ಹಾವೇರಿ: ಪಶ್ಚಿಮ ಬಂಗಾಳದಲ್ಲಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ) ವಿದ್ಯಾರ್ಥಿ ನಾಯಕರ ಮೇಲೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸರ್ಕಾರದ ಪೊಲೀಸರ ಹಲ್ಲೆ, ಕಾನೂನುಬಾಹಿರ ಬಂಧನ ಖಂಡಿಸಿ ಹಾಗೂ ವಿದ್ಯಾರ್ಥಿ ನಾಯಕರನ್ನು ಕೂಡಲೇ ಬಿಡುಗಡೆ ಮಾಡಲು ಒತ್ತಾಯಿಸಿ ಎಸ್ಎಫ್ಐ ರಾಣೇಬೆನ್ನೂರ ತಾಲ್ಲೂಕು ಸಮಿತಿ ನೇತೃತ್ವದಲ್ಲಿ ಬಸ್ ನಿಲ್ದಾಣದ ಹತ್ತಿರ ಇರುವ ಮೆಣಸಿನಾಳ ತಿಮ್ಮನಗೌಡರ ಪ್ರತಿಮೆ ಮುಂದೆ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಎಸ್ಎಫ್ಐ ಜಿಲ್ಲಾ ಸಹಕಾರ್ಯದರ್ಶಿ ಬಸವರಾಜ ಭೋವಿ, ತಾಲ್ಲೂಕು ಕಾರ್ಯದರ್ಶಿ ಶ್ರೀಧರ್ ಛಲವಾದಿ, ಮುಖಂಡರಾದ ಹೊನ್ನಪ್ಪ ಕುದರಿಹಾಳ, ಗುಡ್ಡಪ್ಪ ಮಡಿವಾಳರ, ನವೀನ್ ಬಿ ಇ, ಸುದೀಪ್ ಹೊಸಮನಿ, ಆಕಾಶ ಆರ್, ಪುನೀತ್ ವಡ್ಡರ, ಲಕ್ಷ್ಮಣ ನಾಗವಾತ, ನಿಂಗರಾಜ ಚವ್ಹಾಣ, ಗಣೇಶ ರಣಸೋತ, ಚೇತನ ಲಮಾಣಿ, ಬಿರೇಶ ಎಲ್, ಹನುಮಂತ ಲಮಾಣಿ, ಹಾಲೇಶ್ ಎನ್, ಕೃಷ್ಣ ಎಲ್ ಎನ್, ಅಭಿಶೇಕ್ ಒಡತೇರ್ ಸೇರಿದಂತೆ ಅನೇಕ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.