ತುಮಕೂರು: ಸಿಂದಗಿ ವಿಧಾನಸಭಾ ಕ್ಷೇತ್ರಕ್ಕೆ ನಡೆಯುತ್ತಿರುವ ಉಪಚುನಾವಣೆಗೆ ಮತದಾನದ ಕಡೆಯ ಮೂರು ದಿನಗಳ ಚುನಾವಣಾ ಪ್ರಚಾರ ಬಾಕಿ ಇದ್ದು, ಬಿಜೆಪಿ ಮತ್ತು ಕಾಂಗ್ರೆಸ್‌ನಿಂದ ಭಾರೀ ಪ್ರಮಾಣದ ಹಣ ಹಂಚಿಕೆಯಾಗುವ ಸಾಧ್ಯತೆ ಇದೆ ಎಂದು ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಆತಂಕ ವ್ಯಕ್ತಪಡಿಸಿದ್ದಾರೆ.
ಒಂದು ವಾರ ಸಿಂದಗಿ ಕ್ಷೇತ್ರದಲ್ಲಿಯೇ ಉಳಿದು ಪ್ರಚಾರದಲ್ಲಿ ಭಾಗಿಯಾಗಿದ್ದ ದೇವೇಗೌಡರು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿ ʻತಾನು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಮಾತನಾಡಿದ್ದ ನೀರಾವರಿ ಯೋಜನೆಗಳ ಬಗ್ಗೆ ಮಾತನಾಡಲು ಆರಂಭಿಸಿದ್ದು, ಜೆಡಿಎಸ್ ಅಭ್ಯರ್ಥಿ ನಜಿಯಾ ಶಕೀಲ್ ಅಹಮದ್ ಅಂಗಡಿ ಗೆಲ್ಲುವ ಉತ್ತಮ ಅವಕಾಶವಿದೆ ಎಂದರು. ಲೋಕೋಪಯೋಗಿ ಸಚಿವರಾಗಿ ವಿಜಯಪುರದ ಕೃಷ್ಣಾ ನದಿಗೆ ಅಡ್ಡಲಾಗಿ 845 ಬ್ರಿಡ್ಜ್ ಗಳನ್ನು ನಿರ್ಮಾಣ ಮಾಡುವಲ್ಲಿ ತಾವು ಪ್ರಮುಖ ಪಾತ್ರ ವಹಿಸಿರುವುದಾಗಿ ತಿಳಿಸಿದರು.
ಬಿಜೆಪಿ ಮತ್ತು ಕಾಂಗ್ರೆಸ್‌ನಂತೆ ಜೆಡಿಎಸ್‌ಗೆ ಆರ್ಥಿಕ ಬೆಂಬಲವಿಲ್ಲ. ನಾನು 25 ಪ್ರಮುಖ ಗ್ರಾಮಗಳನ್ನು ಸುತ್ತಾಡಿದ್ದು, ಮತದಾರರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ನಾನು ಅಕ್ಟೋಬರ್ 27 ರವರೆಗೆ ಇರುತ್ತೇನೆ ಮತ್ತು ಕೊನೆಯ ಮೂರು ದಿನಗಳಲ್ಲಿ ಏನಾಗುತ್ತದೆ ಎಂದು ನನಗೆ ತಿಳಿದಿಲ್ಲ,” ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಇದನ್ನು ಚುನಾವಣಾ ಆಯೋಗದ ಗಮನಕ್ಕೆ ತರುತ್ತೀರಾ ಎಂಬ ಪ್ರಶ್ನೆಗೆ, ಪ್ರಯೋಜನವಾಗುವುದಿಲ್ಲ ಎಂದು ಅಭಿಪ್ರಾಯಪಟ್ಟರು.
“ಉತ್ತರ ಕರ್ನಾಟಕದಲ್ಲಿ ನಮಗೆ ಯಾವುದೇ ನೆಲೆಯಿಲ್ಲ ಎಂದು ಪ್ರತಿಸ್ಪರ್ಧಿಗಳು ಹೇಳಬಹುದು. ಆದರೆ ನಾವೇ ಬೆಳೆಸಿದ ದಿವಂಗತ ಎಂಸಿ ಮನಗೂಳಿ ಅವರ ಮಗನನ್ನು ಕಾಂಗ್ರೆಸ್ ಏಕೆ ಸೇರಿಸಿಕೊಂಡಿತು ಎಂದು ಪ್ರಶ್ನಿಸಿದರು.
ಚಾಮುಂಡೇಶ್ವರಿ ಶಾಸಕ ಜಿ ಟಿ ದೇವೇಗೌಡ ಜೆಡಿಎಸ್ ಪಕ್ಷ ಬಿಡದಂತೆ ಪಕ್ಷದ ನಾಯಕತ್ವ ಮನವೊಲಿಸಿದ್ದಾರೆ ಎಂದು ಹೇಳಿದರು. “ನನ್ನ ಮೊಮ್ಮಗ ಮತ್ತು ಜಿಟಿ ದೇವೇಗೌಡರ ಮಗ ಹರೀಶ್ ಭೇಟಿಯಾಗಿ ಒಟ್ಟಿಗೆ ಊಟ ಮಾಡಿ ಮಾತುಕತೆಯಾಡಿದ್ದಾರೆ. ಹರೀಶ್ ಅವರಿಗೆ ರಾಜಕೀಯದಲ್ಲಿ ಉತ್ತಮ ನಿರೀಕ್ಷೆಗಳಿವೆ. ತಪ್ಪುಗಳು ಸಂಭವಿಸಿದಲ್ಲಿ, ಅವುಗಳನ್ನು ಸರಿಪಡಿಸಿಕೊಂಡು ನಾವು ಮುಂದುವರಿಯಬೇಕು”ಎಂದು ಅವರು ಹೇಳಿದ್ದಾರೆ.