ಕೇಳಿದ್ದು ತುರ್ತು ನೆರವು, ಕೊಟ್ಟದ್ದು………?

ವೇದರಾಜ ಎನ್‌ ಕೆ

ಜೂನ್‍ 28ರಂದು  ಹಣಕಾಸು ಮಂತ್ರಿಗಳು ಕೋವಿಡ್‍ ಎರಡನೇ ಅಲೆಯ ಸಂದರ್ಭದಲ್ಲಿ ಕೇಂದ್ರ ಸರಕಾರದ ಇನ್ನೊಂದು ‘ಉತ್ತೇಜನಾ’ ಪ್ಯಾಕೇಜನ್ನು ಪ್ರಕಟಿಸಿದರು.

ಕಳೆದ ವರ್ಷದ ಪ್ಯಾಕೇಜ್‍ 20 ಲಕ್ಷ ಕೋಟಿ ರೂ.ಗಳದ್ದಾದರೆ, ಈ ವರ್ಷದ್ದು 6.29ಲಕ್ಷ ಕೋಟಿ ರೂ.ಗಳದ್ದು.

ಕಳೆದ ವರ್ಷ ಮೊದಲನೇ ಅಲೆ ಎದ್ದು ಬಂದಾಗ  ಜನಗಳ ಜೇಬುಗಳಲ್ಲಿ ಸ್ವಲ್ಪವಾದರೂ ಹಿಂದಿನ ಉಳಿತಾಯಗಳು ಇದ್ದವು. ಈ ಎರಡನೇ ಅಲೆ ಅಪ್ಪಳಿಸಿರುವಾದ  ಅದೂ ಖಾಲಿಯಾಗಿದೆ…

ಆತಂಕ ಬೇಡ! ಈ ಬಾರಿ  ಇದರ ಪ್ರಭಾವ ಕಡಿಮೆಯಿರುತ್ತದೆ

(ಸಂದೀಪ ಅಧ್ವರ್ಯು, ಟೈಮ್ಸ್‌ ಆಫ್‍ ಇಂಡಿಯಾ)

***

ಅಂದರೆ ಈ ಬಾರಿಯ ಪ್ಯಾಕೇಜ್ ಕಳೆದ ಬಾರಿಗಿಂತ ಭಿನ್ನವಾಗಿದೆಯೇ?

“ಕಳೆದ ವರ್ಷ ನೀವು ಪ್ಯಾಕೇಜ್‍ ಪ್ರಕಟಿಸಿದ ಮೇಲೆ ಏನು ಬದಲಾಗಿದೆ….?”

“ ನನ್ನ ತಲೆಗೂದಲ ಬಣ್ಣ!”

(ಅಲೋಕ್‍ ನಿರಂತರ್, ಫೇಸ್‍ಬುಕ್)

***

ಜೀವನಾಧಾರಗಳನ್ನೇ ಕಳಕೊಂಡವರಿಗೆ ಈ ಬಾರಿಯಾದರೂ ತಕ್ಷಣದ ಪರಿಹಾರ ನಿರೀಕ್ಷಿಸಲಾಗಿತ್ತು. ಅಲ್ಲದೆ ಈ ನಡುವೆ ಬಂಡವಾಳಿಗರೂ ಕೂಡ ಜನಗಳಿಗೆ ನಗದು ವರ್ಗಾವಣೆಯ ಮಾತಾಡಲಾರಂಭಿಸಿದ್ದರು. ಆದರೆ ಈ ಪ್ಯಾಕೇಜಿನಲ್ಲೂ  ಅದು ಕಾಣಲಿಲ್ಲ ಎಂದು ಆರ್ಥಿಕ ತಜ್ಞರೂ ಖೇದ, ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಕೇಳಿದ್ದು                                      ಕೊಟ್ಟದ್ದು

(ಸಜಿತ್‍ ಕುಮಾರ್, ಡೆಕ್ಕನ್‍ ಹೆರಾಲ್ಡ್)

***

ಈ ಪ್ಯಾಕೇಜಿನಲ್ಲಿ ಕೂಡ, ಹಿಂದಿನ ಪ್ಯಾಕೇಜಿನಂತೆ,  ಸರಕಾರ ತಾನೇ  ನೇರವಾಗಿ ಖರ್ಚು ಮಾಡುವ ಐಟಂಗಳು ಸುಮಾರಾಗಿ ನಗಣ್ಯ- ನೋಟು ರದ್ಧತಿ, ಜಿಎಸ್‍ಟಿ, ಅಬಕಾರಿ, ಇಂಧನ ಬೆಲೆಗಳು, ಉದ್ಯೋಗ ನಷ್ಟ, ಆರ್ಥಿಕ ದುರವಸ್ಥೆ ಮುಂತಾದವುಗಳ ಅಡಿಯಲ್ಲಿ ಜಜ್ಜಿ ಹೋಗಿರುವ ಜನಸಾಮಾನ್ಯರಿಗೆ ಬ್ಯಾಂಕುಗಳಿಂದ ಸಾಲ ಕೊಡಿಸುವ, ಅವಕ್ಕೆ ಗ್ಯಾರಂಟಿ ಕೊಡುವ ಮಾತುಗಳೇ………(!)

“ ಹೌದು ಸಾರ್, ಸಾಲಕ್ಕೆ ಖಾತ್ರಿ ಇದೆ”

“ಮೋದಿ ಇದ್ದರೆ ಎಲ್ಲವೂ ಸಾಧ್ಯ”

( ಸಂದೀಪ ಅಧ್ವರ್ಯು, ಫೇಸ್‍ಬುಕ್)

***

ನೀವು ಸಾಲ ಪಡೆಯಬಹುದಾದರೆ

“ತಗೋ, ಒಂದೊಳ್ಳೇ ಬ್ಯಾಂಕ್‍ ಸಾಲ ಗ್ಯಾರಂಟಿ”

(ಪೆನ್‍ ಪೆನ್ಸಿಲ್‍ ಡ್ರಾ)

***

ಈ ಪ್ಯಾಕೇಜಿನಲ್ಲಿ ಪಟ್ರೋಲ್, ಡೀಸೆಲ್, ಅನಿಲ ಸಿಲಿಂಡರ್‌ಗಳ ಮೇಲಿನ ತೆರಿಗೆಗಳಲ್ಲಾದರೂ ರಿಯಾಯ್ತಿ ಕ್ರಮಗಳಿರಬಹುದು ಎಂಬ ನಿರೀಕ್ಷೆಯೂ  ಹುಸಿಯಾಗಿದೆ. ಬದಲಿಗೆ, ಬೆಲೆಯೇರಿಕೆಗಳ ದಾಳಿ ಮುಂದುವರೆದಿದೆ. ಈ ಪ್ಯಾಕೇಜಿನ ಬೆನ್ನ ಹಿಂದೆಯೇ ಎಲ್‍.ಪಿ.ಜಿ. ಸಿಲಿಂಡರ್ ಬೆಲೆಯಲ್ಲಿ 50ರೂ.ಗಳ ಏರಿಕೆ ಮಾಡಲಾಗಿದೆ.

“ಇದು ನಮ್ಮದೇ ಸರಕಾರದ ಒಂದು ಡ್ರೋನ್‍ ದಾಳಿ”

(ಸುಭಾನಿ, ಡೆಕ್ಕನ್‍ ಕ್ರಾನಿಕಲ್)

***

ಕಳೆದ ಏಳು ತಿಂಗಳಲ್ಲಿ ಎಲ್‍.ಪಿ.ಜಿ. ಸಿಲಿಂಡರ್ ಬೆಲೆಯಲ್ಲಿ 250ರೂ. ಹೆಚ್ಚಳವಾಗಿದೆ. ದೇಶದ 730 ಜಿಲ್ಲೆಗಳಲ್ಲಿ 332ರಲ್ಲಿ ಪೆಟ್ರೋಲ್‍ ಬೆಲೆ ಲೀಟರಿಗೆ 100ರೂ. ದಾಟಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

‘ಉತ್ತೇಜನಾ’  ಸಾಲ ಗ್ಯಾರಂಟಿ ಪ್ಯಾಕೇಜಿನಲ್ಲಿ  ಈ ಕುರಿತ ಗ್ಯಾರಂಟಿ ಏನಾದರೂ ಇದೆಯೇ…?

“ಇಲ್ಲ, ಇಲ್ಲ! ಪೆಟ್ರೋಲ್‍ ಖರೀದಿಸಲಿಕ್ಕೆ ಸಾಲ ಗ್ಯಾರಂಟಿ ಇಲ್ಲ, ಸಾರ್….”

(ಸತೀಶ್ ಆಚಾರ್ಯ, ಫೇಸ್‍ಬುಕ್)

***

ಖಂಡಿತಾ ಇಲ್ಲ, ಏಕೆಂದರೆ, ಏಳು ವರ್ಷಗಳ ಹಿಂದಿನವರೆಗೆ ತಾವು ಖಂಡತುಂಡವಾಗಿ ವಿರೋಧಿಸುತ್ತಿದ್ದ ಅಬಕಾರಿ ಸುಂಕಗಳನ್ನು ಈಗ, ಪೆಟ್ರೋಲ್‍ ಮೇಲೆ 258% ದಷ್ಟು ಮತ್ತು ಡೀಸೆಲ್‍ ಮೇಲೆ 820% ದಷ್ಟು ಏರಿಸಿದ್ದು ದೇಶದ ವಿಕಾಸಕ್ಕಾಗಿ ಎಂದು ಕೆಲವೇ ದಿನಗಳ ಹಿಂದೆ ಪೆಟ್ರೋಲಿಯಂ ಮಂತ್ರಿಗಳು ಹೇಳಿಯೇ ಬಿಟ್ಟಿದ್ದಾರಲ್ಲಾ!

“ನಿಮಗೆ ಗೊತ್ತಾ, ಈ ಹಣ ದೇಶದ ವಿಕಾಸಕ್ಕೆ ಖರ್ಚಾಗುತ್ತದೆ.
ಬರೀ 50ರೂ. ಪೆಟ್ರೋಲ್ ಹಾಕಿಕೊಳ್ಳೋಕೆ ನಾಚಿಕೆ ಅನಿಸುವುದಿಲ್ವಾ?”

(ಕೀರ್ತಿಶ್, ಬಿಬಿಸಿ ನ್ಯೂಸ್‍ ಹಿಂದಿ)

***

ಹೌದು, “ನಿಮಗೆ ಏನಾಗಿದೆ?“

ಬೆಲೆಗಳು ಏರಿದರೇನಂತೆ! ನಿಮಗೆ ಕಾಣಿಸ್ತಿಲ್ವೇ?

“ಸೈನಿಕರು ಗಡಿಗಳಲ್ಲಿ ಸಾಯುತ್ತಿದ್ದಾರೆ… ನಾನು 18 ಗಂಟೆ ಕೆಲಸ ಮಾಡ್ತೇನೆ…

ಟುಕ್ಡೆ ಟುಕ್ಡೆ ಗ್ಯಾಂಗ್ ನ್ಯೂ ಇಂಡಿಯಾದ ವಿರುದ್ಧ ಪಿತೂರಿ ಮಾಡುತ್ತಿದ್ದಾರೆ”

(ಸಂದೀಪ್ ಅಧ್ವರ್ಯು, ಫೇಸ್‍ಬುಕ್)

ನಮ್ಮ ವಿವೇಕದ ಬಗ್ಗೆ  ನಾವೇ ಸಂದೇಹ ಪಡುವಂತೆ ಮನಶ್ಶಾಸ್ತ್ರೀಯ ವಿಧಾನಗಳ ಮೂಲಕ ಮಾಡುವುದನ್ನು ಇಂಗ್ಲೀಷಿನಲ್ಲಿ “ಗ್ಯಾಸ್‍ ಲೈಟಿಂಗ್” ಎನ್ನುತ್ತಾರಂತೆ. ಇದೊಂದು ಕ್ರಿಯಾಪದ.

‘ಪ್ರಧಾನ ಮಂತ್ರಿ ಉಜ್ವಲ್‍ ಯೋಜನಾ’ ಮತ್ತು ಕರ್ನಾಟಕದ ‘ಅನಿಲ ಭಾಗ್ಯ ಯೋಜನಾ’ದ ಫಲಾನುಭವಿಗಳಲ್ಲಿ  80% ಕ್ಕೂ ಹೆಚ್ಚು ಕುಟುಂಬಗಳು ಕಳೆದ ಸುಮಾರು ಒಂದು ವರ್ಷದಿಂದ ಒಂದೂ ಸಿಲಿಂಡರ್ ಖರೀದಿಸಲ್ಲವಂತೆ.

ಆದ್ದರಿಂದ ‘ಗ್ಯಾಸ್’ ಈಗ ಹೀಗೆ ಹೊಸರೀತಿಯಲ್ಲಿ ‘ಗ್ಯಾಸ್‍ ಲೈಟಿಂಗ್’ ನಲ್ಲಿ  ಕ್ರಿಯೆಗೆ ಬಂದಿದ್ದರೆ ಆಶ್ಚರ್ಯವೇನು?

***

ಆದರೆ  ಅದೃಷ್ಟವಶಾತ್ ಇದು ಎಲ್ಲ ರಂಗಗಳಲ್ಲೂ ಫಲ ಕೊಡುತ್ತಿಲ್ಲ. ದೇಶದ ಸರ್ವೋಚ್ಚ ನ್ಯಾಯಾಲಯ ಹಿಂದಿನ ಲಸಿಕೆ ನೀತಿ “ನಿರಂಕುಶ ಮತ್ತು ತರ್ಕಹೀನ”ಎಂದು ವರ್ಣಿಸಿದ ಮೇಲೆ  ಈಗ ಆ ಸಾಲಿಗೆ ಇನ್ನೂ ಕೆಲವು ಪದಗಳು ಸೇರಿವೆ-“ಅಕ್ಷಮ್ಯ ಅಸಡ್ಡೆ’, “ಕ್ರಿಯಾಹೀನ”, ಇತ್ಯಾದಿ.

ಕೋವಿಡ್‍ನಿಂದ ಕಂಗಾಲಾದ ಜನರಿಗೆ  ಗಮನಾರ್ಹವಾದುದೇನೂ ಇಲ್ಲದ ಪ್ಯಾಕೇಜಿನ ಪ್ರಕಟಣೆಯ ಮರುದಿನ, ಜೂನ್ 29ರಂದು ಸುಪ್ರಿಂ ಕೋರ್ಟಿನ ಒಂದು ನ್ಯಾಯಪೀಠ ಕೇಂದ್ರ ಸರಕಾರದ ಕಾರ್ಮಿಕ ಇಲಾಖೆಯದ್ದು “ಅಕ್ಷಮ್ಯ ಅಸಡ್ಡೆ”ಎಂದಿತು. “ಕಾರ್ಮಿಕ ಮಂತ್ರಾಲಯ ವಲಸೆ ಕಾರ್ಮಿಕರ ಆತಂಕಗಳ ಬಗ್ಗೆ ಸ್ಪಂದಿಸಿಲ್ಲ. ಮಂತ್ರಾಲಯದ ಕ್ರಿಯಾಹೀನತೆಯ ಬಗ್ಗೆ ಬಲವಾದ ಅಸಮ್ಮತಿ ವ್ಯಕ್ತಪಡಿಸಬೇಕಾಗಿದೆ” ಎಂದು ಹೇಳಿತು.

ಜೂನ್ 30ರಂದು ಇನ್ನೊಂದು ಸುಪ್ರಿಂ ಕೋರ್ಟ್ ಪೀಠ “ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎನ್‌.ಡಿ.ಎಂ.ಎ.) ತನ್ನ ಶಾಸನಬದ್ಧ ಕರ್ತವ್ಯವನ್ನು ನಿಭಾಯಿಸುವಲ್ಲಿ ವಿಫಲವಾಗಿದೆ” ಎಂದು ಕಟುವಾಗಿ ಟೀಕಿಸಿತು. ಇದು ಪ್ರಧಾನ ಮಂತ್ರಿಗಳ ಅಧ್ಯಕ್ಷತೆಯಲ್ಲಿರುವ ಪ್ರಾಧಿಕಾರ ಎನ್ನುವುದನ್ನು ಗಮನಿಸಬೇಕು.

(ಪಿ.ಮಹಮ್ಮದ್, ಆಂದೋಲನ)

***

ಸುಪ್ರಿಂ ಕೋರ್ಟ್ ಪೀಠಗಳು ಈ ಎರಡು ವಿಚಾರಣೆಗಳಲ್ಲಿ, ಜುಲೈ 31ರೊಳಗೆ ಅಸಂಘಟಿತ ಕಾರ್ಮಿಕರ ಅಂಕಿ-ಅಂಶಗಳ ಮಾಹಿತಿ ಕೆಲಸವನ್ನು ಪೂರ್ಣಗೊಳಿಸಬೇಕು, ಮತ್ತು “ಒಂದು ದೇಶ-ಒಂದು ರೇಷನ್‍ ಕಾರ್ಡ್ʼʼ ಧೋರಣೆಯನ್ನು ಜಾರಿಗೊಳಿಸಿ ಯಾವ ವಲಸೆ ಕಾರ್ಮಿಕರೂ ಹಸಿವಿನಿಂದ ಬಳಲದಂತೆ ನೋಡಿಕೊಳ್ಳಬೇಕು  ಮತ್ತು ಕೋವಿಡ್‍ ನಿಂದ ಮರಣ ಹೊಂದಿದವರ ಕುಟುಂಬಗಳಿಗೆ ಎನ್‍.ಡಿ.ಎಂ.ಎ. ಅನುತಾಪದ ಪರಿಹಾರವನ್ನು ಕೊಡಬೇಕು ಎಂದು ಆದೇಶಿಸಿದೆ.

“ಮಾಡಲಾಗುವುದು” ಎಂದರೆ “ಮಾಡಬಹುದು” ಎಂದೇನೂ ಅರ್ಥವಲ್ಲ:”

‘ಸತ್ಯ ‘ಗೆಲ್ಲುತ್ತದೆ’ ಎನ್ನಬೇಕೇ ’ ಅಥವ ʼ

ಸತ್ಯ ‘ಗೆಲ್ಲಬಹುದು’ ಎಂದೇ, ಸಾರ್?

(ಆರ್.ಪ್ರಸಾದ್, ಇಕನಾಮಿಕ್‍ ಟೈಮ್ಸ್)

Donate Janashakthi Media

Leave a Reply

Your email address will not be published. Required fields are marked *