ಯೋಧನ ತಾಯಿ ಕೊಲೆ ಮಾಡಿದ ಆರೋಪಿಗಳ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿ ಪ್ರತಿಭಟನೆ

ಕವಿತಾಳ: ಭಾರತೀಯ ಸೇನೆಯ ಸೇವಾನಿರತ ಬಿಎಸ್ಎಫ್ ಸೈನಿಕ ಅಮರೇಶ ರವರ ತಾಯಿಯನ್ನು ಕೊಲೆ ಮಾಡಿರುವ ಆರೋಪಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಮದು ಒತ್ತಾಯಿಸಿ ಭಾರತ ವಿದ್ಯಾರ್ಥಿ ಫೆಡರೇಷನ್‌(ಎಸ್ಎಫ್ಐ) ಹಾಗೂ ಉಪ್ಪಾರ ಸಮಾಜ ಸೇರಿದಂತೆ ವಿವಿಧ ಸಂಘಟನೆಗಳ ವತಿಯಿಂದ ಪಟ್ಟಣದ ನಾಡ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಎಸ್ಎಫ್ಐ ರಾಜ್ಯ ಉಪಾಧ್ಯಕ್ಷ ಶಿವಕುಮಾರ್ ಮ್ಯಾಗಳಮನಿ, ಜಿಲ್ಲಾಧ್ಯಕ್ಷ ರಮೇಶ ವೀರಾಪೂರು, ಭಗೀರಥ ಉಪ್ಪಾರ್ ಸಮಾಜದ ಅಧ್ಯಕ್ಷ ಹನುಮೇಶ ಕುರಿ ಮಾತನಾಡಿದರು. ಲಿಂಗಸುಗೂರು ತಾಲ್ಲೂಕಿನ ನಿಲೋಗಲ್ ಗಾಮ್ರದ ಯೋಧ ಅಮರೇಶ ರವರ ಮನೆಯ ಮುಂದಿರುವ ಚರಂಡಿ ವಿಷಯಕ್ಕೆ ಅದೇ ಗ್ರಾಮದ ಸುಮಾರು 20 ಕ್ಕೂ ಹೆಚ್ಚು ಜನರು ಒಟ್ಟುಗೂಡಿ ಮಾರಾಣಾಂತಿಕ ಹಲ್ಲೆ ನಡೆಸಿ ಯೋಧನ ತಾಯಿ ಈರಮ್ಮ ಅವರ ಕೊಲೆ ಮಾಡಿದ್ದಾರೆ. ಕೂಡಲೇ ಅವರನ್ನು ಯಾವ ಪ್ರಭಾವಕ್ಕೊಳಗಾಗದೇ ಬಂಧಿಸಬೇಕು ಎಂದು ಆಗ್ರಹಿಸಿದರು.

ಹತ್ಯೆಗೆ ಕಾರಣರಾದ ಹಂತಕರನ್ನು ರಾಜಕೀಯ ಪ್ರಭಾವದಿಂದಾಗಿ ಬಂಧಿಸದೆ ಅವರನ್ನು ರಕ್ಷಣೆ ನೀಡಲಾಗುತ್ತಿದೆ. ದೇಶದ ರಕ್ಷಣೆ ಮಾಡುವ ವೀರಯೋಧರ ಬಗ್ಗೆ ಡೊಂಗೀ ಭಾಷಣ ಮಾಡುವ ಬಿಜೆಪಿ ಈಗ ದೇಶ ಕಾಯೋ ಯೋಧನ ಕುಟುಂಬದ ಮೇಲೆ ಅಕ್ರಮ ಗುಂಪು ಕಟ್ಟಿಕೊಂಡು ಕೊಲೆ ಮಾಡಲಾಗಿದೆ. ಆದರೆ ಬಿಜೆಪಿ ಈ ಬಗ್ಗೆ ತುಟಿಯೂ ಬಿಚ್ಚದೇ  ಮೌನವಾಗಿದೆ. ಇದರಿಂದ ಬಿಜೆಪಿಯ ನಕಲೀ ದೇಶಪ್ರೇಮ ಎಂದು ಸಾಬೀತಾಗಿದೆ ಎಂದು ಆರೋಪಿಸಿದರು.

ಪ್ರತಿಭಟನೆಯ ನಂತರ ನಾಡ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಭಗೀರಥ ಉಪ್ಪಾರ್ ಸಮಾಜದ ಕಾರ್ಯದರ್ಶಿ, ರವಿ ಗುಡಿ, ಉಪಾಧ್ಯಕ್ಷ ಮೌನೇಶ ಕಟ್ಟಿಮನಿ, ಸಿಐಟಿಯು ಜಿಲ್ಲಾ ಸಹ ಕಾರ್ಯದರ್ಶಿ ಮಹ್ಮದ್ ಹನೀಫ್ ಹಟ್ಟಿ, ವಿವಿಧ ಸಂಘಟನೆಗಳ ಮುಖಂಡರಾದ ಮೌನೇಶ ನಾಯಕ್, ಖಾಜಾಪಾಷಾ, ಅಮರೇಶ ಕಟ್ಟಿಮನಿ, ದುರುಗೇಶ ಗುಡಿ, ನಾಗಮೋಹನ್ ದಾಸ್, ಯಮನಪ್ಪ ದಿನ್ನಿ, ಲಿಂಗಣ್ಣ ಯಡವಟ್, ದೊಡ್ಡಪ್ಪ, ಆದಪ್ಪ,ಅಲ್ಲಮ ಪ್ರಭು, ಗಫೂರ್, ಶಿವಣ್ಣ ವಕೀಲರು, ವೆಂಕಟೇಶ ನಾಯಕ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Donate Janashakthi Media

Leave a Reply

Your email address will not be published. Required fields are marked *