ಸಮುದಾಯದ ಸಂಸ್ಕೃತಿ -ಸಾಮರಸ್ಯ ಉತ್ಸವ

ಛಾಯಾ. ಐ.ಕೆ.

ಸಂಪುಟ – 06, ಸಂಚಿಕೆ 06, ಫೇಬ್ರವರಿ, 05, 2012

12

ಸಂಸ್ಕೃತಿ-ಸಾಮರಸ್ಯ ಸಮುದಾಯ ರಂಗಸಂಗಮ ಎಂಬ ತಲೆಬರಹದಡಿಯಲ್ಲಿ 21 ಜನವರಿ 2012 ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಸಮುದಾಯದ ಕಾರ್ಯಕ್ರಮ ಉದ್ಘಾಟನೆಗೊಂಡಿತು.ಸ್ವಾಗತ ಕೋರಿದ ಸುರೇಂದ್ರ ರಾವ್ ಇಂದು ಸೌಹಾರ್ದದ ಕಲ್ಪನೆ ಅಪಾಯದ ಅಂಚಿನಲ್ಲಿದೆ. ಶ್ರಮ ಸಂಸ್ಕೃತಿ ವಿಲಾಸಿ ಸಂಸ್ಕೃತಿಯ ನಡುವೆ ಸಂಘರ್ಷ ಯಾವತ್ತೂ ಇದ್ದು, ಇದನ್ನು ಕೊನೆಗಾಣಿಸಲು ವಿಲಾಸಿ ಸಂಸ್ಕೃತಿಯ ಜನ ಬಿಡುವುದಿಲ್ಲ. ಆದಾಗ್ಯೂ, ಜನರನ್ನು ಬೆಸೆಯುವುದು, ಪ್ರೀತಿಯನ್ನು ಹಂಚುವುದು ಸಮುದಾಯದ ಕೆಲಸ. ಸಾಮರಸ್ಯ ಬೆಸೆಯಲೋಸುಗ ಈ 5 ದಿನಗಳ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಪ್ರಾರಂಭಿಸಿ ಎಲ್ಲರನ್ನೂ ಸ್ವಾಗತಿಸಿದರು.

ಉದ್ಘಾಟಕರಾಗಿ ಆಗಮಿಸಿದ ನಾಡೋಜ ಪ್ರೊ| ಬರಗೂರು ರಾಮಚಂದ್ರಪ್ಪನವರು, ಕನರ್ಾಟದಲ್ಲಿ ಪಲ್ಲಟ ಸಂಚಲನೆಯನ್ನು ಉಂಟುಮಾಡಿದ ಸಂಘಟನೆ ಸಮುದಾಯ. ರಾಜ್ಯದ ಸ್ಥಿತ್ಯಂತರಗಳು ಸಮುದಾಯದ ಹಿನ್ನೆಡೆ-ಮುನ್ನಡೆಗೆ ಕಾರಣವಾಗಿದ್ದು, ಸಮುದಾಯ ರಾಜಕೀಯ ಪರಿಭಾಷೆಯನ್ನು ನಾಟಕಕ್ಕೆ ಕೊಟ್ಟಿತು.

ಅಮಾನವೀಯ, ಅಸಾಮಾಜಿಕ, ಅನಾರೋಗ್ಯಕರ ಸನ್ನಿವೇಶವನ್ನು ಮೀರುವ ಸೌಹಾರ್ದತೆ ಪರಂಪರೆಯಾಗಿದ್ದು ಸಂಸ್ಕೃತಿಯ ಭಾವನೆ ನಿರ್ವಚನೆಗೊಳಿಸಬೇಕು. ಸಂಸ್ಕೃತಿ ಕೇವಲ ಭೂತಕಾಲದ್ದಲ್ಲ, ಮೇಲು-ಕೀಳಿಲ್ಲ.ಜನರ ಜೀವನ ವಿಧಾನ, ಸಾಮಾನ್ಯೀಕೃತ ನಡವಳಿಕೆಗಳು ಸಂಸ್ಕೃತಿಯಾಗಿದ್ದು ಏಕಕಾಲಕ್ಕೆ ಸ್ಥಿರವೂ ಚಲನಶೀಲವೂ ಆಗಿದ್ದು, ಇದಕ್ಕೆ ಒಂದು ಸಿದ್ಧ ಮಾದರಿ ಇಲ್ಲ. ಸ್ವೀಕರಣ ಮತ್ತು ನಿರಾಕರಣ ಮುಖ್ಯ. ಅಮಾನವೀಯವಾದದ್ದನ್ನು ವಿರೋಧಿಸಿ. ಬಹುರೂಪತೆಗಳೇ ಭಾರತೀಯತೆಯಾಗಿದ್ದು ಬಹುರೂಪತೆಗಳನ್ನು ಮನ್ನಿಸಿದರೆ ಕೇವಲ ಸಂಸ್ಕೃತಿಯಾಗುವುದಿಲ್ಲ.

ಧರ್ಮ ಸಂಸ್ಕೃತಿಯ ಭಾಗವೇ ಹೊರತು ಧರ್ಮವೇ ಸಂಸ್ಕೃತಿಯಲ್ಲ. ಧರ್ಮ ಒಂದು ಸಂಸ್ಥೆಯಾಗಿದ್ದು ಬೈಲಾ(ಕಟ್ಟಳೆ) ಇರುತ್ತದೆ. ಧಾಮರ್ಿಕತೆಗೆ ಇರುವುದಿಲ್ಲ, ಶಾಸ್ತ್ರಬದ್ಧವೂ ಆಗಿರುವುದಿಲ್ಲ. ಇಂದು ಧರ್ಮ ಧಾಮರ್ಿಕತೆಯನ್ನು ಬಿಟ್ಟು ಬಂಡವಾಳವನ್ನು ಆಶ್ರಯಿಸಿ ಧಮರ್ೋದ್ಯಮಗಳಾಗಿವೆ. ಸಾಮಾಜಿಕ ಸಮಸ್ಯೆಗಳ ಸ್ವರೂಪಕ್ಕೆ ತಕ್ಕಂತೆ ಹೋರಾಟದ ಸ್ವರೂಪ ಬದಲಾಗಬೇಕಿದೆ. ಪುರಾಣಗಳು ಬದುಕಿನ ರೂಪಕಗಳಾಗಿದ್ದು ಚರಿತ್ರೆ-ಪುರಾಣಗಳ ಪುನರ್ ವ್ಯಾಖ್ಯಾನ ಶಬರಿ ಪ್ರಜ್ಞೆಯ ಹಿನ್ನೆಲೆಯಲ್ಲಿ ಆಗಬೇಕಿದೆ. ಗುಡಿ ಇಲ್ಲದ, ಮನುಷ್ಯ ಸಂವೇದನೆಯ, ಅಂತಃಕರಣದ ಸಮಾಜಕ್ಕಾಗಿ ಜನಮಾನಸ ತಲುಪಿ, ಸಂಸ್ಕ್ರತಿಯ ಅಪವ್ಯಾಖ್ಯಾನ ತಪ್ಪಿಸಿ ಸಾಮರಸ್ಯ ಉಳಿಸಿ ಬೆಳೆಸಿ ಎಂದರು.

ಸಮಾರಂಭದ ಮುಖ್ಯ ಅತಿಥಿಗಳಾಗಿ ಜನ ನಾಟ್ಯ ಮಂಚ್ನ ಸುಧನ್ವ ದೇಶಪಾಂಡೆ ಮಾತನಾಡಿದರು. ಜೈಪುರದಲ್ಲಿ ನಡೆಯುತ್ತಿರುವ ಅಂತರರಾಷ್ಟ್ರೀಯ ಬರಹಗಾರರ ಸಮ್ಮೇಳನಕ್ಕೆ ಸಲ್ಮಾನ್ ರಶ್ದಿ ಬರುತ್ತಾರೋ ಇಲ್ಲವೋ ಎಂಬ ಪರಿಸ್ಥಿತಿ ಇದೆ. ಭಾರತೀಯ ಸಂಸ್ಕೃತಿಯನ್ನು ಆಳವಾಗಿ ಅಭ್ಯಸಿಸಿದ್ದ ಅದರ ಆಧಾರದ ಮೇಲೆ ತನ್ನ ಕಲಾಕೃತಿಗಳನ್ನು ರಚಿಸಿದ ಎಂ.ಎಫ್.ಹುಸೇನ್ ಕೊನೆಗಾಲದಲ್ಲಿ ಭಾರತದ ಹೊರಗೆ ಜೀವನ ಕಳೆಯುವಂತೆ ಮಾಡಲಾಯಿತು. ಅವರ ಮನೆ ಮತ್ತು ಕಲಾಕೃತಿಗಳ ಮೇಲೆ ಮತ್ತೆ ಮತ್ತೆ ಧಾಳಿ ನಡೆಯಿತು…… ಹಬೀಬ್ ತನ್ವೀರ್ ಅವರ ಖ್ಯಾತ `ಪೊಂಕ ಪಂಡಿತ್’ ಬೀದಿ ನಾಟಕದ ಮೇಲೆ ಧಾಳಿ ನಡೆಯಿತು. ದೆಹಲಿ ವಿಶ್ವವಿದ್ಯಾಲಯದಲ್ಲಿ ಎ.ಕೆ.ರಾಮಾನುಜನ್ ಅವರ ಮುನ್ನೂರು ಬಗೆಯ ರಾಮಾಯಣಗಳ ಕುರಿತ ಪ್ರಬಂಧವನ್ನು ಪಠ್ಯದಿಂದ ಕೈಬಿಡಲಾಯಿತು.

ಬಾಬರಿ ಮಸೀದಿಯ ನಾಶದ ನಂತರ ಇಂತಹ ದಾಳಿಗಳು ತೀವ್ರಗೊಂಡಿವೆ. ಮಾಧ್ಯಮಗಳಲ್ಲಿ ಇದೆಲ್ಲಾ ಬ್ರೇಕಿಂಗ್ ನ್ಯೂಸ್ ಆಗುವುದಿಲ್ಲ. ಆದರೆ ಇದು ಸಣ್ಣ ವಿಷಯ ಅಲ್ಲ. ಬಹಳ ದೊಡ್ಡ ವಿಷಯ…… 1906ರಲ್ಲಿ ಬಾಲಗಂಗಾಧರ ತಿಲಕರ ಸಂಪಾದಕತ್ವದ ‘ಕೇಸರಿ’ಯಲ್ಲಿ ಪ್ರಕಟವಾದ ಸಂಪಾದಕೀಯದ ವಿರುದ್ಧ ಬ್ರಿಟೀಷ್ ಸಕರ್ಾರ ಕ್ರಮಕೈಗೊಂಡಾಗ ಮುಂಬೈನ ಕಾಮರ್ಿಕ ವರ್ಗ ಸಂಪಾದಕೀಯದ ಪರವಾಗಿ ಬೃಹತ್ ಮುಷ್ಕರ ಸಂಘಟಿಸಿತು. ಈ ಹೋರಾಟದಲ್ಲಿ 13 ಜನ ಕಾಮರ್ಿಕರು ಪ್ರಾಣ ಕಳೆದು ಕೊಂಡರು. ಈ ರಾಜಕೀಯ ಹೋರಾಟದ ಮಹತ್ವವನ್ನು ಅಂದೆ ಲೆನಿನ್ ಸಹ ಗುರುತಿಸಿದ್ದರು. ಈ ಚಾರಿತ್ರಿಕ ಹೋರಾಟದಲ್ಲಿ ನಮ್ಮ ಇಂದಿನ ಪರಿಸ್ಥಿತಿಗೆ ಮಹತ್ವದ ಸಂದೇಶವಿದೆ. ಎಂದು ಸುದನ್ವ ದೇಶಪಾಂಡೆ ಹೇಳಿದರು

ಸಾಂಸ್ಕೃತಿಕ ಸಾಮರಸ್ಯ ಈ ಕ್ಷಣದ ಅಗತ್ಯವಾಗಿದ್ದು ಭಾವ ಸಿದ್ಧಿಯನ್ನು ಸಮುದಾಯ ಮಾಡಬೇಕು ಕ್ರಿಯಾಸಿದ್ಧಿಯನ್ನು ದುಡಿವ ವರ್ಗ ಮಾಡುತ್ತದೆ. ಜನ ತಮ್ಮ ದೃಷ್ಟಿಕೋನವನ್ನು ಬದಲಿಸಿಕೊಳ್ಳುವುದರ ಮೂಲಕ ವಾಸ್ತವ ಬದುಕನ್ನು ಬದಲಿಸಿಕೊಳ್ಳಬಹುದು. ವಿಚಾರಶಕ್ತಿ ಬಳಸಿ ವೈಚಾರಿಕವಾಗಿ ಬದಲಾಗಿ. ನಮ್ಮ ಬದುಕನ್ನು ನಾವೇ ಬದುಕುವಷ್ಟು, ನಾವೇ ನಿರೂಪಿಸಿಕೊಳ್ಳುವಷ್ಟು ಹಠಮಾರಿತನ ಬೆಳೆಸಿಕೊಳ್ಳಬೇಕು. ಆ ವಾಂಛೆ, ಆ ಹಠಮಾರಿತನವನ್ನು ಸಮುದಾಯ ಬೆಳೆಸಬೇಕು. ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆರ್.ಕೆ.ಹುಡುಗಿಯವರು ಹೇಳಿದರು.
0

Donate Janashakthi Media

Leave a Reply

Your email address will not be published. Required fields are marked *