ಹಾಸನ: ಪೆಟ್ರೋಲ್ ಬಂಕ್ಗಳಿಗೆ ಟ್ಯಾಂಕರ್ಗಳ ಮೂಲಕ ಪೆಟ್ರೋಲ್, ಡಿಸೇಲ್ ಸರಬರಾಜು ಮಾಡುತ್ತಿದ್ದ ಸಂದರ್ಭದಲ್ಲಿ ಟ್ಯಾಂಕರ್ ಒಳಗೆ ಸಣ್ಣ ಟ್ಯಾಂಕರ್ ನಿರ್ಮಿಸಿ ಸುಮಾರು ನೂರು ಲೀಟರ್ನಷ್ಟು ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಪೊಲೀಸ್ ಕಾನ್ಸ್ಟೇಬಲ್ ಭಾಸ್ಕರ್ ಸೇರಿ ಐವರ ವಿರುದ್ಧ ಮೊಕದ್ದಮೆ ದಾಖಲಿಸಲಾಗಿದೆ.
ಇದೊಂದ ದೊಡ್ಡ ಮಾಫಿಯಾ ವಂಚನೆಯ ಪ್ರಕರಣವಾಗಿದ್ದು ಆರೋಪಿ ಭಾಸ್ಕರ್ ಕುಟುಂಬದವರೇ ವ್ಯವಹಾರ ನಡೆಸುತ್ತಿದ್ದಾರೆ. 15 ಟ್ಯಾಂಕರ್ಗಳನ್ನು ವಿಶಿಷ್ಠ ವಿನ್ಯಾಸಗೊಳಿಸಿ ಅವ್ಯವಹಾರ ನಡೆಸುತ್ತಿರುವುದು ಬೆಳಕಿಗೆ ಬಂದಿದೆ. ಆರು ಟ್ಯಾಂಕರ್ ಅನ್ನು ಪರಿಶೀಲಿಸಿದಾಗ ಇಂಧನ ಟ್ಯಾಂಕರ್ ಒಳಗೆ ಗುಪ್ತವಾಗಿ ಸಣ್ಣ ಇರುವುದು ಮತ್ತು ಅದರಲ್ಲಿ ಉಳಿಯುತ್ತಿದ್ದ ನೂರು ಲೀಟರ್ ಉಳಿದುಕೊಂಡಿರುವುದು ಕಂಡು ಬಂದಿದೆ. ಹಲವು ದಿನಗಳಿಂದ ಕೊಟ್ಯಾಂತರ ರೂಪಾಯಿ ವಂಚಿಸಿರುವ ಆರೋಪ ಇದಾಗಿದೆ.
ಹಾಸನದ ಎಚ್.ಪಿ.ಸಿ.ಎಲ್. ನಿಂದ ತಿಪಟೂರಿನ ಪೆಟ್ರೋಲ್ ಬಂಕ್ಗಳಿಗೆ ಪೆಟ್ರೋಲ್, ಡಿಸೇಲ್ ಸರಬರಾಜು ಮಾಡುತ್ತಿದ್ದ ಟ್ಯಾಂಕರ್ಗಳ ಮೂಲಕ ಸರಬರಾಜು ಆಗುತ್ತಿದ್ದವು. ಸರಬರಾಜಿನಲ್ಲಿ ನೂರು ಲೀಟರ್ ಕಡಿಮೆ ಬರುತ್ತಿದ್ದ ಬಗ್ಗೆ ಅನುಮಾನಗೊಂಡ ಪೆಟ್ರೋಲ್ ಬಂಕ್ ಮಾಲೀಕರಿಂದ ಪೊಲೀಸರಿಗೆ ದೂರು ನೀಡಿದರು.
ಮೊದಲು ತಿಪಟೂರು ನಗರ ಠಾಣೆಯಲ್ಲಿ ಮೊದಲು ಎಫ್.ಐ.ಆರ್. ದಾಖಲಿಸಲಾಯಿತು. ನಂತರ ಹಾಸನ ನಗರ ಠಾಣೆಗೆ ಕೇಸ್ ವರ್ಗಾವಣೆಗೊಂಡಿತು. ದಂಧೆ ಬಯಲಾಗುತ್ತಿದ್ದಂತೆ ಕಾರ್ಯಾಚರಣೆ ನಡೆಸಿದ ಹಾಸನ ನಗರಠಾಣೆ ಪೊಲೀಸರು ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಪ್ರಕರಣ ಬಯಲಿಗೆ ಬಂದಿದೆ. ಹಾಸನ ನಗರ ಠಾಣೆಯಲ್ಲಿ ಪೊಲೀಸರು ಐವರ ವಿರುದ್ದ ಮೊಕದ್ದಮೆ ದಾಖಲಿಸಿ ವಂಚನೆ ಮಾಡುತ್ತಿದ್ದ ಜಾಲ ಬೇಧಿಸಿದ್ದಾರೆ.