ಕೋಲಾರ: ಕೇಂದ್ರ ಬಿಜೆಪಿ ಸರಕಾರ ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ರೈತರ ಖಾತೆಗೆ 2000 ಹಾಕಿ ಒಂದು ಮೂಟೆ ಗೊಬ್ಬರದ ಧರ 1500 ಮಾಡಿದ್ದೇ ದೊಡ್ಡ ಸಾಧನೆಯಾಗಿದೆ ಎಂದು ಕೆ.ಪಿ.ಆರ್.ಎಸ್ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಟಿ.ಎಂ ವೆಂಕಟೇಶ್ ತಿಳಿಸಿದರು.
ನಗರದ ತಮ್ಮ ಕಛೇರಿಯಲ್ಲಿ ಮಂಗಳವಾರ ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕು ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು ರೈತರ ಬೆಳೆಗಳಿಗೆ ನೇರವಾಗಿ ಬ್ಯಾಂಕುಗಳ ಮೂಲಕವೇ ಪೋತ್ಸಾಹ ನೀಡುತ್ತೇವೆ ಎಂದು ಪ್ರಚಾರ ಗಿಟ್ಟಿಸಿಕೊಂಡರೆ ಅದೇ ರೈತರು ದಿನನಿತ್ಯ ಉಪಯೋಗಿಸುವ ಗೊಬ್ಬರ, ಬೀಜ,ಯಂತ್ರೋಪಕರಣ, ಇತ್ಯಾದಿ ವಸ್ತುಗಳ ಮೇಲೆ ಹಿಂಬಾಗಿಲಿನಿಂದ ಬೆಲೆಗಳನ್ನು ಹೆಚ್ಚಳ ಮಾಡಿದ್ದಾರೆ ಇದು ರೈತರಿಗೆ ಅರ್ಥವಾಗದೇ ಮೋಸ ಮಾಡುತ್ತಾ ಇದ್ದಾರೆ ಎಂದು ಆರೋಪಿಸಿದರು.
ದೇಶದಲ್ಲಿ ರೈತ ವಿರೋಧಿ ಎಪಿಎಂಸಿ ಹಾಗೂ ಕರ್ನಾಟಕ ಸರಕಾರದ ಭೂ ಸುಧಾರಣಾ ತಿದ್ದುಪಡಿಯಂತಹ ಕಾಯ್ದೆಯನ್ನು ಜಾರಿ ಮಾಡಲು ಮುಂದಾಗಿದ್ದು ಕೂಡ ರೈತರಿಗೆ ನೇರವಾಗಿಯೇ ಅನ್ನದಾತರಿಗೆ ಮೋಸ ಮಾಡುವ ಉದ್ದೇಶವಾಗಿತ್ತು ರೈತರ ಹೆಸರಿನಲ್ಲಿ ಅಧಿಕಾರಕ್ಕೆ ಬರುವ ಪಕ್ಷಗಳು ನಂತರ ರೈತರನ್ನು ಬೀದಿಗೆ ತಳ್ಳುವ ಮೂಲಕ ಬಂಡವಾಳಶಾಹಿ ವ್ಯವಸ್ಥೆಯನ್ನು ಬೆಂಬಲಿಸುತ್ತಾ ಇದ್ದಾರೆ ಇತಿಹಾಸದ ಪುಟಗಳಲ್ಲಿ ಶಾಶ್ವತವಾಗಿ ಉಳಿಯುವಂತೆ ದೆಹಲಿಯಲ್ಲಿ ಲಕ್ಷಾಂತರ ರೈತರು ಪ್ರತಿಭಟನೆ ನಡೆಸಿದ್ದರು ಸರಕಾರಗಳಿಗೆ ರೈತರ ಮೇಲೆ ಗೌರವ ಇಲ್ಲವಾಗಿದೆ ಗ್ಯಾಟ್ ಒಪ್ಪಂದದಿಂದ ಕೃಷಿ ಸಮುದಾಯ ಅನುಭವಿಸಿದ ಹೊಡೆತ ಅಷ್ಟು ಇಷ್ಟು ಅಲ್ಲ ಅಂತಹ ಅನಾಹುತಗಳು ಮತ್ತೆ ಸಂಭವಿಸುಬಹುದು ಎಂಬ ಆತಂಕ ಎಲ್ಲರನ್ನು ಕಾಡುತ್ತಿದೆ. ಆದ್ದರಿಂದ ದೇಶದ ಕೋಟ್ಯಂತರ ರೈತರು ಬೀದಿಗಿಳಿದ್ದರಿಂದ ಕಾಯಿದೆಗಳು ವಾಪಸು ಪಡೆಯಲಾಗಿದೆ ಎಂದರು
ಚುನಾವಣೆಯ ಸಂದರ್ಭದಲ್ಲಿ ರಾಜ್ಯ ಮತ್ತು ಕೇಂದ್ರ ಸರಕಾರಗಳು ಕೃಷಿ ಸಾಲ ಮನ್ನಾ ಮಾಡುವುದು ಚುನಾವಣೆಯ ಗಿಮಿಕ್ ಆಗಿದೆ ಸಾಲ ಮನ್ನಾ ಮಾಡುವ ನಿರ್ಧಾರ ಒಳ್ಳೆಯ ಬೆಳವಣಿಗೆ.ಆದರೆ, ಸಾಲ ಮನ್ನಾ ಯೋಜನೆಯ ಲಾಭ ಮಾತ್ರ ಸರಿಯಾಗಿ ರೈತರಿಗೆ ತಲುಪಲಿಲ್ಲ. ಅಧಿಕಾರಿಗಳು ರೈತರಲ್ಲಿ ಗೊಂದಲ ಉಂಟು ಮಾಡಿದ್ದಾರೆ ಬಂಡವಾಳಶಾಹಿಗಳಿಗೆ ಅನುಕೂಲ ಮಾಡಿಕೊಡುತ್ತಿರುವ ಕೇಂದ್ರ ಸರ್ಕಾರದ ವಿರುದ್ದ ಧ್ವನಿ ಎತ್ತು ಮೂಲಕ ರೈತರನ್ನು ಉಳಿಸುವ ಕೆಲಸವಾಗಬೇಕು ಎಂದರು.
ಸಂಘಟನೆಯ ತಾಲೂಕು ಅಧ್ಯಕ್ಷ ಎನ್ ಎನ್ ಶ್ರೀರಾಮ್ ಮಾತನಾಡಿ ರೈತರಿಗೆ ಸರಕಾರದಿಂದ ಸರಿಯಾದ ಮಾಹಿತಿ ಇಲ್ಲದೇ ಯೋಜನೆಗಳು ಸಮರ್ಪಕವಾಗಿ ಜಾರಿಯಾಗುತ್ತಾ ಇಲ್ಲ ರೈತರು ಉಳಿದರೆ ಮಾತ್ರ ದೇಶ ಉಳಿಯುತ್ತದೆ ರೈತರನ್ನು ಉಳಿಸುವ ಜವಾಬ್ದಾರಿ ನಮ್ಮನ್ನು ಆಳುವ ಸರಕಾರಗಳಿಂದಾಗಬೇಕು ರೈತರನ್ನು ಎದುರು ಹಾಕಿಕೊಂಡರೆ ಸರಕಾರ ಉಳಿಯುವುದಿಲ್ಲ ಎಂದು ರೈತರು ಸಂಘಟಿತರಾಗಿ ಎಚ್ಚರಿಕೆ ತರಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ಕೆಪಿಆರ್ ಎಸ್ ತಾಲೂಕು ಕಾರ್ಯದರ್ಶಿ ವಿ.ನಾರಾಯಣರೆಡ್ಡಿ, ಉಪಾಧ್ಯಕ್ಷರಾದ ಆಲಹಳ್ಳಿ ವೆಂಕಟೇಶ್, ಬಿ.ಸಿ ರಾಮರೆಡ್ಡಿ, ಹೊಲ್ಲಂಬಳ್ಳಿ ವೆಂಕಟೇಶ್, ಸಹ ಕಾರ್ಯದರ್ಶಿ ಅಪ್ಪಯ್ಯಣ್ಣ, ವಿನೋದ್, ನಾರಾಯಣಪ್ಪ, ಮಂಜುನಾಥ್ ಇದ್ದರು