ವಿವೇಕಾನಂದರ ವಿಚಾರಗಳಿಗೆ ನಡೆದಿರುವ ಅಪಚಾರ

ಸಿ. ಬಸವಲಿಂಗಯ್ಯ

“ಇಲ್ಲಿ
ಯಾರೂ ಮುಖ್ಯರಲ್ಲ;
ಯಾರೂ ಅಮುಖ್ಯರಲ್ಲ;
ಯಾವುದೂ ಯಃಕಶ್ಚಿತವಲ್ಲ!” .. ಕುವೆಂಪು

ಇಲ್ಲಿ
ಹಿಜಾಬು ಮುಖ್ಯವಲ್ಲ,
ಕೇಸರಿ ಶಾಲು ಮುಖ್ಯವಲ್ಲ,
ಮತ ಮೌಢ್ಯಗಳ- ರಾಜಕೀಯ ಲಾಂಛನಗಳು ಮುಖ್ಯವಲ್ಲ
ಹಿಂದೂ ಮುಸ್ಲಿಂ ಕ್ರೈಸ್ತ ಸಿಖ್ ಜೈನ ಬೌದ್ದ
ಮತ ಧರ್ಮಗಳು ಮುಖ್ಯವಲ್ಲ.

ಸಮಾನ ಶಿಕ್ಷಣ, ಸಂವಿಧಾನ ಕೊಟ್ಟಿರುವ
ಸಮಾನ ಹಕ್ಕು – ಕರ್ತವ್ಯಗಳು,
ಧಾರ್ಮಿಕ ಆಚರಣೆಯ ಹಕ್ಕುಗಳಷ್ಟೇ ಮುಖ್ಯ.

ದೇಶದ ಬಡವರ, ರೈತರ, ಮಧ್ಯಮ ವರ್ಗ, ಅಲ್ಪ ಸಂಖ್ಯಾತ.. ಹಿಂದುಳಿದವರ್ಗ, ದಲಿತ, ಆದಿವಾಸಿ, ಬುಡಕಟ್ಟು ಜನರ ಮಕ್ಕಳು ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಶಿಕ್ಷಣ ಪಡೆಯುವುದಷ್ಟೆ ಮುಖ್ಯ!

ಉಳ್ಳವರ… ರಾಜಕಾರಣಿಗಳ ಮಕ್ಕಳು ಖಾಸಗೀ ಶಾಲಾ ಕಾಲೇಜು ಕಾನ್ವೆಂಟ್ ಶಿಕ್ಷಣ ಸಂಸ್ಥೆಗಳಲ್ಲಿ ಉತ್ತಮ ಶಿಕ್ಷಣ ಪಡೆದು ದೇಶ ವಿದೇಶಗಳಲ್ಲಿ ಕೈತುಂಬಾ ಸಂಬಳ ಪಡೆದು ಬದುಕು ಕಟ್ಟಿಕೊಳ್ಳಲು ನಮ್ಮ ಆಡಳಿತ ಯಾವಾಗಲೂ  ನೆರವಾಗಿದೆ. ಶಿಕ್ಷಣವನ್ನು ವ್ಯಾಪಾರ… ವ್ಯವಹಾರದ ದಂದೆಯಾಗಿಸಿರುವ ನಮ್ಮ ಶಿಕ್ಷಣ ನೀತಿ. ನೀತಿಗೆಟ್ಟ ರಾಜಕಾರಣ ಕಾರ್ಪೊರೇಟ್ ಶಿಕ್ಷಣದ ಮಾಫಿಯದ ಭಾಗವೆ ಆಗಿರುವುದರಿಂದ, ಸರ್ಕಾರಿ ಶಾಲಾ ಕಾಲೇಜುಗಳನ್ನು ಖಾಸಗೀ ಸಂಸ್ಥೆಗಳಿಗೆ ಪರಭಾರೆ ಮಾಡುತ್ತಿರುವಾಗ… ತಾಜಾ ಉದಾ: ೧೦೪ ವರ್ಷಗಳ ಇತಿಹಾಸವಿದ್ದ ಮೈಸೂರಿನ ಎನ್‌ಟಿಎಂ ಹೆಣ್ಣು ಮಕ್ಕಳ ಸರ್ಕಾರಿ ಶಾಲೆಯನ್ನ ರಾತ್ರೋ ರಾತ್ರಿ ಕೆಡವಿಹಾಕಿ, ಆ ಆಯಕ್ಕಟ್ಟಿನ ಜಾಗವನ್ನು ಖಾಸಗೀ ಸಂಸ್ಥೆ ರಾಮಕೃಷ್ಣ ಆಶ್ರಮಕ್ಕೆ ಬಿಟ್ಟು ಕೊಡಲಾಯಿತು. ಅಲ್ಲಿ ವಿವೇಕಾನಂದರ ಪುತ್ಥಳಿ ನಿಲ್ಲಿಸುವುದು ಯೋಜನೆ. ಇದು ವಿವೇಕಾನಂದರ ವಿಚಾರಗಳಿಗೆ ಅವರ ಹೆಸರಲ್ಲೇ ನಡೆದಿರುವ ಅಪಚಾರ. ಅಲ್ಲಿ ಓದುತ್ತಿದ್ದ ಹೆಣ್ಣು ಮಕ್ಕಳು ಇನ್ನೊಂದು ಶಾಲೆಗೆ ವಿಲೀನಗೊಳಿಸಲಾಯಿತು! ಅಲ್ಲ… ಅಲ್ಲ… ಮೋಕ್ಷದ ದಾರಿಯನ್ನ ಸರಕಾರವೇ ತೋರಿತು!

ಒಕ್ಕೂಟ ಸರಕಾರದ ಮಹತ್ವಕಾಂಕ್ಷೆಯ ಯೋಜನೆ:

“ಬೇಟಿ ಪಡಾವೋ, ಬೇಟಿ ಬಚಾವೋ”

“ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ”

ಎಲ್ಲವೂ ಘೋಷಣೆ… ಘೋಷಣೆ…

ಈಗ

ಹಿಜಾಬ್ ಧಾರಣ ಬೇಟಿಯೊಂಕೋ ಶಿಕ್ಷಣಸೇ ಹಟಾವೋ…

ಗರಿಭೊಂಕೊ ಸ್ಕೂಲ್ ಸೇ ಹಟಾವೋ… ತಂತ್ರ ಮಂತ್ರ…

ನುಡಿ… ನಡೆ ಸಂಬಂಧವೇ ಸಿದ್ಧಾಂತವಾಗಿರಬೇಕು ಎಂದು ವಚನಕಾರ ಮಾದರ ಚೆನ್ನಯ್ಯ ಈ ಎಡಬಿಡಂಗಿಗಳ ನೋಡಿ ಮತ್ತು ಆಡಳಿತಾರೂಢ ವ್ಯವಸ್ಥಿತ  ಹುನ್ನಾರಕ್ಕೆ ಹೇಳಿರುವಂತಿದೆ ಈ ವಚನ :

“ನಡೆ ನುಡಿ ಸಿದ್ಧಾಂತವಾದಲ್ಲಿ,
ಕುಲ ಹೊಲೆ ಸೂತಕವಿಲ್ಲ,
ನುಡಿಲೇಸು, ನಡೆಯಧಮವಾದಲ್ಲಿ
ಅದು ಬಿಡುಗಡೆಯಿಲ್ಲದ ಹೊಲೆ.
ಕಳವು ಪಾರದ್ವಾರಂಗಳಲ್ಲಿ ಹೊಲಬನರಿಯದೆ,
ಕೆಟ್ಟು ನಡೆವುತ್ತ ಮತ್ತೆ ಕುಲಜರೆಂಬ ಒಡಲವರುಂಟೆ?

Donate Janashakthi Media

Leave a Reply

Your email address will not be published. Required fields are marked *