- ಹುಟ್ಟುಹಬ್ಬದಂದೆ ಎಸ್ಆರ್ ಮೋರೆ ನಿಧನ
- ಹುಬ್ಬಳ್ಳಿ ಧಾರವಾಡದ ಪ್ರಬಲ ನಾಯಕ ಮೋರೆ
- ಆಶ್ರಯ ಮನೆಗಳ ಹರಿಕಾರ
ಧಾರವಾಡ: ಮಾಜಿ ಸಚಿವ, ಕಾಂಗ್ರೆಸ್ ನಾಯಕ ಎಸ್.ಆರ್. ಮೋರೆ ಧಾರವಾಡದ ಎಸ್ಡಿಎಂ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. 82 ವರ್ಷದ ಎಸ್.ಆರ್. ಮೋರೆ ಅನಾರೋಗ್ಯ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿದ್ದರು. ಎಸ್. ಆರ್. ಮೋರೆ 4 ಬಾರಿ ಧಾರವಾಡದಿಂದ ವಿಧಾನಸಭೆಗೆ ಆಯ್ಕೆಯಾಗಿದ್ದರು. ಬಂಗಾರಪ್ಪ ಸರ್ಕಾರದಲ್ಲಿ ಸಹಕಾರಿ ಸಚಿವರಾಗಿದ್ದರು. ಧರಂಸಿಂಗ್ ಸರ್ಕಾರದಲ್ಲಿ ಪೌರಾಡಳಿತ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.
ಈ ಭಾಗದಲ್ಲಿ ಆಶ್ರಯ ಮನೆಗಳನ್ನು ಸಾಕಷ್ಟು ಬಡವರಿಗೆ ಕೊಡಿಸಿದ್ದರಿಂದ ಅವರನ್ನು ಆಶ್ರಯ ಮನೆಗಳ ಹರಿಕಾರ ಎಂದೇ ಕರೆಯಲಾಗುತ್ತಿತ್ತು. ಜತೆಗೆ ಹುಬ್ಬಳ್ಳಿ ಧಾರವಾಡ ಜನರಿಗೆ ಕುಡಿಯುವ ನೀರು ಪೂರೈಕೆ ವಿಷಯದಲ್ಲಿ ಸಾಕಷ್ಟು ಶ್ರಮಿಸಿದ್ದರು.
ಕಳೆದ ಕೆಲ ದಿನಗಳಿಂದ ಅವರು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಡಿ. 9ರಂದು ಅವರ ಜನ್ಮದಿನವಿತ್ತು. ಮೃತರಿಗೆ ಮೂವರು ಪುತ್ರಿಯರು ಇದ್ದಾರೆ. ಮೋರೆ ಅವರ ನಿವಾಸದಲ್ಲಿ ಪಾರ್ತೀವ ಶರೀರದ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಅಂತ್ಯಕ್ರಿಯೆ ಮೋರೆ ಫಾರ್ಮ್ ಹೌಸ್ನಲ್ಲಿ ಗುರುವಾರ ಸಂಜೆ 5.30 ನೆರವೇರಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.