ಪಾಕ್‌ ವಿರುದ್ಧ ಭಾರತಕ್ಕೆ ಸೋಲು, ಪಂದ್ಯ ಗೆದ್ದು ಇತಿಹಾಸ ನಿರ್ಮಿಸಿದ ಪಾಕ್

  • ವಿಶ್ವಕಪ್‌ನಲ್ಲಿ ಭಾರತದ ವಿರುದ್ಧ ಪಾಕ್‌ ಗೆ ಮೊದಲ ಗೆಲವು
  • ಆರಂಭಿಕ ಬ್ಯಾಟ್ಸ್‌ಮನ್‌ಗಳ ವೈಫಲ್ಯ
  • ಮುಂದಿನ ಪಂದ್ಯಗಳಲ್ಲಿ ಭಾರತ ಗೆಲ್ಲಲೇಬಾಕದ ಒತ್ತಡ

 

ದುಬೈ : ವಿಶ್ವಕಪ್ ಪಂದ್ಯಾವಳಿಗಳಲ್ಲಿ ಭಾರತ ವಿರುದ್ಧ ಸತತ ಸೋಲುಗಳ ಸರಪಳಿಗಳಿಂದ ಪಾಕಿಸ್ತಾನ ಕೊನೆಗೂ ಬಿಡಿಸಿಕೊಳ್ಳಲು ಯಶಸ್ವಿಯಾಗಿದೆ. ಇಂದು ನಡೆದ ಸೂಪರ್-12 ಎರಡನೇ ಗುಂಪಿನ ಪಂದ್ಯದಲ್ಲಿ ಭಾರತ ವಿರುದ್ಧ ಪಾಕಿಸ್ತಾನ 10 ವಿಕೆಟ್​ಗಳಿಂದ ಜಯಭೇರಿ ಭಾರಿಸಿತು.

ದುಬೈ ಇಂಟರ್​ನ್ಯಾಷನಲ್​​​ ಸ್ಟೇಡಿಯಂನಲ್ಲಿ ನಡೆದ ಬಹುನಿರೀಕ್ಷಿತ ಐಸಿಸಿ ಟಿ-20 ವಿಶ್ವಕಪ್​​ ಟೂರ್ನಿಯ ಮೊದಲ ಪಂದ್ಯದಲ್ಲಿ ಭಾರತ ನೀಡಿದ ಟಾರ್ಗೆಟ್​ ಬೆನ್ನತ್ತಿದ ಪಾಕ್​​​​  ವಿಕೆಟ್​​ ನಷ್ಟವಿಲ್ಲದೆ 17.5 ಓವರ್​​​ಗಳಲ್ಲಿ 152 ರನ್​​​ ಗಳಿಸುವ ಮೂಲಕ ಗೆಲುವು ಕಂಡರು.

ಭಾರತದ ಬ್ಯಾಟಿಂಗ್ ವೈಫಲ್ಯ: ಟಾಸ್​​ ಸೋತು ಮೊದಲು ಬ್ಯಾಟಿಂಗ್​​ ಮಾಡಿದ ಭಾರತ ತಂಡ 7 ವಿಕೆಟ್​​ ನಷ್ಟಕ್ಕೆ 152 ರನ್​​ಗಳ ಸಾಧಾರಣ ಮೊತ್ತ ಟಾರ್ಗೆಟ್​​ ನೀಡಿತ್ತು.

ಆರಂಭದಲ್ಲೇ ಬ್ಯಾಕ್​​ ಟು ಬ್ಯಾಟ್​​​ ವಿಕೆಟ್​​ ಕಳೆದುಕೊಂಡರೂ ಸಹ ಕ್ಯಾಪ್ಟನ್​​​ ವಿರಾಟ್​​ ಕೊಹ್ಲಿ ಅರ್ಧಶತಕದ ಸಹಾಯದಿಂದ ಹಾಗೂ ರಿಷಬ್ ಪಂತ್ ರ ಸಮಯೋಚಿತ ಆಟದಿಂದ 151 ರನ್​​ ಪೇರಿಸಿತ್ತು.

ಶಾಹೀನ್ ಅಫ್ರಿದಿ ಅವರು ತಮ್ಮ ಮೊದಲ ಓವರ್​ನಲ್ಲೇ ರೋಹಿತ್ ಶರ್ಮಾ ಅವರನ್ನ ಔಟ್ ಮಾಡಿದರು. ಅಫ್ರಿದಿ ತಮ್ಮ ಎರಡನೇ ಓವರ್​ನಲ್ಲಿ ಕೆಎಲ್ ರಾಹುಲ್ ಅವರನ್ನೂ ಔಟ್ ಮಾಡಿದರು. ನಂತರ ಸೂರ್ಯಕುಮಾರ್ ಯಾದವ್ ಕೂಡ ಹೆಚ್ಚು ರನ್ ಗಳಿಸದೇ ಪೆವಿಲಿಯನ್​ಗೆ ಮರಳಿದರು. ಭಾರತದ ಪರ ಕೆ.ಎಲ್​ ರಾಹುಲ್​​ 3, ವಿರಾಟ್​​ ಕೊಹ್ಲಿ 57, ಸೂರ್ಯಕುಮಾರ್​ ಯಾದವ್​​ 11, ರಿಷಭ್​​ ಪಂತ್​​ 39, ರವೀಂದ್ರ ಜಡೇಜಾ 13, ಹಾರ್ದಿಕ್​​ ಪಾಂಡ್ಯ 11 ರನ್​​ ಗಳಿಸಿದರು.

ಇನ್ನು, ಪಾಕ್​​ ಪರ ತಾಳ್ಮೆಯಿಂದಲೇ ಆಟವಾಡಿದ​ ನಾಯಕ ಬಾಬರ್​​ ಅಜಂ 68, ಮೊಹಮ್ಮದ್​​ ರಿಜ್ವಾನ್​​ 79 ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.

Donate Janashakthi Media

Leave a Reply

Your email address will not be published. Required fields are marked *