ಮಹಿಳೆಯರ ಮೇಲೆ ಪುರುಷರು ಅಪರಾಧ ಅಥವಾ ಅಹಿತಕರವಾಗಿ ಹಲ್ಲೆ ನಡೆಸಿದರೂ ಅದನ್ನು ಸಮಾಜ ನೋಡುವ ದೃಷ್ಟಿಕೋನ ಬದಲಾಗಿಲ್ಲ ಎಂದು ನಟಿ ರಮ್ಯಾ ಹೇಳಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ಯುವತಿ ಮೇಲೆ ನಡೆದ ಸಾಮೂಹಿಕ ಅತ್ಯಚಾರ ಕುರಿತು ಅನೇಕ ರೀತಿಯಲ್ಲಿ ಚರ್ಚೆಗಳು ನಡೆಯುತ್ತಿವೆ. ಈ ಸಂದರ್ಭದಲ್ಲಿ ಕೆಲವರು ಯುವತಿಯನ್ನು ದೂಷಿಸುತ್ತಿದ್ದಾರೆ. ಅಲ್ಲದೆ ಅಧಿಕಾರದ ಸ್ಥಾನದಲ್ಲಿದ್ದು ರಾಜ್ಯವನ್ನು ಮುನ್ನಡೆಸುತ್ತಿರುವ ರಾಜ್ಯ ಸರಕಾರದ ಗೃಹ ಮಂತ್ರಿಗಳು ಸಂಜೆಯ ನಂತರ ಮಹಿಳೆ ಹೊರಬಂದಿದ್ದು ತಪ್ಪು ಎನ್ನುವಂತಹ ಮಾತುಗಳನ್ನು ಸಹ ಆಡಿದ್ದರು.
ಅತ್ಯಾಚಾರಿಗಳಿಗೆ ಶಿಕ್ಷೆಗೆ ಒಳಪಡಿಸುವ ಬದಲು ಯುವತಿಯನ್ನೇ ದೂಷಿಸಲಾಗುತ್ತಿದೆ. ಇಂತಹವುಗಳ ವಿರುದ್ಧ ನಟಿ ರಮ್ಯಾ ಆಕ್ರೋಶಗೊಂಡಿದ್ದಾರೆ. ಮಹಿಳೆಯರ ಮೇಲೆಯೇ ತಪ್ಪು ಹೊರೆಸುವವರನ್ನು ಛೀಮಾರಿ ಹಾಕಿದ್ದಾರೆ.
ಇದನ್ನು ಓದಿ: ಸಂಜೆಯ ನಂತರ ಮಹಿಳೆ ಹೊರ ಬರುವುದೇ ತಪ್ಪು: ಗೃಹ ಸಚಿವ ಆರಗ ಜ್ಞಾನೇಂದ್ರ ವಿವಾದಾತ್ಮಕ ಹೇಳಿಕೆ
”ಮಹಿಳೆಯರ ಮೇಲೆ ಪುರುಷರಿಂದಾಗುವ ಪ್ರತಿಯೊಂದು ಅಪರಾಧಕ್ಕೂ ಮಹಿಳೆಯರನ್ನೇ ದೂಷಿಸಲಾಗುತ್ತದೆ. ಅದು ಅತ್ಯಾಚಾರವಾಗಲಿ ಅಥವಾ ದೈಹಿಕ ಅಥವಾ ಮಾನಸಿಕ ದೌರ್ಜನ್ಯವೇ ಆಗಲಿ.. ಮಹಿಳೆಯರಾದ ನಾವೇ ದೂಷಣೆಗೆ ಒಳಗಾಗುತ್ತೇವೆ. ಇದು ನಿನ್ನದೇ ತಪ್ಪು, ನೀನು ಹಾಗೆ ಹೇಳಬಾರದಿತ್ತು, ನೀನು ಹಾಗೆ ಮಾಡಬಾರದಿತ್ತು, ನೀನು ಅದನ್ನ ಧರಿಸಬಾರದಿತ್ತು, ನಿನ್ನ ಉಡುಪು ತೀರಾ ಬಿಗಿಯಾಗಿದೆ ಮತ್ತು ತೀರಾ ಚಿಕ್ಕದಾಗಿದೆ, ತೀರಾ ತಡವಾಗಿ ನೀನು ಮನೆಯಿಂದ ಹೊರಗೆ ಹೋಗಬಾರದಿತ್ತು, ನೀನು ಮೇಕಪ್ ಧರಿಸಬಾರದಿತ್ತು, ಕೆಂಪು ಲಿಪ್ ಸ್ಕಿಕ್ ಯಾಕೆ ಧರಿಸಿದ್ದೆ – ಇದನ್ನೆಲ್ಲ ನಾವು ಆಗಾಗ ಕೇಳುತ್ತಲೇ ಇರುತ್ತೇವೆ! ಯಾಕೆ?” ಎಂದು ರಮ್ಯಾ ಬರೆದಿರುವ ಹೇಳಿಕೆ ಸಾಕಷ್ಟು ವೈರಲ್ ಆಗಿದೆ.
”ಯಾಕಂದ್ರೆ, ಪುರುಷರು ಪುರುಷರಾಗಿಯೇ ಇರುತ್ತಾರೆ. ನಾವು ಮಾತ್ರ ಬದಲಾಗಬೇಕು. ನಾವು ಮಾತ್ರ ಕಾಂಪ್ರೊಮೈಸ್ ಆಗಬೇಕು. ನಾವು ಮಾತ್ರ ಅಡ್ಜಸ್ಟ್ ಮಾಡಿಕೊಳ್ಳಬೇಕು. ನಾವು ಎಲ್ಲವನ್ನೂ ಸಹಿಸಿಕೊಳ್ಳಬೇಕು. ಇಲ್ಲ..! ಇನ್ನಾಗಲ್ಲ..! ಈ ನಾನ್ ಸೆನ್ಸ್ಗೆ ಈ ಕೂಡಲೆ ಪೂರ್ಣವಿರಾಮ ಇಡಿ! ನಿಜ ಹೇಳಬೇಕು ಅಂದ್ರೆ, ನಾನೂ ಕೂಡ ಇದನ್ನೆಲ್ಲಾ ನನಗೂ ಮಾಡಿಕೊಂಡಿದ್ದೇನೆ. ನನ್ನ ಸ್ನೇಹಿತರಿಗೂ ಮಾಡಿದ್ದೇನೆ. ಆಪಾದನೆಯನ್ನು ಹೊತ್ತುಕೊಂಡಿದ್ದೇವೆ. ಆದರೆ ಏನ್ಗೊತ್ತಾ? ಇನ್ಮುಂದೆ ಇದನ್ನೆಲ್ಲಾ ಸಹಿಸಲು ಸಾಧ್ಯವಿಲ್ಲ. ಮಹಿಳೆಯರ ಮೇಲಿನ ಅಪರಾಧಗಳ ಬಗ್ಗೆ ಕುರುಡರಾಗಿರಬೇಡಿ. ಧ್ವನಿಯೆತ್ತಿ…” ಎಂದು ಕರೆ ನೀಡಿದ್ದಾರೆ.
‘ಗಂಡಸರು ಮಹಿಳೆಯರ ಮೇಲೆ ಅಪರಾಧ ಎಸಗಿದಾಗೆಲ್ಲ ಮಹಿಳೆಯರನ್ನೇ ದೂಷಿಸಲಾಗುತ್ತದೆ. ಅದು ಅತ್ಯಾಚಾರ ಆಗಿರಬಹುದು, ದೈಹಿಕ ದೌರ್ಜನ್ಯ ಅಥವಾ ಮೌಖಿಕ ಶೋಷಣೆಯೇ ಆಗಿರಬಹುದು. ನಿನ್ನದೇ ತಪ್ಪು ಎಂದು ಮಹಿಳೆಗೆ ಹೇಳಲಾಗುತ್ತದೆ. ನೀನು ಹಾಗೆ ಹೇಳಬಾರದಿತ್ತು, ಅದನ್ನು ಮಾಡಬಾರದಿತ್ತು, ತುಂಬ ಬಿಗಿ ಆದಂತಹ, ತುಂಬ ಸಡಿಲ ಆಗಿರುವಂತಹ ಬಟ್ಟೆ ಧರಿಸಬಾರದಿತ್ತು, ತುಂಬ ರಾತ್ರಿ ಸಮಯದಲ್ಲಿ ಹೊರಗೆ ಹೋಗಬಾರದಿತ್ತು, ಮೇಕಪ್ ಹಾಕಿಕೊಳ್ಳಬಾರದಿತ್ತು, ಕೆಂಪು ಲಿಪ್ಸ್ಟಿಕ್ ಯಾಕೆ? ಕಣ್ಣು ಮಿಟುಕಿಸಬಾರದಿತ್ತು ಎಂದೆಲ್ಲ ಹೇಳುತ್ತಾರೆ’ ಎಂದು ರಮ್ಯಾ ವಿವರಿಸಿದ್ದಾರೆ.