ಬಿಬಿಎಂಪಿ ವಾರ್ಡ್‍ಗಳ ಕರಡು ಪ್ರತಿ ಸಿದ್ದ

ಬೆಂಗಳೂರು: ಆಡಳಿತಾತ್ಮಕ ದೃಷ್ಟಿಯಿಂದ ಬಿಬಿಎಂಪಿಯ 198 ವಾರ್ಡ್‍ಗಳನ್ನು 243 ವಾರ್ಡ್‍ಗಳಾಗಿ ಪರಿವರ್ತಿಸಿರುವ ಕರಡು ಪ್ರತಿ ಸಿದ್ದವಾಗಿದೆ.ಈ ಹಿಂದೆ ನಿಗಪಡಿಸಿದಂತೆ ಬಿಬಿಎಂಪಿ ಹೊರ ವಲಯದ ಒಂದು ಕಿ.ಮೀ.ವ್ಯಾಪ್ತಿಯನ್ನು ಸೇರಿಸಿಕೊಳ್ಳದೆ ಬೇರಳೇಣಿಕೆ ಗ್ರಾಮಗಳನ್ನು ಮಾತ್ರ ಬಿಬಿಎಂಪಿಗೆ ಸೇರ್ಪಡೆ ಮಾಡಿಕೊಂಡು 243 ವಾರ್ಡ್‍ಗಳನ್ನು ಸಿದ್ದಪಡಿಸಲಾಗಿದೆ.

198 ವಾರ್ಡ್‍ಗಳನ್ನು 243 ವಾರ್ಡ್‍ಗಳನ್ನಾಗಿ ಪರಿವರ್ತಿಸಿದ ನಂತರ ಚುನಾವಣೆ ನಡೆಸಲಾಗುವುದು ಎಂದು ಸರ್ಕಾರ ಕಳೆದ ವರ್ಷ ಸೆಪ್ಟೆಂಬರ್‍ನಲ್ಲಿ ನಡೆಯಬೇಕಿದ್ದ ಚುನಾವಣೆಯನ್ನು ಮುಂದೂಡಿತ್ತು.ಸರ್ಕಾರದ ಈ ನಿರ್ಧಾರದ ವಿರುದ್ಧ ಬಿಬಿಎಂಪಿ ಮಾಜಿ ಸದಸ್ಯರಾದ ಅಬ್ದುಲ್ ವಾಜೀದ್ ಮತ್ತು ಎಂ.ಶಿವರಾಜು ಅವರು ಸುಪ್ರೀಂಕೋರ್ಟ್‍ನಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸಿದ್ದಾರೆ.

ಈ ಅರ್ಜಿ ವಿಚಾರಣೆ ಬರುವ ಮಾರ್ಚ್ 15 ರಂದು ಸುಪ್ರೀಂ ಕೋರ್ಟ್‍ನಲ್ಲಿ ಆರಂಭವಾಗುವ ಸಾಧ್ಯತೆ ಇದೆ.ಈ ಮಧ್ಯೆ ಬಿಬಿಎಂಪಿ ಹೊರವಲಯವನ್ನು ಬಿಬಿಎಂಪಿ ವ್ಯಾಪ್ತಿಗೆ ಸೇರಿಸಿಕೊಂಡರೆ ಅಲ್ಲಿಂದ ಆಯ್ಕೆಯಾಗಿರುವ ಗ್ರಾ.ಪಂ ಸದಸ್ಯರು ಕೋರ್ಟ್ ಮೆಟ್ಟಿಲೇರುವ ಸಾಧ್ಯತೆ ಇರುವುದರಿಂದ ಆ ಐಡಿಯಾ ಕೈಬಿಟ್ಟು ಇರುವ 198 ವಾರ್ಡ್‍ಗಳನ್ನೇ 243 ವಾರ್ಡ್‍ಗಳನ್ನಾಗಿ ಪರಿವರ್ತಿಸಲಾಗುತ್ತಿದೆ.

ಯಾವ ಚುನಾಯಿತ ಪ್ರತಿನಿಗಳನ್ನು ಸಂಪರ್ಕಿಸದೆ ಕೇವಲ ಕನ್ಸ್‍ಲ್‍ಟೆಂಟ್ ಏಜನ್ಸಿ ಮೂಲಕ ವಾರ್ಡ್ ಪುನರ್‍ವಿಂಗಡಣೆ ಮಾಡಿರುವ ಸರ್ಕಾರದ ಕ್ರಮಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ.ಈಗ ಸಿದ್ದಗೊಂಡಿರುವ ಕರಡು ಪ್ರತಿಗೆ ನಗರಾಭಿವೃದ್ಧಿ ಇಲಾಖೆ ಅನುಮೋದನೆ ನೀಡಿದರೆ ಸಾರ್ವಜನಿಕ ಆಕ್ಷೇಪಣೆಗೆ ಅರ್ಜಿ ಆಹ್ವಾನಿಸಲಾಗುವುದು ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ.

ವಾರ್ಡ್ ಪುನರ್‍ವಿಂಗಡಣೆಗೆ ರಚಿಸಲಾಗಿದ್ದ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‍ಗುಪ್ತಾ ನೇತೃತ್ವದ ಸಮಿತಿ ಐದು ಭಾರಿ ಸಭೆ ನಡೆಸಿ ಅಳೆದು ತೂಗಿ 243 ವಾರ್ಡ್‍ಗಳ ಕರಡು ಪ್ರತಿ ಸಿದ್ದಪಡಿಸಿದೆ.ಆದರೆ, ಆಯುಕ್ತರ ಈ ನಿರ್ಧಾರಕ್ಕೆ ಕಾಂಗ್ರೆಸ್ ಪಕ್ಷದಿಂದ ವ್ಯಾಪಕ ವಿರೋಧ ವ್ಯಕ್ತವಾಗಿದೆ.ಪ್ರತಿಪಕ್ಷಗಳ ಸದಸ್ಯರು ಪ್ರತಿನಿಸುವ ವಾರ್ಡ್‍ಗಳನ್ನು ಮನಸ್ಸೋಇಚ್ಚೆ ಬದಲಾವಣೆ ಮಾಡಲಾಗಿದ್ದು, ಬಿಜೆಪಿ ಸದಸ್ಯರು ಪ್ರತಿನಿಸುವ ಕೆಲ ವಾರ್ಡ್‍ಗಳ ತಂಟೆಗೆ ಸಮಿತಿ ಹೋಗಿಲ್ಲ. ಇದು ರಾಜಕೀಯ ದುರುದ್ದೇಶದ ನಡೆ ಎಂದು ಬಿಬಿಎಂಪಿ ಮಾಜಿ ಸದಸ್ಯ ವಾಜೀದ್ ಆರೋಪಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *