ಬಸ್ ನಲ್ಲಿ ಕೇಸರಿ ಧ್ವಜ : ವಿವಾದವಾಗುತ್ತಿದ್ದಂತ ಧ್ವಜ ತೆರವು ಮಾಡಿದ ಬಿಎಂಟಿಸಿ

ಬೆಂಗಳೂರು:  ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)ಯ ಬಸ್ಸೊಂದಕ್ಕೆ ಕೇಸರಿ ಧ್ವಜದಿಂದ ಅಲಂಕೃತಮಾಡಲಾಗಿತ್ತು. ಆ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ಅಧಿಕಾರಿಗಳು ಧ್ವಜವನ್ನು ತೆರವುಗೊಳಿಸಿದ್ದಾರೆ.

ಪ್ರಯಾಣಿಕ ಸಯ್ಯದ್ ಮೋಯಿನ್ ಎನ್ನುವವರು ತಮ್ಮ ಟ್ವಿಟರ್‌ನಲ್ಲಿ ಬಸ್ಸಿನಲ್ಲಿರುವ ಧ್ವಜದ ಫೋಟೊ ಹಂಚಿಕೊಂಡಿದ್ದು, ‘#JUSTIN: @BMTC_BENGALURU ಹ್ಯಾಶ್ ಟ್ಯಾಗ್ ಜೊತೆಗೆ ‘ಸರ್ಕಾರಿ ವಾಹನಗಳನ್ನು ಕೋಮುವಾದ ಗೊಳಿಸಲಾಗುತ್ತಿದೆ.  ಸರ್ಕಾರಿ ವಾಹನಗಳನ್ನು ಕೋಮುವಾದಗೊಳಿಸುವುದರಿಂದ ಇತರ ನಾಗರಿಕರ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ’ ಎಂದು ಬರೆದುಕೊಂಡಿದ್ದಾರೆ.

“ಈ ಕುರಿತು ಬಸ್ ನಿರ್ವಾಹಕರಲ್ಲಿ ಪ್ರಶ್ನಿಸಿದಾಗ ಅವರು ಪ್ರತಿಕ್ರಿಯಿಸಲಿಲ್ಲ” ಎಂದು ಪ್ರಯಾಣಿಕ ತನ್ನ ಟ್ವಿಟರ್ ನಲ್ಲಿ ಹೇಳಿದ್ದಾರೆ.

ಸದ್ಯ ಈ ಫೋಟೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆ ‘ಈ ಬಗ್ಗೆ ಕ್ರಮ ಕೈಗೊಳ್ಳಲಾಗಿದ್ದು, ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕ್ರಮಜರುಗಿಸುತ್ತೇವೆ ಎಂದು ಬಿಎಂಟಿಸಿ   ಫೋಟೋವನ್ನು ಹಂಚಿಕೊಂಡ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ತಿಳಿಸಿದೆ.

 

Donate Janashakthi Media

Leave a Reply

Your email address will not be published. Required fields are marked *