ಕಿರಣ್ ಗಾಜನೂರು
ಮಾನವೀಯತೆ, ತಾಯ್ತನದ ಮೂರ್ತರೂಪಿ ಪ್ರೊ. ವೆಂಕಟೇಶ್ ಮೂರ್ತಿ ನಮ್ಮೂಡನೆ ಇಲ್ಲ…! ಕಳೆದ ವಾರ ಹೋಗಿ ಮಾತನಾಡಿಸಿಕೊಂಡು ಬಂದಿದ್ದೆ, ತೀರಾ ಚಟುವಟಿಕೆಯಿಂದ ಮಾತನಾಡಿದ್ದರು…!
ನಾನು ಬೆಂಗಳೂರು ಕೇಂದ್ರ ವಿವಿಯಲ್ಲಿ ಇದ್ದಾಗ ಒಟ್ಟಿಗೆ ಒಂದು ವರ್ಷಗಳ ಕಾಲ ಕೆಲಸ ಮಾಡಿದ್ದೇವು, ಅತಿಥಿ ಉಪನ್ಯಾಸಕನಾಗಿ ಇದ್ದ ಕಾರಣ ಒಂದೂ ದಿನವೂ ನನ್ನ ಜೇಬಿನಿಂದ ಪರ್ಸ್ ತೆಗೆಯಲು ಬಿಡುತ್ತಿರಲಿಲ್ಲ, ಒಮ್ಮೊಮ್ಮೆ ಮನೆಗೆ ಡ್ರಾಪ್ ಮಾಡು ಅನ್ನೋರು ಹೋಗುವ ದಾರಿಯಲ್ಲಿ ಪೆಟ್ರೋಲ್ಬಂಕ್ನಲ್ಲಿ ಗಾಡಿಫುಲ್ ಪೆಟ್ರೋಲ್ ಹಾಕಿಸಿ ಎರಡುವಾರ ಸಾಕಾಗುತ್ತದೆ ನೋಡು ಅಂದು ನಗೋರು…! ಅದೊಂದು ಮಗುವಿನ ನಗು ಅವರು ಎಂದಿಗೂ ಯಾರನ್ನು ದ್ವೇಷಿಸಿದ್ದು ನೋಡಿಯೇ ಇಲ್ಲ…!
ಕರ್ನಾಟಕದ ಜನ-ಚಳುವಳಿಯಲ್ಲಿ ಆದರಲ್ಲೂ ಮುಖ್ಯವಾಗಿ #ಸಮುದಾಯವನ್ನು ಕಟ್ಟಿ ಬೆಳೆಸುವಲ್ಲಿ ಇವರ ಶ್ರಮ ದೊಡ್ಡದು…! .ಇವರ ಮನೆಯಲ್ಲಿ ಉಂಡು ಬೆಳೆದ ನೂರಾರು ಮಂದಿ ಇಂದು ಒಳ್ಳೋಳ್ಳೆ ಸ್ಥಾನದಲ್ಲಿ ಇದ್ದಾರೆ, ಇವರ ಮನೆ ಒಂದು ಮಾದರಿ ಅನ್ನಛತ್ರ ಎಂಬ ಮಾತುಗಳನ್ನು ಕೇಳಿದ್ದೇನೆ, ಒಮ್ಮೆ ಸ್ವತಃ ಎಳ್ಳಿಕಾಯಿ ಚಿತ್ರನ್ನ ಮಾಡಿ ಕೊಟ್ಟಿದ್ದರು..! ಎನೂ ಇಲ್ಲದೇ ಚಿತ್ರನ್ನ ಮಾಡುವುದು ಹೇಗೆ ಎಂದು ವಿವರಿಸಿ ನಕ್ಕಿದ್ದರು, ಮೊನ್ನೆ ಹೋದಾಗಲೂ ಇನ್ನೊಮ್ಮೆ ಮಾಡಿಕೊಡಿ ಸಾರ್ ಅಂದಿದ್ದೆ…! ಮಗು ನಕ್ಕು ಒಕೆ ಒಕೆ ಅಂದಿತ್ತು…!
ಯಾವಾಗ ಜೊತೆಯಿದ್ದರೂ ಪಟಪಟ ಮಾತನಾಡುವ, ತಾನು ನೋಡಿದ ಬೆಂಗಳೂರನ್ನು, ನಡೆಸಿದ ಹೋರಾಟವನ್ನು ವಿವರಿಸುವ, ಅವರ ಬ್ರಾಂಡಿನ ಸಿಗರೇಟ್ ಸಿಗುವ ಅಂಗಡಿ ಹುಡುಕುವ, ರಾತ್ರಿ ಒಮ್ಮೆಮ್ಮೊ ವಿಹಾರಧಾಮ ಕ್ಲಬ್ಬಿಗೆ ಹೋಗುವ ಮನಬಿಚ್ಚಿ ಮಾತನಾಡುವ ಟಿವಿಎಮ್ ಇಲ್ಲ ಅನ್ನುವುದು ನಂಬಲು ಸಾಧ್ಯವಿಲ್ಲ…!
ಕಳೆದ ಎರಡು ವರ್ಷಗಳ ಹಿಂದೆ ಮಗಳ ಮದುವೆ ಮಾಡಿದ್ದರು, ಆಗ ಬಂದು ನೋಡಿ ಕಿರಣ್ ನನ್ನ ಮಗಳ ಮದುವೆ ನನಗೆ ಆತ್ಮಿಯ 50 ಜನ ಸ್ನೇಹಿತರನ್ನು ಕರೆಯುವ ಉದ್ದೇಶ ಇದೆ, ನೀವು ಆ ಪಟ್ಟಿಯಲ್ಲಿ ಇಲ್ಲ ಆ ಕಾರಣಕ್ಕೆ ನಿಮಗೆ ಆಹ್ವಾನ ಇಲ್ಲ ಅಂದಿದ್ದರು…! ನಾನು ಒಕೆ ಸಾರ್ ಅಂದಿದ್ದೆ….! ಒಂದು ವಾರಬಿಟ್ಟು ಈಗ ಆಹ್ವಾನಿಸುವವರ ಮಟ್ಟಿಗೆ 100ಕ್ಕೆ ಏರಿದೆ ನನ್ನ ನೂರು ಜನ ಆತ್ಮಿಯರ ಪಟ್ಟಿಯಲ್ಲಿ ನೀವು ಇದ್ದಿರಾ ಸೊ ಮದುವೆಗೆ ಬನ್ನಿ ಅಂದಿದ್ದರು…! ನಾನು ಹೋಗಿ ಒಳ್ಳೆಯ ಊಟ ಮಾಡಿಕೊಂಡು ಬಂದಿದ್ದೆ.! ಯಾವ ಸಂಪ್ರದಾಯವೂ ಇಲ್ಲದ ಅದೊಂದು ಪ್ರಗತಿಪರ ಮದುವೆ..! ಇದು ಟಿವಿಎಮ್ ಇದ್ದ/ಬದುಕಿನ ಬಗೆ …!
ನನ್ನ ಪಾಲಿಗೆ ಅವರ ನಗು, ತೋರಿದ ತಾಯ್ತನ, ಬದುಕನ್ನು ಅವರು ಅನುಭವಿಸಿದ ರೀತಿ ಎಲ್ಲವೂ ಪಾಠಗಳೇ…! ಹೋಗಿಬನ್ನಿ ಸಾರ್…! ನಿಮ್ಮ ನಗು ಚಿರಕಾಲ ನನ್ನೊಂದಿಗೆ ಉಳಿಯಲಿದೆ…!