ಬಿಜೆಪಿ ಎಂಪಿ ಗೌತಮ್‌ ಗಂಭೀರ್‌ ವಿರುದ್ಧ ತನಿಖೆಗೆ ಹೈಕೋರ್ಟ್‌ ಆದೇಶ

ನವದೆಹಲಿ: ಕೋವಿಡ್-19 ರೋಗಿಗಳ ಆರೈಕೆಯಲ್ಲಿ ಬಳಕೆಯಾಗುವ ಔಷಧಿಗಳನ್ನು  ದೊಡ್ಡ ಪ್ರಮಾಣದಲ್ಲಿ ಸಂಗ್ರಹಿಸಿ ವಿತರಣೆ ಮಾಡುತ್ತಿರುವ ಮಾಜಿ ಕ್ರಿಕೆಟಿಗ ಮತ್ತು ಬಿಜೆಪಿ ಸಂಸದ ಗೌತಮ್ ಗಂಭೀರ್ ವಿರುದ್ಧ ತನಿಖೆ ಕೈಗೊಳ್ಳಬೇಕೆಂದು ದೆಹಲಿ ಹೈಕೋರ್ಟ್‌ ನಿರ್ದೇಶನ ನೀಡಿದೆ.

ಕೋವಿಡ್‌ ತಡೆಯುವಲ್ಲಿ ಬಳೆಕಯಾಗುವ ಫ್ಯಾಬಿಫ್ಲು ಔಷಧಿಯನ್ನು ಅಪಾರ ಪ್ರಮಾಣದಲ್ಲಿ ಅವರು ಹೇಗೆ ಸಂಗ್ರಹಿಸಿಕೊಂಡರು ಎಂಬುದರ ತಿಳಿಯಬೇಕಿದೆ ಎಂದು ನ್ಯಾಯಾಲಯ ಇಂದು ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ಗೆ ನಿರ್ದೇಶನ ನೀಡಿ ತನಿಖೆಗೆ ಆದೇಶಿಸಿದೆ.

ಇದನ್ನು ಓದಿ: ಕೋವಿಡ್‌ ಮರಣ: 4 ಲಕ್ಷ ರೂ.ಗಳ ಪರಿಹಾರ ಸಾಧ್ಯವೇ? ಕೇಂದ್ರದಿಂದ ಪ್ರತಿಕ್ರಿಯೆ ಕೇಳಿದ ಸುಪ್ರೀಂ

ದೇಶದೆಲ್ಲಡೆ ಕೋವಿಡ್‌ ಸಾಂಕ್ರಾಮಿಕ ಸಮಯದಲ್ಲಿ ಔಷಧಿಗಳನ್ನು ಸಂಗ್ರಹಿಸಿಟ್ಟಿದ್ದಕ್ಕಾಗಿ ಗಂಭೀರ್ ಮತ್ತು ಎಎಪಿ ಶಾಸಕರಾದ ಪ್ರೀತಿ ತೋಮರ್ ಮತ್ತು ಪ್ರವೀಣ್ ಕುಮಾರ್ ವಿರುದ್ಧ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ವಿಪಿನ್ ಸಿಂಗ್ ಮತ್ತು ಜಸ್ಮೀತ್ ಸಂಘಿ ಅವರಿದ್ದ ನ್ಯಾಯಪೀಠವು ಆದೇಶವನ್ನು ನೀಡಿದೆ.

“ಉದ್ದೇಶ ಸರಿ ಇದ್ದರೂ ಆ ಪ್ರಕ್ರಿಯೆಯಲ್ಲಿ ಎಲ್ಲೆ ಮೀರಿದರೆ ಕಾನೂನು ತನ್ನದೇ ಆದ ಕ್ರಮ ಕೈಗೊಳ್ಳಬೇಕಾಗುತ್ತದೆ. ಉತ್ತಮ ಉದ್ದೇಶವಿದ್ದರೂ ಅವು ದುಷ್ಕೃತ್ಯಗಳೇ ಅಗಿವೆ” ಎಂದು ನ್ಯಾಯಾಲಯ ಹೇಳಿದೆ.

“ನಾವು ಅವರ ಉದ್ದೇಶವನ್ನು ಅನುಮಾನಿಸಿಲ್ಲ. ಆದರೆ ಅವರು ಅನುಸರಿಸಿದ ರೀತಿ ಸಮರ್ಪಕವಾಗಿಲ್ಲ  ಅವರು ನಿಜವಾಗಿಯೂ ಅಪಚಾರ ಮಾಡಿದ್ದಾರೆ. ಮಾರುಕಟ್ಟೆಯಿಂದ ಇಷ್ಟು ಅಧಿಕವಾದ ಔಷಧಿಗಳನ್ನು ಖರೀದಿ ವಿಧಾನ ಸರಿಯಾದುದ್ದಲ್ಲ” ಎಂದು ನ್ಯಾಯಪೀಠ ಹೇಳಿದೆ.

ಒಬ್ಬ ಚುನಾಯಿತ ಪ್ರತಿನಿಧಿಯು ಆಗಿರುವ ಗೌತಮ್ ಗಂಭೀರ್ ಔಷಧಗಳ ಪೂರೈಕೆ ಕಡಿಮೆಯಾಗಿರುವ ದೊಡ್ಡ ಪ್ರಮಾಣದಲ್ಲಿ ಔಷಧಿಗಳನ್ನು ಖರೀದಿಸುವ ಮೂಲಕ ಅವರು ನಿಯಮ ಉಲ್ಲಂಘಿಸಿದ್ದಾರೆ ಎಂದು ನ್ಯಾಯಲಯ ಅಭಿಪ್ರಾಯ ವ್ಯಕ್ತಪಡಿಸಿದೆ.

ಯಾವುದೇ ತನಿಖೆ ನಡೆದರೂ, ಔಷಧ ನಿಯಂತ್ರಕ ಅದನ್ನು ಪರಿಶೀಲಿಸಲಿಸಬೇಕು ಹಾಗೂ ಒಂದು ವಾರದೊಳಗೆ ಸ್ಥಿತಿಗತಿ ವರದಿಯನ್ನು ಸಲ್ಲಿಸುವಂತೆ ಸೂಚಿಸಲಾಗಿದೆ.

ಏಪ್ರಿಲ್‌ 22 ರಿಂದ ಮೇ 7 ರ ನಡುವೆ ಗೌತಮ್‌ ಗಂಭೀರ್‌ ಪೌಂಡೇಷನ್‌ ವತಿಯಿಂದ ಕೋವಿಡ್‌ ಆರೈಕೆಗೆ ಸಂಬಂಧಿಸಿದಂತೆ ಉಚಿತವಾಗಿ ಔಷಧಿಗಳನ್ನು ವಿತರಣೆ ಮಾಡಲು ಸಂಗ್ರಹಿಸಲಾಗುತ್ತಿತ್ತು.

ಕೋವಿಡ್‌ ಔಷಧಗಳ ಅಕ್ರಮ ದಾಸ್ತಾನು ಮಾಡಿದ್ದಾರೆ ಎಂದು ಗೌತಮ್‌ ಗಂಭೀರ್‌ ಹಾಗೂ ಎಎಪಿಯ ಇಬ್ಬರು ಶಾಸಕರ ವಿರುದ್ಧ ಎರಡು ಪ್ರತ್ಯೇಕ ಮೊಕದ್ದಮೆಗಳ ವಿಚಾರಣೆ ಇಂದು ನ್ಯಾಯಾಲಯ ನಡೆಸಿತು.  ಪ್ರಕರಣದ ಮುಂದಿನ ವಿಚಾರಣೆಯನ್ನು ಮೇ 31ಕ್ಕೆ ಮುಂದೂಡಲಾಗಿದೆ.

Donate Janashakthi Media

Leave a Reply

Your email address will not be published. Required fields are marked *