ಮಡಿಕೇರಿ: ನಾಡಹಬ್ಬ ದಸರಾ ಕಾರ್ಯಕ್ರಮ ಹಾಗೂ ತಲಕಾವೇರಿ ಜಾತ್ರಾ ಮಹೋತ್ಸವಕ್ಕೆ ಸಂಬಂಧಿಸಿದಂತೆ ನಿಗದಿಯಾಗಿದ್ದ ಸಭೆಗೆ ಭಾಗವಹಿಸಬೇಕಾದ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಭಾಗವಹಿಸದೆ ಸರ್ಕಾರಿ ಹಿರಿಯ ಅಧಿಕಾರಿಗಳನ್ನು ಕಾಯಿಸಿರುವುದಕ್ಕೆ ಅಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮೈಸೂರಿನಲ್ಲಿ ದಸರಾ ಕಾರ್ಯಕ್ರಮಗಳ ಬಗ್ಗೆ ಭರ್ಜರಿಯಾಗಿಯೇ ತಯಾರಿಗಳು ನಡೆಯುತ್ತಿವೆ. ಇತ್ತ ಮಡಿಕೇರಿ ದಸರಾ ಆಚರಣೆಗೆ ಮೂಡಿರುವ ಗೊಂದಲದ ಬಗ್ಗೆ ಹಾಗೂ ದಸರಾ ಅಚರಣೆ ಈ ಬಾರಿ ಸರಳ ರೀತಿ ಅಥವಾ ವಿಜೃಂಭಣೆಯಿಂದ ಮಾಡಬೇಕೆ ಎಂಬುದರ ಬಗ್ಗೆ ಚರ್ಚಿಸಲು ಸರ್ಕಾರದ ಉನ್ನತ ಮಟ್ಟದ ಸಭೆ ನಿಗದಿಯಾಗಿತ್ತು.
ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಅಧ್ಯಕ್ಷತೆಯಲ್ಲಿ, ಮಡಿಕೇರಿ ನಗರದ ಜಿಲ್ಲಾ ಪಂಚಾಯತ್ ಸಂಭಾಗಣದಲ್ಲಿ ದಸರಾ ಹಬ್ಬ ಅಚರಣೆ ಬಗ್ಗೆ ಮತ್ತು ಅದರ ರೂಪುರೇಷೆಗಳ ಚರ್ಚೆ ಮಾಡಲು ಮಧ್ಯಾಹ್ನ ಮೂರು ಗಂಟೆಗೆ ಆರಂಭವಾಗಬೇಕಾಗಿತ್ತು.
ಈ ಹಿನ್ನೆಲೆ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಸಮಿತಿ ಸದಸ್ಯರುಗಳು ಸಚಿವರು ಬರುವಿಕೆಗಾಗಿ ಕಾದುಕಾದು ಸುಸ್ತಾದ ಅಧಿಕಾರಿಗಳು ನಿಗದಿಪಡಿಸಲಾದ ಸಭೆಗೆ ಸಚಿವರು ಬರದಿರುವ ಬಗ್ಗೆ ಇಲಾಖೆಯ ಅಧಿಕಾರಿಗಳು ಹಾಗೂ ಸಮಿತಿಯ ಸದಸ್ಯರುಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.