ಸೀತಾರಾಂ ಯೆಚೂರಿ
ಸಂಪುಟ – 07, ಸಂಚಿಕೆ 15, ಎಪ್ರೀಲ್ 14, 2013
ಒಂದು ಸರಿಪಡಿಕೆ ಕಾರ್ಯತಂತ್ರ ಸಮಸ್ಯೆಯ ಒಂದು ಸರಿಯಾದ ವಿಶ್ಲೇಷಣೆಯ ಆಧಾರದಲ್ಲಿಯೇ ಇರಬೇಕು ಎನ್ನುವ ಪ್ರಧಾನ ಮಂತ್ರಿಗಳು ಆಥರ್ಿಕ ನಿಧಾನಗತಿಯನ್ನು ನಿವಾರಿಸಲು ಹೊಂದಿರುವ ಕಣ್ಣೋಟ ತಪ್ಪು ಕಾರ್ಯತಂತ್ರದ ಮೇಲೆ ನಿಂತಿದೆ. ಭಾರತದ ಕಾಪರ್ೊರೇಟ್ ಬಳಗ, ಅವರು ಉದ್ದೀಪಿಸ ಬಯಸುವ ಆಶಾವಾದದಿಂದ ಸಂತೃಪ್ತಗೊಳ್ಳುವ ಬದಲು, ಭಾರತೀಯ ಜನತೆಯ ಮತ್ತು ಆಥರ್ಿಕದ ಒಟ್ಟಾರೆ ಹಿತಾಸಕ್ತಿಯಿಂದಲ್ಲವಾದರೂ, ತನ್ನ ಸ್ವಂತ ಹಿತದೃಷ್ಟಿಯಿಂದಲಾದರೂ, ಈ ಸರಕಾರದಿಂದ ಇನ್ನಷ್ಟು ರಿಯಾಯ್ತಿಗಳನ್ನು ಕೇಳುವುದನ್ನು ನಿಲ್ಲಿಸಿ, ಅದು ವ್ಯಾಪಕ ಪ್ರಮಾಣದಲ್ಲಿ ಸಾರ್ವಜನಿಕ ಹೂಡಿಕೆಗಳನ್ನು ವಿಸ್ತರಿಸುವಂತೆ ಆಗ್ರಹಿಸಬೇಕು.
ಪ್ರಧಾನ ಮಂತ್ರಿಗಳು ಎಪ್ರಿಲ್ 3ರ ಬೆಳಿಗ್ಯೆ ಸಿಐಐ(ಭಾರತೀಯ ಉದ್ದಿಮೆಗಳ ಮಹಾಒಕ್ಕೂಟ)ನ ವಾಷರ್ಿಕ ಸರ್ವಸದಸ್ಯ ಸಭೆ ಮತ್ತು ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ದೇಶಿಸಿ ಮಾತಾಡಿದ್ದಾರೆ. ನನ್ನ ದೃಷ್ಟಿಯಲ್ಲಿ ನಾವು 8ಶೇ. ಬೆಳವಣಿಗೆಗೆ ಹಿಂದಿರುಗ ಬಹುದು….ಎಂದು ಹೇಳುತ್ತ ‘ಒಳಿತಿನ ಭಾವ’ವನ್ನು ಉತ್ಪತ್ತಿ ಮಾಡಲು ಯತ್ನಿಸಿದ್ದಾರೆ. ನಮ್ಮ ಸ್ವಾತಂತ್ರ್ಯೋತ್ತರ ಆಥರ್ಿಕ ಇತಿಹಾಸದಲ್ಲಿ ಒಂದು ನಿಣರ್ಾಯಕ ಘಟ್ಟವನ್ನು ಪ್ರವೇಶಿಸಿದ್ದೇವೆ ಎನ್ನುತ್ತ ಅವರು ಭಾರತೀಯ ಉದ್ದಿಮೆ ನಮ್ಮ ದೃಢ ನಿಧರ್ಾರದಲ್ಲಿ ನಂಬಿಕೆಯಿಡಬೇಕು, ನಕಾರಾತ್ಮಕತೆಯ ಭಾವದಲ್ಲಿ ಹೂತು ಹೋಗುವುದನ್ನು ತಪ್ಪಿಸಬೇಕು ಎಂದು ಆಗ್ರಹಿಸಿದ್ದಾರೆ. ನಿಜವಾಗಿಯೂ ಇದು ಆಸೆಗಳು ಕುದುರೆಗಳಾಗಿದ್ದರೆ, ಭಿಕ್ಷುಕರು ಸವಾರಿ ಮಾಡುತ್ತಿದ್ದರು… ಎಂಬ 16ನೇ ಶತಮಾನದ ಮಕ್ಕಳ ಹಾಡನ್ನು ನೆನಪಿಸುತ್ತದೆ.
ಸರಕಾರ ಕ್ಷಿಪ್ರವಾಗಿ ಕ್ರಿಯೆಗಿಳಿಯದಿದ್ದರೆ, ಆಗಲೇ 5ಶೇ.ಕ್ಕೆ ಇಳಿದಿರುವ ನಮ್ಮ ಬೆಳವಣಿಗೆ ದರ ಅಲ್ಲಿಯೇ ಕಚ್ಚಿಕೊಂಡಿರುತ್ತದೆ ಎಂಬ ಬಗ್ಗೆ ಇಂದು ಸರ್ವ
ಸಮ್ಮತಿಯಿದೆ ಎಂದು ಹೇಳಿಕೊಳ್ಳುತ್ತ ಪ್ರಧಾನ ಮಂತ್ರಿಗಳು ಒಂದು ವೇಗದ ಮತ್ತು ನಿಣರ್ಾಯಕ ಸರಕಾರೀ ಕ್ರಿಯೆ ಬೇಕಾಗಿದೆ ಎಂದು ಕರೆ ನೀಡಿದರು.ಇಂತಹ ಕ್ರಿಯೆ ‘ಒಳಗೊಳ್ಳುವ ಬೆಳವಣಿಗೆ’ಯ ಮಂತ್ರವನ್ನೂ ಜಪಿಸಲೇ ಬೇಕು, ಜತೆಗೆ, ನಮ್ಮ ಪ್ರಧಾನಿಗಳ ಪ್ರಕಾರ, ಹಣಕಾಸು ಕ್ರೋಡೀಕರಣಕ್ಕೆ ಮತ್ತು ದೇಶದಲ್ಲಿ ಒಂದು ಉತ್ತಮ ಹೂಡಿಕೆಯ ವಾತಾವರಣ ನಿಮರ್ಿಸಲು ಗಮನ ಕೇಂದ್ರೀಕರಿಸಬೇಕು. ಜಾಗತಿಕ ದೃಶ್ಯದ ಹಿನ್ನೆಲೆಯಲ್ಲಿ ಇದು ಇನ್ನಷ್ಟು ಅಗತ್ಯ ಎಂದವರು ಒತ್ತಿ ಹೇಳಿದರು.
ಪ್ರೋತ್ಸಾಹಕಗಳೂ, ಸಬ್ಸಿಡಿಗಳೂ
ಹಣಕಾಸು ಕ್ರೋಡೀಕರಣಕ್ಕೆ ಸಂಬಂಧಪಟ್ಟಂತೆ, ಸಬ್ಸಿಡಿಗಳನ್ನು, ಅದರಲ್ಲೂ ಇಂಧನ ಸಬ್ಸಿಡಿಗಳನ್ನು ತರ್ಕಬದ್ಧಗೊಳಿಸಲಾಗಿದೆ (ಕಡಿತಗೊಳಿಸಲಾಗಿದೆ ಎಂದು ಓದಿಕೊಳ್ಳಿ) ಎಂಬ ಹೆಮ್ಮೆ ನಮ್ಮ ಪ್ರಧಾನ ಮಂತ್ರಿಗಳಿಗೆ. ಪೆಟ್ರೋಲ್ ಬೆಲೆಗಳ ಮೇಲಿನ ಹತೋಟಿ ಈಗ ಸಂಪೂರ್ಣವಾಗಿ ಹೋಗಿದೆ, ಮುಂದಿನ ಕೆಲವು ತಿಂಗಳಲ್ಲಿ ಡೀಸೆಲ್ ಬೆಲೆಗಳ ಮೇಲಿನ ಹತೋಟಿಯೂ ಸಂಪೂರ್ಣವಾಗಿ ಹೋಗುತ್ತದೆ ಎಂದು ಅವರು ಹೇಳಿದರು. ಅಡುಗೆ ಅನಿಲ ಸಬ್ಸಿಡಿಯ ಮೇಲೆ ಮಿತಿ ಹಾಕಲಾಗಿದೆ. ‘ಆಧಾರ್’ ವೇದಿಕೆಯ ಮೇಲೆ ನಿಂತಿರುವ ‘ನೇರ ನಗದು ವಗರ್ಾವಣೆ’ ಸಬ್ಸಿಡಿ ಮೊತ್ತವನ್ನು, (‘ಸರಿಯಾದ ಫಲಾನುಭವಿಗಳಿಗೆ’ ಮಾತ್ರ ತಲುಪಿಸುವ ಹೆಸರಿನಲ್ಲಿ) ಇನ್ನಷ್ಟು ಇಳಿಸುತ್ತದೆ ಎಂದು ಅವರು ಒತ್ತಿ ಹೇಳಿದರು.
ಸಹಜವಾಗಿಯೇ ಭಾರತೀಯ ಕಾಪರ್ೊರೇಟ್ ಬಳಗಕ್ಕೆ, ಶ್ರೀಮಂತರಿಗೆ ಈ ಸರಕಾರ ಕೊಡಮಾಡಿರುವ ಅಗಾಧ ಪ್ರಮಾಣದ ತೆರಿಗೆ ರಿಯಾಯ್ತಿಗಳ ಬಗ್ಗೆ ಒಂದೂ ಮಾತಿಲ್ಲ. ಕಳೆದ ಹಣಕಾಸು ವರ್ಷದಲ್ಲಿ ಈ ಬಾಬ್ತಿನಲ್ಲಿ ಅದು ಬಿಟ್ಟು ಕೊಟ್ಟ ಆದಾಯ ಸಮಸ್ತ ಹಣಕಾಸು ಕೊರತೆಗಿಂತಲೂ 50,000 ಕೋಟಿ ರೂ.ಗಳಷ್ಟು ಹೆಚ್ಚು. ಶ್ರೀಮಂತರಿಗೆ ತೆರಿಗೆ ರಿಯಾಯ್ತಿಗಳು ಬೆಳವಣಿಗೆಗೆ ‘ಪ್ರೋತ್ಸಾಹಕ’ಗಳು ಎನಿಸಿಕೊಳ್ಳುತ್ತದೆ, ಅತ್ತ ಬಡವರಿಗೆ ಕೊಡುವ ರಿಯಾಯ್ತಿಗಳು ‘ಸಬ್ಸಿಡಿ’ಗಳು ಆಥರ್ಿಕದ ಮೇಲೆ ಹೊರೆಗಳು ಎನಿಸಿಕೊಳ್ಳುತ್ತವೆ. ಹಣಕಾಸು ಕೊರತೆಯನ್ನು ಕಡಿತ ಮಾಡಲು ಮುಂಬರುವ ವರ್ಷಗಳಲ್ಲೂ ಇದೇ ದಿಕ್ಕಿನಲ್ಲಿ ಸಾಗುವ ಅರ್ಥ ಜನತೆಯ ಮೇಲೆ ಇನ್ನಷ್ಟು ಸಂಕಟಗಳ ಹೇರಿಕೆ.
ದೇಶ ಕಾಪಾಡಿದ ಕ್ರಮಗಳಿಗೇ ಕೊಕ್
ಸಾರ್ವಜನಿಕ ವಲಯ ಆಥರ್ಿಕದಲ್ಲಿ ಉನ್ನತ ಸ್ಥಾನ ಪಡೆಯಬೇಕೆಂಬ ನೆಹರೂವಾದಿ ಕಣ್ಣೋಟವನ್ನಂತೂ ಪ್ರಧಾನ ಮಂತ್ರಿಗಳು ತಲೆಕೆಳಗಾಗಿಸಿದ್ದಾರೆ. ಸರಕಾರ ಬೆಳವಣಿಗೆಯ ಪ್ರಧಾನ ಚಾಲಕ ಅಲ್ಲ. ಒಂದು ಖಾಸಗೀ ವಲಯದ ನೇತೃತ್ವದ ಆಥರ್ಿಕದಲ್ಲಿ- ನಾನು ಮತ್ತೆ ಹೇಳುತ್ತಿದ್ದೇನೆ, ನಾವು 75ಶೇ. ಹೂಡಿಕೆ ಖಾಸಗೀ ವಲಯದಲ್ಲಿರುವ ಖಾಸಗೀ ವಲಯದ ನೇತೃತ್ವದ ಆಥರ್ಿಕ- ಬೆಳವಣಿಗೆಯ ಚಾಲಕ ಶಕ್ತಿ ಖಾಸಗೀ ಹೂಡಿಕೆಯೇ ಎಂದಿದ್ದಾರೆ ಅವರು. ತನ್ನ ಸರಕಾರ ದೇಶೀ ಹೂಡಿಕೆಗಳ ಮೇಲೆ ಅಧಿಕಾರಶಾಹಿ ಅಡೆ-ತಡೆಗಳನ್ನು ನಿವಾರಿಸಲು, ಪರಿಸರ ಮಂಜೂರಾತಿಗಳನ್ನು ನೀಡಲು ಕೈಗೊಂಡ ಕ್ರಮಗಳ ರೂಪುರೇಷೆ ನೀಡುತ್ತ ಪ್ರಧಾನ ಮಂತ್ರಿಗಳು ವಿದೇಶಿ ಹೂಡಿಕೆಯನ್ನು ಆಕಷರ್ಿಸುವ ಪ್ರಕ್ರಿಯೆಯನ್ನು ತ್ವರಿತಗೊಳಿಸುವುದರ ಮೇಲೆ ಒತ್ತು ನೀಡಿದರು.
ನಾವು ವಿದೇಶಿ ಹೂಡಿಕೆಯನ್ನು ಸ್ವಾಗತಿಸುತ್ತೇವೆ ಎಂದು ಸ್ಪಷ್ಟ ಸಂಕೇತಗಳನ್ನು ನೀಡಿದ್ದೇವೆ ಎಂದ ಅವರು ಚಿಲ್ಲರೆ ವ್ಯಾಪಾರದಲ್ಲಿ, ನಾಗರಿಕ ವಿಮಾನಯಾನದಲ್ಲಿ ಮತ್ತು ಇತರ ಕ್ಷೇತ್ರಗಳಲ್ಲಿ ಎಫ್ಡಿಐ ಮಹತ್ವದ ಸಂಕೇತಗಳು ಎನ್ನುತ್ತ, ನಾವು ವಿದೇಶಿ ನೇರ ಹೂಡಿಕೆ ಧೋರಣೆಯನ್ನು ಸಮಗ್ರವಾಗಿ ಪರಾಮಶರ್ಿಸಿ ಮುಂಬರುವ ತಿಂಗಳುಗಳಲ್ಲಿ ಇನ್ನೂ ಏನೇನು ಮಾಡಬಹುದು ಎಂದು ನೋಡುತ್ತಿದ್ದೇವೆ ಎಂದು ಪ್ರಕಟಿಸಿದರು. ಹೊಸ ಪೀಳಿಗೆಯ ಸುಧಾರಣೆಗಳ ಇನ್ನೊಂದು ಸುತ್ತನ್ನೇ ಪ್ರಕಟಿಸುತ್ತ ಪ್ರಧಾನ ಮಂತ್ರಿಗಳು ಇತರ ಸುಧಾರಣಾ ಕ್ರಮಗಳ ಬಗ್ಗೆಯೂ ಯೋಚಿಸಲಾಗುತ್ತಿದೆ. ಹಣಕಾಸು ವಲಯ ಶಾಸನಾತ್ಮಕ ಸುಧಾರಣಾ ಸಮಿತಿ ಹಲವಾರು ಶಿಫಾರಸುಗಳನ್ನು ಮಾಡಿದೆ, ಅವನ್ನು ಜಾಗರೂಕತೆಯಿಂದ ಪರಿಶೀಲಿಸಲಾಗುವುದು ಎಂದರು. ಬ್ಯಾಂಕಿಂಗ್ ಸೇವೆಗಳಲ್ಲಿ ಭಾರತೀಯ ಉಳಿತಾಯಗಳನ್ನು ಸಂಗ್ರಹಿಸಲು ಖಾಸಗಿ ವಿದೇಶಿ
ಬ್ಯಾಂಕುಗಳಿಗೆ ಅವಕಾಶ ನೀಡುವ, ಆಮೂಲಕ ಬ್ಯಾಂಕ್ ರಾಷ್ಟ್ರೀಕರಣದ ತರ್ಕವನ್ನೇ ಬುಡಮೇಲು ಮಾಡುವ ಇತ್ತೀಚಿನ ಕ್ರಮಗಳನ್ನು ಅವರು ಹಾಡಿ ಹೊಗಳಿದರು.ಬೇರೆ ಮಾತುಗಳಲ್ಲಿ ಹೇಳುವುದಾದರೆ, 2008ರ ಜಾಗತಿಕ ಆಥರ್ಿಕ ಕುಸಿತ ಭಾರತವನ್ನು ಸಂಪೂರ್ಣವಾಗಿ ಧ್ವಂಸದಿಂದ ಕಾಪಾಡಿದ ಆ ಕ್ರಮಗಳನ್ನೇ ಈಗ ಕಳಚಿ ಹಾಕಲಾಗುತ್ತಿದೆ. ಇದು ಭಾರತವನ್ನು ಜಾಗತಿಕ ಹಣಕಾಸು ಏರುಪೇರುಗಳಿಗೆ ಇನ್ನಷ್ಟು ಒಳಪಡಿಸುತ್ತದೆ.
ತಪ್ಪು ಕಾರ್ಯತಂತ್ರ
ವಿಚಿತ್ರವೆಂದರೆ, ಒಂದು ಸರಿಪಡಿಕೆ ಕಾರ್ಯತಂತ್ರ ಸಮಸ್ಯೆಯ ಒಂದು ಸರಿಯಾದ ವಿಶ್ಲೇಷಣೆಯ ಆಧಾರದಲ್ಲಿಯೇ ಇರಬೇಕು ಎನ್ನುತ್ತಾರೆ ಪ್ರಧಾನ ಮಂತ್ರಿಗಳು. ಇಲ್ಲಿ, ಸಮಸ್ಯೆಯೆಂದರೆ ಆಥರ್ಿಕ ನಿಧಾನಗತಿ. ಆದರೆ ಸರಿಪಡಿಕೆ ಕಾರ್ಯತಂತ್ರ ಹೂಡಿಕೆಯ ಇಳಿಮುಖತೆಯ ಪ್ರವೃತ್ತಿಯನ್ನು ಹಿಮ್ಮೆಟ್ಟಿಸುವ ಒಂದು ತಪ್ಪು ಕಾರ್ಯತಂತ್ರದ ಮೇಲೆ ನಿಂತಿದೆ. ಆಥರ್ಿಕದ ಬೆಳವಣಿಗೆ ದರಕ್ಕೂ ಹೂಡಿಕೆ ದರಕ್ಕೂ ಬಲವಾದ ಸಹಸಂಬಂಧ ಇದೆ ಎನ್ನುತ್ತಾರೆ ಪ್ರಧಾನ ಮಂತ್ರಿಗಳು; ಜತೆಗೆ 2011-12 ರಲ್ಲಿ ಜಿಡಿಪಿಯಲ್ಲಿ ಸಾರ್ವಜನಿಕ ಮತ್ತು ಖಾಸಗಿ ಹೂಡಿಕೆ ಎರಡರ ಪ್ರಮಾಣವೂ ಇಳಿದಿದೆ. ಹೂಡಿಕೆಯಲ್ಲಿ ಇಳಿಕೆಯನ್ನು ಹಿಮ್ಮೆಟ್ಟಿಸಲೇ ಬೇಕು ಎಂದೂ ಅವರು ಸೇರಿಸಿದ್ದಾರೆ. ಇದನ್ನು ಸುಧಾರಣೆಗಳ ಒಂದು ಸರಣಿಯ ಮೂಲಕ, ಮೇಲೆ ಹೇಳಿದಂತಹ ವಿದೇಶಿ, ದೇಶೀ ಬಂಡವಾಳಗಳಿಗೆ ಹೆಚ್ಚಿನ ಪ್ರೋ ತ್ಸಾಹಕಗಳನ್ನು(ಸಬ್ಸಿಡಿಗಳೆಂದು ಓದಿಕೊಳ್ಳಿ) ರೂಪಿಸುವ ಮೂಲಕ ಮಾಡಲಾಗುವುದು ಎಂದು ಪ್ರಧಾನ ಮಂತ್ರಿಗಳು ಹೇಳುತ್ತಾರೆ.
ಆದರೆ, ಹೂಡಿಕೆಗಳು ಇಳಿಮುಖಗೊಂಡದ್ದಾದರೂ ಏಕೆ ಎಂದು ಚಚರ್ಿಸಬೇಕಾಗಿದೆ. ಕಳೆದ ಮೂರು ವರ್ಷಗಳಲ್ಲಿ ಬೃಹತ್ ಪ್ರಮಾಣದಲ್ಲಿ ರಿಯಾಯ್ತಿಗಳನ್ನು ನೀಡಲಾಯಿತು. ಆದರೂ ಕೈಗಾರಿಕಾ, ತಯಾರಿಕಾ ಬೆಳವಣಿಗೆ ದರ ಹೆಚ್ಚಲಿಲ್ಲ, ವಾಸ್ತವವಾಗಿ, ಒಟ್ಟಾರೆಯಾಗಿ ಇಳಿದಿವೆ. ಇದಕ್ಕೆ ಕಾರಣ ವಾಸ್ತವ ಪರಿಸ್ಥಿತಿಗಳಲ್ಲೇ ಇದೆ- ಆಥರ್ಿಕದಲ್ಲಿ ಕೊಳ್ಳುವ ಶಕ್ತಿಯಿಲ್ಲದಿದ್ದರೆ, ಹೂಡಿಕೆಗಳು ತಾವಾಗಿಯೇ ಎಂದೂ ಬೆಳವಣಿಗೆ ತರಲಾರವು. ಲಾಭ ಗಳಿಸಲಿಕ್ಕೂ, ಮತ್ತು ಬೆಳವಣಿಗೆಗೂ, ಉತ್ಪಾದನೆ ಮಾಡಿದ್ದು ಮಾರಾಟವಾಗಬೇಕು ತಾನೇ. ಹೀಗಾಗಬೇಕಾದರೆ ಆಥರ್ಿಕದಲ್ಲಿ ಸಾಕಷ್ಟು ಕೊಳ್ಳುವ ಶಕ್ತಿಯಿರಬೇಕು. ಜಾಗತಿಕವಾಗಿ ಆಥರ್ಿಕ ನಿಧಾನಗತಿ ಮತ್ತು ಜಾಗತಿಕ ವ್ಯಾಪಾರದಲ್ಲಿ ತೀವ್ರ ಇಳಿಕೆಯಿಂದಾಗಿ ದೇಶದೊಳಗಿನ ಹೂಡಿಕೆಯ ಉತ್ಪನ್ನಗಳನ್ನು ವಿದೇಶಗಳಲ್ಲಿ ಮಾರುವಂತಿಲ್ಲ. ದೇಶದೊಳಗೆ, ಸಬ್ಸಿಡಿಗಳನ್ನು ತೀವ್ರವಾಗಿ ಕಡಿತ ಮಾಡಿ, ಇಂಧನ ಬೆಲೆಗಳನ್ನು ಆಡಳಿತಾತ್ಮಕವಾಗಿಯೇ ಹೆಚ್ಚಿಸಿ, ಒಟ್ಟಾರೆಯಾಗಿ ನಾಗಾಲೋಟ ಹೂಡಿರುವ ಬೆಲೆಗಳ ಮೂಲಕ ಬಹುಪಾಲು ಭಾರತೀಯ ಜನಗಳ ಕೊಳ್ಳುವ ಶಕ್ತಿಯನ್ನು ಹಿಂಡಿ ಹಾಕಲಾಗಿದೆ.
ಹೀಗೆ ಜಾಗತಿಕವಾಗಿಯೂ, ದೇಶದ ಒಳಗೂ ಕೊಳ್ಳುವ ಸಾಮಥ್ರ್ಯ ಇಳಿದಿರುವಾಗ, ಭಾರತೀಯ ಆಥರ್ಿಕದ ನಿಧಾನಗತಿಯನ್ನು ಹಿಮ್ಮೆಟ್ಟಿಸಬೇಕಾದರೆ ಅದು ಭಾರತೀಯ ಜನತೆಯ ಕೊಳ್ಳುವ ಶಕ್ತಿಯನ್ನು ಹೆಚ್ಚಿಸಿದರೆ ಮಾತ್ರ ಸಾಧ್ಯ. ಅದಕ್ಕೆ ಯುಪಿಎ ಸರಕಾರ ಕೊಡಮಾಡುತ್ತಿರುವ ಬೃಹತ್ ಪ್ರಮಾಣದ ತೆರಿಗೆ ರಿಯಾಯ್ತಿಗಳನ್ನು ನಿಲ್ಲಿಸಿ, ಈ ಸಂಪನ್ಮೂಲಗಳನ್ನು ಬೃಹತ್ ಪ್ರಮಾಣದ ಸಾರ್ವಜನಿಕ ಹೂಡಿಕೆಗಳಿಗೆ ಬಳಸಿದರೆ ಮಾತ್ರ ಸಾಧ್ಯ. ಇದು ನಮಗೆ ಬಹುವಾಗಿ ಬೇಕಾದ ಮೂಲರಚನೆಗಳನ್ನು ನಿಮರ್ಿಸುತ್ತದೆ, ಜತೆಗೆ ಗಮನಾರ್ಹ ಪ್ರಮಾಣದಲ್ಲಿ ಉದ್ಯೋಗಾವಕಾಶಗಳನ್ನೂ ಸೃಷ್ಟಿಸುತ್ತದೆ. ಇದರಿಂದ ದೇಶದೊಳಗಿನ ಬೇಡಿಕೆಯ ವಿಸ್ತರಣೆ ಹೂಡಿಕೆಗಳನ್ನು ಹೆಚ್ಚಿಸಲು ಉತ್ತೇಜನೆ
ಒದಗಿಸಿ, ಭಾರತ ಹೆಚ್ಚು ತಾಳಿಕೆಯ ಬಿಳವಣಿಗೆಯ ಕಾರ್ಯತಂತ್ರವನ್ನು ಅನುಸರಿಸಲು ಸಾಧ್ಯವಾಗುತ್ತದೆ.
ಪ್ರಧಾನ ಮಂತ್ರಿಗಳು ಉದ್ದೀಪಿಸ ಬಯಸುವ ಆಶಾವಾದದಿಂದ ಸಂತೃಪ್ತಗೊಳ್ಳುವ ಬದಲು, ಭಾರತದ ಕಾಪರ್ೊರೇಟ್ ಬಳಗ, ಭಾರತೀಯ ಜನತೆಯ ಮತ್ತು ಆಥರ್ಿಕದ ಒಟ್ಟಾರೆ ಹಿತಾಸಕ್ತಿಯಿಂದಲ್ಲವಾದರೂ, ತನ್ನ ಸ್ವಂತ ಹಿತದೃಷ್ಟಿಯಿಂದಲಾದರೂ, ಈ ಸರಕಾರದಿಂದ ಇನ್ನಷ್ಟು ರಿಯಾಯ್ತಿಗಳನ್ನು ಕೇಳುವುದನ್ನು ನಿಲ್ಲಿಸಿ, ಅದು ವ್ಯಾಪಕ ಪ್ರಮಾಣದಲ್ಲಿ ಸಾರ್ವಜನಿಕ ಹೂಡಿಕೆಗಳನ್ನು ವಿಸ್ತರಿಸುವಂತೆ ಆಗ್ರಹಿಸಬೇಕು. ಶ್ರೀಯುತ ಪ್ರಧಾನ ಮಂತ್ರಿಗಳೇ, ಇದೀಗ ಸಮಸ್ಯೆಯ ಸರಿಯಾದ ವಿಶ್ಲೇಷಣೆಯನ್ನು ಆಧರಿಸಿದ ಸರಿಪಡಿಕೆಯ ಕಾರ್ಯತಂತ್ರ.
0