ಆಲೂಗಡ್ಡೆ ರೈತರ ಮೇಲೆ ದಾಖಲಿಸಿದ್ದ ಕೇಸು ವಾಪಸ್ಸು ಪಡೆದ ಪೆಪ್ಸಿಕೋ ಕಂಪನಿ  

ನವದೆಹಲಿ: ಲೇಯ್ಸ್ ಚಿಪ್ಸ್ ತಯಾರಿಸುವ ಪೆಪ್ಸಿಕೊ ಬಹುರಾಷ್ಟ್ರೀಯ ಕಂಪನಿ ಆಲೂಗಡ್ಡೆ ತಳಿ ತನ್ನದು ಎಂದು ಆಲೂಗಡ್ಡೆ ಬೆಳೆದಿದ್ದ ಗುಜರಾತ್ ರೈತರ ಮೇಲೆ ಕೋರ್ಟ್ ಕೇಸು ದಾಖಲಿಸಿ ಬೆಳೆ ಬೆಳೆದಿದ್ದ ರೈತರಿಂದ  ಕೋಟ್ಯಾಂತರ ರೂ. ಪರಿಹಾರ ಪಡೆಯುವ ಆದೇಶ ಪಡೆದಿತ್ತು.

ಬಹುರಾಷ್ಟ್ರೀಯ ಕಂಪನಿಯ ಈ ದೌರ್ಜನ್ಯದ ವಿರುದ್ಧ ದೇಶದಾದ್ಯಂತ ಪೆಪ್ಸಿಕೋ ಚಿಪ್ಸ್ ಬಹಿಷ್ಕಾರದ ಹೋರಾಟಕ್ಕೆ ರೈತ ಚಳುವಳಿಗಳು ಕರೆ ನೀಡಿದ ಮೇಲೆ ವ್ಯಾಪಾರ ಕುಸಿತದಿಂದ ಕಂಗೆಟ್ಟ ಕಂಪನಿ ಬೇಷರತ್ತಾಗಿ ಕೋರ್ಟ್ ನಿಂದ ಕೇಸ್ ವಾಪಸ್ಸು ಪಡೆದಿತ್ತು.

ಹೋರಾಟವನ್ನು ಇಷ್ಟಕ್ಕೆ ನಿಲ್ಲಿಸದೇ ಆಶಾ ಸ್ವರಾಜ್ ಮುನ್ನೆಡೆಸುತ್ತಿರುವ ಸಂಯುಕ್ತ ಕಿಸಾನ್ ಮೋರ್ಚಾದ ರಾಷ್ಟ್ರೀಯ ಕಾರ್ಯಕಾರಿ ಸದಸ್ಯೆ ಕವಿತಾ ಕುರುಗುಂಟೆ ಸಸ್ಯತಳಿಗಳ ಸಂರಕ್ಷಣಾ ಪ್ರಾಧಿಕಾರದ ಮುಂದೆ ಕೇಸು ದಾಖಲಿಸಿದ್ದರು. ವಿಚಾರಣೆ ನಡೆಸಿದ ಪ್ರಾಧಿಕಾರ ಪೆಪ್ಸಿಕೋ ಕಂಪನಿಗೆ ಇದ್ದ ಭೌದ್ಧಿಕ ಹಕ್ಕು ಸ್ವಾಮ್ಯವನ್ನು ರದ್ದುಪಡಿಸಿದೆ.

ಸಸ್ಯತಳಿಗಳ ಸಂರಕ್ಷಣಾ ಪ್ರಾಧಿಕಾರವು ರೈತರ ಹಕ್ಕುಗಳ ರಕ್ಷಣೆಗಾಗಿ ಆದೇಶದವನ್ನು ಹೊರಡಿಸಿದ್ದು, ಅದರ ಪ್ರಕಾರ, ಪೆಪ್ಸಿಕೋ ಕಂಪನಿಯು ಆಲೂಗೆಡ್ಡೆ ಚಿಪ್ಸ್‌ಗಳಿಗಾಗಿ ಪ್ರತ್ಯೇಕವಾಗಿ ಬೆಳೆದ ಆಲೂಗೆಡ್ಡೆ ತಳಿಯ ಪೇಟೆಂಟ್ ಅನ್ನು ರದ್ದುಗೊಳಿಸಿದೆ.

2019 ರಲ್ಲಿ, ಆಲೂಗೆಡ್ಡೆ ಚಿಪ್ಸ್‌ನಂತಹ ತಿಂಡಿಗಳನ್ನು ತಯಾರಿಸಲು ಕಡಿಮೆ ತೇವಾಂಶವನ್ನು ಹೊಂದಿರುವ ಎಫ್‌ಸಿ5 ಆಲೂಗೆಡ್ಡೆ ತಳಿಯನ್ನು ಬೆಳೆಸಲು ಪಶ್ಚಿಮ ರಾಜ್ಯ ಗುಜರಾತ್ ಮೂಲದ ಕೆಲವು ರೈತರ ಮೇಲೆ ಒತ್ತಡ ಹೇರಿದ್ದಲ್ಲದೆ, ಕಡ್ಡಾಯಗೊಳಿಸಿತ್ತು.

ನಂತರ, ರೈತರ ಹಕ್ಕುಗಳ ಹೋರಾಟಗಾರ್ತಿ ಕವಿತಾ ಕುರುಗಂಟಿ, ಪೆಪ್ಸಿಕೋ ಕಂಪನಿಯ ಆಲೂಗೆಡ್ಡೆ ತಳಿಗೆ ನೀಡಲಾದ ಬೌದ್ಧಿಕ ರಕ್ಷಣೆಯನ್ನು ರದ್ದುಗೊಳಿಸುವಂತೆ ಸಸ್ಯತಳಿಗಳ ಸಂರಕ್ಷಣಾ ಪ್ರಾಧಿಕಾರಕ್ಕೆ ಮನವಿ ಮಾಡಿದರು, ಸರ್ಕಾರದ ನಿಯಮಗಳು ಬೀಜ ತಳಿಗಳ ಮೇಲೆ ಪೇಟೆಂಟ್ ಅನ್ನು ಅನುಮತಿಸುವುದಿಲ್ಲ ಎಂದು ಹೇಳಿದರು.

ದೇಶದಾದ್ಯಂತ  ಅಖಿಲ ಭಾರತ ಕಿಸಾನ್ ಸಭಾ (ಎಐಕೆಎಸ್‌) ರಾಜ್ಯದಾದ್ಯಂತ ಕರ್ನಾಟಕ ಪ್ರಾಂತ ರೈತ ಸಂಘ(ಕೆಪಿಆರ್‌ಎಸ್‌) ಪೆಪ್ಸಿಕೋ ಕಂಪನಿಯ ಬೌದ್ಧಿಕ ಹಕ್ಕು ಸ್ವಾಮ್ಯ ವನ್ನು ರದ್ದುಪಡಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದವು.

Donate Janashakthi Media

Leave a Reply

Your email address will not be published. Required fields are marked *