- 400ಕ್ಕೂ ಹೆಚ್ಚಿನ ಮಂದಿಗೆ ೨೨ ಕೋಟಿ ರೂ ವಂಚನೆ
- ಪ್ರಕರಣ ಭೇಧಿಸಿದ ಮೈಸೂರು ರೈಲ್ವೆ ಸಂರಕ್ಷಣಾ ಪಡೆ
ಮೈಸೂರು: ರೈಲ್ವೆ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ 400ಕ್ಕೂ ಹೆಚ್ಚು ಮಂದಿಯನ್ನು ವಂಚಿಸಿ 22 ಕೋಟಿ ರೂ.ಗಳ ದಂಧೆ ಬೇಧಿಸಿರುವ ಮೈಸೂರು ರೈಲ್ವೆ ಸಂರಕ್ಷಣಾ ಪಡೆ ಇಬ್ಬರೂ ಖತರನಾಕ್ ಆರೋಪಗಳನ್ನು ಬಂಧಿಸಿದ್ದಾರೆ.
ಮೈಸೂರಿನ ಚಂದ್ರಗೌಡ ಎಸ್ ಪಾಟೀಲ್(44) ಮತ್ತು ಗದಗದ ನಿವೃತ್ತ ರೈಲ್ವೆ ನೌಕರ ಶಿವಸ್ವಾಮಿ(62) ಎಂಬ ಇಬ್ಬರು ಆರೋಪಿತರನ್ನು ವಶಕ್ಕೆ ಪಡೆದುಕೊಂಡಿರುವ ಮೈಸೂರು ವಿಭಾಗದ ರೈಲ್ವೆ ಸಂರಕ್ಷಣಾ ಪಡೆಯ ವಿಭಾಗೀಯ ಭದ್ರತಾ ಪಡೆ ಮುಂದಿನ ಕ್ರಮಕ್ಕೆ ಮಂಡಿ ಠಾಣೆಗೆ ಪ್ರಕರಣವನ್ನು ಒಪ್ಪಿಸಿದೆ.
ಸಿನಿಮಯ ಪ್ರಕರಣ: ಮೈಸೂರಿನ ರೈಲ್ವೆ ಆಸ್ಪತ್ರೆಯ ಆವರಣದಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿರುವ ಹಾಗೂ ಛಾಯಾಚಿತ್ರ ತೆಗೆಯುತ್ತಿರುವ ಕೆಲವು ವ್ಯಕ್ತಿಗಳ ಚಲನವಲನದ ಬಗ್ಗೆ ಹಾಗೂ ಸಂಶಯಾಸ್ಪದವಾಗಿ ವರ್ತಿಸುತ್ತಿರುವ ಬಗ್ಗೆ ಮೈಸೂರಿನ ಮುಖ್ಯ ವೈದ್ಯಕೀಯ ಅಧೀಕ್ಷಕರಿಂದ ದೂರು ದಾಖಲಾಗಿತ್ತು. ಇದರ ಆಧಾರದ ಮೇಲೆ ಮೈಸೂರು ವಿಭಾಗದ ರೈಲ್ವೆ ಸಂರಕ್ಷಣಾ ಪಡೆಯ ವಿಭಾಗೀಯ ಭದ್ರತಾ ಆಯುಕ್ತ ಥಾಮಸ್ ಜಾನ್, ಸಹಾಯಕ ಭದ್ರತಾ ಆಯುಕ್ತ ಎ. ಶ್ರೀಧರ್ ಮಾರ್ಗದರ್ಶನದಲ್ಲಿ ಇನ್ಸ್ಪೆಕ್ಟರ್ ಗಳಾದ ಸತೀಶನ್, ಎಂ ನಿಶಾದ್, ವೆಂಕಟೇಶ್, ರಾಧಾಕೃಷ್ಣ ಇತರೆ ಸಿಬ್ಬಂದಿಗಳು ಸಂಶಯಾಸ್ಪದರ ಮೇಲೆ ನಿಗಾ ವಹಿಸಿ ಕಾರ್ಯಾಚರಣೆಗೆ ಇಳಿದಿದ್ದಾರೆ.
ಈ ವೇಳೆ ಆರೋಪಿತರ ಚಟುವಟಿಕೆಗಳ ಮೇಲೆ ನಿಕಟವಾದ ಕಣ್ಣಿಟ್ಟಿದ್ದು, ಇವರೆಲ್ಲಾ ಯುವ ಉದ್ಯೋಗಾಕಾಂಕ್ಷಿಗಳಿಗೆ ಲಾಭದಾಯಕ ರೈಲ್ವೆ ಉದ್ಯೋಗಗಳ ಸುಳ್ಳು ಭರವಸೆ ನೀಡುವ ನಕಲಿ ರೈಲ್ವೆ ನೇಮಕಾತಿ ದಂಧೆಯನ್ನು ನಡೆಸುತ್ತಿರುವುದು ದೃಢಪಡಿಸಿಕೊಂಡಿದ್ದಾರೆ.
ಈ ಹಿನ್ನೆಲೆಯಲ್ಲಿ ಮೈಸೂರಿನ ಹೈವೇ ಸರ್ಕಲ್ ಬಳಿಯ ಶಿವ ಶಕ್ತಿ ಕಲ್ಯಾಣ ಮಂಟಪದ ಎದುರಿನ ಮನೆಯೊಂದರಲ್ಲಿ ಈ ತಂಡದ ಕಾರ್ಯಾಚರಣೆ ಕೇಂದ್ರ ಮಾಡಿಕೊಂಡಿದ್ದರು. ಮುಖ್ಯವಾಗಿ ಬಡ ಮತ್ತು ಮುಗ್ಧ ಹಳ್ಳಿ ಹುಡುಗರಾಗಿದ್ದು ಉದ್ಯೋಗ ಆಕರ್ಷಿತ ಅಭ್ಯರ್ಥಿಗಳ ಮೂಲ ಶೈಕ್ಷಣಿಕ ಪ್ರಮಾಣಪತ್ರಗಳನ್ನು ಸಂಗ್ರಹಿಸಿ ನಕಲಿ ಕರ ಪತ್ರಗಳು, ನಕಲಿ ವೈದ್ಯಕೀಯ ಜ್ಞಾಪನ ಪತ್ರಗಳು ಮತ್ತು ನಕಲಿ ನೇಮಕಾತಿ ಆದೇಶಗಳನ್ನು ನೀಡುತ್ತಿದ್ದರು. ಈ ತಂಡ ಸುಳ್ಳು ಭರವಸೆ ನೀಡಿ ಉದ್ಯೋಗ ಆಕಾಂಕ್ಷಿಗಳಿಂದ ದೊಡ್ಡ ಮೊತ್ತದ ಹಣವನ್ನು ಪಡೆಯುತ್ತಿತ್ತು ತನಿಖೆ ವೇಳೆ ಕಂಡು ಬಂದಿದೆ.
ಸುಮಾರು 400 ಅಭ್ಯರ್ಥಿಗಳಿಂದ 22 ಕೋಟಿ ರೂ.ಗಳಷ್ಟು ಹಣ ಕೊಟ್ಟು ಜನ ಮೋಸ ಹೋಗಿದ್ದು, ಹಲವು ಗ್ರಾಮೀಣ ಮಂದಿ ತಮ್ಮ ಭೂಮಿ ಮಾರಿ ಹಾಗೂ ಬಡ್ಡಿ ಸಾಲವನ್ನು ಹಣ ನೀಡಿದ್ದಾರೆ ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಒಟ್ಟು 221 ಸಹಿ ಮಾಡಿರುವ ಖಾಲಿ ಚೆಕ್ ಗಳು ಹಾಗೂ 4,15,000 ರೂ. ನಗದು, ಆಕಾಂಕ್ಷಿ ಅಭ್ಯರ್ಥಿಗಳ ಮೂಲ ದಾಖಲೆಗಳು, ಚೆಕ್ ಪುಸ್ತಕಗಳು, ಸುಮಾರು 100 ನಕಲಿ ರೈಲ್ವೆ ನೇಮಕಾತಿ ಆದೇಶಗಳು, 70 ಟಿಟಿಇಗಳ ನಕಲಿ ನಾಮಫಲಕಗಳು, ಒಂದು ಲ್ಯಾಪ್ಟಾಪ್, ಒಂದು ಕಂಪ್ಯೂಟರ್ ಸೇರಿ ಇನ್ನಿತರ ವಸ್ತುಗಳನ್ನು ತಂಡದಿಂದ ವಶಪಡಿಸಿಕೊಳ್ಳಲಾಗಿದೆ.
ಮೈಸೂರಿನ ಸಂರಕ್ಷಣಾ ದಳವು ತ್ವರಿತ ಮತ್ತು ಕ್ಷಿಪ್ರ ಕಾರ್ಯಾಚರಣೆಯೊಂದಿಗೆ ರೈಲ್ವೆಯಲ್ಲಿ ನಕಲಿ ನೇಮಕಾತಿಯನ್ನು ಒಳಗೊಂಡ ದೊಡ್ಡ ದಂಧೆಯನ್ನು ಭೇದಿಸಿದ್ದು, ವಶಪಡಿಸಿಕೊಂಡ ಸಾಮಗ್ರಿಗಳೊಂದಿಗೆ ಆರೋಪಿಗಳನ್ನು ಅಗತ್ಯ ಕಾನೂನು ಪ್ರಕ್ರಿಯೆಯನ್ನು ಪ್ರಾರಂಭಿಸಲು ಮಂಡಿ ಮೊಹಲ್ಲಾದ ಸರ್ಕಲ್ ಇನ್ಸ್ಪೆಕ್ಟರ್ ಅವರಿಗೆ ಪ್ರಕರಣವನ್ನು ಹಸ್ತಾಂತರಿಸಿದೆ. ಈ ಸಂಬಂಧಿತ ಪ್ರಕರಣವನ್ನು ಮೈಸೂರು ಮಂಡಿ ಪೊಲೀಸ್ ಠಾಣೆಯಲ್ಲಿ ಐಪಿಸಿ 464, 419, 420, 465, 468, 471 ಇತರೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಮೈಸೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ರಾಹುಲ್ ಅಗರ್ವಾಲ್ ರವರು ಮೈಸೂರಿನ ರೈಲ್ವೆ ಸಂರಕ್ಷಣಾ ಪಡೆಯ ತ್ವರಿತ ಕ್ರಮಕ್ಕಡ ಅಭಿನಂದನೆ ಸಲ್ಲಿಸಿದ್ದಾರೆ.
ರೈಲ್ವೆ ನೇಮಕಾತಿಗೆ ಸಂಬಂಧಿಸಿದಂತೆ ಯಾವುದೇ ಸೂಚನೆ / ಮಾಹಿತಿಗಾಗಿ ಆಕಾಂಕ್ಷಿ ಅಭ್ಯರ್ಥಿಗಳು ರೈಲ್ವೆ ನೇಮಕಾತಿ ಮಂಡಳಿಗಳ (RRBs) ಅಧಿಕೃತ ವೆಬ್ಸೈಟ್ಗಳಿಗೆ ಮಾತ್ರ ಭೇಟಿ ನೀಡಬೇಕು ಎಂದು ಮನವಿ ಮಾಡಿದ್ದು, ರೈಲ್ವೆ ನೇಮಕಾತಿ ಮಂಡಳಿಗಳ ಬಗ್ಗೆ ಅಥವಾ ಹಣದ ಪರಿಗಣನೆಗಾಗಿ ಕೆಲವು ವ್ಯಕ್ತಿಗಳು ನೀಡುತ್ತಿರುವ ಜಾಹೀರಾತಿನ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗುತ್ತಿರುವ ಯಾವುದೇ ಮಾಹಿತಿ / ಸೂಚನೆಗಳನ್ನು ತಕ್ಷಣವೇ ನಿರ್ಲಕ್ಷಿಸಿ.
– ರಾಹುಲ್ ಅಗರ್ವಾಲ್,ವ್ಯವಸ್ಥಾಪಕ, ಮೈಸೂರು ವಿಭಾಗದ ವಿಭಾಗೀಯ ರೈಲ್ವೆ.
Namgu mossa hogide avarida
Navu yarige helbiku