ಹುಣಸೂರು: ಕೋವಿಡ್ ಲಾಕ್ಡೌನ್ನಿಂದಾಗಿ ಸಂಕಷ್ಟಕ್ಕೀಡಾಗಿರುವ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಶಂಕರಪುರ ಹಾಡಿಯ ಹಕ್ಕಿಪಿಕ್ಕಿ ಅಲೆಮಾರಿ ಜನರಿಗೆ ಆಹಾರ ಕಿಟ್ ವಿತರಣೆಯನ್ನು ಹಮ್ಮಿಕೊಳ್ಳಲಾಗಿತ್ತು.
ಲಾಕ್ಡೌನ್ ಪರಿಣಾಮವಾಗಿ ಜನತೆಗೆ ಅತ್ಯಂತ ಸಮಪರ್ಕವಾಗಿ ನೆರವಿನ ಹಸ್ತವನ್ನು ಚಾಚದ ಸಂದರ್ಭದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರಕಾರಗಳು ಒಟ್ಟು ಜನಸಮುದಾಯವನ್ನೆ ಮರೆತಿದೆ. ಇದೇ ಸಂದರ್ಭದಲ್ಲಿ ವಿಮಾ ನಿಗಮ ನೌಕರರ ಸಂಘ ಮೈಸೂರು ವಿಭಾಗದ ವತಿಯಿಂದ ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ಸುಮಾರು 80 ಕುಟುಂಬಗಳಿಗೆ ಅಗತ್ಯ ವಸ್ತುಗಳ ಕಿಟ್ ಗಳನ್ನು ವಿತರಿಸಲಾಯಿತು.
ಈ ಸಂಧರ್ಭದಲ್ಲಿ ವಿಮಾ ನಿಗಮ ನೌರರ ಸಂಘದ ಮೈಸೂರು ವಿಭಾಗದ ಅಧ್ಯಕ್ಷರಾದ ಎಸ್.ಕೆ ರಾಮು, ಪ್ರಧಾನ ಕಾರ್ಯದರ್ಶಿ ಎಸ್.ಎಸ್.ನಾಗೇಶ್, ಜಂಟಿ ಕಾರ್ಯದರ್ಶಿ ಚನ್ನಪ್ಪ, ವಲಯ ಜಂಟಿ ಕಾರ್ಯದರ್ಶಿ ಜೆ.ಸುರೇಶ್, ಕರ್ನಾಟಕ ಪ್ರಾಂತ ರೈತ ಸಂಘ (ಕೆಪಿಆರ್ಎಸ್) ಜಿಲ್ಲಾ ಕಾರ್ಯದರ್ಶಿ ಜಗದೀಶ್ ಸೂರ್ಯ, ಕೆಪಿಆರ್ಎಸ್ ಶಂಕರಪುರ ಹಾಡಿ ಘಟಕದ ಅಧ್ಯಕ್ಷ ಅಭಿಮಾನ್ , ಕಾರ್ಯದರ್ಶಿ ಲೋಕೇಶ್, ಗೋಪಾಲ್, ಗ್ರಾಮ ಪಂಚಾಯತಿ ಅಧ್ಯಕ್ಷೆ ನೂರಾಣಿ ಪುಳ್ಳೆ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.