ಗಣರಾಜ್ಯೋತ್ಸವ ಪರೇಡ : ಸುಭಾಷ್ ಚಂದ್ರ ಬೋಸ್ ಸ್ತಬ್ಧಚಿತ್ರ ತಿರಸ್ಕರಿಸಿದ ಕೇಂದ್ರ ಸರಕಾರ

ನವದೆಹಲಿ : ಗಣರಾಜ್ಯೋತ್ಸವದ ಪರೇಡ್‌ನ‌ಲ್ಲಿ ಪ್ರದರ್ಶಿಸಲೆಂದು ಪಶ್ಚಿಮ ಬಂಗಾಲ ಸರಕಾರ ಕಳುಹಿಸಿದ್ದ ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಅವರ ಸ್ತಬ್ಧಚಿತ್ರವನ್ನು ಕೇಂದ್ರ ಸರಕಾರ ತಿರಸ್ಕರಿಸಿದೆ.

ಸ್ತಬ್ಧಚಿತ್ರವು ನೇತಾಜಿ ಸುಭಾಷ್‌ ಚಂದ್ರ ಬೋಸ್ ಅವರ 125ನೇ ಜನ್ಮ ದಿನದ ವರ್ಷದಲ್ಲಿ ಅವರ ಐಎನ್‌ಎಯ ಕೊಡುಗೆಗಳನ್ನು ಸ್ಮರಿಸುವ ಉದ್ದೇಶ ಹೊಂದಿತ್ತು ಎಂದೂ ತಿಳಿಸಿದು ಬಂದಿದೆ.

ಇತ್ತೀಚೆಗಷ್ಟೇ ಕೇರಳ ಸರಕಾರವು ಕಳುಹಿಸಿದ್ದ ಸಮಾಜ ಸುಧಾರಕ ನಾರಾಯಣ ಗುರುಗಳ ಸ್ತಬ್ಧಚಿತ್ರವನ್ನು ಕೇಂದ್ರ ಸರಕಾರ ತಿರಸ್ಕರಿಸಿದ್ದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಕೇರಳ ಹಾಗೂ ಕರ್ನಾಟಕದಲ್ಲಿ ಕೇಂದ್ರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.

ಕಳೆದ ಕೆಲವು ವರ್ಷಗಳಲ್ಲಿ ಇದು ನಾಲ್ಕನೇ ಬಾರಿಗೆ ಪಶ್ಚಿಮ ಬಂಗಾಳದ ಟ್ಯಾಬ್ಲೋ ಪ್ರಸ್ತಾವನೆಯನ್ನು ತಿರಸ್ಕರಿಸಲಾಗಿದೆ. 2015, 2017 ಮತ್ತು 2020 ರಲ್ಲಿ, ಪಶ್ಚಿಮ ಬಂಗಾಳದ ಟ್ಯಾಬ್ಲೋ ಪ್ರಸ್ತಾಪಗಳನ್ನು ತಿರಸ್ಕರಿಸಲಾಗಿದೆ.

ಇದನ್ನೂ ಓದಿ : ಗಣರಾಜ್ಯೋತ್ಸವ ಪರೇಡ್‌ : ನಾರಾಯಣಗುರು ಸ್ಥಬ್ದಚಿತ್ರ ತಿರಸ್ಕರಿಸಿದ ಕೇಂದ್ರ ಸರಕಾರ

ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಸಮಾಜ ಸುಧಾರಕರ ಆಶಯಗಳನ್ನು ಈಡೇರಿಸುವ ಉದ್ದೇಶ ಹೊಂದಿದ್ದೇವೆ ಎಂದು ಹೇಳುವ ಕೇಂದ್ರ ಸರಕಾರ ಸುಭಾಷ್ ಚಂದ್ರ ಬೋಸ್ ಹಾಗೂ ನಾರಾಯಣಗುರು ಅವರಿಗೆ ಹಾಗೂ ಆ ರಾಜ್ಯಗಳಿಗೆ ಅವಮಾನ ಮಾಡುತ್ತಿರುವುದು ಸರಿಯಾದ ಬೆಳವಣಿಗೆಯಲ್ಲ. ಇತ್ತ ಸ್ತಬ್ದ ಚಿತ್ರ ತಿರಸ್ಕರಿಸಿರುವ ಸರಕಾರ, ಸುಭಾಸ್ ಚಂದ್ರ ಬೋಸ್ ಅವರ ಜನ್ಮದಿನವನ್ನು ಒಳಗೊಂಡಂತೆ ಗಣರಾಜ್ಯೋತ್ಸವದ ಆಚರಣೆಗಳು ಈಗ ಪ್ರತಿ ವರ್ಷ ಜನವರಿ 24 ರ ಬದಲಿಗೆ ಜನವರಿ 23 ರಿಂದ ಪ್ರಾರಂಭವಾಗುತ್ತವೆ ಎಂದು ಹೇಳುತ್ತಿದೆ. ಇದು ನಾಟಕವೇ ಅಥವಾ ಕೇರಳ, ಪಶ್ಚಿಮ‌ಬಂಗಾಲದಲ್ಲಿ ಹೀನಾಯವಾಗಿ ಸೋತ ಕಾರಣಕ್ಕಾಗಿ ಅವಮಾನ ಮಾಡುತ್ತಿದೆಯೆ ಎಂದು ಸಾರ್ವಜನಿಕರು‌ ಮಾತನಾಡುತ್ತಿದ್ದಾರೆ.

 

Donate Janashakthi Media

Leave a Reply

Your email address will not be published. Required fields are marked *