪ್ಪ ದಳವಾಯಿ ಬರೆದ ಕುಲಂ ಅಂದಿನ ನಾಟಕವಾಗಿತ್ತು. ಜಾತಿ ಜತೆಗೆ ಅಧಿಕಾರ ಸ್ವಾರ್ಥಸಾಧನೆಗಾಗಿ ಯುದ್ಧದ ಹಿನ್ನೆಲೆ ನಾಟಕಕ್ಕೆ ಇನ್ನೊಂದು ಆಯಾಮ ಒದಗಿಸಿತು. ಬುದ್ಧ ಪ್ರಬುದ್ಧದಂತೆ ಕುಲಂನಲ್ಲೂ ವಾಸು ಗಂಗೇರ ಅವರ ಕಲಾತ್ಮಕ ನದರ್ೇಶನದಡಿಯಲ್ಲಿ ಎಲ್ಲಾ ಉತ್ತಮ ನಾಟಕೀಯ ಅಂಶಗಳು ಮೇಳವಿಸಿದವು. ವಾರದ ದಿನವಾದರೂ ಕಿಕ್ಕಿರಿದಿದ್ದ ಜನ ಕಲಾಕ್ಷೇತ್ರದ ಗಾಂಭೀರ್ಯ ಲೆಕ್ಕಿಸದೆ, ಸಿಳ್ಳೆ ಚಪ್ಪಾಳೆಗಳಿಂದ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದರು.

ರಾಜಕೀಯ ಮತ್ತು ಸಾಂಸ್ಕೃತಿಕ ಚಳುವಳಿಗಳ ನಡುವೆ ಡೈಲೆಕ್ಟಿಕಲ್ ಸಂಬಂಧ
ಜನಸಂಸ್ಕೃತಿಗಾಗಿ ಹೊಸ ಚಳುವಳಿ ರಾಷ್ಟ್ರೀಯ ವಿಚಾರ ಸಂಕಿರಣ ಮಂಗಳವಾರ(ಜ.24)ದ ಕಾರ್ಯಕ್ರಮ ಆರಂಭಿಸಿತು. ಉದ್ಘಾಟನಾ ಭಾಷಣ ಮಾಡಬೇಕಿದ್ದ ಪ್ರಸಿದ್ಧ ಸಾಂಸ್ಕೃತಿಕ ಚಿಂತಕ ಪ್ರೊ.ಕೆ.ಎನ್.ಪಣಿಕ್ಕರ್ ಅಸ್ವಸ್ಥತೆಯಿಂದ ಬರಲಿಲ್ಲ. ಆದರೆ ತಮ್ಮ ಲಿಖಿತ ಭಾಷಣ ಕಳಿಸಿದ್ದರು. ಅದನ್ನು ಡಾ. ಎಸ್ ಚಟಜರ್ಿ ಓದಿದರು. ಪ್ರಗತಿಶೀಲ ಲೇಖಕರ ಸಂಘ ಮತ್ತು ಇಪ್ಟಾ ಭಾರತದಲ್ಲಿ 1930 ರ ದಶಕದಲ್ಲಿ ಆರಂಭಿಸಿದ ಸಾಂಸ್ಕೃತಿಕ ಚಳುವಳಿಯ 75 ವರ್ಷಗಳ ಇತಿಹಾಸದತ್ತ ವಿಹಂಗಮ ನೋಟ ಬೀರಿದ ಪ್ರೊ. ಪಣಿಕ್ಕರ್ ಅದರ ಏಳುಬೀಳುಗಳು, ಸಾಧನೆ-ವೈಫಲ್ಯಗಳು, ಅದಕ್ಕೆ ಕಾರಣಗಳು, ಇಂದಿನ ಪರಿಸ್ಥಿತಿ, ಮುಂದಿನ ಹಾದಿ ಬಗ್ಗೆ ತಮ್ಮ ಅಭಿಪ್ರಾಯ ಮಂಡಿಸಿದರು. 1930-40 ರಲ್ಲಿ ಯಶಸ್ವಿಯಾದ ಸಾಂಸ್ಕೃತಿಕ ವಲಯದಲ್ಲಿ ಐಕ್ಯರಂಗ ಮತ್ತೆ ಕಟ್ಟುವುದು, ಸಂಸ್ಕೃತಿಯಲ್ಲಿ ಮಧ್ಯಪ್ರವೇಶ, ರಾಜಕೀಯ ಮತ್ತು ಸಾಂಸ್ಕೃತಿಕ ಚಳುವಳಿಗಳ ನಡುವೆ ಡೈಲೆಕ್ಟಿಕಲ್ ಸಂಬಂಧ ಸ್ಥಾಪಿಸುವುದು – ಹೊಸ ಸಾಂಸ್ಕೃತಿಕ ಚಳುವಳಿ ಕಟ್ಟಲು ಅವರ ಕೆಲವು ಸೂಚನೆಗಳು. ಸಮುದಾಯ ಶಿರಸಿ ಕಾಯರ್ಾಗಾರದಲ್ಲಿ ರೂಪಿಸಿದ ಕರಡು ಹೇಳಿಕೆಯ ಸುತ್ತ ಸಂವಾದ ನಡೆಯಿತು. ಡಾ.ಕೆ.ವೈ.ನಾರಾಯಣಸ್ವಾಮಿ ಜನಸಂಸ್ಕೃತಿ ಎಂದರೇನು ?, ಫಕೀರ್ ಮಹ್ಮದ್ ಕಟ್ಪಾಡಿ ಸಾಂಸ್ಕೃತಿಕ ದಾಳಿಯ ಸ್ವರೂಪ ಕುರಿತು ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು. ಸುಚಿತ್ರ ಅಕಾಡೆಮಿಯ ವಿದ್ಯಾಶಂಕರ್ ಸಿನೇಮಾ, ಟಿವಿ, ಮತ್ತು ಇತರ ಇಲೆಕ್ಟ್ರಾನಕ್ ಮಾಧ್ಯಮಗಳ ಸ್ವರೂಪವನ್ನು ವಿಶ್ಲೇಷಿಸಿ, ಸಾಂಸ್ಕೃತಿಕ ಚಳುವಳಿ ಏನು ಮಾಡಬಹುದು ಎಂದು ತಮ್ಮ ಅಭಿಪ್ರಾಯ ಹೇಳಿದರು.

ಡಾ.ಎಂ.ವಿ.ವಸು ಪ್ರತಿಕ್ರಿಯಿಸುತ್ತಾ ಜನಸಂಸ್ಕೃತಿ ಜನ ಚಳುವಳಿಯಿಂದ ಹೊಮ್ಮುವ ಸಂಸ್ಕೃತಿ ಎಂದು ಅಥರ್ೈಸುತ್ತಾ, ಇಲೆಕ್ಟ್ರಾನಕ್ ಮಾಧ್ಯಮಗಳಲ್ಲಿ ಜನ ಸಾಂಸ್ಕೃತಿಕ ಚಳುವಳಿ ಮಧ್ಯಪ್ರವೇಶ ಮಾಡಲೇಬೇಕಾದರ ಅನವಾರ್ಯತೆಯನ್ನು ಒತ್ತಿ ಹೇಳಿದರು. ಪ್ರಸಿದ್ಧ ವಿಮರ್ಶಕ ಮತ್ತು ಚಿಂತಕ ಡಾ.ಎಚ್.ಎಸ್. ರಾಘವೇಂದ್ರ ರಾವ್ ಅಧ್ಯಕ್ಷೀಯ ಭಾಷಣ ಮಾಡುತ್ತಾ ಸಾಂಸ್ಕೃತಿಕ ಚಳುವಳಿ ಸಮಾನ ಶಿಕ್ಷಣಕ್ಕೆ ಒತ್ತಾಯವನ್ನು ಒಳಗೊಳ್ಳಬೇಕಾದ ಅಗತ್ಯವನ್ನು ಒತ್ತಿ ಹೇಳಿದರು. ಸಂಸ್ಕೃತಿ ರಾಜಕೀಯಕ್ಕೆ ಸಂಬಂಧ ಇಲ್ಲದ ಒಂದು ಸ್ವಾಯತ್ತ ಸಂಗತಿ ಅಲ್ಲ. ಸಮಾಜದ ಆಥರ್ಿಕ ತಳಹದಿ ಬದಲಾಯಿಸದೆ ಸಾಂಸ್ಕೃತಿಕ ಕ್ರಿಯೆ ಯಿಂದಲೇ ಬದಲಾವಣೆ ಅಸಾಧ್ಯ. ರಾಜಕೀಯ ಚಳುವಳಿಗೆ ನಲರ್ಿಪ್ತವಾದ ಸಾಂಸ್ಕೃತಿಕ ಚಳುವಳಿ ಟೊಳ್ಳಾಗಿರುತ್ತದೆ ಎಂಬುದನ್ನು ನೆನಪಿನಲ್ಲಿ ಇಡಬೇಕು ಎಂದರು.

ಜಗದ ಜಲಗಾರ
ಸಿಂಧನೂರು ಘಟಕ ಪ್ರಸ್ತುತ ಪಡಿಸಿದ ಸತೀಶ ಮಂಡ್ಯ ನದರ್ೇಶಿಸಿದ ಕುವೆಂಪುರವರ ಜಲಗಾರ ಅಂದಿನ ನಾಟಕವಾಗಿತ್ತು. ಗುಡಿ-ಮಸೀದಿಗಳ ಸ್ಥಾವರ ಕಲ್ಪನೆ ತಿರಸ್ಕರಿಸುವ ಮಾನವತಾವಾದಿ, ವರ್ಣವ್ಯವಸ್ಥೆಯ ಕಸವನ್ನು ಗುಡಿಸಿ ಹಾಕಿ, ಹೊಸದೊಂದು ಸಮ ಸಮಾಜ ಕಟ್ಟುವ ಜಗದ ಜಲಗಾರ ನ ಪರಿಕಲ್ಪನೆಯನ್ನು ನಾಟಕ ಶಕ್ತಿಯುತವಾಗಿ ಮೂಡಿಸಿತು.

ಐದು ದಿನಗಳ ಈ ಉತ್ಸವ ಕೊನೆಯ ದಿನದ ಸಮಾರೋಪದಲ್ಲಿ ಸಮುದಾಯದ ಸ್ಥಾಪಕ-ರೂವಾರಿ ಪ್ರಸನ್ನ, ಇಂದು ತೀವ್ರ ಅವಮಾನಕ್ಕೆ ಗುರಿಯಾಗಿರುವ ಶ್ರಮಸಂಸ್ಕೃತಿಗೆ ಮನ್ನಣೆ ಕೊಡುವ ಕಾಯಕದಲ್ಲಿ ಸಮುದಾಯ ತೊಡಗಿಸಿಕೊಳ್ಳಬೇಕೆಂದು ಕರೆ ಕೊಟ್ಟರು. ರಂಗ ವಿಮರ್ಶಕ ಮತ್ತು ಚಿಂತಕ ಡಾ.ಕೆ.ಮರುಳಸಿದ್ದಪ್ಪ ಸಾಮರಸ್ಯ ಕೆಡಿಸುವ ಶಕ್ತಿಗಳ ಹುನ್ನಾರ ಬಯಲಿಗೆಳೆಯುವ ಕಾಯಕದ ಮಹತ್ವದ ಬಗ್ಗೆ ಒತ್ತಿ ಹೇಳಿದರು. ಕೊನೆಯ ದಿನದ ನಾಟಕ ಪಿನಾಕಿನಿ ತೀರದಲ್ಲಿ ವಿದುರಾಶ್ವತ್ಥದಲ್ಲಿ ನಡೆದ ಧ್ವಜಸತ್ಯಾಗ್ರಹದ ಕಥಾನಕವನ್ನು (ರಿಪಬ್ಲಿಕ್ ದಿನದ ಹಿಂದಿನ ದಿನ) ರಂಗಕ್ಕೆ ತಂದಿತು. ಆ ಮೂಲಕ ಸಂಸ್ಕೃತಿ-ಸಾಮರಸ್ಯ ಕಾಪಾಡಲು, ಜನ ಸಾಮಾನ್ಯರು ಸಾಮ್ರಾಜ್ಯಶಾಹಿ ಮುಂತಾದ ಸಮಾನ ಶತ್ರುವಿನಿಂದ ವಿಮೋಚನೆಯ ಉದಾತ್ತವಾದ ಉದ್ದೇಶಗಳಿಗೆ ಒಂದಾಗಿ ಹೋರಾಡಿದಾಗ ಮಾತ್ರ ಸಾಧ್ಯ ಎಂದು ಬಿಂಬಿಸುತ್ತಾ ಉತ್ಸವದ ಆಶಯವನ್ನು ಇನ್ನಷ್ಟು ವಿಸ್ತರಿಸಿತು. ಐದು ದಿನಗಳ ಯಶಸ್ವಿ ಉತ್ಸವಕ್ಕೆ ತೆರೆ ಎಳೆಯಿತು.
0

Donate Janashakthi Media

Leave a Reply

Your email address will not be published. Required fields are marked *