ಕೇಂದ್ರ ಮತ್ತು ರಾಜ್ಯ ಸರಕಾರಗಳು ವಿರುದ್ಧ ಆಗಸ್ಟ್‌ 9 ರಂದು ಪ್ರತಿಭಟನೆ

ಕೋಲಾರ: ಕೇಂದ್ರ ಮತ್ತು ರಾಜ್ಯ ಸರಕಾರಗಳು ರೈತ, ಕಾರ್ಮಿಕ, ಕೃಷಿಕೂಲಿಕಾರರ ಜನವಿರೋಧಿ ನೀತಿಗಳ ವಿರುದ್ಧ ದೇಶಾದ್ಯಂತ ರೈತ.ಕಾರ್ಮಿಕ, ಕೂಲಿಕಾರರ ಜಂಟಿ ಕ್ರಿಯಾಸಮಿತಿಯಿಂದ ಆಗಸ್ಟ್ 9ರಂದು ಕ್ವಿಟ್ ಇಂಡಿಯಾ ಚಳುವಳಿಯ ಭಾಗವಾಗಿ ಪ್ರತಿಭಟನೆ ನಡೆಯಲಿದ್ದು ಇದರ ಭಾಗವಾಗಿ ಜುಲೈ 25 ರಿಂದ ಆಗಸ್ಟ್ 8 ರವರೆಗೆ ತಾಲೂಕಿನಾದ್ಯಂತ ಪ್ರಚಾರ ಆಂದೋಲನ ನಡೆಯಲಿದೆ ಎಂದು ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ವಿಜಿಯಕೃಷ್ಣ ತಿಳಿಸಿದರು.

ನಗರದ ಸರ್ಕಾರಿ ನೌಕರರ ಭವನದಲ್ಲಿ ಸೋಮವಾರ ಕರ್ನಾಟಕ ಪ್ರಾಂತ ರೈತ ಸಂಘ, ಸಿಐಟಿಯು,ಹಾಗೂ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ಜಂಟಿಯಾಗಿ ನಡೆದ ಸಭೆಯಲ್ಲಿ ಹೋರಾಟದ ರೂಪುರೇಷೆಗಳನ್ನು ಚರ್ಚಿಸಿ ಮಾತನಾಡಿದ ಅವರು ರೈತ ಕೃಷಿ ಕೂಲಿಕಾರರ ವಿರೋಧಿ ಕಾಯ್ದೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಲು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ವ್ಯಾಪಕವಾಗಿ ಪ್ರಚಾರ ನಡೆಸಲು ಕೇಂದ್ರ ಸಮಿತಿಯ ಸಂಘಟನೆಗಳು ಕರೆ ನೀಡಿದೆ ನಮ್ಮ ತಾಲ್ಲೂಕಿನಲ್ಲಿ ವ್ಯಾಪಕವಾಗಿ ಪ್ರಚಾರ ನಡೆಸಿ ಹೋರಾಟದಲ್ಲಿ ಭಾಗವಹಿಸುವಂತೆ ಮನವಿ ಮಾಡಬೇಕು ಎಂದರು.

ದೇಶದ ರಾಜಧಾನಿಯ ಗಡಿಯಲ್ಲಿ ನಡೆಯುತ್ತಿರುವ ಐತಿಹಾಸಿಕ ರೈತ ಹೋರಾಟವನ್ನು ಬೆಂಬಲಿಸುತ್ತಾ ಇದ್ದು ರೈತರ ಜನಪರ ನೀತಿಗಳ ಜಾರಿಗಾಗಿ ವ್ಯಾಪಕವಾಗಿ ಪ್ರಚಾರ ಮಾಡಬೇಕು ಜನರ ಮೂಲಭೂತ ಸಮಸ್ಯೆಗಳಿಗೆ ನಿರ್ದಿಷ್ಟವಾಗಿರುವ ಬೇಡಿಕೆಗಳನ್ನು ಒಳಗೊಂಡ ನಡೆಸಬೇಕು ಪ್ರಚಾರದ ನಂತರ ಆಗಸ್ಟ್ 9ರಂದು ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲು ಸಂಘಟನೆಗಳು ಕರೆ ನೀಡಿವೆ ಈ ಸಂದರ್ಭದಲ್ಲಿ ಕೊರೊನಾ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಿಕೊಂಡು ಪ್ರಚಾರ ನಡೆಸಲು ಇದೇ ವೇಳೆ ತಿಳಿಸಿದರು.

ಈ ಸಭೆಯಲ್ಲಿ ಕೆಪಿಆರ್ ಎಸ್ ಜಿಲ್ಲಾ ಕಾರ್ಯದರ್ಶಿ ಟಿ.ಎಂ.ವೆಂಕಟೇಶ್ ಮಾತನಾಡಿ ಸರಕಾರಗಳು ಈ ಕೂಡಲೇ ರೈತ ವಿರೋಧಿ ಕಾಯ್ದೆ. ಕಾರ್ಮಿಕ ವಿರೋಧಿ ಕಾಯಿದೆಗಳನ್ನು ಹಿಂಪಡೆಯಬೇಕು ಕೃಷಿ ಬೆಳೆಗಳಿಗೆ ಕಾನೂನುಬದ್ಧವಾಗಿ ಕನಿಷ್ಠ ಬೆಂಬಲ ಬೆಲೆ ನೀಡಬೇಕು ಆಹಾರಧಾನ್ಯಗಳನ್ನು ಉಚಿತವಾಗಿ ರೇಷನ್ ನೀಡಬೇಕು ಆದಾಯ ತೆರಿಗೆ ಮಿತಿಗೆ ಒಳಪಟ್ಟು ಪ್ರತಿಯೊಬ್ಬರಿಗೂ10 ಸಾವಿರ ಪರಿಹಾರ ನೀಡಬೇಕು ಕೊರೊನಾ ಉಚಿತ ಲಸಿಕೆ ನೀಡಬೇಕು ಸಾರ್ವಜನಿಕ ಉದ್ಯಮೆಗಳನ್ನು ಖಾಸಗಿಯವರಿಗೆ ನೀಡುವುದನ್ನು ಕೈಬಿಡಬೇಕು ರಾಜ್ಯದಲ್ಲಿನ ಎಪಿಎಂಸಿ ಕಾಯ್ದೆ ಭೂಸುಧಾರಣೆ ಕಾಯ್ದೆ ತಿದ್ದುಪಡಿಗಳನ್ನು ಪಡೆಯಬೇಕೆಂದು ಈ ಮೂಲಕ ಒತ್ತಾಯಿಸಬೇಕಾಗಿದೆ ಎಂದರು

ಈ ಸಂದರ್ಭದಲ್ಲಿ ಕೆಪಿಆರ್ ಎಸ್ ತಾಲೂಕ ಅಧ್ಯಕ್ಷ ಎನ್.ಎನ್ ಶ್ರೀರಾಮ್, ಕಾರ್ಯದರ್ಶಿ ವಿ.ನಾರಾಯಣರೆಡ್ಡಿ, ಮುಖಂಡರಾದ ಭೀಮರಾಜ್, ಮಂಜುಳಾ, ಆಶಾ, ಕೆ.ವಿ.ಮಂಜುನಾಥ್ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು

Donate Janashakthi Media

Leave a Reply

Your email address will not be published. Required fields are marked *