ಭಾರತೀಯ ಸೇನಾ ಸಿಬ್ಬಂದಿ ಕಾರ್ಯಾಚರಣೆ : 6 ಉಗ್ರರ ಹತ್ಯೆ

ರಾಜೌರಿ: ಜಮ್ಮು ಕಾಶ್ಮೀರದ ರಾಜೌರಿ ವಲಯದಲ್ಲಿನ ಕಾಡಿನಲ್ಲಿ ಭಾರತೀಯ ಸೇನಾ ಸಿಬ್ಬಂದಿ ಎನ್​ಕೌಂಟರ್ ಕಾರ್ಯಾಚರಣೆ ಮುಂದುವರೆಸಿದ್ದಾರೆ.

ಪಾಕಿಸ್ತಾನ ಮೂಲದ ಲಷ್ಕರ್-ಇ-ತೊಯ್ಬಾ (ಎಲ್​ಇಟಿ) ಸಂಘಟನೆಯ 6 ಉಗ್ರರನ್ನು ಭಾರತೀಯ ಸೈನಿಕರು ಹತ್ಯೆ ಮಾಡಿದ್ದಾರೆ.

ರಾಜೌರಿಯ ದಟ್ಟ ಕಾಡಿನಲ್ಲಿ ಉಗ್ರರು ಮತ್ತು ಭಾರತೀಯ ಸೇನೆಯ ನಡುವೆ ಗುಂಡಿನ ಚಕಮಕಿ ಮುಂದುವರೆದಿದೆ. ಕಳೆದೊಂದು ವಾರದಿಂದ ಕಾಶ್ಮೀರ ಕಣಿವೆಯಲ್ಲಿ ಭಾರತೀಯ ಸೇನೆ ಮತ್ತು ಕಾಶ್ಮೀರದ ಪೊಲೀಸರಿಂದ ಎನ್​ಕೌಂಟರ್ ಕಾರ್ಯಾಚರಣೆ ನಡೆಯುತ್ತಿದೆ. ಈಗಾಗಲೇ ಹಲವು ಉಗ್ರರನ್ನು  ಕೊಲ್ಲಲಾಗಿದ್ದು, ಕೆಲವು ಸೈನಿಕರು ಕೂಡ ಹುತಾತ್ಮರಾಗಿದ್ದಾರೆ. ಇದೇ ರಾಜೌರಿ ಅರಣ್ಯದಲ್ಲಿ 9 ಭಾರತೀಯ ಯೋಧರನ್ನು ಉಗ್ರರನ್ನು ಹತ್ಯೆ ಮಾಡಿದ್ದರು. ಅದಕ್ಕೆ ಪ್ರತಿಯಾಗಿ ಎನ್​ಕೌಂಟರ್ ಕಾರ್ಯಾಚರಣೆ ನಡೆಸಿರುವ ಸೇನಾಪಡೆ 6 ಎಲ್​ಇಟಿ ಉಗ್ರರನ್ನು ಬಲಿ ಪಡೆದಿದೆ.

10 ಲಷ್ಕರ್-ಇ-ತೊಯ್ಬಾ ಸಂಘಟನೆಯ ಉಗ್ರರು ಕಳೆದ 2-3 ತಿಂಗಳಲ್ಲಿ ರಾಜೌರಿ-ಪೂಂಚ್ ಜಿಲ್ಲೆಯ ಗಡಿಯಲ್ಲಿರುವ ಅರಣ್ಯದೊಳಗೆ ನುಸುಳಿದ್ದಾರೆ. ಗಡಿ ನಿಯಂತ್ರಣ ರೇಖೆಯುದ್ದಕ್ಕೂ  ಉಗ್ರರು ನುಸುಳಲು ಪ್ರಯತ್ನಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮೋದಿ – ಶಾ ಮಾತುಕತೆ : ಜಮ್ಮು ಮತ್ತು ಕಾಶ್ಮೀರದಲ್ಲಿನ ಭದ್ರತಾ ಪರಿಸ್ಥಿತಿ ಬಗ್ಗೆ ಗೃಹ ಸಚಿವ ಅಮಿತ್ ಶಾ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

ಮಂಗಳವಾರ ಬೆಳಿಗ್ಗೆ ಪ್ರಧಾನಿಯವರ ನಿವಾಸಕ್ಕೆ ತೆರಳಿದ ಅಮಿತ್ ಶಾ ಕಾಶ್ಮೀರದಲ್ಲಿನ ಪರಿಸ್ಥಿತಿ ಬಗ್ಗೆ ವಿವರಣೆ ನೀಡಿದ್ದಾರೆ. ಜತೆಗೆ, ಜಮ್ಮು-ಕಾಶ್ಮೀರದಲ್ಲಿ ಭದ್ರತೆಗೆ ಸಂಬಂಧಿಸಿ ಅಲ್ಲಿನ ಆಡಳಿತ ಹಾಗೂ ಕೇಂದ್ರ ಗೃಹ ಸಚಿವಾಲಯಗಳು ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡಿದ್ದಾರೆ.

 

Donate Janashakthi Media

Leave a Reply

Your email address will not be published. Required fields are marked *