ಕೋವಿಡ್ ಲಸಿಕೆ: ಜಾನ್ಸನ್​ ಆ್ಯಂಡ್​ ಜಾನ್ಸನ್​ ಸಿಂಗಲ್ ಡೋಸ್ ಬಳಕೆಗೆ ಕೇಂದ್ರ ಅನುಮತಿ

ನವದೆಹಲಿ: ಭಾರತದಲ್ಲಿ ಕೋವಿಡ್ ವಿರುದ್ಧ ಹೋರಾಡಲು ಬಳಸಲಾಗುತ್ತಿರುವ ಲಸಿಕೆಗಳಲ್ಲಿ ಮತ್ತೊಂದು ಲಸಿಕೆ ಸೇರ್ಪಡೆಗೊಂಡಿದೆ. ಅಮೆರಿಕಾ ಮೂಲದ ಜಾನ್ಸನ್ ಅಂಡ್ ಜಾನ್ಸನ್ ಕಂಪನಿಯ ಸಿಂಗಲ್ ಡೋಸ್ ಲಸಿಕೆ ತುರ್ತು ಬಳಕೆಗೆ ಭಾರತ ಸರ್ಕಾರ ಅನುಮತಿ ನೀಡಿದೆ ತಿಳಿದುಬಂದಿದೆ. 

ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಟ್ವಿಟರ್ ನಲ್ಲಿ ಮಾಹಿತಿ ನೀಡಿದ್ದು ‘ಭಾರತದಲ್ಲಿ ಜಾನ್ಸನ್​ ಆ್ಯಂಡ್​ ಜಾನ್ಸನ್ ಸಿಂಗಲ್ ಡೋಸ್ ಲಸಿಕೆಯ ತುರ್ತು ಬಳಕೆಗೆ ಅನುಮತಿಸಲಾಗಿದೆ. ಇದರೊಂದಿಗೆ ಭಾರತ ಐದು ಲಸಿಕೆಗಳನ್ನು ಹೊಂದಿದಂತಾಗಿದೆ. ಇದು ಕೋವಿಡ್ ವಿರುದ್ಧದ ಭಾರತದ ಹೋರಾಟಕ್ಕೆ ಮತ್ತಷ್ಟು ಶಕ್ತಿ ತುಂಬಲಿದೆ’ ಎಂದು ಬರೆದಿದ್ದಾರೆ.

ಜಾನ್ಸನ್​ ಆ್ಯಂಡ್​ ಜಾನ್ಸನ್ ಸಂಸ್ಥೆಯು ತನ್ನ ಕೊರೊನಾ ವೈರಸ್ ಲಸಿಕೆಯ ತುರ್ತು ಬಳಕೆ ಅನುಮೋದನೆ (ಇಯುಎ) ಕೋರಿ ಆಗಸ್ಟ್ 5ರಂದು ಮನವಿ ಮಾಡಿತ್ತು. ಅದೇ ದಿನ ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರವು (ಡಿಸಿಜಿಐ) ಲಸಿಕೆಯ ತುರ್ತು ಬಳಕೆಗೆ ಅನುಮೋದನೆ ನೀಡಿದೆ. ಭಾರತದಲ್ಲಿ ಬಯಾಲಾಜಿಕಲ್ ಇ ಕಂಪನಿಯೊಂದಿಗೆ ಸೇರಿ ಲಸಿಕೆಗಳನ್ನು ಕಂಪನಿ ಉತ್ಪಾದಿಸಲಿದೆ. ಈ ಲಸಿಕೆಯು ಒಂದೇ ಡೋಸ್ ಹೊಂದಿದ್ದು, ಶೇ 85ರಷ್ಟು ಪರಿಣಾಮಕಾರಿ ಬೀರಲಿದೆ ಎಂದು ಕಂಪನಿ ಹೇಳಿದೆ

ಭಾರತವು ಈವರೆಗೂ ಕೋವಿಶೀಲ್ಡ್, ಕೋವ್ಯಾಕ್ಸಿನ್, ಸ್ಪುಟ್ನಿಕ್ ಹಾಗೂ ಮಾಡೆರ್ನಾ ಲಸಿಕೆಗಳ ಬಳಕೆ ಮಾಡಲಾಗುತ್ತಿದೆ. ಈ ಪಟ್ಟಿಗೆ ಇದೀಗ ಜಾನ್ಸನ್​ ಆ್ಯಂಡ್​ ಜಾನ್ಸನ್ ಲಸಿಕೆ ಸೇರ್ಪಡೆಗೊಂಡಿದೆ. ಈ ಹೊಸ ಲಸಿಕೆಯು ಎರಡು ಡೋಸ್​ ತೆಗೆದುಕೊಳ್ಳುವ ಅಗತ್ಯವಿಲ್ಲ. ಒಂದು ಡೋಸ್ ತೆಗೆದುಕೊಂಡರೆ ಸಾಕಾಗುತ್ತದೆ. ಇದೇ ಈ ಲಸಿಕೆಯ ವಿಶೇಷತೆಯಾಗಿದೆ.

Donate Janashakthi Media

Leave a Reply

Your email address will not be published. Required fields are marked *