ನವದೆಹಲಿ: ಭಾರತದ ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿರುವ ಕೋವ್ಯಾಕ್ಸಿನ್ ಲಸಿಕೆಯ ತುರ್ತು ಬಳಕೆಗೆ ಅನುಮತಿ ಪಡೆಯಲು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಹೆಚ್‌ಒ) ಕೋವಿಡ್ ತಡೆಯುವ ನಿಟ್ಟಿನಲ್ಲಿ ತುರ್ತು ಬಳಕೆಗಾಗಿ ದೃಡೀಕರಣ (ಇಯುಎ) ಅಕ್ಟೋಬರ್ ತಿಂಗಳಲ್ಲಿ ಬರುವ ಸಾಧ್ಯತೆಯಿದೆ ಎಂದು ವರದಿಗಳು ತಿಳಿಸಿವೆ.
ಭಾರತದ ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿದ ಕೋವಿಡ್ ಲಸಿಕೆ ಕೊವಾಕ್ಸಿನ್ ವಿಶ್ವ ಆರೋಗ್ಯ ಸಂಸ್ಥೆಯಿಂದ ತುರ್ತು ಬಳಕೆಗೆ ಅನುಮತಿ ಸಿಗುವ ಸಾಧ್ಯತೆಯಿದೆ. ವಿಜ್ಞಾನದ ಆಧಾರದ ಮೇಲೆ ನಿರ್ಧಾರಗಳನ್ನು ತೆಗೆದುಕೊಳ್ಳಲು ವಿಶ್ವ ಆರೋಗ್ಯ ಸಂಸ್ಥೆಗೆ ಸಮಯವಿರುತ್ತದೆ. ಆದರೆ, ಈ ವಿಳಂಬದಿಂದಾಗಿಯೇ ಕೊವ್ಯಾಕ್ಸಿನ್ ಲಸಿಕೆ ಪಡೆದಿರುವ ವಿದ್ಯಾರ್ಥಿಗಳು, ನಾಗರಿಕರು ಬೇರೆ ದೇಶಗಳಿಗೆ ಪ್ರಯಾಣ ಮಾಡುವಾಗ ತೊಂದರೆ ಆಗುತ್ತಿದೆ.
ವರದಿಗಳ ಪ್ರಕಾರ, ‘ಇಯುಎಲ್ ಅನ್ನು ಬೇಗನೆ ಪಡೆಯಲು ಡಬ್ಲ್ಯುಎಚ್‌ಒಗೆ ಕೊವ್ಯಾಕ್ಸಿನ್ ತಯಾರಿಕಾ ಲಸಿಕೆ ತಯಾರಕರು ವಿಶ್ವ ಆರೋಗ್ಯ ಸಂಸ್ಥೆಗೆ ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಸಲ್ಲಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಇನ್ನಷ್ಟು ಪ್ರಶ್ನೆಗಳನ್ನು ವಿಶ್ವ ಆರೋಗ್ಯ ಸಂಸ್ಥೆ ಕೇಳಿರುವುದರಿಂದ ಅನುಮತಿ ಸಿಗುವುದು ತಡವಾಗುತ್ತಿದೆ. ಆದರೆ, ಸದ್ಯದಲ್ಲೇ ಕೊವ್ಯಾಕ್ಸಿನ್ ತುರ್ತು ಬಳಕೆಗೆ ಅನುಮತಿ ಸಿಗಲಿದೆ ಎನ್ನಲಾಗಿದೆ.
ಡಬ್ಲ್ಯೂಹೆಚ್‌ಒ ಈಗಾಗಲೇ ಕೋವಿಡ್ -19 ಲಸಿಕೆಗಳನ್ನು ಫಿಜರ್-ಬಯೋಎನ್ಟೆಕ್, ಅಸ್ಟ್ರಾಜೆನೆಕಾ, ಜಾನ್ಸನ್ ಮತ್ತು ಜಾನ್ಸನ್, ಮಾಡರ್ನಾ ಮತ್ತು ಸಿನೋಫಾರ್ಮ್ ಗಳಿಗೆ ಅನುಮೋದಿಸಿದೆ.