ಎಸ್ ಎಲ್ ಭೈರಪ್ಪನವರು ಭಾರತ ಒಂದು “ಭಿಕ್ಷುಕ ರಾಷ್ಟ್ರ” ಎಂದು ಹೇಳಿರುವ ಬಗ್ಗೆ ತಮ್ಮದೇ ಆದ ಅಭಿಪ್ರಯಾವನ್ನು ವ್ಯಕ್ತಪಡಿಸಿರುವ ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ ಎನ್ ಚಿನ್ನಸ್ವಾಮಿ ಸೋಸಲೆ ಅವರು ಅಬೌದ್ಧಿಕ ಮಾತಿಗೆ ಮುಕ್ತವಾದ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ತಳಬುಡ ಇಲ್ಲದ – ಆಧಾರರಹಿತ – ಆಸ್ಥಾನ ಕೇಂದ್ರಿತ ಅಥವಾ ಸ್ವಘೋಷಿತ ವೈದಿಕ ಕೇಂದ್ರಿತ ಸಾಹಿತ್ಯ ಬರೆದ ಸ್ವಘೋಷಿತ “ಖ್ಯಾತ ” ಸಾಹಿತಿ ಎಸ್ ಎಲ್ ಭೈರಪ್ಪನವರು ನಮ್ಮ ದೇಶವನ್ನು “ಭಿಕ್ಷುಕರ” ದೇಶವೆಂದು ಕರೆದಿದ್ದಾರೆ.
ಶತಶತಮಾನಗಳಿಂದ ದುಡಿಯುವ ಜನರ ದುಡಿಮೆ – ಶ್ರಮ – ಬೇವರನ್ನೆ “ತುಪ್ಪ” ವಾಗಿಸಿಕೊಂಡು, ಹೊಟ್ಟೆ ಬಿರಿಯುವ ಹಾಗೆ ಉಂಡು – ತೇಗಿ ಸಮೃದ್ಧವಾಗಿದ್ದಾಗ ಇವರ ದೇಶ ಸಮೃದ್ಧ – ಶ್ರೀಮಂತವಾಗಿತ್ತು. ದುಡಿಯುವ ವರ್ಗದಲ್ರೆಲ್ಲರೂ ಇವರಿಗೆ ಭಿಕ್ಷುಕ ರಾಗಿ ಕಾಣಲಿಲ್ಲ. ಕಂಡೂರು ಇವರ ಕಣ್ಣಿಗೆ ಹಾಗೂ ಮಿದುಳಿಗೆ ಶತಶತಮಾನಗಳಿಂದ ಅಂಟಿರುವ ಅಳಿಸಲಾರದ ಪೊರೆ ಕಾಣದಂತೆ ಮಾಡಿತ್ತು. ಈ ರಾಷ್ಟ್ರದ ಮೂಲನಿವಾಸಿಗಳ ದುಡಿಮೆಯ ಬೆವರನ್ನು ತಿಂದುತಾನೆ ಇವರು ತಮಗೆ ತಾವೇ ಸ್ವ-ಘೋಷಿಸಿಕೊಂಡ ಶ್ರೇಷ್ಠರು ಎಂದು ಮೆರೆದದ್ದು. ಇವರು ವೈಭವಕ್ಕೆ ಸಾಮಾನ್ಯ ಜನರ ಶಕ್ತಿ – ಶ್ರಮ – ದುಡಿಮೆ- ಬೆವರು- ಭಿಕ್ಷೆ ಆಗಲಿಲ್ಲ. ಇದು ಅವರ ಕರ್ತವ್ಯವಾಗಿತ್ತು!!!
ಆದರೆ ಇವಾಗ ಜಗತ್ತಿನ ಸಮಸಂಸ್ಕೃತಿಯ ಹರಿಕಾರರಾದ ಬಾಬಾಸಾಹೇಬ್ ಅಂಬೇಡ್ಕರ್ ಅವರ “ಸರ್ವರಿಗೂ ಸಮಪಾಲು – ಸರ್ವರಿಗೂ ಸಮಬಾಳು” ಎಂಬ ತತ್ವ ಸಿದ್ಧಾಂತವನ್ನು ಮೂಲಧಾತು ಆಗಿಸಿಕೊಂಡು ರಚನೆಗೊಂಡ ಪ್ರಪಂಚಕ್ಕೆ ಮಾದರಿಯಾದ ಸಂವಿಧಾನ ಈ ದೇಶದ ದುಡಿಯುವ ವರ್ಗದವರಿಗೆ ಸಮಸಂಸ್ಕೃತಿಯ ಸಿದ್ಧಾಂತವನ್ನು ಪ್ರತಿಪಾದನೆ ಮಾಡಿದ್ಮೇಲೆ ಇವರಿಗೆ ಅವರದಲ್ಲದ ಈ ಭಾರತ ದೇಶ “ಭಿಕ್ಷುಕ ರಾಷ್ಟ್ರ”ವಾಗಿ ಕಂಡಿತು. ಕಾಣಲೇಬೇಕು ತಾನೇ.
ಅದಕ್ಕೆ ನಾನು ಮೇಲೆ ಹೇಳಿದ್ದು “ಇವರಿಗೆ ಭಾರತದ ಭೂಪಟ (ಅವರು ಕಂಡಿರುವ ಸಾಂಪ್ರದಾಯಿಕ ಭಾರತ) ಮಾತ್ರ ಗೊತ್ತು -ಆದರೆ ಈ ಪವಿತ್ರ ಭಾರತದ ಬಾಬಾಸಾಹೇಬ ಅಂಬೇಡ್ಕರ್ ಅವರು ಅಂತರಾಳದಿಂದ ಕಂಡ ಭೂಪ್ರದೇಶ (ಬಹುಸಂಸ್ಕೃತಿಯ ಜನಾಂಗದ- ಬಹುಭಾಷೆಯ ಜನಾಂಗದ- ಬಹು ಪ್ರಾದೇಶಿಕ ವೈವಿಧ್ಯತೆಯ ಭಾರತ)ಕಿಂಚಿತ್ತು ಗೊತ್ತಿಲ್ಲ. ಖ್ಯಾತ – ಪ್ರಖ್ಯಾತ – ಅಡುಗೆಮನೆ ಖ್ಯಾತಿಯ ಸಾಹಿತಿಗಳು ಎನಿಸಿಕೊಂಡವರು ಇದನ್ನು ತಿಳಿಯುವ ಆಸಕ್ತಿಯೂ ಇಲ್ಲ ಎಂದು” ಇದರ ಸ್ವಲ್ಪವಾದರೂ ಅರಿವಿದ್ದರೆ ಮೇಲಿನ ಮಾತನ್ನು ಅವರು ಖಂಡಿತ ಹೇಳುತ್ತಿರಲಿಲ್ಲ.
ನಮ್ಮ ಮೂಲ ನಿವಾಸತ್ವದ – ಪರಂಪರೆ ಅವರಾದ ಮುತ್ತಾತ – ಮುತ್ತಜ್ಜಿ – ತಾತ – ಅಜ್ಜಿ, ನನ್ನಪ್ಪ – ನನ್ನವ್ವರಿಗೆ ಈ ದೇಶ ಎಂದೆಂದಿಗೂ ಭಿಕ್ಷುಕ ರಾಷ್ಟ್ರವಾಗಿ ಕಾಣಲು ಸಾಧ್ಯವೇ ಇಲ್ಲ. ಕನಸು ಮನಸ್ಸಿನಲ್ಲಿಯೂ ಎಂದಿಗೂ ಆ ಭಾವನೆ ಅವರಲ್ಲಿ ಕಿಂಚಿತ್ತು ನೋಡಿರುವುದಿಲ್ಲ… ಏಕೆಂದರೆ ಈ ದೇಶ ಅವರದು- ಈ ಭಾಷೆ ಅವರದು- ಈ ಭೂಮಿ ಅವರದು- ದುಡಿಮೆ ಅವರದು. ಅದಕ್ಕಾಗಿ ನನ್ನವರಿಗೆ ಇದು ಸಮೃದ್ಧಿಯ ಭಾರತ. ಅವರ ಅಂತರಾಳದ – ಒಡಲಾಳದ ದೇಶ.
ಅಸಂಸ್ಕೃತಿ ಪ್ರತಿಪಾದನೆ ಮಾಡುವವರು ಈ ದೇಶಕ್ಕೆ ಆಕ್ರಮಣ ಮಾಡಿ ತಮಗೆ ಬೇಕಾದಂತೆ “ಮನು ಸಂಸ್ಕೃತಿ” ಆಧಾರದಲ್ಲಿ ಒಡೆದಾಳುವ ನೀತಿಯ ತತ್ವ-ಸಿದ್ಧಾಂತದಲ್ಲಿ “ಅಸಂವಿಧಾನಾತ್ಮಕವಾಗಿ” ದೇಶವನ್ನು “ಅಸಾಂಸ್ಕೃತಿಕವಾಗಿ” ಆಳ್ವಿಕೆ ಮಾಡಲು ಆರಂಭಿಸಿದಾಗ ಇವರಿಗೆ ಭಾರತ ಸಮೃದ್ಧವಾಗಿತು.
ಆದರೆ… ಮೂಲಭೂತ ಹಕ್ಕುಗಳ ಆಧಾರದ ಮೇಲೆ ಸಮಸಂಸ್ಕೃತಿಯ ಸಂವಿಧಾನದಿಂದ ಇಡೀ ಭಾರತವೇ ಏಕ ಮುಷ್ಟಿಯಿಂದ ಮುನ್ನಡೆದು – ಇವರ ಪಾರಂಪರಿಕ ಅಮಾನವೀಯ – ಅಮಾನುಷ್ಯ ಸ್ವಘೋಷಿತ “ಅಲಿಖಿತ” ಹಕ್ಕುಗಳನ್ನು “ಲಿಖಿತವಾಗಿ” ಕಿತ್ತುಕೊಂಡ ಕಾರಣಕ್ಕಾಗಿ ನಮ್ಮ ಸಮೃದ್ಧ ಭಾರತ ಇವರಿಗೆ ಭಿಕ್ಷುಕ ರಾಷ್ಟ್ರವಾಗಿತ್ತು.
ಈ ಸಮೃದ್ಧ ಭಾರತಕ್ಕೆ ನನ್ನಪ್ಪನ ಕೊಡುಗೆ ಅಪಾರವಾಗಿದೆ. ನಿಮ್ಮ ಕೊಡುಗೆ ಏನು ಎಂಬುದನ್ನು ನೀವೇ ಸ್ಪಷ್ಟಪಡಿಸಿ ಭೈರಪ್ಪನವರೇ.