ಬೆಂಗಳೂರು : ತಾಲೀಬಾನಿಗಳು ಬಿಜೆಪಿ ಸೇರಿದಂತೆ ಎಲ್ಲಾ ಪಕ್ಷಗಳಲ್ಲಿಯೂ ಇದ್ದಾರೆ ಎಂದು ಹೇಳುವ ಮೂಲಕ ಸ್ವಪಕ್ಷದ ಸಿ.ಟಿ.ರವಿಗೆ ಮಾಜಿ ಸಚಿವ ಎಚ್. ವಿಶ್ವನಾಥ್ ತಿರುಗೇಟು ನೀಡಿದ್ದಾರೆ.
ನಗರದ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ಸಂಘಟನೆಗಳ ಬಗ್ಗೆ ಯಾರೂ ಹಗುರವಾಗಿ ಮಾತನಾಡಬಾರದು. ತಾಳಿಬಾನಿಗಳು ಯಾವ ಪಕ್ಷದಲ್ಲಿ ಇಲ್ಲ, ದೇಶದ ಎಲ್ಲ ಪಕ್ಷದಲ್ಲಿ ಇದ್ದಾರೆ. ಬಿಜೆಪಿಯಲ್ಲೂ ಇದ್ದಾರೆ’ ಎಂದು ಹೇಳುವ ಮೂಲಕ ಸಿದ್ದರಾಮಯ್ಯ ಪರ ಬ್ಯಾಟಿಂಗ್ ಮಾಡಿದ್ದಾರೆ.
ಕುರುಬರನ್ನು ಕರೆದುಕೊಂಡು ಬನ್ನಿ, ಲಿಂಗಾಯತರನ್ನು ಕರೆದುಕೊಂಡು ಬನ್ನಿ ಎನ್ನುವುದು ಯಾವ ಕೋಮುವಾದ? ಮಾಜಿ ಸಿಎಂ ಆಗಿದ್ದ ಸಿದ್ದರಾಮಯ್ಯ ಯಾವುದೇ ಒಂದು ಸಂಘಟನೆಯನ್ನುದ್ದೇಶಿಸಿ ಮಾತನಾಡಬಾರದು ಎಂದು ತಮ್ಮ ಹೇಳಿಕೆಯನ್ನು ಬ್ಯಾಲೆನ್ಸ್ ಮಾಡಿದರು.