ಹಿರಿಯೂರು : ಹಲವು ನಿರೀಕ್ಷೆ, ಲಾಭದ ಉದ್ದೇಶ ಇಟ್ಟುಕೊಂಡು ಜಿಲ್ಲೆಯ ಹಿರಿಯೂರು ತಾಲೂಕಿನ ಈಶ್ವರಗೆರೆ ಗ್ರಾಮದಲ್ಲಿ ರೈತ ಕುಬೇರ ಎಂಬಾತ, ಕಷ್ಟಪಟ್ಟು ಈರುಳ್ಳಿ ಬೆಳೆ ಬೆಳಿದ್ರೂ, ಸರಿಯಾದ ಬೆಲೆ ಸಿಗದೆ ಈರುಳ್ಳಿ ಚೀಲದಲ್ಲಿಯೇ ಕೊಳೆತು ಹೋಗುತ್ತಿದೆ.
ಇದರಿಂದಾಗಿ ಲಕ್ಷಾಂತರ ರೂ ಖರ್ಚು ಮಾಡಿ ಬೆಳೆದಂತ ಈರುಳ್ಳಿಯನ್ನು ಕೆರೆಗೆ ಸುರಿದಂತ ಘಟನೆ ನಡೆದಿದೆ.
ಈ ಬಾರಿ 176 ಪಾಕೇಟ್ ಈರುಳ್ಳಿ ಫಸಲು ಕೂಡ ಬಂದಿತ್ತು. ಆದ್ರೇ ಸ್ವಲ್ಪ ಹಸಿ ಹಾರಲಿ ಎಂಬುದಾಗಿ ಇಟ್ಟ ಎರಡು ಮೂರು ದಿನಗಳಲ್ಲೇ ಕೊಳೆತಿದೆ. ಇದರಿಂದಾಗಿ 2 ಮೂರು ಲಕ್ಷ ನಷ್ಟವಾದಂತೆ ಆಗಿದೆ. ಸರ್ಕಾರ ಹೀಗೆ ಸಂಕಷ್ಟಕ್ಕೆ ಒಳಗಾದಂತ ರೈತರಿಗೆ ಪರಿಹಾರದ ರೂಪದಲ್ಲಿ ಆದರೂ ನೆರವಾಗಬೇಕು ಎಂದು ರೈತ ಕುಬೇರ ಆಗ್ರಹಿಸಿದ್ದಾರೆ.
ರೈತ ಕುಬೇರ ಅವರು, 7 ಎಕರೆಯಲ್ಲಿ 1.20 ಲಕ್ಷ ಖರ್ಚು ಮಾಡಿ ಆರೂವರೆಕೆಜಿ ಈರುಳ್ಳಿ ಬೀಜ ಹಾಕಿದ್ದೆ. ಒಳ್ಳೆಯ ಬೆಳೆ ಎನ್ನುವಂತೆ 176 ಪಾಕೇಟ್ ಈರುಳ್ಳಿ ಫಸಲು ಕೂಡ ಬಂದಿತ್ತು. ಆದ್ರೆ ಬೆಲೆ ಕುಸಿತದ ಪರಿಣಾಮ ಎರಡರಿಂದ ಮೂರು ಲಕ್ಷ ರೂ ನಷ್ಟವಾದಂತೆ ಆಗಿದೆ. ಸರ್ಕಾರ ಹೀಗೆ ಸಂಕಷ್ಟಕ್ಕೆ ಒಳಗಾದಂತ ರೈತರಿಗೆ ಪರಿಹಾರದ ರೂಪದಲ್ಲಿ ಆದರೂ ನೆರವಾಗಬೇಕು ಎಂದರು.
ರಾಜ್ಯದಲ್ಲಿ ಅನೇಕ ರೈತರ ಬೆಳೆಯು ಹಾಳಾಗಿ ರೈತರು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಇಂತಹ ರೈತರ ನೆರವಿಗೆ ಧಾವಿಸಿ, ರೈತರಿಗೆ ಬೆಂಬಲವಾಗಿ ಪರಿಹಾರದ ಸಹಾಯ ಹಸ್ತವನ್ನು ಚಾಚಲು ರಾಜ್ಯ ಸರಕಾರ ಮುಂದಾಗಬೇಕಿದೆ.