ನವದೆಹಲಿ: ಕರ್ನಾಟಕ ರಾಜ್ಯದ ಹಾನಗಲ್, ಸಿಂದಗಿ ವಿಧಾನಸಭಾ ಸೇರಿದಂತೆ ದೇಶದಲ್ಲಿ ಇಂದು (ಅಕ್ಟೋಬರ್ 30) ಉಪಚುನಾವಣೆ ನಡೆದಿದೆ. 13 ರಾಜ್ಯ ಹಾಗೂ ಒಂದು ಕೇಂದ್ರಾಡಳಿತ ಪ್ರದೇಶ ಸೇರಿ ಒಟ್ಟು 29 ವಿಧಾನಸಭಾ ಕ್ಷೇತ್ರಗಳು, ಮೂರು ಲೋಕಸಭಾ ಕ್ಷೇತ್ರಗಳಿಗೆ ಮತದಾರರು ತಮ್ಮ ಮತವನ್ನು ಚಲಾಯಿಸಿದ್ದಾರೆ.
ಸಂಜೆ 5.00 ಗಂಟೆಯವರೆಗಿನ ಮಾಹಿತಿಯಂತೆ….
ಅಸ್ಸಾಂ ರಾಜ್ಯದ 5 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಚುಣಾವಣೆಯಲ್ಲಿ ಸರಾಸರಿ ಶೇಕಡಾ 69ಕ್ಕಿಂತ ಹೆಚ್ಚಿನ ಮತದಾರರು ತಮ್ಮ ಮತವನ್ನು ಚಲಾಯಿಸಿದ್ದಾರೆ. ಗೊಸ್ಸೈಗಾಂವ್ ವಿಧಾನಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು ಅಂದರೆ, ಶೇಕಡಾ 76.71 ರಷ್ಟು ಮತದಾನವಾಗಿದೆ. ನಂತರದ ಸ್ಥಾನಗಳಲ್ಲಿ ಥೌರಾ (ಶೇ 75.07), ಭಬಾನಿಪುರ (ಶೇ 74), ತಮುಲ್ಪುರ್ (ಶೇ 62) ಮತ್ತು ಮರಿಯಾನಿ (ಶೇ 61.62) ರಾಜ್ಯ ಮುಖ್ಯ ಚುನಾವಣಾಧಿಕಾರಿಯ ಅಧಿಕಾರಿ ಅಧಿಕಾರಿಗಳ ಕಚೇರಿ ತಿಳಿಸಿದೆ.
ಐದು ಕ್ಷೇತ್ರಗಳಲ್ಲಿ ಯಾವುದೇ ಅಹಿತಕರ ಘಟನೆಗಳು ವರದಿಯಾಗಿಲ್ಲ ಎಂದು ತಿಳಿದುಬಂದಿದೆ. 1,176 ಮತಗಟ್ಟೆಗಳಲ್ಲಿ ಕೇಂದ್ರ ಸಶಸ್ತ್ರ ಪೊಲೀಸ್ ಪಡೆ (ಸಿಎಪಿಎಫ್) ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದವು.
ಮಧ್ಯಪ್ರದೇಶ ರಾಜ್ಯದಲ್ಲಿ 3 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಸರಾಸರಿ ಶೇ.63.02ರಷ್ಟು ಮತ್ತು ಖಾಂಡ್ವಾ ಲೋಕಸಭಾ ಕ್ಷೇತ್ರದಲ್ಲಿ ಶೇ,59.02% ಮತದಾನವಾಗಿದೆ.
ಜೋಬಾತ್, ಪೃಥ್ವಿಪುರ ಮತ್ತು ರಾಯಗಾಂವ್ ವಿಧಾನಸಭಾ ಕ್ಷೇತ್ರಗಳಲ್ಲಿ ಕ್ರಮವಾಗಿ ಶೇ.50.9, ಶೇ.76.05 ಮತ್ತು ಶೇ.66.66ರಷ್ಟು ಮತದಾನವಾಗಿದೆ.
ಮಧ್ಯಪ್ರದೇಶದ ಖಾಂಡ್ವಾ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ಮತ್ತು ಪ್ರತಿಪಕ್ಷ ಕಾಂಗ್ರೆಸ್ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ.
ದಾದ್ರಾ ಮತ್ತು ನಗರ ಹವೇಲಿಯಲ್ಲಿ ಲೋಕಸಭಾ ಕ್ಷೇತ್ರ ಉಪಚುನಾವಣೆ ಪ್ರಕ್ರಿಯೆಯಲ್ಲಿ ಶೇ.70% ಮತದಾನವಾಗಿದೆ
. ಸ್ಥಳೀಯರು ಉತ್ಸಾಹದಿಂದ ಮತದಾನ ಕೇಂದ್ರಗಳತ್ತ ಆಗಮಿಸಿ ಮತದಾನ ಮಾಡಿದ್ದಾರೆ.
ಬಿಹಾರದ ಎರಡು ವಿಧಾನಸಭೆಗಳಿಗೆ ಅಂದರೆ, ದರ್ಭಾಂಗ (ಕುಶೇಶ್ವರ ಆಸ್ಥಾನ) ಶೇ.49.60 ಹಾಗೂ ಮುಂಗೇರ್ (ತಾರಾಪುರ) ಶೇ. 50.05 ಮತದಾರರನ್ನು ತಮ್ಮ ಹಕ್ಕು ಚಲಾಯಿಸಿದ್ದಾರೆ.
ಹಿಮಾಚಲ ಪ್ರದೇಶದ ಜುಬ್ಬಲ್-ಕೋಟ್ಖೈ ವಿಧಾನಸಭಾ ಕ್ಷೇತ್ರಕ್ಕೆ 65.88 ರಷ್ಟು, ಫತೇಪುರ್ ಮತ್ತು ಅರ್ಕಿಯಲ್ಲಿ ಕ್ರಮವಾಗಿ ಶೇಕಡಾ 54.73 ಮತ್ತು ಶೇಕಡಾ 53.97 ರಷ್ಟು ಮತದಾನವಾಗಿದೆ. ಬೆಳಿಗ್ಗೆ 8 ಗಂಟೆಗೆ ಆರಂಭವಾದ ಮತದಾನ ಸಂಜೆ 4 ಗಂಟೆಯವರೆಗೆ ಮಂಡಿ ಲೋಕಸಭಾ ಕ್ಷೇತ್ರದಲ್ಲಿ ಶೇಕಡಾ 47.17 ರಷ್ಟು ಮತದಾನವಾಗಿದೆ.
ಮಧ್ಯಾಹ್ನದವರೆಗೂ ನಿರಸವಾಗಿದ್ದ ಮತದಾನ ಪ್ರಕ್ರಿಯೆ, ಮಧ್ಯಾಹ್ನದ ನಂತರ ಬಿರುಸುಗೊಂಡಿದೆ.