ನವದೆಹಲಿ: ದೇಶದ ರಾಜಧಾನಿ ದೆಹಲಿಯಲ್ಲಿ 2020ರ ಸಂದರ್ಭದಲ್ಲಿ ಸಂಭವಿಸಿದ ಹಿಂಸಾಚಾರ ಯಾವುದೇ ಒಂದು ಘಟನೆಯಿಂದ ಭುಗಿಲೆದಿದ್ದಲ್ಲ, ಬದಲಾಗಿ ಅಶಾಂತಿ ಸೃಷ್ಟಿಸುವ ಉದ್ದೇಶದಿಂದಲೇ ಅತ್ಯಂತ ಯೋಜಿತವಾಗಿ ಪೂರ್ವಯೋಜಿತ ಕೃತ್ಯವಾಗಿತ್ತು ಎಂದು ದೆಹಲಿ ಹೈಕೋರ್ಟ್ ಹೇಳಿದೆ.
2020ರ ಫೆಬ್ರವರಿಯಲ್ಲಿ ನಡೆದ ಗಲಭೆಯ ಸಂದರ್ಭದಲ್ಲಿ ಸತತ ಮೂರು ದಿನಗಳು ಹಿಂಚಾರದಿಂದಾಗಿ ತಲ್ಲಣಗೊಳಿಸಿತ್ತು. ಅಲ್ಲದೆ 50 ಜನರು ಸಾವನ್ನಪ್ಪಿ, 200ಕ್ಕೂ ಹೆಚ್ಚಿನ ಜನರು ಗಾಯಗೊಂಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯೊಬ್ಬನಿಗೆ ಜಾಮೀನು ನಿರಾಕರಿಸುವ ವೇಳೆ ನ್ಯಾಯಾಲಯ ಉಲ್ಲೇಖಿಸಿದೆ.
ಹಿಂಸಾಚಾರ ಒಂದು ಯೋಜಿತ ಕೃತ್ಯ ಹಾಗೂ ಸಾಮಾನ್ಯ ಜನಜೀವನ ಹಾಗೂ ಸರಕಾರದ ಕಾರ್ಯನಿರ್ವಹಣೆಯನ್ನು ಅಸ್ತವ್ಯಸ್ತಗೊಳಿಸುವ ಸ್ಪಷ್ಟ ಉದ್ದೇಶ ಅದಾಗಿತ್ತು ಎಂಬುದು ಪ್ರಾಸಿಕ್ಯೂಶನ್ ಸಲ್ಲಿಸಿದ ವೀಡಿಯೋದಿಂದ ತಿಳಿದು ಬಂದಿದೆ. ಅಷ್ಟೇ ಅಲ್ಲದೆ ಅಸಂಖ್ಯಾತ ಹಿಂಸಾಕೋರರು ಕೋಲುಗಳು, ಬ್ಯಾಟುಗಳು ಇತ್ಯಾದಿಗಳನ್ನು ಹಿಡಿದುಕೊಂಡು ರಸ್ತೆಗಳಿದಿದ್ದರು ಹಾಗೂ ಅವರ ಸಂಖ್ಯೆಗೆ ಹೋಲಿಸಿದಾಗ ಅಲ್ಲಿದ್ದ ಪೊಲೀಸರ ಸಂಖ್ಯೆ ಅಲ್ಪಪ್ರಮಾಣದಲ್ಲಿ ಇದ್ದವು ಎಂದು ನ್ಯಾಯಾಲಯ ಈ ಸಂದರ್ಭದಲ್ಲಿ ತಿಳಿಸಿದೆ.
ಇದನ್ನು ಓದಿ: ದೆಹಲಿ ಗಲಭೆ : ಕಪಿಲ್ ಮಿಶ್ರಾ ವಿರುದ್ಧ ಎಫ್ಐಆರ್ ದಾಖಲಿಸಲು ಒತ್ತಾಯ
ಸಿಸಿಟಿವಿ ಕ್ಯಾಮೆರಾಗಳ ವ್ಯವಸ್ಥಿತ ಸಂಪರ್ಕ ಕಡಿತ ಮತ್ತು ನಾಶವು ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ ತರುವ ಪೂರ್ವಯೋಜಿತವಾಗಿದ್ದವು ಎಂದು ನ್ಯಾಯಾಲಯ ತಿಳಿಸಿದೆ.
ಕಳೆದ ವರ್ಷದ ಡಿಸೆಂಬರ್‌ನಲ್ಲಿ ಈ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಬಂಧಿತನಾಗಿದ್ದ ಮುಹಮ್ಮದ್ ಇಬ್ರಾಹಿಂ ಎಂಬಾತನ ಜಾಮೀನು ಅರ್ಜಿಯನ್ನು ತಿರಸ್ಕರಿಸುವ ವೇಳೆ ಜಸ್ಟಿಸ್ ಸುಬ್ರಹ್ಮಣ್ಯಂ ಪ್ರಸಾದ್ ಹೇಳಿದರು.
ಕಳೆದ ವರ್ಷದ ಫೆಬ್ರವರಿ 24ರಂದು ಹೆಡ್ ಕಾನ್‍ಸ್ಟೇಬಲ್ ರತನ್ ಲಾಲ್ ಅವರನ್ನು ಹತ್ಯೆಗೈದ ಪ್ರಕರಣ ಸಂಬಂಧ ಈ ಬಂಧನ ನಡೆದಿತ್ತು. ಆರೋಪಿಯ ಬಳಿ ತಲವಾರು ಇತ್ತೆಂಬುದನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿತ್ತಲ್ಲದೆ ಅದನ್ನು ತನ್ನ ಹಾಗೂ ತನ್ನ ಕುಟುಂಬದ ರಕ್ಷಣೆಗೆ ಇರಿಸಿಕೊಂಡಿದ್ದಾಗಿ ಆತ ಹೇಳಿಕೊಂಡಿದ್ದನ್ನು ಒಪ್ಪಲಿಲ್ಲ ಎಂದು ನ್ಯಾಯಾಲಯ ತಿಳಿಸಿದೆ.
ಡಿಸೆಂಬರ್‌ನಲ್ಲಿ ಬಂಧಿತನಾದ ಮೊಹಮ್ಮದ್ ಇಬ್ರಾಹಿಂನ ಜಾಮೀನು ಕೋರಿ ಅರ್ಜಿಯನ್ನು ಸಲ್ಲಿಸಿದರು. ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಲಾಗಿದೆ. ಇನ್ನೊಬ್ಬ ಆರೋಪಿ ಮೊಹಮ್ಮದ್ ಸಲೀಂ ಖಾನ್ ಗೆ ಜಾಮೀನು ನೀಡಲಾಗಿದೆ.
ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ನಿರಂತರ ಹೋರಾಟದ ಭಾಗವಾಗಿ 2020ರ ಫೆಬ್ರವರಿ ಸಂದರ್ಭದಲ್ಲಿ ದೆಹಲಿಯ ಚಾಂದ್ ಬಾಗ್ ಪ್ರತಿಭಟನೆಗಳು ನಡೆದಿದ್ದವು. ಆ ಸಂದರ್ಭದಲ್ಲಿ ತೀವ್ರ ಸ್ವರೂಪ ಗಲಭೆ ಸೃಷ್ಟಿಯಾಗಿ ರತನ್‌ಲಾಲ್ ಎಂಬ ಪೊಲೀಸ ಸಿಬ್ಬಂದಿ ಸಾವನ್ನಪ್ಪಿದ್ದರು. ಮತ್ತೊಬ್ಬ ಅಧಿಕಾರಿಗೆ ತೀವ್ರತರ ಗಾಯವಾಗಿದ್ದವು.