ನವದೆಹಲಿ: ಕೇಂದ್ರದ ಎನ್ಡಿಎ ಪ್ರಧಾನಿ ನರೇಂದ್ರ ಮೋದಿ ಸರಕಾರದ ನೂತನ ಆರೋಗ್ಯ ಸಚಿವರಾಗಿ ಅಧಿಕಾರ ವಹಿಸಿಕೊಂಡಿರುವುದರಿಂದ
ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಸಚಿವ ಸಂಪುಟ ಪುನರ್ರಚನೆಯಿಂದಾಗಿ ಏನಾದರೂ ಬದಲಾವಣೆ ಆಗುತ್ತದೆಯೇ? ಕೋವಿಡ್ ವಿಚಾರವನ್ನು ಪ್ರಮುಖವಾಗಿ ಇಟ್ಟುಕೊಂಡು ರಾಹುಲ್ ಗಾಂಧಿ ಪ್ರತಿಕ್ರಿಯೆ ನೀಡಿದ್ದಾರೆ.
ಸಂಪುಟದಿಂದ ನಿರ್ಗಮಿಸಿದ ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಅವರ ಸ್ಥಾನಕ್ಕೆ ಮನ್ಸುಖ್ ಮಾಂಡವಿಯಾ ಅಧಿಕಾರ ವಹಿಸಿಕೊಂಡಿದ್ದಾರೆ. ಈ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ʻʻಚೇಂಜ್ ಎಂಬ ಹ್ಯಾಶ್ ಟ್ಯಾಗ್ ಬಳಸಿ ಇನ್ನು ಮುಂದೆ ದೇಶದಲ್ಲಿ ಲಸಿಕೆ ಕೊರತೆ ಇರುವುದಿಲ್ಲವೆಂಬುದೇ” ಎಂದು ಟ್ವೀಟ್ ಮಾಡಿದ್ದಾರೆ.
ಇದನ್ನು ಓದಿ: ಕೇಂದ್ರ ಸಚಿವರಿಗೆ ಖಾತೆಗಳ ಹಂಚಿಕೆ: ಅಶ್ವಿನಿ ವೈಷ್ಣವ್ಗೆ ರೈಲ್ವೆ-ಮನ್ಸುಖ್ ಮಾಂಡವಿಯಾಗೆ ಆರೋಗ್ಯ ಖಾತೆ
ಕಾಂಗ್ರೆಸ್ ಪಕ್ಷವು ಸಹ ಆರೋಗ್ಯ ಸಚಿವರಾಗಿದ್ದ ಹರ್ಷವರ್ಧನ್ ಅವರನ್ನು ಕೈಬಿಡುವ ಮೂಲಕ ಕೇಂದ್ರ ಸರ್ಕಾರವು ಕೊರೊನಾ ಸಾಂಕ್ರಾಮಿಕ ರೋಗವನ್ನು ನಿಭಾಯಿಸುವಲ್ಲಿ ವಿಫಲವಾಗಿದೆ ಎಂಬುದನ್ನು ಒಪ್ಪಿಕೊಂಡಂತಾಗಿದೆ ಎಂದು ಟೀಕೆ ಮಾಡಿತ್ತು. ಇದರ ನಂತರ ರಾಹುಲ್ ಗಾಂಧಿ ಟ್ವೀಟ್ ಮೂಲಕ ಬಿಜೆಪಿ ಆಡಳಿತದ ಬಗ್ಗೆ ಪ್ರತಿಕ್ರಿಸಿಯಿದ್ದಾರೆ.
ಕೋವಿಡ್ ಲಸಿಕೆ ಹೊರತೆಯ ವಿಚಾರವಾಗಿ ರಾಹುಲ್ ಗಾಂಧಿ ಅವರು ಈಗಾಗಲೇ ಹಲವು ಬಾರಿ ಟೀಕೆ ಮಾಡಿದ್ದರು. ಕೇಂದ್ರದ ಲಸಿಕಾ ನೀತಿಯನ್ನು ಖಂಡಿಸಿದ್ದರು. ಕಳೆದ ವಾರವಷ್ಟೇ, ಸರ್ಕಾರ ಹಾಕಿಕೊಂಡ ಲಸಿಕಾ ಗುರಿಗಿಂತ 27% ಕಡಿಮೆಯಿದೆ. ಜುಲೈ ಬಂದರೂ ಏಕೆ ಲಸಿಕೆ ಪೂರೈಕೆಯಾಗುತ್ತಿಲ್ಲ ಎಂದು ಪ್ರಶ್ನೆ ಮಾಡಿದರು.