ತಡೆ ಹಿಡಿಯಲ್ಪಟ್ಟ ಬಡ್ತಿ ನೇಮಕಾತಿ ಆದೇಶ ವಾಪಸ್ಸಾತಿ ಬಗ್ಗೆ ಸಚಿವರಿಗೆ ಮನವಿ

ಕಲಬುರಗಿ: ಗ್ರಾಮ ಪಂಚಾಯತಿಗಳಲ್ಲಿ ಬಿಲ್ ಕಲೆಕ್ಟರ್ ಮತ್ತು ಗುಮಾಸ್ತ ಹುದ್ದೆಯಿಂದ ಕಾರ್ಯದರ್ಶಿ ಗ್ರೇಡ್-2 ಮತ್ತು ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಹುದ್ದೆಗೆ ಪದೋನ್ನತಿ (ನೇಮಕಾತಿ)ಯನ್ನು ಕೋವಿಡ್‌ ಕಾರಣದಿಂದಾಗಿ 29-08-2020ರಂದು ಹಣಕಾಸು ಇಲಾಖೆ ನೇಮಕಾತಿ ತಡೆ ಮಾಡಿರುವುದನ್ನು ಕೂಡಲೇ ವಾಪಸ್ಸು ಪಡಯುವ ಬಗ್ಗೆ ಗ್ರಾಮ ಪಂಚಾಯತಿ ನೌಕರರ ಸಂಘ(ಸಿಐಟಿಯು)ವು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆಯ ಸಚಿವ ಕೆ.ಎಸ್‌.ಈಶ್ವರಪ್ಪ ಅವರಿಗೆ ಮನವಿ ಸಲ್ಲಿಸಿದೆ.

ಇದನ್ನು ಓದಿ: ಸುಳ್ಳು ದಾಖಲೆಗಳನ್ನು ಸೃಷ್ಠಿ ಮಾಡಿ ಜಾಲಹಳ್ಳಿಯನ್ನು ಪಟ್ಟಣ ಪಂಚಾಯತಿ ಎಂದು ಘೋಷಣೆ

ಕಲಬುರಗಿ ನಗರಕ್ಕೆ ಆಗಮಿಸಿದ ಸಚಿವರನ್ನು ಭೇಡಿ ಮಾಡಿದ ಗ್ರಾಮ ಪಂಚಾಯತಿ ನೌಕರರ ಸಂಘದ ಮುಖಂಡರು ಸಚಿವರಿಗೆ ನೌಕರರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ವಿವರಿಸಿ ಮನವಿಯನ್ನು ನೀಡಿ ಸೂಕ್ತ ನಿರ್ಧಾರ ಕೈಗೊಳ್ಳಬೇಕೆಮದು ವಿನಂತಿಸಿಕೊಂಡರು.

ಮಾರ್ಚ್ 2020ರಲ್ಲಿ ಆರ್ಥಿಕ ಇಲಾಖೆಯಿಂದ ನೇಮಕಾತಿ ಮಾಡಿಕೊಳ್ಳಲು ಅನುಮೋದನೆ ದೊರೆತಿತ್ತು. ಆದರೆ, ದಿನಾಂಕ 02-07-2021 ರಂದು ಆರ್‌ಡಿಪಿಆರ್‌ ನೇಮಕಾತಿ ಮಾಡಲು ಅವಕಾಶ ಮಾಡಿದ ಮರುದಿನವೇ ಮತ್ತೆ  ದಿನಾಂಕ 03-07-2021 ರಂದು ಕಾರಣಾಂತರಗಳಿಂದ ವಾಪಸ್ಸು ಪಡೆದಿದ್ದರು ಎಂದು ಸಂಘಟನೆಯು ಆರೋಪಿಸಿದೆ.

ಹಾಗಾಗಿ ಸುಮಾರು 20-25 ವರ್ಷಗಳಿಂದ ಕೆಲಸ ಮಾಡಿ ನಿವೃತ್ತಿ ಹೊಂದುತ್ತಿರುವ ನೌಕರರರಿಗೆ ಇದರಿಂದ ಅನ್ಯಾಯವಾಗಲಿದೆ. ಆದ್ದರಿಂದ ನೇಮಕಾತಿ(ಬಡ್ತಿ) ಮಾಡಲು ಆದೇಶ ಮಾಡಲು ಸಚಿವರಿಗೆ ಸೂಕ್ತ ನಿರ್ಧಾರ ಕೈಗೊಳ್ಳಬೇಕೆಂದು ತಿಳಿಸಿರುತ್ತಾರೆ.

ಸಚಿವರು ಆರ್‌ಡಿಪಿಆರ್‌ ನ ಅಧಿಕಾರಿಗಳ ಜೊತೆಯಲ್ಲಿ ಚರ್ಚಿಸಿ ನೇಮಕಾತಿ ಬಗ್ಗೆ ಅವಕಾಶ ಮಾಡುವುದಾಗಿ ಭರವಸೆ ನೀಡಿದ್ದಾರೆ ಎಂದು ಗ್ರಾಮ ಪಂಚಾಯತಿ ನೌಕರರ ಸಂಘ(ಸಿಐಟಿಯು) ಜಿಲ್ಲಾ ಖಜಾಂಚಿ ಶಿವಾನಂದ ಕವಲಗಾ ಬಿ ಮತ್ತು ಕಲಬುರಗಿ ಜಿಲ್ಲಾ ಎಪಿಎಂಸಿ ಮಾಜಿ ಅಧ್ಯಕ್ಷರಾದ ಅವ್ವಣ್ಣ ಮ್ಯಾಕೇರಿ ತಿಳಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *