ಶಿಕ್ಷಕರಾಗಲು 19% ಮಂದಿ ಅರ್ಹರು : ಇದರ ಹೊಣೆ ಯಾರು ಹೊರುವರು?!

ಗುರುರಾಜ ದೇಸಾಯಿ

ಶಿಕ್ಷಕರ ತರಬೇತಿಯನ್ನು ನೀಡುವ ಸಂಸ್ಥೆಗಳು ಗಲ್ಲಿಗೊಂದರಂತೆ ನಾಯಿಕೊಡೆಗಳೆಂತೆ ಎದ್ದಿವೆ. 2007 ರಿಂದ  ಪಕ್ಕದ ಆಂದ್ರದಿಂದ ಶಿಕ್ಷಕ ತರಬೇತಿಯನ್ನು ಪಡೆಯಲು ಯಾವಾಗ ವಲಸೆ ಬಂದರೋ ಆಗ ಡಿಎಡ್ ಮತ್ತು ಬಿಎಡ್‌ ತರಬೇತಿ ಸಂಸ್ಥೆಗಳಿಗೆ ಇನ್ನಿಲದ ಮಹತ್ವ ಬಂತು. ರಾಜ್ಯದಲ್ಲಿ ಈಗ 304 ಬಿಎಡ್‌ ಕಾಲೇಜುಗಳಿವೆ. ಅದರಲ್ಲಿ 8 ಸರಕಾರಿ ಕಾಲೇಜುಗಳಿವೆ 296 ಖಾಸಗಿ ಶಿಕ್ಷಣ ಸಂಸ್ಥೆಗಳಿವೆ. ಡಿಎಡ್‌ ಕಾಲೇಜುಗಳ ಸಂಖ್ಯೆ 176 ಇದೆ. ಅದರಲ್ಲಿ 25 ಸರಕಾರಿ ಕಾಲೇಜುಗಳಿವೆ.  ‌

ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ-2021ರ ಫಲಿತಾಂಶವನ್ನು ರಾಜ್ಯದ ಸಾರ್ವಜನಿಕ ಶಿಕ್ಷಣ ಇಲಾಖೆಯು ಪ್ರಕಟಿಸಿದೆ. ಕರ್ನಾಟಕದ ವಿವಿಧ ತರಗತಿಗಳಲ್ಲಿ ಬೋಧಿಸುವ ಶಿಕ್ಷಣಕರು ಸೇರಿದಂತೆ ಒಟ್ಟು ಪತ್ರಿಕೆ 1 ಮತ್ತು ಪತ್ರಿಕೆ 2ರಲ್ಲಿ 2.31 ಲಕ್ಷ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಈ ಪೈಕಿ ಶೇ.19ರಷ್ಟು ಮಂದಿ ಉತ್ತೀರ್ಣರಾಗಿದ್ದು, 45,074 ಅಭ್ಯರ್ಥಿಗಳು ಅರ್ಹತೆ ಪಡೆದುಕೊಂಡಿದ್ದಾರೆ.

ಕಳೆದ ವರ್ಷ 2,02,991 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 7,980 ಮಂದಿ ಅರ್ಹತೆ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರು. ಕೆಳದ ಬಾರಿ ಶೇ.3.93ರಷ್ಟು ಫಲಿತಾಂಶ ಬಂದಿದ್ದು, ಈ ಬಾರಿ ಶೇ.15ರಷ್ಟು ಫಲಿತಾಂಶ ಹೆಚ್ಚಳವಾಗಿದೆ. ಪತ್ರಿಕೆ 1ರಲ್ಲಿ (1 ರಿಂದ 5 ನೇ ತರಗತಿ ವರೆಗೆ ಬೋಧಿಸುವ ಶಿಕ್ಷಕರು) ಶೇ.20ರಷ್ಟು ಅಂದರೆ 18,960 ಅಭ್ಯರ್ಥಿಗಳು ಪಾಸ್ ಆಗಿದ್ದಾರೆ. ಪತ್ರಿಕೆ 2 ರಲ್ಲಿ (6 ರಿಂದ 8 ನೇ ತರಗತಿಗೆ ಬೋಧಿಸುವ ಶಿಕ್ಷಕರು) 19,523 ಅಭ್ಯರ್ಥಿಗಳು ಪಾಸ್‌ ಆಗಿದ್ದಾರೆ.

ಯಾವ ಮಾನದಂಡದ ಮೇಲೆ ಅರ್ಹತೆ?: ಅರ್ಹತಾ ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು ನೀಡುವ ಸರಿ ಉತ್ತರಗಳನ್ನು ಆಧರಿಸಿ ಉತ್ತರ ಪತ್ರಿಕೆಯ ಮೌಲ್ಯಮಾಪನ ಮಾಡಲಾಗುತ್ತದೆ. ಸಾಮಾನ್ಯ ವರ್ಗದ ಅಭ್ಯರ್ಥಿಗಳು ಶೇ.60ರಷ್ಟು ಮತ್ತು ಪರಿಶಿಷ್ಟ ಜಾತಿ ಮ್ತತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು ಪಡೆಯುವ ಶೇ.55ರಷ್ಟು ಅಂಕಗಳನ್ನು ಅರ್ಹತೆ ಎಂದು ಪರಿಗಣಿಸಲಾಗುತ್ತದೆ.

ಅರ್ಹತೆ ಬರದಿದ್ದಕ್ಕೆ ಯಾರು ಹೊಣೆ : 2.31 ಲಕ್ಷ ಜನ ಶಿಕ್ಷಕರಾಗಲು ತುದಿಗಾಲ ಮೇಲೆ ನಿಂತಿದ್ದಾರೆ. ಅವರಲ್ಲಿ ಕೇವಲ 45,074 ಜನ ಮಾತ್ರ ತೇರ್ಗಡೆ ಹೊಂದಿದ್ದಾರೆ. ಉಳಿದ 1,85,926 ಜನ ಶಿಕ್ಷಕರಾಗಲು ಅರ್ಹತೆ ಹೊಂದಿಲ್ಲ. ನಿಜಕ್ಕೂ ಇದು ದೊಡ್ಡ ಅಚ್ಚರಿ, ಇಷ್ಟೊಂದು ಜನ ಅರ್ಹತಾ ಪರೀಕ್ಷೆಯಲ್ಲಿ ತೇರ್ಗಡೆಯಾಗುವುದಿಲ್ಲ ಎಂದಾದರೆ ಇದಕ್ಕೆ ಯಾರು ಹೊಣೆ? ಇದು ಪರೀಕ್ಷಾರ್ಥಿಗಳ ವೈಫಲ್ಯವೆ? ಅಧ್ಯಯನದ ಕೊರತೆಯೇ? ಅಥವಾ ಪ್ರಶಿಕ್ಷಣಾರ್ಥಿಗಳಿಗೆ ತರಬೇತಿ ನೀಡುವ ಉಪನ್ಯಾಸಕರ ವೈಫಲ್ಯವೆ? ಅಥವಾ ಸರಕಾರ ಈ ಪರೀಕ್ಷೆಯ ಹೆಸರಲ್ಲಿ ಶಿಕ್ಷಕರಾಗುವವರ ಕನಸನ್ನು ನಿಯಂತ್ರಿಸುತ್ತದೆಯೇ? ಎಂಬೆಲ್ಲ ಪ್ರಶ್ನೆಗಳು ಸಹಜವಾಗಿ ಕಣ್ಮುಂದೆ ಬರುತ್ತವೆ. ಆದರೆ ಉತ್ತರ ಮಾತ್ರ ಪ್ರಶ್ನೆಯಷ್ಟು ಸರಳವಾಗಿಲ್ಲ.

ನಾಯಿಕೊಡೆಗಳಂತಿವೆ ತರಬೇತಿ ಸಂಸ್ಥೆಗಳು : ಶಿಕ್ಷಕರ ತರಬೇತಿಯನ್ನು ನೀಡುವ ಸಂಸ್ಥೆಗಳು ಗಲ್ಲಿಗೊಂದರಂತೆ ನಾಯಿಕೊಡೆಗಳೆಂತೆ ಎದ್ದಿವೆ. 2007 ರಿಂದ  ಪಕ್ಕದ ಆಂದ್ರದಿಂದ ಶಿಕ್ಷಕ ತರಬೇತಿಯನ್ನು ಪಡೆಯಲು ಯಾವಾಗ ವಲಸೆ ಬಂದರೋ ಆಗ ಡಿಎಡ್ ಮತ್ತು ಬಿಎಡ್‌ ತರಬೇತಿ ಸಂಸ್ಥೆಗಳಿಗೆ ಇನ್ನಿಲದ ಮಹತ್ವ ಬಂತು. ರಾಜ್ಯದಲ್ಲಿ ಈಗ 304 ಬಿಎಡ್‌ ಕಾಲೇಜುಗಳಿವೆ. ಅದರಲ್ಲಿ 8 ಸರಕಾರಿ ಕಾಲೇಜುಗಳಿವೆ 296 ಖಾಸಗಿ ಶಿಕ್ಷಣ ಸಂಸ್ಥೆಗಳಿವೆ. ಡಿಎಡ್‌ ಕಾಲೇಜುಗಳ ಸಂಖ್ಯೆ 176 ಇದೆ. ಅದರಲ್ಲಿ 25 ಸರಕಾರಿ ಕಾಲೇಜುಗಳಿವೆ.  ‌

ಡಿಎಡ್‌ ಮತ್ತು ಬಿಎಡ್‌ ಎರಡು ಸೇರಿ ಸರಕಾರಿ ತರಬೇತಿ ಸಂಸ್ಥೆಗಳ ಸಂಖ್ಯೆ ಕೇವಲ 33 ಮಾತ್ರ. ಇದನ್ನು ಬಂಡವಾಳವಾಗಿಸಿಕೊಂಡುವ ಖಾಸಗಿ ಶಿಕ್ಷಣ ಸಂಸ್ಥೆಗಳು ದುಬಾರಿ ಹಣವನ್ನು ಪಡೆಯುತ್ತಿವೆ.  ಒಂದು ವರ್ಷಕ್ಕೆ ಪ್ರಶಿಕ್ಷಣಾರ್ಥಿಗಳಿಂದ 70 ರಿಂದ 85 ಸಾವಿರ ಶುಲ್ಕವನ್ನು ಪಡೆಯುತ್ತಿದ್ದಾರೆ. ಒಂದು ವರ್ಷ ಇದ್ದ ಬಿಎಡ್‌ ಕೋರ್ಸ್‌ನ್ನು ಎರಡು ವರ್ಷ ಮಾಡಿದ್ದರೆ. ಡಿಎಡ್‌ ಎರಡು ವರ್ಷ ತರಬೇತಿ ಪಡೆಯುವ ಕೋರ್ಸ್‌ ಆಗಿದೆ. ಅಂದಾಜು ಎರಡು ವರ್ಷಕ್ಕೆ 1,50,000 ಕ್ಕಿಂತ ಹೆಚ್ಚಿನ ಶುಲ್ಕ ಕಟ್ಟುತ್ತಿದ್ದಾರೆ.  ಇನ್ನೂ ಖಾಸಗಿ ಶಿಕ್ಷಣ ಸಂಸ್ಥೆಗಳು ಗುಣಮಟ್ಟದ ತರಬೇತಿಗಳನ್ನು ನೀಡುತ್ತಿಲ್ಲ ಎಂಬ ಕಾರಣಗಳು ಕೇಳಿ ಬರುತ್ತಿವೆ. ಕೆಲ ತರಬೇತಿ ಸಂಸ್ಥೆಗಳು ಹಣ ನೀಡಿದರೆ ಸಾಕು ಪರೀಕ್ಷೆಗೆ ಕೂಡಿಸುವ ಇಲ್ಲವೆ ಸರ್ಟಿಫಿಕೆಟ್‌ಗಳನ್ನು ನೀಡುತ್ತವೆ ಎಂಬ ಆರೋಪಗಳಿವೆ. ಕೆಲ ಕಾಲೇಜುಗಳಲ್ಲಿ ಉಪನ್ಯಾಸಕರನ್ನು ನೇಮಕಾತಿ ಮಾಡಿಕೊಳ್ಳದೆ ಒಬ್ಬರು ಎರಡು ವಿಷಯ ಬೋಧಿಸುವ ವ್ಯವಸ್ಥೆಯೂ ಅನೇಕ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಕಂಡು ಬರುತ್ತಿದೆ.

ಸ್ವಯಂ ಅಧ್ಯಯನಕ್ಕೆ ಸಮಯವೇ ಇಲ್ಲ  : ಬಿಎಡ್‌ ಮತ್ತು ಡಿಎಡ್‌ ಓದುವ ವಿದ್ಯಾರ್ಥಿಗಳಿಗೆ ಸ್ವಯಂ ಅಧ್ಯಯನದ ಕೊರತೆ ಹೆಚ್ಚಾಗಿತ್ತಿದೆ.  ಲೆಸನ್‌ ಪ್ಲ್ಯಾನ್‌, ಅಸೈನ್‌ಮೆಂಟ್‌, ಟೀಚಿಗೇಂಡ್ಸ್‌ ನಲ್ಲಿ ಸಮಯ ಕಳೆಯುತ್ತಿದ್ದಾರೆ. ಪಠ್ಯಗಳ ಅಧ್ಯಯನ, ಹಾಗೂ ಸಿಇಟಿಗೆ ಗಮನ ನೀಡಲು ಆಗುತ್ತಿಲ್ಲ. ಇಂಟರ್‌ನಲ್ಲ ಅಂಕದ ಹೆಸರಿನಲ್ಲಿ ಬೆದರಿಸುವ ಬೋಧಕರಿಗೆ ಪ್ರಶಿಕ್ಷಣಾರ್ಥಿಗಳು ದಾಳಗಳಾಗಿ ಬಿಟ್ಟಿರುತ್ತಾರೆ. ವಿರೋಧಿಸಿದರೆ ಅಂಕ ಕಡಿತವಾಗುವ ಭಯಕ್ಕೆ ಎಲ್ಲವನ್ನೂ ಸಹಿಸಿಕೊಂಡಿರಬೇಕಾದ ಸ್ಥಿತಿ ವಿದ್ಯಾರ್ಥಿಗಳದ್ದಾಗಿದೆ. ಈ ಬಾರಿಯ ಟಿಇಟಿ ಪರೀಕ್ಷೆ ಹಾಗೂ ಡಿಎಡ್‌ ಮತ್ತು ಬಿಎಡ್‌ ಮೂರನೇಯ ಸೆಮೆಸ್ಟರ್‌ ಪರೀಕ್ಷೆಗಳು ಒಂದೇ ಬಾರಿ ಬಂದಿದ್ದರಿಂದ ಬಹಳಷ್ಟು ಜನ ತೇರ್ಗಡೆಯಾಗಿಲ್ಲ ಎಂಬ ವಾದವೂ ಇದೆ. ಡಿಎಡ್‌. ಮತ್ತು ಬಿಎಡ್‌ ಮೂರನೇ ಸೆಮೆಸ್ಟರ್‌ ಓದುತ್ತಿರುವವರು ಟಿಇಟಿ ಬರೆಯಲು ಅವಕಾಶ ನೀಡಲಾಗಿದೆ. ಇದು ಒಳ್ಳೆಯದೆ ಆದರೆ ಎರಡು ಪರೀಕ್ಷೆಗಳ ನಡುವೆ ಅಂತರ ಇರುವಂತೆ ನೋಡಿಕೊಳ್ಳುವಲ್ಲಿ ಶಿಕ್ಷಣ ಇಲಾಖೆ ವಿಫಲವಾಗಿದೆ.

ಹಣ ಮಾಡುವದಷ್ಟೆ ಸರಕಾರದ ಕೆಲಸ : ಇನ್ನೂ ಡಿಎಡ್‌ ಮತ್ತು ಬಿಎಡ್‌ ತರಬೇತಿ ಪಡೆಯುವ ವಿದ್ಯಾರ್ಥಿಗಳಿಗೆ ಉತ್ತಮ ಗುಣ ಮಟ್ಟದ ಕಲಿಕಗೆ ಸರಕಾರ ನಿಲ್ಲಿಯವರೆಗೆ ಬ್ಲ್ಯೂಪ್ರಿಂಟ್‌ ತಯಾರಿಸಿಲ್ಲ. ಭವಿಷ್ಯದಲ್ಲಿ ಶಿಕ್ಕರಾಗಿ ಬರಬೇಕಾದವರ ಬಗ್ಗೆ ಕಾಳಜಿ ವಹಿಸುವುದು ಮುಖ್ಯವಾಗಿದೆ. ಆದರೆ ಸರಕಾರ ಇದರ ಕಡೆ ಗಮನ ನೀಡದೆ ಕೇವಲ ಹಣ ಮಾಡುವುದಕ್ಕಾಗಿ ಪರೀಕ್ಷೆಗಳ ಮೇಲೆ ಪರೀಕ್ಷೆಗಳನ್ನು ನಡೆಸುತ್ತಿದೆ. ಎಸ್‌.ಸಿ. ಎಸ್‌ಟಿ ಗೆ ಪ್ರತ್ಯೇಕ ಶುಲ್ಕ ಹಾಗೂ ಸಾಮಾನ್ಯ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಶುಲ್ಕ ಎಂದು ನಿಗದಿ ಮಾಡಲಾಗುತ್ತಿದೆ. ಅಂದಾಜು ಪರೀಕಾ ಶುಲ್ಕ 200 ರೂ ಅಂತಾ ಲೆಕ್ಕ ಇಟ್ಟುಕೊಂಡರೆ, ಸರಕಾರಕ್ಕೆ ಬರುವ ಆದಾಯ ಎಷ್ಟು ಅಂದರೆ 4 ಕೋಟಿ 62 ಲಕ್ಷ ರೂ ಗಳಾಗುತ್ತದೆ. ಒಂದು ಟಿಇಟಿ ಪರೀಕ್ಷೆಯಿಂದ ಸರಕಾರಕ್ಕೆ ಇಷ್ಟೊಂದು ಆದಾಯ ಬರುತ್ತಿರುವುದನ್ನು ಗಮನಿಸಿರುವ ಸರಕಾರ ಪರೀಕ್ಷೆಯ ಮೇಲೆ ಪರೀಕ್ಷೆ ನಡೆಸುತ್ತಿದೆಯೇ ಹೊರತು ಅದರಲ್ಲಿರುವ ದೋಷವನ್ನು ಸರಿಪಡಿಸುತ್ತಿಲ್ಲ.  ಡಿಎಡ್‌ ಮತ್ತು ಬಿಎಡ್‌ ಓದುವುದಕ್ಕಾಗಿ ಒಂದು ಬಾರಿ ಸಿಇಟಿ ಬರೆಯಲಾಗುತ್ತದೆ. ನಂತರದಲ್ಲಿ ಟಿಇಟಿ ಬರೆಯಬೇಕು. ಟಿಇಟಿಯಲ್ಲಿ ತೇರ್ಗಡೆಯಾದರೆ ನೇಮಕಾತಿ ಪರೀಕ್ಷೆ ಬರೆಯಬಹುದಾಗಿದೆ. ಅಂದರೆ ಸಿಇಟಿ + ಟಿಇಟಿ+ಸಿಇಟಿ = ನೇಮಕಾತಿ. ಇದುಅವೈಜ್ಷಾನಿಕವಾಗಿದೆ ಎಂದು ಅನೇಕರು ಹೇಳುತ್ತಿದ್ದರೂ ಇದನ್ನು ಸರಕಾರ ಸರಿಪಡಿಸುತ್ತಿಲ್ಲ. ಹೆಚ್ಚು ಕಡಿಮೆ ಪರೀಕ್ಷೆಗಳಲ್ಲಿಯೇ ವಯೋಮಿತಿಯನ್ನು ಕಳೆದುಕೊಂಡವರು ಬಹಳಷ್ಟು ಜನರಿದ್ದಾರೆ. ಇಷ್ಟೆಲ್ಲ ಸರ್ಕಸ್‌ ಮಾಡಿಸುವ ಸರಕಾರ  ಕೇವಲ 1 ಸಾವಿರದಿಂದ 5 ಸಾವಿರದೊಳಿಗಿನ ಹುದ್ದೆಗಳಿಗೆ ಮಾತ್ರ ನೇಮಕಾತಿ ಪ್ರಕ್ರಿಯೆ ನಡೆಸುತ್ತಿದೆ. ಈ ಕಾರಣದಿಂದಾಗಿಯೇ ರಾಜ್ಯದಲ್ಲಿ 33,875 ಶಿಕ್ಷಕರ ಹುದ್ದೆಗಳು ಖಾಲಿ ಬಿದ್ದಿವೆ.

ಒಟ್ಟಿನಲ್ಲಿ ಗೊಂದಲಮಯವಾಗರುವ ಟಿಇಟಿ ಕುರಿತು ಸ್ಪಷ್ಟವಾದ ನಿಲುವನ್ನು ರಾಜ್ಯ ಸರಕಾರ ತೆಗೆದುಕೊಳ್ಳಬೇಕಿದೆ. ಜೊತೆಯಲ್ಲಿ ಗುಣ ಮಟ್ಟದ ಶಿಕ್ಷಕರ ತರಬೇತಿ ಸಂಸ್ಥೆಗಳನ್ನು ರೂಪಿಸುವ ಜವಬ್ದಾರಿಯೂ ಸರಕಾರದ ಮೇಲಿದೆ. ಆ ನಿಟ್ಟಿನಲ್ಲಿ ಸರಕಾರ ಯೋಚಿಸಬೇಕಿದೆ.

ಯಾವ ಮಾನದಂಡವನ್ನು ಬಳಸಿ ಶಿಕ್ಷಕರ ಅರ್ಹತೆಯನ್ನು ಸರಕಾರ ಮತ್ತು ಶಿಕ್ಷಣ ಇಲಾಖೆ ಅಳೆಯುತ್ತಿದೆ ಎಂಬುದೆ ಗೊತ್ತಾಗುತ್ತಿಲ್ಲ. ಇಷ್ಟೊಂದು ಪರೀಕ್ಷೆಗಳ ಮೇಲೆ ಪರೀಕ್ಷೆಳನ್ನು ತೆಗೆದುಕೊಳ್ಳುವುದಾದರೆ ತರಬೇತಿ ಸಂಸ್ಥೆಗಳಲ್ಲಿ ಗುಣ ಮಟ್ಟದ ತರಬೇತಿ ಸಿಗುತ್ತಿಲ್ಲವೆ? ಮಕ್ಕಳಿಗೆ ಬೋಧನೆ ಮಾಡುವುದು ಹೇಗೆ ಎಂಬುದನ್ನು ಹೇಳಿ ಕೊಡುತ್ತಿದ್ದಾರೆಯೇ ಎಂದು ಪರೀಕ್ಷೆ ನಡೆಸಬೇಕಾದವರು ಯಾರು? ಒಟ್ಟಿನಲ್ಲಿ ಶಿಕ್ಷಕರಾಗಬೇಕಾಗಿರುವವರಿಗೆ ಪರೀಕ್ಷೆಯ ಹೆಸರಿನಲ್ಲಿ ಸರಕಾರ ಕಾಲ ಹರಣ ಮಾಡುತ್ತಿದೆ.

– ಗೋವಿಂದ ಮಾನಸಗಲ್ ಅತಿಥಿ ಉಪನ್ಯಾಸಕರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ದೇವದುರ್ಗ

Donate Janashakthi Media

Leave a Reply

Your email address will not be published. Required fields are marked *