ನವದೆಹಲಿ: ಕೋವಿಡ್ ಸಾಂಕ್ರಾಮಿಕ ರೋಗದಿಂದ ಮರಣ ಹೊಂದಿದ ವ್ಯಕ್ತಿಯ ಕುಟುಂಬದವರಿಗೆ ರೂ.4 ಲಕ್ಷ ಪರಿಹಾರ ನೀಡಲು ತಿಳಿಸಬೇಕೆಂದು ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಕೆಯಾಗಿರುವ ಅರ್ಜಿಯ ಬಗ್ಗೆ ಪ್ರತಿಕ್ರಿಯಿಸಬೇಕೆಂದು ಕೇಂದ್ರ ಸರ್ಕಾರಕ್ಕೆ ನ್ಯಾಯಾಲಯ ಕೇಳಿದೆ.
ನ್ಯಾಯಮೂರ್ತಿ ಅಶೋಕ್ ಭೂಷಣ್ ಮತ್ತು ಎಂಆರ್ ಶಾ ಅವರಿದ್ದ ರಜೆ ದಿನದ ನ್ಯಾಯಪೀಠವು ಕೋವಿಡ್-19 ಸಂತ್ರಸ್ತರಿಗೆ ನೀಡಲಾಗುತ್ತಿರುವ ಮರಣ ಪ್ರಮಾಣಪತ್ರದ ಕುರಿತು ಐಸಿಎಂಆರ್ ಮಾರ್ಗಸೂಚಿಗಳನ್ನು ಹಾಜರುಪಡಿಸಬೇಕೆಂದು ಸಹ ತಿಳಿಸಿರುವ ನ್ಯಾಯಪೀಠವು ಈ ರೀತಿ ಮರಣ ಪ್ರಮಾಣಪತ್ರಗಳನ್ನು ನೀಡುವುದಕ್ಕೆ ಏಕರೂಪ ನೀತಿ ಹೊಂದಿರಬೇಕೆಂದು ತಿಳಿಸಿದೆ.
ಇದನ್ನು ಓದಿ: ಮೋದಿ ಸರ್ಕಾರವು ಕತ್ತಲೆಯಲ್ಲಿ ತಡಕಾಡುತ್ತಿರುವಾಗ ನ್ಯಾಯಾಲಯಗಳು ಕೋವಿಡ್ ಬಿಕ್ಕಟ್ಟಿನಲ್ಲಿ ನೆರವು ನೀಡುತ್ತಿವೆ
ವಿಕೋಪ ನಿರ್ವಹಣೆ ನೀತಿ, 2005ರ ಅಡಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಕೋವಿಡ್‌ನಿಂದ ಮೃತಪಟ್ಟ ಕುಟುಂಬದವರಿಗೆ ₹4 ಲಕ್ಷ ಪರಿಹಾರವನ್ನು ಒದಗಿಸಬೇಕು ಮತ್ತು ಮರಣ ಪ್ರಮಾಣ ಪತ್ರ ಒದಗಿಸುವ ವಿಚಾರದಲ್ಲಿ ಒಂದೇ ನೀತಿ ಅನುಸರಿಸಬೇಕು ಎಂದು ಕೋರಿ ಸಲ್ಲಿಕೆಯಾದ ಎರಡು ಪ್ರತ್ಯೇಕ ಅರ್ಜಿಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರಕಾರ ಪ್ರತಿಕ್ರಿಯೆ ನೀಡಬೇಕು. ಒಂದು ವೇಳೆ ಸರಕಾರ ಪರಿಹಾರ ಒದಗಿಸಿದರೂ, ಏಕರೂಪ ನೀತಿ ಇಲ್ಲವಾದಲ್ಲಿ ಮೃತಪಟ್ಟ ವ್ಯಕ್ತಿಯ ಕುಟುಂಬದವರಿಗೆ ಪರಿಹಾರ ಮೊತ್ತವನ್ನು ಪಡೆಯಲು ಅನಾನುಕೂಲತೆ ಎದುರಾಗಬಹುದು ಎಂದು ನ್ಯಾಯಮೂರ್ತಿಗಳು ಅಭಿಪ್ರಾಯ ಪಟ್ಟದ್ದಾರೆ.
ಸಂತ್ರಸ್ತರ ಕುಟುಂಬಗಳಿಗೆ ಕೋವಿಡ್-19 ನಿಂದ ಪರಿಹಾರ ಪಡೆಯುವುದು ಹಾಗೂ ಇತರ ಪ್ರಯೋಜನಗಳನ್ನು ಪಡೆಯುವುದು ಕಷ್ಟವಾಗಲಿದೆ ಎಂದು ನ್ಯಾಯಪೀಠ ತಿಳಿಸಿದ್ದು, ಜೂ.11ಕ್ಕೆ ವಿಚಾರಣೆ ಮುಂದೂಡಿದೆ.
‘ಇದೇ ಸಂದರ್ಭದಲ್ಲಿ ಕೋವಿಡ್ ಅಲ್ಲದ ಬೇರೆ ಕಾರಣಗಳಿಂದ ಹಲವು ಸಾವುಗಳು ಸಂಭವಿಸುತ್ತಿವೆ. ಹಾಗಾಗಿ ಮರಣ ಪ್ರಮಾಣ ಪತ್ರ ನೀಡಲು ಇರುವ ಕ್ರಮಗಳೇನು? ಹಾಗಾಗಿ ಕೇಂದ್ರ ಸರಕಾರವು ಐಸಿಎಂಆರ್ ಸೂಚನೆಗಳ ಪಟ್ಟಿಯನ್ನು ಸುಪ್ರೀಂಗೆ ಸಲ್ಲಿಸಬೇಕು ಎಂದು ನ್ಯಾಯಾಲಯ ಆದೇಶಿಸಿದೆ.