ಕಾರಟಗಿ: ಬರಗೂರಿನಲ್ಲಿ ಮರ್ಯಾದೆಗೇಡು ಹತ್ಯೆಗೆ ಈಡಾದ ದಾನಪ್ಪನ ಮನೆಗೆ ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಉಪಾಧ್ಯಕ್ಷರಾದ ಕೆ.ನೀಲಾ ಅವರ ನೇತೃತ್ವದ ತಂಡ ಭೇಟಿ ಮಾಡಿ ದಾನಪ್ಪನ ಕುಟುಂಬದ ಸದಸ್ಯರಿಗೆ ಸಾಂತ್ವನ ನೀಡಿತು.
ದಾನಪ್ಪನ ಹತ್ಯೆಗೆ ಕಾರಣರಾದ ಎಲ್ಲಾ ಕೊಲೆಗಾರರಿಗೆ ಕಠಿಣ ಶಿಕ್ಷೆ ಆಗಬೇಕು, ಕುಟುಂಬದ ಸದಸ್ಯರೊಬ್ಬರಿಗೆ ಸರ್ಕಾರಿ ನೌಕರಿ ಕೊಡಬೇಕು, ಕುಟುಂಬಕ್ಕೆ ಭೂಮಿ ಕೊಡಬೇಕು ಹಾಗೂ ಪರಿಹಾರ ನಿಧಿ ನೀಡುವವರೆಗೂ ನಾವು ದಾನಪ್ಪನ ಕುಟುಂಬದ ಜೊತೆಗಿದ್ದೇವೆ ಎಂದು ದಾನಪ್ಪನ ಕುಟುಂಬಕ್ಕೆ ಧೈರ್ಯ ತುಂಬಿದರು.
ನಿಯೋಗದಲ್ಲಿ ಮಹಿಳಾ ಸಂಘಟನೆಯ ರಾಜ್ಯ ಉಪಾಧ್ಯಕ್ಷರಾದ ಕಾಂ. ಕೆ.ನೀಲಾ ಗುಲ್ಬರ್ಗಾ, ದಲಿತ ಹಕ್ಕು ಸಮಿತಿಯ ರಾಜ್ಯ ಸಮಿತಿ ಸದಸ್ಯ ಸುಧಾಮ್ ಧನ್ನಿ, ದಲಿತ ಹಕ್ಕು ಸಮಿತಿಯು ಮುಖಂಡರಾದ ಪಾಂಡುರಂಗ ಮಾವಿನಕರ್, ಸಿಪಿಐಎಮ್ ಕೊಪ್ಪಳ ಜಿಲ್ಲಾ ಕಾರ್ಯದರ್ಶಿ ಜಿ.ನಾಗರಾಜ, ರಾಯಚೂರು ಜಿಲ್ಲಾ ಕಾರ್ಮಿಕ ಮುಖಂಡರಾದ ಶೇಕ್ಷಾಖಾದ್ರಿ, ಸಮುದಾಯ ರಾಜ್ಯ ಕಾರ್ಯದರ್ಶಿ ಎಸ್.ದೇವೇಂದ್ರಗೌಡ, ಕೊಪ್ಪಳ ಡಿಎಚ್ಎಸ್ ಮುಖಂಡರಾದ ಹುಸೇನಪ್ಪ, ಬಸವರಾಜ, ಅಮರೇಶ್, ಅಬ್ದುಲ್‌ಸಮದ್ ಚೌದ್ರಿ ಭಾಗವಹಿಸಿದ್ದರು.