ಸಲ್ಮಾನ್ ಖುರ್ಷಿದ್ ಪುಸ್ತಕ ಪ್ರಸಾರ ನಿಲ್ಲಿಸಲಾಗುವುದಿಲ್ಲ: ದೆಹಲಿ ನ್ಯಾಯಾಲಯ

ನವದೆಹಲಿ: ಮಾಜಿ ಕೇಂದ್ರ ಸಚಿವ, ಕಾಂಗ್ರೆಸ್ ನಾಯಕ, ಹಿರಿಯ ವಕೀಲ ಸಲ್ಮಾನ್ ಖುರ್ಷಿದ್ ಅವರು ಬರೆದಿರುವ ʼಸನ್‌ರೈಸ್ ಓವರ್ ಅಯೋಧ್ಯಾʼ ಪುಸ್ತಕದ ಪ್ರಸಾರ, ಪ್ರಕಟಣೆ, ವಿತರಣೆ ಹಾಗೂ ಮಾರಾಟದ ವಿರುದ್ಧ ಮಧ್ಯಂತರ ತಡೆಯಾಜ್ಞೆ ನೀಡಲು ದೆಹಲಿ ನ್ಯಾಯಾಲಯ ನಿರಾಕರಿಸಿದೆ.

ಹಿಂದೂ ಸೇನೆಯ ಅಧ್ಯಕ್ಷ ವಿಷ್ಣು ಗುಪ್ತಾ ಅವರು ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ವಾದ-ಪ್ರತಿವಾದವನ್ನು ಆಲಿಸಿದ ದೆಹಲಿ ನ್ಯಾಯಾಲಯದ ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಪ್ರೀತಿ ಪರೇವಾ ತಡೆಯಾಜ್ಷೆ ನೀಡಲು ನಿರಾಕರಿಸಿದ್ದಾರೆ.

ʻಸನ್​ರೈಸ್​​ ಓವರ್​ ಆಯೋಧ್ಯಾʼ ಪುಸ್ತಕದರಲ್ಲಿರುವ ಕೆಲವು ಅಂಶಗಳ ಬಗ್ಗೆ ಆಕ್ಷೇಪವ್ಯಕ್ತಡಿಸಿರುವ ವಿಷ್ಣು ಗುಪ್ತಾ ಪುಸ್ತಕದ ಪ್ರಕಟಣೆ, ಪ್ರಸಾರ ಮತ್ತು ಮಾರಾಟವನ್ನು ನಿಲ್ಲಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನವನ್ನು ಕೊಡುವಂತೆ ಕೋರಿದ್ದರು.

ಸಿವಿಲ್ ನ್ಯಾಯಾಧೀಶೆ ಪ್ರೀತಿ ಪರೇವಾ  “ಪುಸ್ತಕ ಬರೆಯುವ/ಪ್ರಕಟಿಸುವ ಹಕ್ಕು ಪ್ರತಿವಾದಿಗಳಿಗೆ ಇದೆ. ಪುಸ್ತಕದಲ್ಲಿ ಇವೆ ಎನ್ನಲಾದ ಆಕ್ಷೇಪಾರ್ಹ ಅಂಶಗಳಿಂದ ತನಗೆ ಅನಾನುಕೂಲ ಉಂಟಾಗುತ್ತದೆ ಎಂದು ಸಾಬೀತಪಡಿಸಲು ಫಿರ್ಯಾದಿಗೆ ಸಾಧ್ಯವಾಗಿಲ್ಲ. ಮತ್ತೊಂದೆಡೆ, ತಡೆಯಾಜ್ಞೆ ನೀಡಿದರೆ ಅದು ಪ್ರಕಾಶಕರಿಗೆ ತೊಂದರೆ ಉಂಟುಮಾಡುತ್ತದೆ. ಜೊತೆಗೆ ಲೇಖಕರ ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನು ಮೊಟಕುಗೊಳಿಸುತ್ತದೆ” ಎಂದು ಹೇಳಿದ್ದಾರೆ.

ಸಲ್ಮಾನ್‌ ಖುರ್ಷಿದ್‌ ಅವರ ಪುಸ್ತಕದಲ್ಲಿ ಹಿಂದುತ್ವ ಮತ್ತು ಐಸಿಸ್‌ ಸಂಘಟನೆಗಳ ವಿವರ ಇರುವುದರ ಬಗ್ಗೆ ಕೆಲವು ಆಕ್ಷೇಪವನ್ನು ವ್ಯಕ್ತಪಡಿಸಿದ್ದಲ್ಲದೆ, ಕೆಲ ದುಷ್ಕರ್ಮಿಗಳು ಖುರ್ಷಿದ್‌ ಅವರ ನೈನಿತಾಲ್‌ ಮನೆಯನ್ನು ಧ್ವಂಸಗೊಳಿಸಿದ್ದರು.

Donate Janashakthi Media

Leave a Reply

Your email address will not be published. Required fields are marked *