ರಾಯಚೂರು: ಜಿಲ್ಲೆಯಲ್ಲಿ ಪೆಟ್ರೋಲ್ ಬಂಕ್ವೊಂದರಲ್ಲಿ ವಾಹನಗಳಿಗೆ ನೀರು ಮಿಶ್ರಿತ ಡಿಸೇಲ್ ಹಾಕಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಡೀಸಲ್ಗೆ ನೀರು ಬೆರೆಸಿ ಹಾಕಿದ್ರಿಂದ ವಾಹನಗಳು ಸೀಜ್ ಆಗಿವೆ ಎನ್ನಲಾಗಿದೆ. ಹೀಗಾಗಿ ವಾಹನ ಮಾಲೀಕರು ಪೆಟ್ರೋಲ್ ಬಂಕ್ಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯ ಮುದಗಲ್ ಪಟ್ಟಣದ ಎಸ್.ಆರ್ ಮಲ್ಲಿಕಾರ್ಜುನ ಪೆಟ್ರೋಲ್ ಬಂಕ್ನಲ್ಲಿ ಈ ಘಟನೆ ನಡೆದಿದೆ. ನಿನ್ನೆ ರಾತ್ರಿ ಎರಡು ಕಾರುಗಳಿಗೆ ಹಾಕಿಸಿದ್ದ ಡೀಸಲ್ನಲ್ಲಿ ನೀರು ಪತ್ತೆಯಾಗಿದೆ. ಮುದಗಲ್ನಿಂದ ರಾಯಚೂರಿಗೆ ಹೋಗುವಾಗ ನಿನ್ನೆ ಎರಡು ಕಾರುಗಳು ಮಧ್ಯಾಹ್ನ ಸೀಜ್ ಆಗಿವೆ ಎಂದು ಮಾಲೀಕರು ಹೇಳಿದ್ದಾರೆ.
ಇದರಿಂದ ಆಕ್ರೋಶಗೊಂಡ ಕಾರ್ ಚಾಲಕರು ಇಂದು ಬಂಕ್ಗೆ ಮುತ್ತಿಗೆ ಹಾಕಿ ಸಿಬ್ಬಂದಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.