ಮೇ 20 ಕ್ಕೆ ಪಿಣರಾಯಿ ವಿಜಯನ್ ಪ್ರಮಾಣ ವಚನ : ಸಂಪುಟಕ್ಕೆ ಹೊಸ ಮುಖಗಳು

ತಿರುವನಂತಪುರಂ: ಕೇರಳದಲ್ಲಿ ಎರಡನೇ ಬಾರಿ ಮುಖ್ಯಮಂತ್ರಿಯಾಗಿ ಅಧಿಕಾರದ ಗದ್ದುಗೆಯೇರಲಿರುವ ಪಿಣರಾಯಿ ವಿಜಯನ್ ಅವರು ಮೇ 20ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಕೋವಿಡ್‌-19 ಪರಿಸ್ಥಿತಿಯನ್ನು ನಿಭಾಯಿಸಿದ ರೀತಿಯಿಂದ ಮೆಚ್ಚುಗೆಗೆ ಪಾತ್ರರಾದ ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಸೇರಿದಂತೆ  ಹಿಂದಿನ ಸಂಪುಟದಲ್ಲಿ ಸಚಿವರಿಗೆ ಹೊಸ ಸಂಪುಟದಲ್ಲಿ ಸ್ಥಾನ ಪಡೆದಿಲ್ಲ. ಸಚಿವ ಸಂಪುಟಕ್ಕೆ ಹನ್ನೊಂದು ಹೊಸ ಮುಖಗಳನ್ನು ಗುರುತಿಸಿ ಯುವಕರಿಗೆ ಆದ್ಯತೆ ನೀಡಲಾಗಿದೆ.

ಪಿಣರಾಯಿ ವಿಜಯನ್‌ ಅವರನ್ನು ಪಕ್ಷದ ಸಂಸದೀಯ ನಾಯಕ ಮತ್ತು ಮುಖ್ಯಮಂತ್ರಿಯಾಗಿ ಸಿಪಿಐ(ಎಂ)ನ ರಾಜ್ಯ ಸಮಿತಿಯು ಆಯ್ಕೆ ಮಾಡಿದೆ. ಎಲ್ಲ ಹಾಲಿ ಸಚಿವರನ್ನು ಸಂಪುಟದಿಂದ ಕೈಬಿಡಲಾಗಿದ್ದು, ಕೆ.ಕೆ.ಶೈಲಜಾ ಅವರು ಪಕ್ಷದ ಪ್ರಮುಖ ಸ್ಥಾನದಲ್ಲಿ ಮುಂದುವರಿಯಲಿದ್ದಾರೆ ಎಂದು ತಿಳಿದು ಬಂದಿದೆ.  ಎಂ.ಬಿ.ರಾಜೇಶ್‌ ಅವರನ್ನು ಸ್ಪೀಕರ್‌ ಸ್ಥಾನಕ್ಕೆ ಆಯ್ಕೆ ಮಾಡಿದೆ.

ಶೈಲಾಜಾ ಅವರನ್ನು ಕೈಬಿಡಲಾಗಿದ್ದರೂ, ಇಬ್ಬರು ಮಹಿಳೆಯರು ಸಂಪುಟದಲ್ಲಿ ಸ್ಥಾನ ಪಡೆದಿದ್ದಾರೆ – ಇರಿಂಜಲಕುಡ ಶಾಸಕಿ ಪ್ರಾಧ್ಯಾಪಕಿ ಆರ್ ಬಿಂದು ಮತ್ತು ಅರಣ್ಮುಲ ಶಾಸಕಿ ವೀಣಾ ಜಾರ್ಜ್ ಪಿಣರಾಯಿ ಸಂಪುಟದಲ್ಲಿ ಸ್ಥಾನ ಪಡೆದಿದ್ದಾರೆ.   11 ಜನ ಹೊಸ ಸಚಿವರ ಹೆಸರುಗಳು ಈ ಕೆಳಗಿನಂತಿವೆ.

1. M.V. ಗೋವಿಂದನ್
2. K. ರಾಧಾಕೃಷ್ಣನ್
3. K.N. ಬಾಲಗೋಪಾಲ್
4. P. ರಾಜೀವ್
5. V.N. ವಾಸನ್
6. V. ಶಿವನ್ ಕುಟ್ಟಿ
7. ವೀಣಾ ಜಾರ್ಜ್
8. R. ಬಿಂದು
9. ಸಾಜಿ ಚೆರಿಯನ್
10.P.A. ಮಹಮ್ಮದ್ ರಿಯಾಜ್
11. V. ಅಬ್ದುಲ್ ರೆಹಮಾನ್ (Independent)
ಕೇರಳ ಸರ್ಕಾರವು 21 ಸದಸ್ಯರ ಸಂಪುಟವನ್ನು ಹೊಂದಿರಲಿದೆ. ಸಚಿವ ಸಂಪುಟದಲ್ಲಿ ಸಿಪಿಐ(ಎಂ)ಗೆ 12, ಸಿಪಿಐಗೆ 4, ಕೇರಳ ಕಾಂಗ್ರೆಸ್‌, ಜನತಾದಳ ಎಸ್ ಹಾಗೂ ಎನ್‌ಸಿಪಿಗೆ ತಲಾ 1 ಸಂಪುಟ ಸ್ಥಾನ ದೊರೆಯಲಿದೆ. ಅದರ ಜತೆಗೆ ಇನ್ನುಳಿದ ಎರಡು ಸಚಿವ ಸ್ಥಾನವನ್ನು ಜನಾಧಿಪತ್ಯ ಕೇರಳ ಕಾಂಗ್ರೆಸ್, ಹಾಗೂ ಇಂಡಿಯನ್ ನ್ಯಾಷನಲ್ ಲೀಗ್‌ ಎರಡೂವರೆ ವರ್ಷ ಮತ್ತು ಮುಂದಿನ ಎರಡೂವರೆ ವರ್ಷವನ್ನು ಕೇರಳ ಕಾಂಗ್ರೆಸ್ ಹಾಗೂ ಕಾಂಗ್ರೆಸ್ ಎಸ್ ಹಂಚಿಕೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.
Donate Janashakthi Media

Leave a Reply

Your email address will not be published. Required fields are marked *