ಕೋವಿಡ್ 3ನೇ ಅಲೆ ಮತ್ತು ಮಕ್ಕಳ ಮೇಲಿನ ಪರಿಣಾಮ–ಎಂ.ಎಸ್.ಸಿ. ವತಿಯಿಂದ ನಡೆದ ವಿಚಾರ ಸಂಕಿರಣ

ಬಳ್ಳಾರಿ: ಜೂನ್ 15. ಮೆಡಿಕಲ್ ಸರ್ವಿಸ್ ಸೆಂಟರ್, ರಾಜ್ಯ ಸಮಿತಿಯು ಕೋವಿಡ್ 3ನೇ ಅಲೆ ಮತ್ತು ಮಕ್ಕಳ ಮೇಲಿನ ಪರಿಣಾಮ ಕುರಿತು ಆನ್‌ಲೈನ್ ಚರ್ಚೆಯನ್ನು ಹಮ್ಮಿಕೊಂಡಿತ್ತು.

ಕರ್ನಾಟಕ ಐ ಎಂ ಎ ಮಾಜಿ ಅಧ್ಯಕ್ಷರು ಹಾಗೂ ಖ್ಯಾತ ಮಕ್ಕಳ ತಜ್ಞರಾದಡಾ. ಯೋಗಾನಂದರೆಡ್ಡಿ ಹಾಗು ಸಾಂಕ್ರಾಮಿಕ ರೋಗ ಶಾಸ್ತçಜ್ಞರಾದ ಡಾ. ಪ್ರಕಾಶ್ ಕೆ ಚರ್ಚೆಯಲ್ಲಿ ಭಾಗವಹಿಸಿ ಹಲವು ಉಪಯುಕ್ತ ಮಾಹಿತಿ ನೀಡಿ ಪ್ರಶ್ನೆಗಳಿಗೆ ಉತ್ತರಿಸಿದರು.

ಡಾ. ಯೋಗಾನಂದರೆಡ್ಡಿಯವರು ಮಾತನಾಡುತ್ತಾ, ಹಿಂದೆ ಆಗಿಹೋದ ಸಾಂಕ್ರಾಮಿಕ ಅಲೆಗಳನ್ನು ಅಭ್ಯಾಸಿಸಿ ಮತ್ತು ಪ್ರಸಕ್ತ ಕೋವಿಡ್ ಸಾಂಕ್ರಾಮಿಕವನ್ನು ವೈಜ್ಞಾನಿಕವಾಗಿ ವಿಶ್ಲೇಷಿಸಿ ಹೇಳುವುದಾದರೆ, 3ನೇ ಅಲೆಯ ಬಗ್ಗೆ ಪೋಷಕರುಆತಂಕ ಪಡುವ ಅಗತ್ಯವಿಲ್ಲ. ಈಗಾಗಲೇ ಮೊದಲನೆ ಮತ್ತು ಎರಡನೆಯ ಅಲೆಯಲ್ಲಿ ಅಂದಾಜು 24% ಮಕ್ಕಳಿಗೆ ಕರೋನಾ ಸೋಂಕು ಬಂದು ಹೋಗಿದೆ. ತೀವ್ರತರವಾದ ರೋಗ ಅವರಲ್ಲಿಕಂಡು ಬಂದಿಲ್ಲ. ಮತ್ತು ಮಕ್ಕಳ ತಜ್ಞರ ಅಭಿಪ್ರಾಯವೂ ಸಹ ಇದೇ ಆಗಿದೆ. ಆದರೂ, ಸರ್ಕಾರ ಮತ್ತು ಆರೋಗ್ಯ ಇಲಾಖೆ ತನ್ನ ತಯಾರಿಯನ್ನು ಮಾಡಬೇಕು, ಸಾರ್ವಜನಿಕರು ಪೋಷಕರು ಈಗಾಗಲೇ ತಿಳಿದಿರುವ ಮುಂಜಾಗ್ರತಾ ಕ್ರಮಗಳನ್ನು ಮುಂದುವರೆಸಬೇಕು.

ಸರ್ಕಾರವು ಕೈಗೊಳ್ಳುವ ತಯಾರಿಯು ಕೇವಲ ಈಗಿನ ಸಾಂಕ್ರಾಮಿಕತೆಗಷ್ಟೇ ಸೀಮಿತಗೊಳಿಸದೆ, ದೂರದೃಷ್ಟಿಇಟ್ಟುಕೊಂಡು, ಮುಂದಿನ ಕನಿಷ್ಟ 10 ವರ್ಷವನ್ನು ಗಮನದಲ್ಲಿ ಇಟ್ಟುಕೊಂಡು ತಯಾರಿ ಮಾಡಬೇಕು ಎಂದುಅಭಿಪ್ರಾಯ ಪಟ್ಟರು. ಪೋಷಕರು ಕೇಳುವ ಪ್ರಶ್ನೆಗೆ ಉತ್ತರಿಸುತ್ತಾ ಅವರಿಗೆ ಧೈರ್ಯ ನೀಡಿ, ಆತಂಕಗಳನ್ನು ದೂರಮಾಡಿದ್ದಾರೆ;

ಈ ಅಲೆಗಳು ಬರುವ ಪ್ರಕ್ರಿಯೆ ಮತ್ತು 3ನೇ ಅಲೆಯನ್ನು ನಿಭಾಯಿಸುವುದು ಹೇಗೆ ಎಂಬ ಪ್ರಶ್ನೆಗೆಉತ್ತರಿಸುತ್ತಾ, ಡಾ. ಪ್ರಕಾಶ್ ಕೆ ರವರು, ವೈರಾಣುವಿನ ಸಾಂಕ್ರಾಮಿಕಗಳು ಅಲೆಗಳಲ್ಲಿ ಬರುತ್ತವೆ. ಅತಿಹೆಚ್ಚು ಜನರು ಸೋಂಕಿತರಾದಾಗ ಅದು ಅಲೆಯಾಗುತ್ತದೆ. 3ನೇ ಅಲೆಯನ್ನು ನಿಭಾಯಿಸುವುದಕ್ಕೆ ಸರಿಯಾದ ತಯಾರಿ ಅವಶ್ಯಕವಾಗಿದೆ. ಆಸ್ಪತ್ರೆಗಳಲ್ಲಿ ಮಕ್ಕಳ ವಾರ್ಡ್, ಮಕ್ಕಳ ಐಸಿಯು, ಅವರ ವಯಸ್ಸಿಗೆ ಬೇಕಾದ ಸಾಮಗ್ರಿ ಹಾಗು ಔಷಧಗಳು ಇವುಗಳನ್ನು ಸರಿಯಾದ ಪ್ರಮಾಣದಲ್ಲಿ ಕೊರತೆಯಾಗದಹಾಗೆ ಸಿದ್ಧತೆ ಮಾಡಿಕೊಂಡಿರಬೇಕು. ಜನರು ಮುಂಜಾಗ್ರತಾ ಕ್ರಮಗಳಲ್ಲಿ ಸಡಿಲತೆತೋರಿಸದೆ ಮುಂದುವರಿಸಬೇಕು. ಜನರ ಸಾರ್ವಜನಿಕ ಸಭೆ ಸಮಾರಂಭಗಳು, ಜನಜಂಗುಳಿಗಳನ್ನು ತಡೆಯಬೇಕು ಎಂದರು.

ಇಬ್ಬರೂತಜ್ಞವೈದ್ಯರು, 3ನೇ ಅಲೆಯ ಬಗ್ಗೆ ಪೋಷಕರಿಗೆ ಮತ್ತುಜನರಿಗೆ, ಆತಂಕ ಪಡುವುದು ಬೇಡ. ಆದರೆ ಸರಿಯಾದ ಮುಂಜಾಗ್ರತಾ ಕ್ರಮಗಳು ಹಾಗು ಸರ್ಕಾರದ ತಯಾರಿ ಅವಶ್ಯವೆಂಬ ಸಂದೇಶ ನೀಡಿದರು. ಚರ್ಚೆಯನ್ನು ಎಂಎಸ್‌ಸಿಯ ರಾಜ್ಯಜಂಟಿ ಕಾರ್ಯದರ್ಶಿ ಡಾ. ಹೇಮಾದೇವಿ ಬಿ ಎನ್ ನಡೆಸಿಕೊಟ್ಟಿದ್ದಾರೆ.

ವರದಿ : ಬಿ. ಪಂಪನಗೌಡ

Donate Janashakthi Media

Leave a Reply

Your email address will not be published. Required fields are marked *