ನವದೆಹಲಿ: 2019ರ ಲೋಕಸಭಾ ಚುನಾವಣೆಯಲ್ಲಿ ಬಹುಮತ ಪಡೆದು ಎರಡನೇ ಅವಧಿಗೆ ಪ್ರಧಾನಿಯಾದ ನರೇಂದ್ರ ಮೋದಿ ಅವರ ಕೇಂದ್ರ ಸರಕಾರದ ಸಂಪುಟ ಪುನರ್ ರಚನೆ ಇಂದು ಅಧಿಕೃತವಾಗಿ ನಡೆಯಿತು. 2019ರಿಂದ ಸಂಪುಟ ಪುನರ್ ರಚನೆ ನಡೆಸಿದಿರಲಿಲ್ಲ.
ಇದೇ ಮೊದಲ ಬಾರಿಗೆ ಕೇಂದ್ರ ಸಂಪುಟ ಪುನರ್ ರಚನೆಯಾಗಿದ್ದು, 43 ಮಂದಿ ನೂತನ ಸಚಿವರು ಪ್ರಮಾಣವಚನ ಸ್ವೀಕರಿಸಿದ್ದಾರೆ. ಕರ್ನಾಟಕದ ಲೋಕಸಭಾ ಸದಸ್ಯರುಗಳಾದ ಶೋಭಾ ಕರಂದ್ಲಾಜೆ, ಎ. ನಾರಾಯಣಸ್ವಾಮಿ, ಭಗವಂತ ಖೂಬಾ ಮತ್ತು ರಾಜ್ಯಸಭಾ ಸದಸ್ಯರಾದ ರಾಜೀವ್ ಚಂದ್ರಶೇಖರ್ ಅವರು ಕೇಂದ್ರ ಖಾತೆ ರಾಜ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಈಗಾಗಲೇ ಸಚಿವರಾಗಿದ್ದ ರಾಜ್ಯದ ಸಂಸದರೂ ಆದ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವರಾಗಿದ್ದ ಡಿ.ವಿ. ಸದಾನಂಗೌಡ ಸೇರಿ ಒಟ್ಟು 12 ಮಂದಿ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಉತ್ತರ ಪ್ರದೇಶದಲ್ಲಿ ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಅಲ್ಲಿನ 7 ಸಂಸದರಿಗೆ ಕೇಂದ್ರ ಸಂಪುಟದಲ್ಲಿ ಅವಕಾಶ ನೀಡಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಸಂಪುಟದಲ್ಲಿ 81 ಮಂದಿ ಸಚಿವರಾಗಿ ಕಾರ್ಯನಿರ್ವಹಿಸಲು ಅವಕಾಶವಿದ್ದು, ಈಗಾಗಲೇ 52 ಮಂದಿ ಸಚಿವರಾಗಿದ್ದಾರೆ. ಇನ್ನು ಖಾಲಿ ಉಳಿದಿರುವ ಸ್ಥಾನಗಳು ಭರ್ತಿ ಮಾಡಬೇಕಾಗಿತ್ತು. ಅದರಂತೆ ಇಂದು 43 ಮಂದಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಸಚಿವರುಗಳಾಗಿ ಪ್ರಮಾಣ ವಚನ ಸ್ವೀಕರಿಸಿದವರ ವಿವರ
ಸಂಜೆ 6 ಗಂಟೆ ಸರಿಯಾಗಿ ರಾಷ್ಟ್ರಪತಿ ಭವನದಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ಪ್ರಾರಂಭವಾಯಿತು. ಪ್ರಧಾನ ಮಂತ್ರಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಉಪಸ್ಥಿತಿ.
ಮೊದಲಿಗೆ ಕೇಂದ್ರ ಸಚಿವರಾಗಿ ನಾರಾಯಣ್ ರಾಣೆ ಪ್ರಮಾಣ ವಚನ, ಈಶ್ವರನ ಹೆಸರಿನಲ್ಲಿ ರಾಣೆ ಪ್ರಮಾಣ ವಚನ ಸ್ವೀಕಾರದರು. ರಾಣೆ ಅವರು ಮಹಾರಾಷ್ಟ್ರದ ಮಾಜಿ ಮುಖ್ಯಮತ್ರಿ, ರಾಜ್ಯಸಭಾ ಸದಸ್ಯರು.
ನಂತರ ಸರ್ಬಾನಂದ್ ಸೋನೊವಾಲ್ ಪ್ರಮಾಣ ವಚನ ಸ್ವೀಕಾರ (ಅಸ್ಸಾಂ ಮಾಜಿ ಮುಖ್ಯಮಂತ್ರಿ ಸರ್ಬಾನಂದ್ ಸೋನೊವಾಲ್)
ನಂತರದಲ್ಲಿ ಕರ್ನಾಟಕದವರಾದ ಚಿತ್ರದುರ್ಗ ಸಂಸದರಾದ ಎ.ನಾರಾಯಣಸ್ವಾಮಿ ಸಚಿವ ಪ್ರಮಾಣ ವಚನ ಸ್ವೀಕಾರ
ರಾಜ್ಯ ಸಚಿವರಾಗಿ ಮೀನಾಕ್ಷಿ ಲೇಖಿ, ಜಾರ್ಖಂಡ್ನ ಅನ್ನಪೂರ್ಣ ದೇವಿ, ಅಜಯ್ ಭಟ್, ಬಿ.ಎಲ್. ವರ್ಮಾ, ಜೆಡಿಯು ಸಂಸದ ಅಜಯ್ ಕುಮಾರ್, ದೇವುಸಿನ್ಹ್ ಚೌಹಾಣ್ ಪ್ರಮಾಣ ವಚನ ಸ್ವೀಕರಿಸಿದರು.
ನಂತರ ಬೀದರ್ ಕ್ಷೇತ್ರದ ಸಂಸದ ಭಗವಂತ ಖೂಬಾ ರಾಜ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದರು.
ಕ್ಯಾಬಿನೆಟ್ ದರ್ಜೆ ಸಚಿವರಾಗಿ ನಾರಾಯಣ ರಾಣೆ ಮತ್ತು ಸರ್ಬಾನಂದ್ ಪ್ರಮಾಣ ವಚನ ಸ್ವೀಕಾರ. ನಂತರದಲ್ಲಿ ಕೇಂದ್ರ ಸಚಿವರಾಗಿ ಮಧ್ಯಪ್ರದೇಶದ ಸಾಗರ್ ಕ್ಷೇತ್ರದ ಸಂಸದ ಡಾ. ವೀರೇಂದ್ರ ಕುಮಾರ್ ಪದಗ್ರಹಣ. ಜ್ಯೋತಿರಾದಿತ್ಯ ಮಾಧವ್ ರಾವ್ ಸಿಂಧಿಯಾ ಈಶ್ವರನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
ಜೆಡಿಯುನ ರಾಮಚಂದ್ರ ಪ್ರಸಾದ್ ಸಿಂಗ್, ಒಡಿಶಾದ ಅಶ್ವಿನಿ ವೈಷ್ಣವ್, ಎಲ್ಜೆಪಿಯ ಪಶುಪತಿ ಕುಮಾರ್ ಪಾರಸ್ ಪ್ರಮಾಣ ವಚನ ಸ್ವೀಕಾರ ಸ್ವೀಕರಿಸಿದರು.
ಪ್ರಮಾಣ ವಚನ ಸ್ವೀಕರಿಸಿದ ಮತ್ತಷ್ಟು ಸಚಿವರ ವಿವರಗಳು
ಬಿಶ್ವೇಶ್ವರ ತುಡು, ಮುಂಜಾಪರ ಮಹೇಂದ್ರಭಾಯ್, ಡಾ. ಎಲ್ ಮುರುಗನ್, ಶಂತನು ಠಾಕೂರ್ ರಾಜ್ಯ ಸಚಿವರಾಗಿ. ಡಾ. ಭಾರತಿ ಪ್ರವೀಣ್ ಪವಾರ್, ಭಗವತ್ ಕಿಶನ್ ರಾವ್ ಕರಾಡ್, ಡಾ. ರಾಜಕುಮಾರ್ ರಂಜನ್ ಸಿಂಗ್ ರಾಜ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಪ್ರತಿಮಾ ಭೌಮಿಕ್, ಸುಭಾಷ್ ಸರ್ಕಾರ್, ಕಪಿಲ್ ಮೋರೇಶ್ವರ್ ಪಟೇಲ್, ಪಂಕಜ್ ಚೌಧರಿ ರಾಜ್ಯ ಸಚಿವರಾಗಿ
ಹಿಮಾಚಲ ಪ್ರದೇಶದ ಸಂಸದ ಅನುರಾಗ್ ಸಿಂಗ್ ಠಾಕೂರ್ ಮತ್ತು ಜಿ. ಕಿಶನ್ ರೆಡ್ಡಿ, ಆರ್.ಕೆ. ಸಿಂಗ್ ಕ್ಯಾಬಿನೆಟ್ ದರ್ಜೆ ಸಚಿವರಾಗಿ ಪದಗ್ರಹಣ
ಗುಜರಾತ್ ಸಂಸದ ಪುರುಷೋತ್ತಮ್ ರೂಪಾಲಾ, ಭೂಪೇಂದರ್ ಯಾದವ್ ಗುಜರಾತ್ನ ಮನ್ಸುಖ್ ಮಾಂಡವಿಯಾ ಹರ್ದೀಪ್ ಸಿಂಗ್ ಪುರಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ದರ್ಶನ ಸಿಂಗ್ ಜರ್ದೋಶ್, ಭಾನು ಪ್ರತಾಪ್ ಸಿಂಗ್ ವರ್ಮಾ, ಎಸ್.ಪಿ. ಸಿಂಗ್ ಬಘೇಲ್, ಅನುಪ್ರಿಯಾ ಸಿಂಗ್ ಪಟೇಲ್ ರಾಜ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ
ಕರ್ನಾಟಕ ರಾಜ್ಯದವರಾದ ರಾಜ್ಯ ಖಾತೆ ಸಚಿವರಾಗಿ ಉಡುಪಿ–ಚಿಕ್ಕಮಗಳೂರು ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ ಹಾಗೂ ರಾಜ್ಯಸಭಾ ಸದಸ್ಯರಾದ ರಾಜೀವ್ ಚಂದ್ರಶೇಖರ್ ಪ್ರಮಾಣ ವಚನ ಸ್ವೀಕರಿಸಿದರು.