ಸಮುದಾಯ ಆರೋಗ್ಯ ಕೇಂದ್ರ ಅವ್ಯವಸ್ಥೆ ವಿರುದ್ಧ ಆಕ್ರೋಶ

ಜಾಲಹಳ್ಳಿ: ಸಮುದಾಯ ಆರೋಗ್ಯ ಕೇಂದ್ರದ ಅವ್ಯವಸ್ಥೆ ಖಂಡಿಸಿ ತಾಲೂಕ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಆಸ್ಪತ್ರೆಯಲ್ಲಿ ಸ್ವಚ್ಚತೆ ಮತ್ತು ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಬೇಕೆಂದು ಕೆಪಿಆರ್‌ಎಸ್‌, ಸಿಐಟಿಯು, ಡಿವೈಎಫ್‌ಐ ಸಂಘಟನೆಗಳು ಜಂಟಿಯಾಗಿ ಒತ್ತಾಯ ಪಡಿಸಿದರು.

ರಾಯಚೂರು ಜಿಲ್ಲೆಯ, ದೇವದುರ್ಗ ತಾಲ್ಲೂಕಿನ ಚಾಲಹಳ್ಳಿಯಲ್ಲಿರುವ  ಆರೋಗ್ಯ ಸಿಬ್ಬಂದಿಗಳು ಹಳ್ಳಿಗಳಿಂದ ಬಂದ ರೋಗಿಗಳಿಗೆ ಸರಿಯಾಗಿ‌ ಸ್ಪಂದಿಸದೆ ಔಷಧಗಳನ್ನು ಹೊರಗಡೆ ಬರೆದು ಕೊಡುತ್ತಾರೆ ಅವರಿಗೆ ಸರಿಯಾಗಿ ಕೆಲಸ ಮಾಡುವಂತೆ ಆಗ್ರಹಿಸಿದರು.

ಸಂಘಟನೆಗಳ ಮನವಿಗೆ ಸ್ಪಂದಿಸಿದ ತಾಲೂಕ ಅಧಿಕಾರಿಗಳು ಒಂದು ವಾರದೊಳಗೆ ಸಣ್ಣಪುಟ್ಟ ಸಮಸ್ಯೆಗಳನ್ನು ಬಗೆಹರಿಸಲು ಗಮನ ಕೊಡಲಾಗುವುದು ಎಂದರು. ಸಾರ್ವಜನಿಕರು ಎಕ್ಸ-ರೇ ದುರಸ್ತಿಗೊಂಡು ಎರಡು ವರ್ಷಗಳು ಕಳೆದರು, ಅದರ  ಸರಿಪಡಿಸಿ ಉಪಯೋಗಕ್ಕೆ ಅನುಕೂಲಕ್ಕೆ ಒಳಪಡಿಸಿಲ್ಲ. ಅದಲ್ಲದೆ, ಗರ್ಭಿಣಿಯರಿಗೆ ಸರಿಯಾದ ರೀತಿಯಲ್ಲಿ ಹೆರಗೆ ಮಾಡದೆ ಬರೀ ಖಾಸಗಿ ಆಸ್ಪತ್ರೆಗಳಿಗೆ ಕಳಿಸುತ್ತಾರೆ. ಇದನ್ನು ತಡೆಯಬೇಕು ಅಗತ್ಯ ಸೌಕರ್ಯಗಳನ್ನು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮಾಡಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘ(ಕೆಪಿಆರ್‌ಎಸ್‌) ತಾಲೂಕ ಉಪಾಧ್ಯಕ್ಷರಾದ ಶಬ್ಬೀರ ಜಾಲಹಳ್ಳಿ, ಸೆಂಟರ್‌ ಆಫ್‌ ಇಂಡಿಯನ್‌ ಟ್ರೇಡ್‌ ಯೂನಿಯನ್ಸ್‌(ಸಿಐಟಿಯು) ಮುಖಂಡರಾದ ಗಿರಿಯಪ್ಪ ಪೂಜಾರಿ, ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್‌ (ಡಿವೈಎಫ್‌ಐ) ಅಧ್ಯಕ್ಷರಾದ ಮಕ್ತುಂಪಾಷ, ಆರೋಗ್ಯ ರಕ್ಷ ಸಮಿತಿಯ ಅಧ್ಯಕ್ಷರಾದ ಶಿವರಾಜ್ ಪಾಣಿ ಬಸವರಾಜ ಮುಂತಾದವರು ಇದ್ದರು.

Donate Janashakthi Media

Leave a Reply

Your email address will not be published. Required fields are marked *