ಕೆಂಪು ಕೋಟೆ ಮೇಲೆ ಕೇಸರಿ ಬಾವುಟ ಹಾರಿಸುತ್ತೇವೆ – ಈಶ್ವರಪ್ಪ ವಿವಾದಾತ್ಮಕ ಹೇಳಿಕೆ

ಬೆಂಗಳೂರು : ವಿದ್ಯಾರ್ಥಿಗಳಿಗೆ ಕೇಸರಿ ಶಾಲು ನಾವೇ ನೀಡಿದ್ದು. ಅದರಲ್ಲಿ ತಪ್ಪೇನಿದೆ? ಭಗವಾಧ್ವಜ ಮುಂದೊಂದು ದಿನ ರಾಷ್ಟ್ರಧ್ವಜವೂ ಆಗಬಹುದು ಎಂದು ಸಚಿವ ಕೆ.ಎಸ್. ಈಶ್ವರಪ್ಪ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಈಶ್ವರಪ್ಪ ಅವರು ನಾನು ಸ್ವತಂತ್ರ ಭಾರತದಲ್ಲಿದ್ದೇನೆ, ಕೇಸರಿ ಶಾಲು ಹಂಚಲು ನಾನು ಸಿದ್ದನಿದ್ದೇನೆ. ನಾನು ಎಷ್ಟು ಬೇಕಾದ್ರೂ ಕೇಸರಿ ಶಾಲು ಹಂಚುತ್ತೇನೆ. ನನ್ನ ಸ್ವಾತಂತ್ರ್ಯ ಕೇಳಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ಅಧಿಕಾರ ಕೊಟ್ಟಿದ್ದು ಯಾರು? ಎನ್ನುವ ಮೂಲಕ ಈಗ ನಡೆಯುತ್ತಿರುವ ಕೇಸರಿ ಶಾಲು ಗಲಾಟೆಯ ಹಿಂದೆ ಬಿಜೆಪಿ ಮತ್ತು ಸಂಘಪರಿವಾರ ಇದೆ ಎಂಬುದನ್ನು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ.

ಮುಂದುವರಿದು ಮಾತನಾಡಿದ ಅವರು, ಯಾವತ್ತೋ ಒಂದು ದಿನ ಅಯೋದ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡುತ್ತೇವೆ ಎಂದಾಗ ನಗುತ್ತಿದ್ದರು. ಈಗ ಕಟ್ಟಿದ್ದೇವೆಯಲ್ಲಾ, ಹಾಗೆಯೇ ಯಾವುದೋ ಒಂದು ಕಾಲದಲ್ಲಿ ಭಗವಾಧ್ವಜವೇ ರಾಷ್ಟ್ರ ಧ್ವಜ ಆಗಬಹುದು ಎಂದು ವಿವಾದಾತ್ಮಕ ಹೇಳಿಕೆ ನೀಡಿದರು.

ರಾಜ್ಯದಲ್ಲಿ ಕೇಸರಿ ಶಾಲು ಹಾಗೂ ಹಿಜಾಬ್‌ ವಿಚಾರವೂ ಭಾರೀ ಚರ್ಚೆಗೆ ಕಾರಣವಾಗಿದೆ. ಈ ನಡುವೆ ಕಾಲೇಜೊಂದರಲ್ಲಿ ವಿದ್ಯಾರ್ಥಿಗಳು ರಾಷ್ಟ್ರ ಧ್ವಜ ಹಾರಿಸುವ ಧ್ವಜಸ್ಥಂಭದಲ್ಲಿ ಭಗವಾಧ್ವಜವನ್ನು ಹಾರಿಸಿದ್ದಾರೆ. ಅನೇಕ ಕಡೆಗಳಲ್ಲಿ ಮಾರಾಣಾಂತಿಕ ಹಲ್ಲೆ ನಡೆದ ವರದಿಯಾಗಿದೆ. ಈ ನಡುವೆ ಜವಬ್ದಾರಿ ಇರುವ ಸಚಿವರು ಈ ರೀತಿ ಹೇಳಿಕೆ ನೀಡಿರುವುದು ಮತ್ತಷ್ಟು ಪ್ರಚೋದನೆಗೆ ಕಾರಣವಾಗಲಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *