ಬಂಡವಾಳಗಾರರ ಲಾಭಗಳನ್ನಷ್ಟೇ ಗರಿಷ್ಟಗೊಳಿಸುವ ಈ ಗೀಳೇಕೆ?

ಸಂಪುಟ – 06, ಸಂಚಿಕೆ 07, ಫೇಬ್ರವರಿ, 12, 2012

ನವ-ಉದಾರವಾದಿ ಆಥರ್ಿಕ ಸುಧಾರಣೆಗಳ ವ್ಯವಸ್ಥೆಯ ಅಡಿಯಲ್ಲಿ ಸರಕಾರ ನಮ್ಮೆಲ್ಲ ಜನತೆಗೆ ಮೂಲ ಅಗತ್ಯಗಳನ್ನು ಒದಗಿಸುವ ತನ್ನ ಸಂವಿಧಾನಿಕ ಹೊಣೆಗಾರಿಕೆಯಿಂದ ಜಾರಿಕೊಂಡು, ಹೆಚ್ಚೆಚ್ಚಾಗಿ ವಿದೇಶಿ ಮತ್ತು ಭಾರತೀಯ ದೊಡ್ಡ ಬಂಡವಾಳಗಾರರ ಲಾಭಗಳನ್ನು ಗರಿಷ್ಟಗೊಳಿಸಿಕೊಳ್ಳಲು ಅನುಕೂಲ ಕಲ್ಪಿಸಿಕೊಡುವ ಬಗ್ಗೆಯೇ ಕಾಳಜಿ ವಹಿಸುತ್ತಿದೆ. ಯುಪಿಎ ಸರಕಾರ ತನ್ನ ಈ ಕಾರ್ಯತಂತ್ರ ಮತ್ತು ಆಥರ್ಿಕ ಧೋರಣೆಗಳ ದಿಕ್ಕನ್ನು ಕೈಬಿಡುವಂತೆ ಮಾಡಬೇಕಾಗಿದೆ. ಭಾರತದ ಜನತೆ ಒಂದು ಉತ್ತಮ ಭಾರತವನ್ನು ನಿಮರ್ಿಸುವ ಸಾಮಥ್ರ್ಯವನ್ನೂ ಹೊಂದಿದ್ದೇವೆ, ಸಂಪನ್ಮೂಲಗಳನ್ನೂ ಹೊಂದಿದ್ದೇವೆ. ನಾವು ಏನು ಸಾಧಿಸಬಲ್ಲೆವೋ, ಯಾವುದಕ್ಕೆ ನಾವು ಅರ್ಹರೋ ಅದನ್ನು ಪಡೆಯಲಿಕ್ಕಾಗಿ ಸರಕಾರದ ಮೇಲೆ ಶಕ್ತಿಶಾಲಿ ಸಾರ್ವಜನಿಕ ಒತ್ತಡವನ್ನು ಹಾಕಬೇಕಾಗಿದೆ

ಆಥರ್ಿಕ ಚಟುವಟಿಕೆಗಳನ್ನು ಸೂಚಿಸುವ ಎಲ್ಲ ಸೂಚ್ಯಂಕಗಳೂ ಇಳಿಮುಖವಾಗಿವೆ. ಆದರೂ ಯುಪಿಎ-2 ಸರಕಾರ ತನ್ನ ನವ-ಉದಾರವಾದಿ ಆಥರ್ಿಕ ಸುಧಾರಣೆಗಳಿಗೇ ಅಂಟಿಕೊಂಡು ಅದೇ ದಾರಿಯಲ್ಲಿ ಮುಂದುವರೆಯುತ್ತಿದೆ. ಹೆಚ್ಚೆಚ್ಚು ವಿದೇಶಿ ಬಂಡವಾಳದ ಹರಿವನ್ನು ಆಕಷರ್ಿಸ ಬಹುದೆಂಬ ನಿರೀಕ್ಷೆಯಿಂದ ಅದು ಮುಂಬರುವ ವಾಷರ್ಿಕ ಬಜೆಟಿನ ಮೊದಲು ಉದಾರೀಕರಣದ ವೇಗವನ್ನು ಹೆಚ್ಚಿಸಲು ಮುಂದಾಗುತ್ತಿರುವಂತೆ ಕಾಣುತ್ತಿದೆ. ಜಾಗತಿಕವಾಗಿ ಆಥರ್ಿಕ ಬಿಕ್ಕಟ್ಟು ಮತ್ತಷ್ಟು ಹದಗೆಡುತ್ತಿರುವಾಗ ಈ ರೀತಿಯ ವಿದೇಶಿ ಬಂಡವಾಳದ ಹರಿವು ಸಾಧ್ಯವಿಲ್ಲ ಎಂಬ ಅಂಶವನ್ನು ಅದು ಪರಿಗಣನೆಗೆ ತಗೊಂಡಂತಿಲ್ಲ. ಭಾರತ ಒಂದು ಮೂಡಿ ಬರುತ್ತಿರುವ ಆಥರ್ಿಕ, ವಿದೇಶಿ ಬಂಡವಾಳ ತೀವ್ರ ಬಿಕ್ಕಟ್ಟಿನಲ್ಲಿರುವಾಗ, ಇಲ್ಲಿಗೆ ಬಂದು ಭಾರತದಿಂದ ಸೂಪರ್ ಲಾಭಗಳನ್ನು ದಕ್ಕಿಸಿಕೊಂಡು ಹೋಗಲು ಅದಕ್ಕೆ ಆತಿಥ್ಯ ನೀಡಲು ಸಿದ್ಧವಾಗಿರುವ ದೇಶ ಎಂದು ತೋರಿಸಬೇಕೆಂಬುದೇ ಅದರ ಕಾಳಜಿ, ಅದಕ್ಕಾಗಿ ಭಾರತೀಯ ಜನತೆಯ ಹಿತಗಳನ್ನು ಕೂಡ ಬಲಿಗೊಟ್ಟರೇನಂತೆ?

ಫೆಬ್ರುವರಿ ಮೊದಲ ವಾರದಲ್ಲಿ ಸರಕಾರ ಯುರೋಪಿಯನ್ ಸಂಘ(ಇಯು)ದೊಂದಿಗೆ ಮುಕ್ತ ವ್ಯಾಪಾರ ಒಪ್ಪಂದ(ಎಫ್ಟಿಎ)ವನ್ನು ಮಾಡಿಕೊಳ್ಳಲು ಸಿದ್ಧವಾಗುತ್ತಿದೆ ಎಂಬ ವರದಿಗಳಿವೆ. ಯುರೋಪಿಯನ್ ಸಂಘ ಒಂದು ತೀವ್ರ ಬಿಕ್ಕಟ್ಟಿನಲ್ಲಿ ಸಿಲುಕಿಕೊಂಡಿದೆ, ಅದು ಅವರ ನಾಣ್ಯ ಯುರೋದ ಅಸ್ತಿತ್ವಕ್ಕೇ ಬೆದರಿಕೆಯೊಡ್ಡಿದೆ ಎಂಬುದು ಎಲ್ಲರ ಕಣ್ಣೆದುರೇ ಇದೆ. ಇಯು ನೊಂದಿಗೆ ಈ ಒಪ್ಪಂದವನ್ನು ಲಾಭಕ್ಕಾಗಿ ತಹತಹಿಸುತ್ತಿರುವ ಯುರೋಪಿನ ಬಂಡವಾಳಕ್ಕೆ ಭಾರತದ ಮಾರುಕಟ್ಟೆಗಳನ್ನು ತೆರೆದು ಕೊಡಲಿಕ್ಕಾಗಿ, ಅದರಲ್ಲೂ ಅಲ್ಲಿನ ಸರಕಾರ ಗಳಿಂದ ಭಾರೀ ಸಬ್ಸಿಡಿ ಪಡೆಯುತ್ತಿರುವ ಅಲ್ಲಿನ ಹೈನು ಉತ್ಪಾದನೆಗಳನ್ನು ಭಾರತದ ಮಾರುಕಟ್ಟೆಯಲ್ಲಿ ಸುರಿಯಲು ಅನುವು ಮಾಡಿ ಕೊಡಲಿಕ್ಕಾಗಿಯೇ ಮಾಡಿಕೊಳ್ಳಲಾಗುತ್ತಿದೆ. ಇದು ಈಗಾಗಲೇ ಒಂದು ಆಳವಾದ ಸಂಕಟದಲ್ಲಿ ಒದ್ದಾಡುತ್ತಿರುವ ಭಾರತೀಯ ರೈತಾಪಿ ಜನಗಳನ್ನು, ನಮ್ಮ ಕೃಷಿ ಆಥರ್ಿಕವನ್ನು ನರಕಕ್ಕೇ ತಳ್ಳಲಿದೆ. ಸರಕಾರೀ ಸಂಸ್ಥೆಗಳೇ ರೈತರಿಗೆ ಘೋಷಿತ ಕನಿಷ್ಟ ಬೆಂಬಲ ಬೆಲೆಗಳನ್ನು ತೆರದಿರುವಾಗ, ಅದರಿಂದಾಗಿ ಅವರು ತಮ್ಮ ಉತ್ಪನ್ನಗಳ ಹತಾಶ ಮಾರಾಟಕ್ಕೆ ಇಳಿಯುತ್ತಿರು ವಾಗ, ಈ ರೀತಿ ನಮ್ಮ ಆಥರ್ಿಕವನ್ನು ತೆರೆದು ಕೊಟ್ಟರೆ, ಅದರಿಂದ ನಮ್ಮ ರೈತರ ಮೇಲೆ ಇನ್ನಷ್ಟು ನೋವು-ಸಂಕಟಗಳನ್ನು ಹಾಕಿದಂತಾಗುತ್ತದೆ, ಹತಾಶ ಆತ್ಮಹತ್ಯೆಗಳ ಸಂಖ್ಯೆಯನ್ನು ಹೆಚ್ಚಿಸ ಹೊರಟಂತಾಗುತ್ತದೆ. ಆಸಿಯಾನ್ ದೇಶ ಗಳೊಂದಿಗೆ ಇಂತಹ ಒಂದು ಎಫ್ಟಿಎದಿಂದಾಗಿ ವಾಣಿಜ್ಯ ಬೆಳೆಗಳ ಉತ್ಪಾದಕರ ಮೇಲೆ, ವಿಶೇಷವಾಗಿ ಕೇರಳದಲ್ಲಿ, ಎಂತಹ ವಿನಾಶಕಾರಿ ಪರಿಣಾಮ ಉಂಟಾಯಿತು ಎಂದು ಈಗಾಗಲೇ ಅನುಭವಿಸಿದ್ದೇವೆ.

ಬಂಡವಾಳಿಗರಿಗೆ ಗರಿಷ್ಟ ಲಾಭಕ್ಕಾಗಿ
ಭಾರತದ ಚಿಲ್ಲರೆ ಮಾರಾಟ ವಲಯವನ್ನು ವಿಧಾನ ಸಭಾ ಚುನಾವಣೆಗಳ ಪ್ರಸಕ್ತ ಸುತ್ತು ಮುಗಿದ ಕೂಡಲೇ ವಿದೇಶಿ ಬಂಡವಾಳಕ್ಕೆ ತೆರೆಯಲಾಗುವುದು ಎಂದು ಪ್ರಧಾನ ಮಂತ್ರಿಗಳು ಸ್ಪಷ್ಟಪಡಿಸಿದ್ದಾರೆ. ಇದು ಕೂಡ, ಎಲ್ಲೆಡೆಗಳಿಂದ ಹೊಡೆತಗಳನ್ನು ತಿನ್ನುತ್ತಿರುವ ಅಂತರ್ರಾಷ್ಟ್ರೀಯ ಹಣಕಾಸು ಬಂಡವಾಳಕ್ಕೆ ತನ್ನ ಲಾಭಗಳನ್ನು ಗರಿಷ್ಟಗೊಳಿಸಿಕೊಳ್ಳುವ ದಾರಿಗಳನ್ನು ಹೆಚ್ಚಿಸುತ್ತದೆ. ಆದರೆ ಇದಕ್ಕೆ ಈ ವಲಯದಲ್ಲಿ ಈಗ ಕೆಲಸ ಮಾಡುತ್ತಿರುವ 4 ಕೋಟಿ (ಕುಟುಂಬದ ಸದಸ್ಯರನ್ನೂ ಸೇರಿಸಿದರೆ 20 ಕೋಟಿ) ಭಾರತೀಯರ ಜೀವನಾಧಾರವನ್ನು ಬಲಿಗೊಡಬೇಕು. ಇದೇ ರೀತಿ ನಮ್ಮ ವಿಮೆ ಮತ್ತು ಬ್ಯಾಂಕಿಂಗ್ ವಲಯದಲ್ಲೂ ವಿದೇಶಿ ಬಂಡವಾಳಕ್ಕೆ ಅವಕಾಶ ಇನ್ನೇನು ಕೊಡಲಾಗು ತ್ತದೆ. ಬಿಜೆಪಿ ಕೂಡ ಸಂಸತ್ತಿನಲ್ಲಿ ಪಿಎಫ್ಆರ್ಡಿಎ ಮಸೂದೆಯನ್ನು ಪಾಸು ಮಾಡಿಸಿಕೊಳ್ಳುವಲ್ಲಿ ಈ ಯುಪಿಎ ಸರಕಾರದೊಂದಿಗೆ ಶಾಮೀಲಾಗಿ ಲಕ್ಷಾಂತರ ಕೋಟಿ ರೂ.ಗಳಷ್ಟಿರುವ ಪೆನ್ಶನ್ ನಿಧಿಗಳ ಖಾಸಗೀಕರಣಕ್ಕೆ ದಾರಿ ತೆರೆದು ಕೊಟ್ಟಿದೆ. ಇದು ಕೋಟ್ಯಂತರ ನೌಕರರ ಭವಿಷ್ಯವನ್ನು ಹಾಳುಗೆಡವುತ್ತಲೇ ಅಂತರ್ರಾಷ್ಟ್ರೀಯ ಹಣಕಾಸು ಬಂಡವಾಳಕ್ಕೆ ತನ್ನ ಜೂಜುಕೋರ ಲಾಭಗಳನ್ನು ಗರಿಷ್ಟಗೊಳಿಸಿಕೊಳ್ಳಲು ಅಗಾಧ ಪ್ರಮಾಣದ ನಿಧಿಗಳನ್ನು ಕೊಡಮಾಡಿದೆ.

ಈ ಯುಪಿಎ ಸರಕಾರ ವಿದೇಶಿ ಬಂಡವಾಳಕ್ಕೆ ಪ್ರಯತ್ನಿಸಲು ಕೊಟ್ಟಿರುವ ನೆಪವೆಂದರೆ, ವಿದೇಶಿ ಬಂಡವಾಳ ಹರಿದು ಬಂದರೆ ಅದು ನಮ್ಮ ಹೆಚ್ಚುತ್ತಿರುವ ಹಣಕಾಸು ಕೊರತೆಯನ್ನು ಕಡಿಮೆ ಮಾಡುತ್ತದೆ ಎಂದು. ನಾವು ಈ ಹಿಂದೆ ಈ ಅಂಕಣದಲ್ಲಿ ವಾದಿಸಿದಂತೆ, ಕಾಪರ್ೊರೇಟ್ಗಳಿಗೆ ಮತ್ತು ಶ್ರೀಮಂತರಿಗೆ ಕೊಟ್ಟಿರುವ ತೆರಿಗೆ ರಿಯಾಯ್ತಿ ಗಳನ್ನು ಹಿಂತೆಗೆದುಕೊಂಡರಷ್ಟೇ ಸಾಕು, ಈ ಹಣಕಾಸು ಕೊರತೆಯೆಂಬುದೇ ಇರುವುದಿಲ್ಲ. ಇಂತಹ ತೆರಿಗೆಗಳು ಶ್ರೀಮಂತರನ್ನು ಇನ್ನಷ್ಟು ಶ್ರೀಮಂತರಾಗಿಸಿದೆಯಷ್ಟೇ. ಆ ಮೂಲಕ ನಮ್ಮ ಡಾಲರ್ ಬಿಲಿಯಾದಿಪತಿಗಳ ಸಂಖ್ಯೆ ಬಲೂನಿನಂತೆ ಹಿಗ್ಗಿದೆ. ನಮ್ಮ ದೇಶದ ಜಿಡಿಪಿಯ ಮೂರನೇ ಒಂದು ಭಾಗ ಈ ಡಾಲರ್ ಬಿಲಿಯಾಧಿಪತಿಗಳ ಕೈಗಳಲ್ಲಿದೆ. ಅಂದರೆ ಈ ಸರಕಾರ ತನ್ನ ಧೋರಣೆಗಳ ದಿಕ್ಕನ್ನು ರೂಪಿಸಿ ರುವದೇ ವಿಶಾಲ ಭಾರತೀಯ ಜನಸ್ತೋಮದ ಜೀವನಾಧಾರಗಳನ್ನು ಕುಗ್ಗಿಸಿ ವಿದೇಶಿ ಬಂಡವಾಳ ಮತ್ತು ಭಾರತೀಯ ದೊಡ್ಡ ಉದ್ಯಮಿಗಳ ಲಾಭಗಳನ್ನು ಗರಿಷ್ಟಗೊಳಿಸಲಿಕ್ಕಾಗಿ ಎಂಬುದು ಸ್ಪಷ್ಟ.

ಖಚರ್ು ಕಡಿತದ ನೆಪ
ಅಲ್ಲದೆ, ಈ ಹೆಚ್ಚುತ್ತಿರುವ ಹಣಕಾಸು ಕೊರತೆಯನ್ನು ಕಡಿಮೆ ಮಾಡುವ ಹೆಸರಿನಲ್ಲಿ ಈ ಸರಕಾರ ಮುಂಬರುವ ಬಜೆಟಿನಲ್ಲಿ ಈಗಾಗಲೇ ಅಲ್ಪ ಪ್ರಮಾಣದಲ್ಲಿರುವ ಸಾಮಾಜಿಕ ವಲಯದ ಖಚರ್ುಗಳನ್ನು ಮತ್ತಷ್ಟು ಇಳಿಸುವ ಸಾಧ್ಯತೆ ಬಹಳ ಇದೆ. ಸರಕಾರೀ ಖಚರ್ುಗಳನ್ನು ಕಡಿತ ಮಾಡುವ ಈ ಪ್ರಯತ್ನದಲ್ಲಿ ಹಲವಾರು ಇಲಾಖೆಗಳಲ್ಲಿ, ವಿಶೇಷವಾಗಿ ರೈಲ್ವೇ ಇಲಾಖೆ ಯಲ್ಲಿ ಲಕ್ಷಾಂತರ ಖಾಲಿ ಹುದ್ದೆಗಳು ಹಾಗೆಯೇ ಉಳಿಯುತ್ತವೆ. ಭಾರತದ ನೌಕರಶಾಹಿ ಬಹಳ ದೊಡ್ಡದಾಗಿ ಬೆಳೆದು ಬಿಟ್ಟಿದೆ, ಸರಕಾರದ ಖಚರ್ುಗಳನ್ನು ಕಡಿತ ಮಾಡಲು, ಅದನ್ನು ಸರಿಯಾದ ಗಾತ್ರಕ್ಕೆ ಇಳಿಸಬೇಕಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಇತ್ತೀಚಿನ ಒಂದು ಅಧ್ಯಯನದ ಪ್ರಕಾರ, ಭಾರತದಲ್ಲಿ ತಲಾ ಸಾರ್ವಜನಿಕ ಸೇವಕರ ಸಂಖ್ಯೆ ಜಗತ್ತಿನಲ್ಲಿಯೇ ಅತಿ ಕಡಿಮೆ ಎಂದು ಕಂಡು ಬಂದಿದೆ. ಭಾರತದಲ್ಲಿ ಪ್ರತಿ ಲಕ್ಷ ನಾಗರಿಕರಿಗೆ 1600ಕ್ಕಿಂತ ತುಸು ಹೆಚ್ಚು (ಕೇಂದ್ರ ಮತ್ತು ರಾಜ್ಯ) ಸರಕಾರೀ ನೌಕರರು ಇದ್ದರೆ, ಅಮೆರಿಕಾದಲ್ಲಿ ಈ ಸಂಖ್ಯೆ 7681, ಅಂದರೆ ಸುಮಾರು ಐದು ಪಟ್ಟು ಹೆಚ್ಚು. ರೈಲ್ವೆ ಇಲಾಖೆಯನ್ನು ಬಿಟ್ಟರೆ, ಭಾರತದಲ್ಲಿ ಪ್ರತಿ ಒಂದು ಲಕ್ಷ ನಾಗರಿಕರಿಗೆ ಇರುವ ಕೇಂದ್ರ ಸರಕಾರೀ ನೌಕರರ ಸಂಖ್ಯೆ 125ಕ್ಕೆ ಇಳಿಯುತ್ತದೆ, ಅಮೆರಿಕಾದಲ್ಲಿ ಫೆಡರಲ್ ನೌಕರರ ಸಂಖ್ಯೆ ಪ್ರತಿ ಲಕ್ಷ ನಾಗರಿಕರಿಗೆ 800 ಆಗುತ್ತದೆ, ಸುಮಾರು ಆರೂವರೆ ಪಟ್ಟು.

ಭಾರತದಲ್ಲಿ ಸಾಮಾಜಿಕ ವಲಯದಲ್ಲಿ ಜನತೆಯ ಅಗತ್ಯಗಳನ್ನು ಪೂರೈಸಲು, ಅಷ್ಟೇ ಏಕೆ, ನಮ್ಮ ಆಂತರಿಕ ಭದ್ರತೆಯನ್ನು ನೋಡಿಕೊಳ್ಳಲು ಅಗತ್ಯವಾದ ಮಾನವ ಶಕ್ತಿಯನ್ನು ನಾವು ಹೊಂದಿಲ್ಲ ಎಂಬುದು ಸ್ಪಷ್ಟ. ವಿಶ್ವಸಂಸ್ಥೆ ಶಿಫಾರಸು ಮಾಡಿರುವ ಅನುಪಾತದ ಪ್ರಕಾರ ಭಾರತದಲ್ಲಿ ಪೋಲೀಸರ ಸಂಖ್ಯೆ ಈಗಿರುವುದರ ಮೂರು ಪಟ್ಟು ಇರಬೇಕು. ಶಿಕ್ಷಣ, ಆರೋಗ್ಯ ರಕ್ಷಣೆ, ಆಹಾರ ಭದ್ರತೆಯನ್ನು ಸಾರ್ವತ್ರಿಕವಾಗಿ ಒದಗಿಸಬೇಕಾದರೆ ಅದಕ್ಕೆ ಅನುಗುಣವಾದ ತಲುಪಿಸುವ ವ್ಯವಸ್ಥೆ ಇರಬೇಕಾದ್ದು ಅಗತ್ಯ. ಎಲ್ಲ ಅಭಿವೃದ್ದಿ ಪ್ರಾಜೆಕ್ಟುಗಳಲ್ಲಿ ಮತ್ತು ಸಾಮಾಜಿಕ ಸೇವೆಗಳಲ್ಲಿ ಹಣವನ್ನು ನುಂಗಿ ಹಾಕುವ ಬಗ್ಗೆ ಕಾಳಜಿ ಸಹಜವಾದದ್ದೇ(ಸರಕಾರ ಖಚರ್ು ಮಾಡುವ ಪ್ರತಿ ಒಂದು ರೂಪಾಯಿಯಲ್ಲಿ 15 ಪೈಸೆ ಮಾತ್ರ ಜನಗಳನ್ನು ತಲಪುತ್ತದೆ ಎಂಬ ರಾಜೀವ ಗಾಂಧಿ ಯವರ ಪ್ರಖ್ಯಾತ ಉದ್ಗಾರ ನೆನಪಿಸಿಕೊಳ್ಳಿ). ಆದರೆ, ನಿಜಸಂಗತಿಯೆಂದರೆ, ಈಗಿರುವ ಅಲ್ಪ ಸೇವೆಗಳನ್ನು ಜನಗಳಿಗೆ ತಲುಪಿಸಲು ಕೂಡ ಸಾಕಷ್ಟು ಸಿಬ್ಬಂದಿಯಿಲ್ಲ. ಈಗ ಆರೋಗ್ಯ, ಶಿಕ್ಷಣ, ಆಹಾರ ಭದ್ರತೆ ಇತ್ಯಾದಿ ಮೂಲ ವಲಯಗಳಲ್ಲಿ ಜನಗಳ ಸಾಮಾಜಿಕ-ಆಥರ್ಿಕ ಅಗತ್ಯಗಳನ್ನು ಪೂರೈಸಲು ಬೇಕಾಗಿರುವ ಮಾನವ ಶಕ್ತಿಯನ್ನು ದೊಡ್ಡ ಪ್ರಮಾಣದಲ್ಲಿ ಹೆಚ್ಚಿಸಬೇಕಾಗಿದೆ. ಇದಕ್ಕೆ ಬದಲಾಗಿ, ಸರಕಾರ ಹಣಕಾಸು ಕೊರತೆಯನ್ನು ಇಳಿಸುವ ಹೆಸರಿನಲ್ಲಿ ಈ ಸಂಖ್ಯೆಯನ್ನು ಮತ್ತಷ್ಟು ಕಡಿತ ಮಾಡುವ ಬಗ್ಗೆ ಯೋಚಿಸುತ್ತಿದೆ.

ಇಕ್ಕುಳದಲ್ಲಿ ಸಿಲುಕಿರುವ ಜನತೆ
ಆದ್ದರಿಂದ ಬಹುಪಾಲು ಭಾರತೀಯ ಜನತೆ ಈ ಇಕ್ಕುಳದಲ್ಲಿ ಸಿಲುಕಿ ನರಕ ಯಾತನೆ ಅನುಭವಿಸುತ್ತಿದ್ದಾರೆ. ಒಂದೆಡೆ, ಉದಾರೀಕರಣದ ಆಥರ್ಿಕ ಧೋರಣೆಗಳು ವಿದೇಶಿ ಮತ್ತು ಭಾರತೀಯ ದೊಡ್ಡ ಉದ್ದಿಮೆದಾರರ ಸೂಪರ್ ಲಾಭಗಳನ್ನು ವಿಸ್ತರಿಸುತ್ತಲೇ ನಮ್ಮ ಬಹುಪಾಲು ಜನಗಳನ್ನು ದಾರಿದ್ರ್ಯಕ್ಕೆ ನೂಕುತ್ತಿದ್ದರೆ, ಇನ್ನೊಂದೆಡೆ, ಜನಗಳಿಗೆಂದು ಇರುವ ಅಲ್ಪ-ಸ್ವಲ್ಪ ಪ್ರಮಾಣದ ಸೇವೆಗಳು ಮತ್ತು ಸಾರ್ವಜನಿಕ ಪ್ರಯೋಜನಗಳನ್ನು ಅವರಿಗೆ ತಲುಪಿಸಲು ಇರುವ ಸ್ವಲ್ಪವೇ ಮಾನವಶಕ್ತಿಯನ್ನು ಕೂಡ ಮತ್ತಷ್ಟು ಕಡಿತ ಮಾಡಲಾಗುತ್ತಿದೆ.

ಈ ನವ-ಉದಾರವಾದಿ ಆಥರ್ಿಕ ಸುಧಾರಣೆಗಳ ವ್ಯವಸ್ಥೆಯ ಅಡಿಯಲ್ಲಿ ಸರಕಾರ ನಮ್ಮೆಲ್ಲ ಜನತೆಗೆ ಮೂಲ ಅಗತ್ಯಗಳನ್ನು ಒದಗಿಸುವ ತನ್ನ ಸಂವಿಧಾನಿಕ ಹೊಣೆಗಾರಿಕೆ ಯಿಂದ ಜಾರಿಕೊಂಡು, ಹೆಚ್ಚೆಚ್ಚಾಗಿ ವಿದೇಶಿ ಮತ್ತು ಭಾರತೀಯ ದೊಡ್ಡ ಬಂಡವಾಳಗಾರರ ಲಾಭಗಳನ್ನು ಗರಿಷ್ಟಗೊಳಿಸಿಕೊಳ್ಳಲು ಅನುಕೂಲ ಕಲ್ಪಿಸಿಕೊಡುವ ಬಗ್ಗೆಯೇ ಕಾಳಜಿ ವಹಿಸುತ್ತಿದೆ.

ಈ ಹಿಂದೆ ಈ ಅಂಕಣದಲ್ಲಿ ಗಮನಸಿದಂತೆ, ನಮ್ಮ ದೇಶದಲ್ಲಿ ಬಂಡವಾಳದ್ದಾಗಲೀ, ಮಾನವ ಶಕ್ತಿಯದ್ದಾಗಲೀ ಕೊರತೆಯೇನೂ ಇಲ್ಲ. ಮಹಾಹಗರಣಗಳ ಮೂಲಕ ನಡೆಯುತ್ತಿರುವ ನಮ್ಮ ಸಂಪನ್ಮೂಲಗಳ ಬೃಹತ್ ಲೂಟಿಯನ್ನು ನಿಲ್ಲಿಸಿದರೆ ಮತ್ತು ಶ್ರೀಮಂತರಿಗೆ ಕೊಡುವ ರಿಯಾಯ್ತಿಗಳನ್ನು ಅವರಿಗೆ ಕೊಡುವ ಬದಲು ನಮ್ಮ ಬಹು ಅಗತ್ಯವಾದ ಸಾಮಾಜಿಕ-ಆಥರ್ಿಕ ಮೂಲರಚನೆಯನ್ನು ಕಟ್ಟಲಿಕ್ಕಾಗಿ ಸಾರ್ವಜನಿಕ ಹೂಡಿಕೆಗಳ ಮಟ್ಟವನ್ನು ಹೆಚ್ಚಿಸಲು ಬಳಸಿದರಷ್ಟೇ ಸಾಕು, ನಮ್ಮ ಎಲ್ಲ ಜನಗಳ ಮೂಲ ಅಗತ್ಯ ಗಳನ್ನು ಪೂರೈಸಿ, ಹೆಚ್ಚಿನ ಉದ್ಯೋಗಾವಕಾಶ ನಿಮರ್ಾಣದ ಮೂಲಕ ಅವರ ಬದುಕಿನ ಘನತೆಯನ್ನು ಹೆಚ್ಚಿಸಬಹುದು.

ಭಾರತದ, ನಾವು, ಜನತೆ ಒಂದು ಉತ್ತಮ ಭಾರತವನ್ನು ನಿಮರ್ಿಸುವ ಸಾಮಥ್ರ್ಯವನ್ನೂ ಹೊಂದಿದ್ದೇವೆ, ಸಂಪನ್ಮೂಲಗಳನ್ನೂ ಹೊಂದಿದ್ದೇವೆ. ನಾವು ಏನು ಸಾಧಿಸಬಲ್ಲೆವೋ, ಯಾವುದಕ್ಕೆ ನಾವು ಅರ್ಹರೋ ಅದನ್ನು ಪಡೆಯಲಿಕ್ಕಾಗಿ ಯುಪಿಎ ಸರಕಾರದ ಮೇಲೆ ಶಕ್ತಿಶಾಲಿ ಸಾರ್ವಜನಿಕ ಒತ್ತಡವನ್ನು ಹಾಕಬೇಕಾಗಿದೆ, ಅದು ತನ್ನ ಕಾರ್ಯತಂತ್ರ ಮತ್ತು ಆಥರ್ಿಕ ಧೋರಣೆಗಳ ದಿಕ್ಕನ್ನು ಕೈಬಿಡುವಂತೆ ಮಾಡಬೇಕಾಗಿದೆ.
0

Donate Janashakthi Media

Leave a Reply

Your email address will not be published. Required fields are marked *