ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ)ದ ಸುಮಾರು 11ಸಾವಿರ ಎಕರೆ ಪ್ರದೇಶ ಕಂಡವರ ಪಾಲಾಗಿದೆ. ಜತೆಗೆ ಪ್ರಾಧಿಕಾರವು ಭೂಸ್ವಾಧೀನ ಪಡಿಸಿಕೊಂಡಿರುವ ಜಾಗದಲ್ಲಿ ಸುಮಾರು 75 ಸಾವಿರಕ್ಕೂ ಅಧಿಕ ಮನೆಗಳನ್ನು ನಿರ್ಮಿಸಲಾಗಿದೆ. ಕೂಡಲೇ ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಕೈಗೊಳ್ಳಿ ಎಂದು ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಮನವಿ ಮಾಡಿದ್ದಾರೆ.
ಬಿಡಿಎ ಆಸ್ತಿ ಸಂಬಂಧ ಖಾಸಗಿ ಹೋಟೆಲ್ನಲ್ಲಿ ಸಾಮಾಜಿಕ ಕಾರ್ಯಕರ್ತ ಸಾಯಿದತ್ತ ಸುದ್ದಿಗೋಷ್ಠಿ ನಡೆಸಿದ್ದು, ಇಲ್ಲಿಯವರೆಗೂ ಬಿಡಿಎ 64 ಲೇಔಟ್ ಗಳನ್ನ ಮಾಡಿದೆ. ಸಾವಿರಾರು ಎಕರೆ ಆಸ್ತಿ ಬಿಡಿಎ ಕೈತಪ್ಪಿ ಹೋಗಿದೆ. ಬಿಡಿಎಗೆ (Bangalore Development Authority) ತನ್ನ ಆಸ್ತಿಯ ನಿಖರ ಮಾಹಿತಿ ಇರಲಿಲ್ಲ. ಬಿಡಿಎಗೆ ಸೇರಿದ ಸಾವಿರಾರು ಕೋಟಿ ಆಸ್ತಿಯು ಖಾಸಗಿ ವ್ಯಕ್ತಿಗಳ ಪಾಲಾಗಿತ್ತು. ಹಾಗಾಗಿ ಬಿಡಿಎ ತನ್ನ ಜಾಗವನ್ನ ಗುರುತಿಸಿಕೊಳ್ಳಲು ವಿಫಲವಾಗಿದ್ದು, ಈ ಸಂಬಂಧ ನಾನು ಬಿಡಿಎ ಲ್ಯಾಂಡ್ ಅಡಿಟ್ ಮಾಡುವಂತೆ ಲೋಕಯುಕ್ತಕ್ಕೆ ದೂರು ನೀಡಿರುವುದಾಗಿ ತಿಳಿಸಿದ್ದಾರೆ.
ಈ ಹಿನ್ನೆಲೆ ಅಂದಿನ ಬಿಡಿಎ ಆಯುಕ್ತ ರಾಕೇಶ್ ಸಿಂಗ್ ಅವರು ಲ್ಯಾಂಡ್ ಆಡಿಟ್ ಮಾಡಲು ಆದೇಶ ಹೊರಡಿಸಿದ್ದರು. ಆಡಿಟ್ ಮುಗಿದ ಬಳಿಕ ಬಿಡಿಎನಿಂದ ಕೈತಪ್ಪಿ ಹೋಗಿದ್ದ ಸಂಪೂರ್ಣ ಆಸ್ತಿಯ ವಿವರವನ್ನ ಲೋಕಯುಕ್ತಕ್ಕೆ ಸಲ್ಲಿಕೆಯಾಗಿದೆ. ವರದಿಯಿಂದ 50 ಸಾವಿರ ಕೋಟಿ ಮೌಲ್ಯದ ಆಸ್ತಿಯನ್ನ ಬಿಡಿಎ ಕಳೆದುಕೊಂಡಿದ್ದು ಬೆಳಕಿಗೆ ಬಂದಿದೆ. 20.836 ಎಕರೆ ಜಮೀನನ್ನು (BDA Land Encroachment) ಖಾಸಗಿಯವರು ಒತ್ತುವರಿ ಮಾಡಿಕೊಂಡಿದ್ದಾರೆ ಎಂಬ ಆಘಾತಕಾರಿ ವಿಚಾರ ಬಹಿರಂಗ ಗೊಂಡಿದೆ.