ಮಾರ್ಚ್ 1ರಂದು ಜನಸಂಸ್ಕೃತಿ ಪ್ರತಿಷ್ಠಾನದಿಂದ ʻಕಾವ್ಯಶಿವರಾತ್ರಿʼ

ಬೆಂಗಳೂರು: ಜನಸಂಸ್ಕೃತಿ ಪ್ರತಿಷ್ಠಾನ ವತಿಯಿಂದ ಬೆಂಗಳೂರಿನ ಕಾವ್ಯಮಂಡಲ ಹಾಗೂ ಡಾ.ಬಾಬು ಜಗಜೀವನ್ ರಾಮ್ ಅಧ್ಯಯನ ಕೇಂದ್ರ, ಬೆಂಗಳೂರು ವಿಶ್ವವಿದ್ಯಾಲಯ ಸಹಯೋಗದಲ್ಲಿ ಮಾರ್ಚ್ 1, 2022ರಂದು ಕಾವ್ಯ ಶಿವರಾತ್ರಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಜನಸಂಸ್ಕೃತಿ ಪ್ರತಿಷ್ಠಾನದ ಅಧ್ಯಕ್ಷ ಡಾ. ಪ್ರದೀಪ್ ಮಾಲ್ಗುಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾರ್ಯಕ್ರಮವು ಡಾ.ವೆಂಕಟಗಿರಿಗೌಡ ಸಭಾಂಗಣ, ಬೆಂಗಳೂರು ವಿಶ್ವವಿದ್ಯಾಲಯ, ಜ್ಞಾನ ಭಾರತಿಯಲ್ಲಿ ಸಂಜೆ 6ಕ್ಕೆ ಆರಂಭವಾಗಲಿದ್ದು, ನೀಲಗಾರರು ಇಡೀ ರಾತ್ರಿ ಮಂಟೇಸ್ವಾಮಿ ಮತ್ತು ಮಲೆ ಮಹದೇಶ್ವರ ಮಹಾಕಾವ್ಯಗಳನ್ನು ಪ್ರಸ್ತುತಪಡಿಸಿಲಿದ್ದಾರೆ.

ಕಾವ್ಯಶಿವರಾತ್ರಿ ಕಾರ್ಯಕ್ರಮದ ಕುರಿತು

ಪ್ರೊ. ಕಿ.ರಂ.ನಾಗರಾಜ ಅವರಿಗೆ ಜನಪದ ಮಹಾಕಾವ್ಯಗಳ ಮೇಲೆ ಎಲ್ಲಿಲ್ಲದ ಪ್ರೀತಿ, ಅವುಗಳಲ್ಲಿ ಅವಿತಿರುವ ಜೀವಸತ್ವ, ಅಂತಃಸತ್ವಗಳನ್ನು ಬೋಧನೆಯ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ಅವರು ಉಣಬಡಿಸುತ್ತಿದ್ದರು. ವಿಚಾರ ಸಂಕಿರಣಗಳಲ್ಲಿ ಕೂಡ ಜನಪದ ಮಹಾಕಾವ್ಯಗಳ ಕುರಿತು ವಿಭಿನ್ನ ಒಳನೋಟಗಳನ್ನು ಅವರು ನೀಡುತ್ತಿದ್ದರು. ಇದರ ಮುಂದುವರಿದ ಭಾಗವಾಗಿ ಕಾವ್ಯಮಂಡಲದಿಂದ ಪ್ರತಿ ಶಿವರಾತ್ರಿಯಂದು ಕಾವ್ಯ ಶಿವರಾತ್ರಿ ಹೆಸರಿನಲ್ಲಿ ಜನಪದ ಮಹಾಕಾವ್ಯಗಳನ್ನು ನೀಲಗಾರರಿಂದ ಹಾಡಿಸುವ ಸಂಪ್ರದಾಯವನ್ನು ಹುಟ್ಟುಹಾಕಿದರು.

ಕಿ.ರಂ. ಸಾಹಿತ್ಯ ಲೋಕಕ್ಕೆ ಗುಂಗು ಹಿಡಿಸಿದ ಮಂಟೇಸ್ವಾಮಿ ಮತ್ತು ಮಲೆಮಹದೇಶ್ವರ ಕಾವ್ಯಗಳನ್ನು ಈ ವರ್ಷ ಆಲ್ಕೆರೆ ಶಿವಕುಮಾರ್ ಯಳಂದೂರು ಮತ್ತು ತಂಡದವರು ಹಾಡುತ್ತಿದ್ದಾರೆ. ಅವರಿಗೆ ಈ ಸಾಲಿನ ಕಾವ್ಯ ಶಿವರಾತ್ರಿ ಪುರಸ್ಕಾರ ನೀಡಿ ಗೌರವಿಸಲಾಗುತ್ತಿದೆ.

ಕಾವ್ಯಶಿವರಾತ್ರಿ

ಉದ್ಘಾಟನೆ: ಪ್ರೊ.ಕೆ.ಆರ್.ವೇಣುಗೋಪಾಲ್, ಕುಲಪತಿಗಳು, ಬೆಂಗಳೂರು ವಿಶ್ವವಿದ್ಯಾಲಯ

ಮುಖ್ಯ ಅತಿಥಿಗಳು: ಡಾ.ಕವನ ಕೆ.ಎನ್., ಸಹಾಯಕ ನಿರ್ದೇಶಕರು, ವಾರ್ತಾ ಇಲಾಖೆ

ಕಿ.ರಂ. ಕಾವ್ಯಶಿವರಾತ್ರಿ ಪುರಸ್ಕಾರ ಪ್ರದಾನ

ಪ್ರಶಸ್ತಿ ಪ್ರದಾನ: ಕೊಟ್ರೇಶಪ್ಪ, ಕುಲ ಸಚಿವರು, ಬೆಂಗಳೂರು ವಿಶ್ವವಿದ್ಯಾಲಯ

ಉಪಸ್ಥಿತಿ: ಡಾ.ಬಿ.ಗಂಗಾಧರ್, ನಿರ್ದೇಶಕರು, ಡಾ.ಬಾಬು ಜಗಜೀವನ್ ರಾಮ್ ಅಧ್ಯಯನ ಕೇಂದ್ರ, ಬೆಂಗಳೂರು ವಿಶ್ವವಿದ್ಯಾಲಯ

ಅಧ್ಯಕ್ಷತೆ: ಡಾ.ಎಂ.ಎಸ್.ಮೂರ್ತಿ, ಮಾಜಿ ಅಧ್ಯಕ್ಷರು, ಲಲಿತ ಕಲಾ ಅಕಾಡೆಮಿ, ಬೆಂಗಳೂರು.

ಮಂಟೇಸ್ವಾಮಿ ಮತ್ತು ಮಲೆ ಮಹದೇಶ್ವರ ಮಹಾಕಾವ್ಯಗಳ ಗಾಯನ

ಪ್ರಸ್ತುತಿ: ಆಲ್ಕೆರೆ ಶಿವಕುಮಾರ್ ಯಳಂದದೂರು ಮತ್ತು ತಂಡದ ವತಿಯಿಂದ

ಸ್ಥಳ: ಡಾ.ವೆಂಕಟಗಿರಿ ಗೌಡ ಸಭಾಂಗಣ, ಬೆಂಗಳೂರು ವಿಶ್ವವಿದ್ಯಾಲಯ, ಜ್ಞಾನಭಾರತಿ, ಬೆಂಗಳೂರು – 560056. ಸಂಪರ್ಕ ಸಂಖ್ಯೆ: 9844086993, 9742067427

Donate Janashakthi Media

Leave a Reply

Your email address will not be published. Required fields are marked *